ಲೇಖನ
ಜೀವನ ಮತ್ತು ಬಹುಮಾನ* ಈ ಜಗದ ಸುಂದರ ಪ್ರಕೃತಿ, ಪ್ರಕೃತಿಯ ಸುತ್ತ ಅತಿಥಿಯಾಗಿ ಸಿಹಿ,ಕಹಿಯ ಅವಲಂಬಿತ ಜೀವನ, ಇಲ್ಲೇ ಜನನ, ಇಲ್ಲೇ ಮರಣ, ಮಧ್ಯೆ ಬಾಲ್ಯ, ಯವ್ವನ, ಮದುವೆ, ಮಕ್ಕಳು, ಉದ್ಯೋಗ, ಆಸ್ತಿ, ಪಾಸ್ತಿ.ಆದರೂ ಕೇವಲ ನಾಲ್ಕು ಗೆರೆಗಳಲ್ಲಿ ಬರೆದು ತೀರಿಸುವಂತಹದಲ್ಲ ಜೀವನ. ಜೀವನ ಅಂದರೆ ಅದಕ್ಕೆ ಆರಂಭ ಹಾಗೂ ಅಂತ್ಯ ಇದ್ದೇ ಇದೆ.ಅದರಲ್ಲೂ ಮನುಷ್ಯನ ಜೀವನದಲ್ಲಿ ಸತ್ಯ ಮಿಥ್ಯಗಳ ಮಧ್ಯೆ ಜೀವನದ ಸ್ವಾಧವನ್ನು ಸವೆಯಲು ಜೀವನದ ಉದ್ದೇಶವನ್ನು ಅರಿಯದವರಿಗೆ ಕಲಿತು ಅರಿತರೆ, ಕಲಿತವರು ಉಪದೇಶಿಸಿದರೆ ಜೀವನದ ಕೆಲ ಕುಂದು ಕುಂದು ಕೊರತೆಗಳಿಗೆ ಕಡಿವಾಣಾಕಲು ಸಾಧ್ಯ,ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನವಷ್ಟೇ. ಈ ಪ್ರಪಂಚದಲ್ಲಿ ಕೋಟ್ಯಾನು ಕೋಟಿ ಜೀವ ಜಲಚರಗಳಲ್ಲಿ ಜೀವಿಸುವ ಒಂದು ಜೀವವಾಗಿದೆ ಮನುಷ್ಯ ಅಥವಾ ಮಾನವ. ಎಲ್ಲಾ ಜೀವಿಗಳು ಬಳಸುವ ಗಾಳಿ, ನೀರು, ಬೆಳಕು, ವಾಸ ಎಲ್ಲವೂ ಒಂದೇ... ಆದರೆ ಇವುಗಳಂತಲ್ಲ ಮನುಷ್ಯ...ನೀರಿನಲ್ಲೂ ಪ್ರಯಾಣಿಸಲು,ಭೂಮಿ ಮೇಲಿಂದ ಗಾಳಿಯ ಹಿಂದಿಕ್ಕಿ ಹಕ್ಕಿಯಂತೆ ಪ್ರಯಾಣಿಸಲು ಕಲಿತಿರುವ ಮಾನವ ಬುದ್ದಿ ಜೀವಿ. ಎಲ್ಲೋ ಮರದಲ್ಲಿ ವಾಸಿಸುವ ಹಕ್ಕಿಯಂತೆಯೋ, ನೀರಿನ ಒಳಗೆ ವಾಸಿಸುವ ಜಲಚರದಂತೆಯೋ, ಕಾಡಲ್ಲಿ ವಾಸಿಸುವ ಪ್ರಾಣಿಗಳಂತೆಯೂ ಆಗಿರದೆ, ಅಲ್ಲಾಹನ ಸೃಷ್ಠಿಗಳಲ್ಲಿಯೇ ಶ್ರೇಷ್ಠನಾಗಿದ್ದಾನೆ/ಳೆ. ...