http://nizamuddintabukuppinangady.blogspot.com/?m=1
"ಅದು ಅದ್ಭುತಗಳ ಗೂಡು"* ಊಹಿಸಲಾಗದ ಸತ್ಯ....!! ಭಗ 7
ದು ದಿನ ಪ್ರಸಿದ್ದ ಸೂಫೀ ವರ್ಯರೂ ಪಂಡಿತರೂ ಆದ ಮಿರ್ಹದ್ ರ.ಅ ರವರ ಬಳಿ ಓರ್ವ ಯುವಕ ಬಂದ. ಅವನ ಮೊಗದ ಒಂದು ಭಾಗವು ಕಬ್ಬಿಣದಂತೆ ಗಟ್ಟಿಯಾಗಿತ್ತು. ಇದರ ಬಗ್ಗೆ ವಿವರ ಅರಿಯಲು ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಆ ಯುವಕ ಮಿರ್ಹದ್ ರ.ಅ ರವರಲ್ಲಿ ವಿವರಿಸತೊಡಗಿದ. "ನಾನು ಆಡಂಬರದಿ ಜೀವಿಸುತಿದ್ದ ಯುವಕನಾಗಿದ್ದೆ, ಬಹಳಾ ಕೆಟ್ಟವನಾಗಿದ್ದೆ ನಾನು. ಅತ್ಯಾಚಾರ, ಅನೈತಿಕ ಸಂಬಂಧ ನನ್ನ ಬಳಿ ಇತ್ತು. ನನಗೇನು ಉದ್ಯೋಗ ಇರಲಿಲ್ಲ. ಕೊನೆಗೆ ವಿದ್ಯಬ್ಯಾಸ ಕೊರತೆ ಇರುವ ನಾನು ನೇರವಾಗಿ ಖಬರ್ ಅಗೆಯುವ ಕೆಲಸಕ್ಕೆ ಸೇರಿಕೊಂಡೆನು. ..ಒಂದು ದಿನ ಮಗರಿಬ್ ಹಾಗೂ ಇಶಾ ನಡುವೆ (ಅಂದಾಜು 6 ರಿಂದ 9 ಘಂಟೆ) ತಾನು ಅಗೆದ ಖಬರಿಗೆ ಒಂದು ಮೃತದೇಹವನ್ನು ತಂದು ದಫನ ಮಾಡಲಾಯಿತು, ದಫನದ ವಿದಿ ವಿಧಾನದ ನಂತರ ಎಲ್ಲರೂ ಅಲ್ಲಿಂದ ಹೊರಟುಹೋದರು. ನಾನು ಪಕ್ಕದ ಖಬರಿಗೆ ಒರಗಿ ಇನ್ನೂ ಯಾರಾದರೂ ಮೃತದೇಹ ಕೊಂಡುಬರಬಹುದೇ..? ಎಂದು ಕಾಯುತ್ತಾ.. ವಿಶ್ರಾಂತಿ ಪಡೆಯುತಿದ್ದೆ. ಆಗ ಅಲ್ಲಗೆ ಎರಡು ಬೃಹತ್ ಆಕಾರದ ಬಿಳಿ ಬಣ್ಣದ ಪಕ್ಷಿಗಳು ಬಂದವು, ಅದರಲ್ಲಿ ಒಂದು ಪಕ್ಷಿ ನೇರವಾಗಿ ಈಗಾಗಲೇ ದಫನ ಮಾಡಿ ಹೋದ ಹೋಸ ಖಬರಿನ ಮೇಲಿದ್ದ ಕಲ್ಲುಗಳನ್ನು ಸರಿಸಿ ಖಬರಿನ ಒಳಗೆ ನುಗ್ಗಿತು. ಇನ್ನೊಂದು ಪಕ್ಷಿ ಖಬರಿನ ಹೊರಭಾಗದಲ್ಲಿ ನಿಂತು ಕಾವಲು ಕಾಯುತಿತ್ತು. ನನಗೆ ಆ ಸಂದರ್ಭದಲ...
Comments
Post a Comment