ಲೇಖನ
ಜೀವನ ಮತ್ತು ಬಹುಮಾನ*
ಈ ಜಗದ ಸುಂದರ ಪ್ರಕೃತಿ, ಪ್ರಕೃತಿಯ ಸುತ್ತ ಅತಿಥಿಯಾಗಿ ಸಿಹಿ,ಕಹಿಯ ಅವಲಂಬಿತ ಜೀವನ, ಇಲ್ಲೇ ಜನನ, ಇಲ್ಲೇ ಮರಣ, ಮಧ್ಯೆ ಬಾಲ್ಯ, ಯವ್ವನ, ಮದುವೆ, ಮಕ್ಕಳು, ಉದ್ಯೋಗ, ಆಸ್ತಿ, ಪಾಸ್ತಿ.ಆದರೂ ಕೇವಲ ನಾಲ್ಕು ಗೆರೆಗಳಲ್ಲಿ ಬರೆದು ತೀರಿಸುವಂತಹದಲ್ಲ ಜೀವನ. ಜೀವನ ಅಂದರೆ ಅದಕ್ಕೆ ಆರಂಭ ಹಾಗೂ ಅಂತ್ಯ ಇದ್ದೇ ಇದೆ.ಅದರಲ್ಲೂ ಮನುಷ್ಯನ ಜೀವನದಲ್ಲಿ ಸತ್ಯ ಮಿಥ್ಯಗಳ ಮಧ್ಯೆ ಜೀವನದ ಸ್ವಾಧವನ್ನು ಸವೆಯಲು ಜೀವನದ ಉದ್ದೇಶವನ್ನು ಅರಿಯದವರಿಗೆ ಕಲಿತು ಅರಿತರೆ, ಕಲಿತವರು ಉಪದೇಶಿಸಿದರೆ ಜೀವನದ ಕೆಲ ಕುಂದು ಕುಂದು ಕೊರತೆಗಳಿಗೆ ಕಡಿವಾಣಾಕಲು ಸಾಧ್ಯ,ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನವಷ್ಟೇ.
ಈ ಪ್ರಪಂಚದಲ್ಲಿ ಕೋಟ್ಯಾನು ಕೋಟಿ ಜೀವ ಜಲಚರಗಳಲ್ಲಿ ಜೀವಿಸುವ ಒಂದು ಜೀವವಾಗಿದೆ ಮನುಷ್ಯ ಅಥವಾ ಮಾನವ. ಎಲ್ಲಾ ಜೀವಿಗಳು ಬಳಸುವ ಗಾಳಿ, ನೀರು, ಬೆಳಕು, ವಾಸ ಎಲ್ಲವೂ ಒಂದೇ... ಆದರೆ ಇವುಗಳಂತಲ್ಲ ಮನುಷ್ಯ...ನೀರಿನಲ್ಲೂ ಪ್ರಯಾಣಿಸಲು,ಭೂಮಿ ಮೇಲಿಂದ ಗಾಳಿಯ ಹಿಂದಿಕ್ಕಿ ಹಕ್ಕಿಯಂತೆ ಪ್ರಯಾಣಿಸಲು ಕಲಿತಿರುವ ಮಾನವ ಬುದ್ದಿ ಜೀವಿ.
ಎಲ್ಲೋ ಮರದಲ್ಲಿ ವಾಸಿಸುವ ಹಕ್ಕಿಯಂತೆಯೋ, ನೀರಿನ ಒಳಗೆ ವಾಸಿಸುವ ಜಲಚರದಂತೆಯೋ, ಕಾಡಲ್ಲಿ ವಾಸಿಸುವ ಪ್ರಾಣಿಗಳಂತೆಯೂ ಆಗಿರದೆ, ಅಲ್ಲಾಹನ ಸೃಷ್ಠಿಗಳಲ್ಲಿಯೇ ಶ್ರೇಷ್ಠನಾಗಿದ್ದಾನೆ/ಳೆ.
ಈ ಭೂಮಿಯ ಮೇಲೆ ಇತಿಹಾಸ ನಿರ್ಮಿಸುತ್ತಾ ಬಾಳಿನ ದಾರಿಗೆ ಸುಲಭೋಪಾಯವನ್ನು ಸೃಷ್ಠಿಸುತ್ತಾ ಮುಂದಡಿಯಿಡುತ್ತಿದ್ದಾನೆ ಮಾನವ. ಭೂಮಿಯ ಮೇಲೆ ಕಣ್ಣಿಗೆ ಕಾಣದ ಬ್ಯಾಕ್ಟೀರಿಯದಿಂದ ಹಿಡಿದು, ದೈತ್ಯ ತಿಮಿಂಗಳವೆಂಬ ಸಮುದ್ರ ಜೀವಿಗಳ ವರೆಗೆ ವ್ಯತ್ಯಸ್ಥ ಜೀವಿಗಳಿದ್ದರೂ, ಅಲ್ಲಾಹನು ಬುದ್ದಿ, ಶಕ್ತಿ, ಧೈರ್ಯ ಹಾಗೂ ಚಲ ಈ ಮನುಷ್ಯ ಜೀವಿಗೆ ಮಾತ್ರ ನೀಡಿದ್ದಾನೆ.
ಮನುಷ್ಯನ ಕುರಿತು ಪವಿತ್ರ ಕುರಾನ್ ಅಧ್ಯಾಯ 17 ಬನೀ ಇಸ್ರಾಈಲ್, ಸೂಕ್ತ 70 ರಲ್ಲಿ ಈ ರೀತಿ ಇದೆ,
*ﻭَﻟَﻘَﺪْ ﻛَﺮَّﻣْﻨَﺎ ﺑَﻨِﻰٓ ءَاﺩَﻡَ ﻭَﺣَﻤَﻠْﻨَٰﻬُﻢْ ﻓِﻰ ٱﻟْﺒَﺮِّ ﻭَٱﻟْﺒَﺤْﺮِ ﻭَﺭَﺯَﻗْﻨَٰﻬُﻢ ﻣِّﻦَ ٱﻟﻄَّﻴِّﺒَٰﺖِ ﻭَﻓَﻀَّﻠْﻨَٰﻬُﻢْ ﻋَﻠَﻰٰ ﻛَﺜِﻴﺮٍ ﻣِّﻤَّﻦْ ﺧَﻠَﻘْﻨَﺎ ﺗَﻔْﻀِﻴﻼً*
ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೆವು ಹಾಗೂ ಅವರನ್ನು ನೆಲದಲ್ಲೂ ಜಲದಲ್ಲೂ ಪ್ರಯಾಣಿಸುವವರಾಗಿ ಮಾಡಿದೆವು ಮತ್ತು ಅವರಿಗೆ ಶುದ್ಧ ಆಹಾರಗಳನ್ನು ಒದಗಿಸಿದೆವು ಮತ್ತು ನಮ್ಮ ಇತರ ಅನೇಕ ಸೃಷ್ಟಿಗಳೆದುರು ಅವರಿಗೆ ಸ್ಪಷ್ಟವಾದ ಶ್ರೇಷ್ಠತೆಯನ್ನು ದಯಪಾಲಿಸಿದೆವು.
ಹೌದು ಈ ಜೀವನದಲ್ಲಿ ಅಲ್ಲಾಹನು ನೀಡಿದ ಬುದ್ದಿ ಶಕ್ತಿ, ಚಿಂತನೆ, ಹಾಗೂ ವಿವೇಕದೊಂದಿಗೆ ಲೈಂಗಿಕತೆಯೂ ಈ ಮನುಷ್ಯನಲ್ಲಿ ಅಂತರ್ಲೀಲೆಯಾಗಿದೆ. ಜನ್ಮತಃ ಮಾನವನು ದೌರ್ಬಲ್ಯನಾದರೂ ಬೆಳೆದು ನಿಂತಂತೆ ಈ ಜಗತನ್ನೇ ಪರ್ಯಟನೆ ನಡೆಸಲು ಕೊಂಡೊಯ್ಯುವ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ.
ಒರ್ವ ಮನುಷ್ಯ ಹುಟ್ಟುವಾಗ ಏನೂ ಪಡೆಯದಿದ್ದರೂ, ಮುಂದಿನ ದಿನಗಳಲ್ಲಿ ಅವನ ಮನಸ್ಸಿನ ಆಗ್ರಹಕ್ಕೆ ಅವಲಂಬಿತವಾಗಿ ಖರೀದಿಸುವ ಮತ್ತು ಸಂಗ್ರಹಿಸುವ ವಸ್ತುಗಳು ಅವನ ಮನಸ್ಸಿನಲ್ಲಿ ಮಾತ್ರ ಶಾಶ್ವತವಾಗಿರುತ್ತದೆ, ಅದೇ ರೀತಿ ಸಿಕ್ಕವುಗಳಲ್ಲಿ ಅಥವಾ ಪಡೆದವುಗಳಲ್ಲಿ ತೃಪ್ತಿ ಅತೃಪ್ತಿ ಏನೇ ಇದ್ದರೂ ಬರಿಗೈಯಲ್ಲಿಯೇ ವಾಪಾಸಾಗಬೇಕಾಗಿರುವುದು ಅಲ್ಲಾಹನ ಆಜ್ಞೆಯಾಗಿದೆ.
ಒಂದು ಆನೆಯ ಶಕ್ತಿ ಮನುಷ್ಯನಿಗಿಲ್ಲ. ಆದರೆ ಮಾನವನಿಗಿಂತ ಅದೆಷ್ಟೋ ದೊಡ್ಡದಾದ ಹಾಗೂ ಭಾರವುಳ್ಳ ಆನೆಯ ನಿಯಂತ್ರಿಸುವ ಶಕ್ತಿ ಮಾನವನಿಗಿದೆ. ಶಕ್ತಿವಂತ ಸಿಂಹವನ್ನು ತನ್ನ ನಿಯಂತ್ರಣದಲ್ಲಿಡಲೂ, ನಾಯಿಗೆ ವಿದ್ಯೆ ಕಲಿಸಿ, ಅದನ್ನು ಬುದ್ದಿವಂತನಾಗಿಸಲೂ, ಸಮುದ್ರದಲ್ಲಿ ಈಜಾಡಲೂ ಅದರೊಳಗಿನ ಮುತ್ತು ಹಾಗು ಮೀನು ಸಂಗ್ರಹಿಸಲೂ, ಬೇಕಾದ ಎಲ್ಲಾ ಶಕ್ತಿ ಹಾಗೂ ಜ್ಙಾನ ಅಲ್ಲಾಹನು ಬುದ್ದಿ ಜೀವಿ ಮಾನವನಿಗೆ ನೀಡಿದ್ದಾನೆ.
ಅಲ್ಲಾಹನು ಹದಿನಾರನೇ ಅಧ್ಯಾಯ ಅನ್ನಹ್ಲ್ (ಜೇನು) ಇದರ ಹದಿನಾಲ್ಕನೇ ಸೂಕ್ತದಲ್ಲಿ ಮನುಷ್ಯನ ನೀರಿನ ಸಾಹಸದ ಮತ್ತು ಸಮುದ್ರದ ಉಪಯೋಗದ ಬಗ್ಗೆ ಈ ರೀತಿ ವಿವರಿಸುತ್ತಾನೆ.
*ﻭَﻫُﻮَ ٱﻟَّﺬِﻯ ﺳَﺨَّﺮَ ٱﻟْﺒَﺤْﺮَ ﻟِﺘَﺄْﻛُﻠُﻮا۟ ﻣِﻨْﻪُ ﻟَﺤْﻤًﺎ ﻃَﺮِﻳًّﺎ ﻭَﺗَﺴْﺘَﺨْﺮِﺟُﻮا۟ ﻣِﻨْﻪُ ﺣِﻠْﻴَﺔً ﺗَﻠْﺒَﺴُﻮﻧَﻬَﺎ ﻭَﺗَﺮَﻯ ٱﻟْﻔُﻠْﻚَ ﻣَﻮَاﺧِﺮَ ﻓِﻴﻪِ ﻭَﻟِﺘَﺒْﺘَﻐُﻮا۟ ﻣِﻦ ﻓَﻀْﻠِﻪِۦ ﻭَﻟَﻌَﻠَّﻜُﻢْ ﺗَﺸْﻜُﺮُﻭﻥَ*
ಅಲ್ಲಾಹನು ಸಮುದ್ರವನ್ನು ನಿಯಂತ್ರಣಕ್ಕೆ ಒಳಪಡಿಸಿದವನು, ನೀವು ಅದರಿಂದ ಮೀನಿನ ತಾಜಾ ಮಾಂಸವನ್ನು ತೆಗೆದು ತಿನ್ನಬೇಕು. ಮತ್ತು ಅದರೊಳಗಿಂದ ವಿವಿಧ ಆಭರಣಗಳನ್ನು ಹೊರ ತೆಗೆದು ಧರಿಸಬೇಕೆಂದು. ಹಾಗೆಯೇ ನೀವು ಅವನ ಅನುಗ್ರಹವನ್ನು ಹುಡುಕಲು, ಸಮುದ್ರದೊಳಗೆ ನೀರನ್ನು ಸೀಳುತ್ತಾ ಸಾಗುವ ಹಡಗುಗಳನ್ನು ನೀವು ಕಾಣುತ್ತೀರಿ. ಇವೆಲ್ಲಾ ಇರುವುದೇ ನೀವು ಅಲ್ಲಾಹನಿಗೆ ಕೃತಜ್ಞರಾಗಬೇಕೆಂದು.
ಹಡಗುಗಳನ್ನು ಅಲ್ಲಾಹನು ಮನುಷ್ಯ ಜೀವಿ ತೃಪ್ತಿಗೊಳ್ಳಲೆಂದೇ ಮಾಡಿರುವನು. ಇದನ್ನು ಅಲ್ಲಾಹನು ಕುರಾನಿನ ಇನ್ನೊಂದು ಅಧ್ಯಾಯದಲ್ಲಿ ಹೇಳುತ್ತಾನೆ.
ನಲವತ್ತೈದನೇಯ ಅಧ್ಯಾಯ ಅಲ್‌ಜಾಸಿಯ (ಮೊಣಕಾಲೂರಿದವರು), ಹನ್ನೆರಡನೇಯ ಸೂಕ್ತ.
*ٱﻟﻠَّﻪُ ٱﻟَّﺬِﻯ ﺳَﺨَّﺮَ ﻟَﻜُﻢُ ٱﻟْﺒَﺤْﺮَ ﻟِﺘَﺠْﺮِﻯَ ٱﻟْﻔُﻠْﻚُ ﻓِﻴﻪِ ﺑِﺄَﻣْﺮِﻩِۦ ﻭَﻟِﺘَﺒْﺘَﻐُﻮا۟ ﻣِﻦ ﻓَﻀْﻠِﻪِۦ ﻭَﻟَﻌَﻠَّﻜُﻢْ ﺗَﺸْﻜُﺮُﻭﻥَ*
ಸಮುದ್ರದಲ್ಲಿ ತನ್ನ ಆದೇಶಾನುಸಾರ ಹಡಗುಗಳು ತೇಲುವಂತೆ ಹಾಗೂ ಆ ಮೂಲಕ ನೀವು ಅವನ ಅನುಗ್ರಹವನ್ನು ಹುಡುಕುವಂತೆ, ಸಮುದ್ರವನ್ನು ನಿಮಗೆ ವಿಧೇಯಗೊಳಿಸಿರುವವನು ಅಲ್ಲಾಹನು. ನೀವು ಅವನಿಗೆ ಕೃತಜ್ಞರಾಗಬೇಕೆಂದು ಅವನು ಇದನ್ನು ಮಾಡಿರುವನು.
ಈ ಮಾತು ಅದೆಷ್ಟು ನಿಜವಲ್ಲವೇ..... ಅಲ್ಲಾಹನು ಒಂದು ಸಮುದ್ರದಿಂದಲೇ ನಮಗೆಷ್ಟು ಅನುಗ್ರಹಗಳು ನೀಡಿದ್ದಾನೆ. ಮೀನು, ಮುತ್ತು, ಆಹಾರ, ಹಡಗು, ನೀರು ಇದನ್ನೆಲ್ಲ ಕಂಡರಿತ ಹಾಗೂ ಉಪಯೋಗಿಸಿದ ಮೇಲೂ ನಾವು ಅಲ್ಲಾಹನಿಗೆ ಖಂಡಿತವಾಗಿಯೂ ಕೃತಜ್ಞರಾಗಲೇಬೇಕು.
ಕಾಲಕ್ಕನುಗುಣವಾಗಿ ತನ್ನ ಬೇಕು ಬೇಡಗಳಿಗೆ ಸುಲಭೋಪಾಯವನ್ನು ಕಂಡು ಹಿಡಿದು ಉಪಯೋಗೀಸುವ ಬದಲಾಗುವವನು ಮಾನವ. ಉದಾಹರಣೆಗೆ ಕಾಗೆ ಮನುಷ್ಯನಷ್ಟೇ ಅಥವಾ ಮನುಷ್ಯನಿಗಿಂತಲೂ ಹಳೆಯದಾದ ಪಕ್ಷಿ. ಆದರೆ ಕಾಗೆಯು ಆದಂ ನೆಬಿ ಸ.ಅ ರವರ ಕಾಲದಲ್ಲಿ ತನ್ನ ಯಾನಕ್ಕೆ ಬಳಸುತಿದ್ದ ರೆಕ್ಕೆಯನ್ನೇ ಇಂದಿನ ಆಧುನಿಕ ಯುಗದಲ್ಲೂ ಬಳಸುತ್ತಿದೆ. ಅದೇ ರೀತಿ ಕಾಗೆ ಅಂದೂ ಮರದ ಮೇಲೆ ಕಾರಿ ನಿರ್ಮಿಸುತಿತ್ತು ಇಂದು ಅದೇ ಕಾರಿಯನ್ನು ಬೇರೆ ಮರಗಳಲ್ಲಿ ನಿರ್ಮಿಸುತ್ತಿದೆ. *ಆದರೆ ಮಾನವ...?*
ಹೌದು ಮಾನವನು ಆದಂ ನೆಬಿ ಸ.ಅ ರ ಕಾಲದಲ್ಲಿ ಬಳಸಿದ ಸಂಚಾರ ಸಾಮಾಗ್ರಿ ಬಳಸುತ್ತಾ ಇಲ್ಲ. ಇಂದಿನ ಆಧುನಿಕ ಕಾಲದಲ್ಲಿ ಕಾರು,ಬಸ್ಸು,ರೈಲು,ವಿಮಾನದ ವರೆಗೆ ತನ್ನ ಯಾನವನ್ನು ಹಾಗೂ ವಾಸಕ್ಕಾಗಿ ಮನೆ , ಬಂಗಲೆ, ನೂರಾರು ಮಿಟರ್ ಎತ್ತರದ ಕಟ್ಟಡವನ್ನು ತನ್ನ ವಾಸಸ್ಥಳವಾಗಿ ಬದಲಾಯಿಸಿದ್ದಾನೆ. ಹೌದು ಯಾನ ಹಾಗೂ ತಾಣವನ್ನು ಬಲು ಚಾಕಚಕ್ಯತೆಯಿಂದ ತನ್ನೆಲ್ಲಾ ಬುದ್ದಿಶಕ್ತಿಯನ್ನು ಬಳಸಿ ಎಷ್ಟೊಂದು ಮುಂದುವರಿದಿದ್ದಾನಲ್ಲವೇ...?
ಜ್ಞಾನ, ಅರಿವು ಅಲ್ಲದೆ ಮಾನವನು ತನ್ನ ಬುದ್ದಿಶಕ್ತಿಯಿಂದ ಮುಂದುವರಿದಿದ್ದರೂ ಆ ಬುದ್ದಿಶಕ್ತಿಯನ್ನು ನೀಡಿದ ಅಲ್ಲಾಹನಿಗೆ ಕೃತಘ್ನರಾಗಲೇ ಬೇಕಲ್ಲವೇ...?
ಒಬ್ಬ ಮನುಷ್ಯನು ಉಷ್ಟ್ರ ಪಕ್ಷಿಯನ್ನು ಓಟದಿಂದ ಹಿಂದಿಕ್ಕಲು ಸಾಧ್ಯವಿಲ್ಲ. ಆದರೆ ಮನುಷ್ಯ ಕಂಡುಹಿಡಿದ ವಾಹನ ಅಥವಾ ವಿಮಾನ ಆ ಪಕ್ಷಿಗಿಂತಲೂ ವೇಗವಾಗಿ ಓಡಲೂ, ಇತರ ಪಕ್ಷಿಗಳಂತೆ ಹಾರಡಲೂ ಸಾಧ್ಯ ಮಾಡಿದ ಸಾಹಿಸಿಗ.
ಮನುಷ್ಯನು ತನ್ನ ಯಾನವನ್ನು ಎಲ್ಲಿಯವರೆಗೆ ಮುಂದುವರಿಸಿದ್ದಾನೆ ಎಂದರೆ, ತನ್ನ ಯಾನವನ್ನು ಸೌರ ಮಂಡಲದತ್ತ ಆರಂಭಿಸಿ ಅಲ್ಲಿಯ ದೃಷ್ಯವನ್ನು ಕ್ಯಾಮರಾಗಳಲ್ಲಿ ಸೆರೆಹಿಡಿದು, ಬದುಕಲು ಹಾಗೂ ವಾಸಿಸಳು ಯೋಗ್ಯವೇ ಎಂಬ ಅನ್ವೇಷಣೆಯಲ್ಲಿ ನಿರತನಾಗಿದ್ದಾನೆ. ಇಷ್ಟೆಲ್ಲಾ ಅನುಗ್ರಹ ನೀಡಿದ ಆ ಅಲ್ಲಾಹನು ತನ್ನ ಕುರಾನಿನಲ್ಲಿ ಈ ಕುರಿತು ಹೇಳುತ್ತಾನೆ..
ನಲವತ್ತೈದನೇ ಅಧ್ಯಾಯ ಅಲ್‌ಜಾಸಿಯ (ಮೊಣಕಾಲೂರಿದವರು), ಹದಿಮೂರನೇಯ ಸೂಕ್ತ
*ﻭَﺳَﺨَّﺮَ ﻟَﻜُﻢ ﻣَّﺎ ﻓِﻰ ٱﻟﺴَّﻤَٰﻮَٰﺕِ ﻭَﻣَﺎ ﻓِﻰ ٱﻷَْﺭْﺽِ ﺟَﻤِﻴﻌًﺎ ﻣِّﻨْﻪُ ۚ ﺇِﻥَّ ﻓِﻰ ﺫَٰﻟِﻚَ ﻻَءَﻳَٰﺖٍ ﻟِّﻘَﻮْﻡٍ ﻳَﺘَﻔَﻜَّﺮُﻭﻥَ*
ಹಾಗೆಯೇ, ಅವನು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ತನ್ನ ವತಿಯಿಂದ ನಿಮಗೆ ವಿಧೇಯಗೊಳಿಸಿರುವನು. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪುರಾವೆಗಳಿವೆ.
ಅಲ್ಲಾಹನು ಈ ಲೋಕ ಸೃಷ್ಠಿಕರ್ತನೂ, ಸರ್ವ ಸೃಷ್ಠಿಗಳ ಒಡೆಯನೂ ಸಂರಕ್ಷಕನೂ ಆಗಿದ್ದಾನೆ. ಈ ಭೂಲೋಕದ ಪ್ರತಿಯೊಂದು ಜೀವಜಂತುಗಳೂ ಪ್ರತ್ಯೇಕವಾಗಿ ಹೇಳಬೇಕಾದಲ್ಲಿ ಮನುಷ್ಯನು ಈ ಪ್ರಕೃತಿ ಸೌಂದರ್ಯ ಆಸ್ವದಿಸುತ್ತಾ, ಪ್ರಕೃತಿ ಆಹಾರಗಳನ್ನು ತಿಂದು ತೇಗುತ್ತಾ ಇರುವಾಗ ನಾವು ಅಲ್ಲಾಹನ ಆಜ್ಞೆಗೆ ಅನುಗುನವಾಗಿ ಜೀವಿಸಬೇಕು.
ಅಲ್ಲಾಹನು ಸೃಷ್ಠಿಸಿದ ಈ ಭೂಲೋಕವು ಅನೇಕ ಅನುಗ್ರಹಗಳನ್ನು ನಾವು ಅನುಭವಿಸುವವರಾಗಿದ್ದೇವೆ. ಆ ಅನುಗ್ರಹಗಳನ್ನು ಲೆಕ್ಕ ಮಾಡಲೋ ಅಥವಾ ಅಂದಾಜಿಸಲೊ ಮಾನವನಿಗೆ ಸಾಧ್ಯವಲ್ಲ ಇದರು ಕುರಿತು ಕುರಾನಿನಲ್ಲಿ ಹೇಳುದೇನೆಂದರೆ,
ಹದಿನಾಲ್ಕನೇ ಅಧ್ಯಾಯ ಇಬ್ರಾಹೀಮ್, ಇದರ ಮೂವತ್ತಮೂರು ಹಾಗೂ ಮೂವತ್ತನಾಲ್ಕು ಸೂಕ್ತಗಳಲ್ಲಿ...
*ﻭَﺳَﺨَّﺮَ ﻟَﻜُﻢُ ٱﻟﺸَّﻤْﺲَ ﻭَٱﻟْﻘَﻤَﺮَ ﺩَآﺋِﺒَﻴْﻦِ ۖ ﻭَﺳَﺨَّﺮَ ﻟَﻜُﻢُ ٱﻟَّﻴْﻞَ ﻭَٱﻟﻨَّﻬَﺎﺭَ*
ಅಲ್ಲಾಹನು ನಿರ್ದಿಷ್ಟ ಕಕ್ಷೆಯಲ್ಲಿ ಚಲಿಸುವ ಸೂರ್ಯ ಮತ್ತು ಚಂದ್ರರನ್ನು ಮಾನವನಿಗೆ ಅಧೀನಗೊಳಿಸಿದವನು ಹಾಗೂ ರಾತ್ರಿ ಮತ್ತು ಹಗಲನ್ನು ನಿಮಗೆ ಅಧೀನಗೊಳಿಸಿದವನು.
*ﻭَءَاﺗَﻰٰﻛُﻢ ﻣِّﻦ ﻛُﻞِّ ﻣَﺎ ﺳَﺄَﻟْﺘُﻤُﻮﻩُ ۚ ﻭَﺇِﻥ ﺗَﻌُﺪُّﻭا۟ ﻧِﻌْﻤَﺖَ ٱﻟﻠَّﻪِ ﻻَ ﺗُﺤْﺼُﻮﻫَﺎٓ ۗ ﺇِﻥَّ ٱﻹِْﻧﺴَٰﻦَ ﻟَﻈَﻠُﻮﻡٌ ﻛَﻔَّﺎﺭٌ*
ಅಲ್ಲಾಹನು ನೀವು ಕೇಳಿದ ಎಲ್ಲವನ್ನೂ ನಿಮಗೆ ನೀಡಿದವನು. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲಾರಂಭಿಸಿದರೆ ಅದನ್ನು ಪೂರ್ತಿಗೊಳಿಸಲಾರಿರಿ. ಖಂಡಿತವಾಗಿಯೂ ಮಾನವನು ಮಹಾ ಅಕ್ರಮಿ ಹಾಗೂ ಕೃತಘ್ನನಾಗಿದ್ದಾನೆ.
ಇದು ಅಲ್ಲಾಹನು ಪರಿಶುದ್ದ ಕುರಾನಿನಲ್ಲಿ ಹೇಳಿದ ಮಾತುಗಳು.
ಹೌದು ನಾವು ಅವಶ್ಯಕತೆಯನ್ನು ಮುಂದಿಡದೆಯೇ ನೀರು ಗಾಳಿ ಆಹಾರ ಬೆಳಕು ಅದೇರೀತಿ ಭೂಮಿ, ಆ ಭೂಮಿಯ ಮೇಲೆ ನಡೆಯಲು, ಓಡಲು, ಆಡಲು, ಕೆಲಸ ಮಾಡಲು, ಮನೆ ನಿರ್ಮಿಸಲು ಪಡೆದ ಅನುಗ್ರಹಗಳನ್ನು ಲೆಕ್ಕ ಮಾಡಲೋ ಖಂಡಿತವಾಗಿಯೂ ಮಾನವ ಜೀವನದಲ್ಲಿ ಸಾಧ್ಯವಿಲ್ಲ.ಮಾನವನಿಗೆ ವಿಶ್ವ ಪರ್ಯಟನೆ ಮಾಡಿದರೂ ಪ್ರಕೃತಿಯ ಎಲ್ಲಾ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ
ಮನುಷ್ಯನಲ್ಲದೇ ಎಲ್ಲಾ ಜೀವಜಲಚರಗಳೂ ತನ್ನ ಸ್ವಂತ ಬಲ ಹಾಗೂ ಪ್ರಯೋಗದಿಂದಲೇ ಜನಿಸುತ್ತದೆ. ತನ್ನ ದಿನ ನಿತ್ಯದ ಆಹಾರ ಸಂಪಾದಿಸಲು ಮತ್ತು ತನ್ನನ್ನೇ ಅವಲಂಬಿತವಾಗಿರುವ ತನ್ನ ಕರುಳ ಕುಡಿಗಳ ಹಸಿವು ನೀಗಿಸುವ ಸರಿಯಾದ ಬುದ್ಧಿ ಮತ್ತು ಪ್ರಕೃತಿಯ ಮಡಿಲಲ್ಲಿ ಆಹಾರಕ್ಕೆ ಬೇಕಾದ ಧವಸಧಾನ್ಯಗಳನ್ನು ಅಲ್ಲಾಹನು ನೀಡಿದ್ದಾನೆ.
ಆದರೆ ಮನುಷ್ಯ ಹುಟ್ಟಿನಿಂದಲೇ ಕೈ ಕಾಲು ಅಲುಗಾಡಿಸಲೂ, ಎದ್ದು ನಡೆದಾಡಲು, ನಿಲ್ಲಲು, ಮಾತನಾಡಲು ಕಲಿತೋ ಅರಿತೋ, ಮುಂದೆ ನಾಯಕನಾಗಿ, ಒಡೆಯನಾಗಿ,ಅಡಿಯಾಳಾಗಿ ಅಧ್ಯಕ್ಷನಾಗಿ, ಮಂತ್ರಿಯಾಗಿ, ಕಾವಲುಗಾರನಾಗಿ ಯಾಕೆ ಎಲ್ಲರೂ ಆದರಿಸುವ ಗೌರವ ವ್ಯಕ್ತಿ ಆಗಿರುವುದೂ ಕೂಡ ಅಲ್ಲಾಹನಾಜ್ಞೆ.
ಜಂತುಗಳು ಕ್ರಿಮಿ ಕೀಟ ಪ್ರಾಣಿ ಪಕ್ಷಿಗಳೆಲ್ಲ ಪ್ರಕೃತಿ ಎಲ್ಲದಕ್ಕೂ ಕ್ಷಣಒಡೆಯನಂತಾಗಿದ್ದಾನೆ ಮನುಷ್ಯ. ಮಾನವನ ಹೊಸ ಹೊಸ ಅನ್ವೇಷಣೆಗಳು,ಮುಂದುವರಿಯುತ್ತಿರುವ ಸಾಧನೆಗಳ ಪಥಗಳಿಂದ ಇತ್ತೀಚೆಗೆ ಪ್ರಪಂಚದ ರೀತಿ ನೀತಿಗಳಿಗಷ್ಟೇ ಒಗ್ಗಿಕೊಳ್ಳುತ್ತಿದ್ದಾನೆ.
ದಿನದ ಹಗಲು ಸಮಯವನ್ನು ತಾನು ದಿನದ ಕಾರ್ಯಗಳಿಗೆ ಸಂಯೋಜಿಸಿ, ರಾತ್ರಿ ಸಮಯವನ್ನು ವಿಶ್ರಾಂತಿಗಾಗಿ ಬಳಸುತ್ತಾನೆ. ಈ ಕುರಿತು ಪರಿಶುದ್ದ ಕುರಾನ್ ಹೇಳುದೇನೆಂದರೆ,
ಅಧ್ಯಾಯ 28: ಅಲ್ ಕಸಸ್ (ಕಥೆಗಳು), ಸೂಕ್ತ 73
*ﻭَﻣِﻦ ﺭَّﺣْﻤَﺘِﻪِۦ ﺟَﻌَﻞَ ﻟَﻜُﻢُ ٱﻟَّﻴْﻞَ ﻭَٱﻟﻨَّﻬَﺎﺭَ ﻟِﺘَﺴْﻜُﻨُﻮا۟ ﻓِﻴﻪِ ﻭَﻟِﺘَﺒْﺘَﻐُﻮا۟ ﻣِﻦ ﻓَﻀْﻠِﻪِۦ ﻭَﻟَﻌَﻠَّﻜُﻢْ ﺗَﺸْﻜُﺮُﻭﻥَ*
ನಿಜವಾಗಿ, ನೀವು ವಿಶ್ರಾಂತಿ ಪಡೆಯುವಂತಾಗಲು ಹಾಗೂ ಅವನ ಅನುಗ್ರಹವನ್ನು ಅರಸುವಂತಾಗಲು ಮತ್ತು ನೀವು ಕೃತಜ್ಞರಾಗಬೇಕೆಂದು, ತನ್ನ ಅನುಗ್ರಹದಿಂದ ನಿಮಗಾಗಿ ರಾತ್ರಿ ಮತ್ತು ಹಗಲನ್ನು ನಿರ್ಮಿಸಿರುವವನು ಅವನೇ,(ಅಲ್ಲಾಹನೇ..)
ಅಲ್ಲಾಹು ಈ ಭೂಮಿಯ ಮೇಲೆ ಮಾನವನಿಗೆ ಇಷ್ಟೆಲ್ಲಾ ಅನುಗ್ರಹ ಹಾಗೂ ಔದಾರ್ಯ ನೀಡಿದರೂ ಮಾನವನು ಅಲ್ಲಾಹನಲ್ಲಿ ಕೃತಜ್ಞರಾಗುವುದು ಮಾತ್ರ ಬಹಳಾ ಕಡಿಮೆ . ಈ ಕುರಿತು ಕುರಾನಿನಲ್ಲಿ ಹೇಳುದೇನೆಂದರೆ..
ಅಧ್ಯಾಯ 7: ಅಹ್ ರಾಫ್ (ಔನ್ನತ್ಯಗಳು), ಸೂಕ್ತ 10
*ﻭَﻟَﻘَﺪْ ﻣَﻜَّﻨَّٰﻜُﻢْ ﻓِﻰ ٱﻷَْﺭْﺽِ ﻭَﺟَﻌَﻠْﻨَﺎ ﻟَﻜُﻢْ ﻓِﻴﻬَﺎ ﻣَﻌَٰﻴِﺶَ ۗ ﻗَﻠِﻴﻼً ﻣَّﺎ ﺗَﺸْﻜُﺮُﻭﻥَ*
ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಸಿದೆವು ಮತ್ತು ಅದರಲ್ಲಿ ನಿಮಗೆ ವಿವಿಧ ಸಾಧನಗಳನ್ನು ಒದಗಿಸಿಕೊಟ್ಟೆವು. ಆದರೂ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ.
ಹೌದು ನಮಗೆ ಅಲ್ಲಾಹನು ಇಷ್ಟೆಲ್ಲಾ ಅನುಗ್ರಹ ಸಂಪತ್ತು ಆಸ್ತಿ ಪಾಸ್ತಿ ನೀಡಿದರೂ ನಾವೆಷ್ಟು ತೃಪ್ತಿಪಡುತ್ತಿದ್ದೇವೆ.?.
ಬರಿಗೈಲಿ ಬಂದಂತೆ ಬರಿಗೈಲೇ ಹೋಗುವ ಸತ್ಯವರಿತರೂ ಹಂಬಲದ ಹಿಂದೆಯೇ ಮುಂದಡಿಯಿಡುತ್ತಾ ಸಾಗುವಾಗ ಅನಿವಾರ್ಯವಾಗಿ ಅಕ್ರಮದೆಡೆಗೆ ಹೆಜ್ಜೆಯಿಟ್ಟು ಅಲ್ಲಾಹನು ನೀಡಿದ ಸುಂದರ ಗುರಿಯ ಆಹ್ವಾನವನ್ನು ತಿರಸ್ಕರಿಸಿದಂತಾಗುವುದಿಲ್ಲವೇ...?
ಅವನು ನಿಮ್ಮ ಜೀವನದ ಸದುಪಯೋಗಕ್ಕಾಗಿ ಎಣಿಸಿ ಮುಗಿಯದಷ್ಟು ಸಂತುಷ್ಟ ಮಾರ್ಗವನ್ನು ನೀಡಿದರೂ ಅವನ ನಿರ್ದೇಶದಾನುಸಾರ ಜೀವನ ಪಯಣವನ್ನು ಸಾಗಿಸಲಾಗದ ಮಾನವನೇ ಅಲೋಚಿಸು,ಈ ಇಹಲೋಕದ ಆಸೆಯ ಅಮಲು ಕ್ಷಣಿಕವಷ್ಟೆ.ಭೂಲೋಕದ ಬಹು ಜ್ಞಾನಿಯಾದ ನೀನು ಅಲ್ಲಾಹನು ನೀಡಿದ ಸ್ವರ್ಗದ ಬಹುಮಾನದ ಕೊಡುಗೆಯನ್ನು ಕೇವಲ ಕ್ಷಣ ಸುಖಕ್ಕಾಗಿ ಬದಿಗಿಡದೆ ನೈಜ ಮಾನವನ ನೈಜ ಗುಣಗಳ ಅವನ ಆದೇಶದ ಮೂಲಕ ಮುಂದುವರಿದು ಆ ಅತ್ಯಮೂಲ್ಯ ಬಹುಮಾನವನ್ನು ತನ್ನದಾಗಿಸಿಕೊಳ್ಳಬೇಕಾಗಿದೆ.
- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್
# ಹೊಂಬೆಳಕು
*ಯುವ ಬರಹಗಾರರ ವೇದಿಕೆ*

Comments
Post a Comment