ನನ್ನ ರೂಮಿನಲ್ಲಾದ ಈದ್.....!! ಇದು ಬಹುತೇಕ ಪ್ರವಾಸಿಯ ಈದ್....
ನನ್ನ ರೂಮಿನಲ್ಲಾದ ಈದ್.....!!
ಇದು ಬಹುತೇಕ ಪ್ರವಾಸಿಯ ಈದ್....
n.u.t - ತಬೂಕ್
ವಿಶ್ವದಲ್ಲೆಡೆ ಮುಸಲ್ಮಾನರು ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವಾಗಿದೆ ಈ ಬಕ್ರೀದ್.
ಅಂದು ಬಕ್ರೀದ್ ಹಬ್ಬದ ದಿನವಾಗಿತ್ತು.
ಬೆಳಿಗ್ಗೆ ಫಜರ್ ನಮಾಝ್ ಮುಗಿಸಿ ರೂಮಿಗೆ ಬಂದೆವು. ಹೆಚ್ಚು ಹಸಿವಾಗಿದ್ದರಿಂದ ಕಾಲಿ ಹೊಟ್ಟೆಗೆ ಏನಾದರು ತಿನ್ನಲು ಅಡುಗೆ ಕೋಣೆಗೆ ತೆರಳಿದಾಗ, ಕಳೆದ ದಿನದ ದಾಲ್ ಕರಿ ಹಾಗೂ ಕುಬ್ಬೂಸ್ ರೆಡಿಯಾಗಿತ್ತು. ಅದನ್ನು ಹತ್ತಿರದಲ್ಲಿ ನೋಡಿದಾಗ ಹೊಟ್ಟೆ ತುಂಬಿದ ಅನುಭವವಾಯಿತು....!!
ಹಬ್ಬದ ದಿನಗಳಂದು ಗೆಳೆಯನಾದ ಮುಸ್ತಫಾ ನನ್ನ ರೂಮಿಗೆ ಬರುವುದು ರೂಡಿ. ಅವರ ಕೆಲ ತಮಾಷೆಗಳೊಂದಿಗೆ ಅವರ ನಡವಳಿಕೆಯು ನಮ್ಮ ರೂಮಿನವರಿಗೆ ತುಂಭಾ ಹಿಡಿಸುವ ವ್ಯಕ್ತಿಯಾಗಿದ್ದರು. ಅವರ ತಮಾಷೆ ಹಾಗೂ ಮಾತಿನೊಂದಿಗೆ ಮಸೀದಿಗೆ ತೆರಳಲು ರೆಡಿಯಾಗತೊಡಗಿದೆವು.
ಆರು ನಲವತ್ತೈದಕ್ಕೆ ಮಸೀದಿಯಲ್ಲಿ ಪ್ರಾರ್ಥನೆ ಆರಂಭವಾಯಿತು. ನಮಾಝ್, ಖುತುಬಾದ ನಂತರ ಮಸೀದಿಯ ಹೊರಾಂಗಣದಲ್ಲಿ ನಿಂತಿದ್ದ ಪರಿಚಯಸ್ತರೊಂದಿಗೆ ಅಪ್ಪುಗೆಯ ಈದ್ ಮುಬಾರಕ್ ವಿನಿಮಯ ಮಾಡಿಕೊಂಡೆವು.
ಕೆಲವು ಸೆಲ್ಫೀ... ಹಾಗೂ ಫುಲ್ ಫೋಟೋ ತೆಗೆದ ನಂತರ ಸೀದಾ ರೂಮಿಗೆ ಬಂದೆವು.
ಅತೀ ಪರಿಚಯಸ್ತ ಎರಡು ಮೂರು ಆನಿವಾಸಿ ಮಂಗಳೂರಿಗರ ಮನೆಗಳಿಗೆ ಭೇಟಿ ನೀಡಿ, ಮತ್ತೆ ರೂಮಿಗೆ ತಲುಪುವಾಗ ಸಮಯ ಸರಿಯಾಗಿ ಹತ್ತು ಘಂಟೆಯಾಗಿತ್ತು.
***********
ಅವನು ನನ್ನ ಸಹದ್ಯೋಗಿ. ಸ್ವತಃ ಮಂಗಳೂರಿಗನಾಗಿದ್ದು ಸೌದಿ ಅರೇಬಿಯಾದ ಈ ತಬೂಕ್ ಪ್ರದೇಶಕ್ಕೆ ಬಂದು ಮೂರ್ನಾಲ್ಕು ತಿಂಗಳಾಗಿತ್ತು ಅಷ್ಟೇ....!!
ಇಲ್ಲಿ ಯಾರೂ ಅಷ್ಟು ಪರಿಚಯ ಇಲ್ಲವಾದುದರಿಂದ ಮಸೀದಿಯಿಂದ ನೇರವಾಗೀ ರೂಮಿಗೆ ಬಂದಿದ್ದ.
ರೂಮಿಗೆ ಬಂದವನೇ ಮಲಗಳು ಎಲ್ಲಾ ಪೂರ್ವ ಸಿದ್ದತೆ ನಡೆಸಿದ್ದ. ಮನೆಗೆ ಫೋನ್ ಮಾಡಿ ತಾಯಿಯೊಂದಿಗೆ, ಈ ಮರುಭೂಮಿ ಪ್ರದೇಶದ ಈದ್ ಹಬ್ಬದ ಕುರಿತು ವಿವರಿಸುತಿದ್ದ...
ಊಟ ಮಾಡಿದೆಯ ಮಗನೇ...??
ಎಂಬ ತಾಯಿಯ ಪ್ರಶ್ನೆಗೆ ಉತ್ತರಿಸುತ್ತಾ...
ಹಾಂ ಅಮ್ಮಾ....!!!
"ಈಗ ತಾನೇ ಹೊಟ್ಟೆ ತುಂಭಾ ಬಿರಿಯಾನಿ ಉಂಡೆ"
ಎಂದು ಹೇಳಿ, ದುಃಖದಿಂದ ಫೋನು ಕಟ್ ಮಾಡಿದ.
***********
ನಾನವನ ಬಳಿ ತೆರಳಿ ಯಾಕೆ ನೀನು ಅಮ್ಮನೊಂದಿಗೆ ಸುಳ್ಳು ಹೇಳಿದೆ. ನೀನು ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ತಿನ್ನಲಿಲ್ಲ. ರೂಮಿನಲ್ಲಿ ಯಾವುದೇ ಊಟ ಕರಿ ಮಾಡಲಿಲ್ಲ. ಮತ್ಯಾಕೆ ಸುಳ್ಳು ಹೇಳಿದೆ...? ಎಂದು ಕೇಳಿದೆ...
ಹೌದು ನಿಝಾಂ.. ಸುಳ್ಳು ಹೇಳಿದ್ದು ಸತ್ಯ. ಅವರು ಮನೆಯಲ್ಲಿ ಅಮ್ಮ, ಅಪ್ಪ, ಅಕ್ಕ, ತಮ್ಮಂದಿರು ಒಟ್ಟಿಗೆ ಉಂಡು ಸಂತೋಷದಿಂದಿರುವಾಗ ನಾವ್ಯಾಕೆ ಸಂತೋಷ ಕೆಡಿಸಬೇಕು..? ಅವರಲ್ಲಿ ಸಂತೋಷದಿಂದಿದ್ದರೆ, ಅದುವೇ ಸಾಕು ಎಂದು ಹೇಳಿದ..
ಅವನ ಆ ಮಾತೇಕೋ ನಮ್ಮ ಮನ ನೋಯಿಸಿತು.
ಕೂಡಲೇ ನಾನು ಮುಸ್ತಫಾ ಒಟ್ಟಿಗೆ ಸೇರಿ ಬಕಾಲ (ದಿನಸೀ ಅಂಗಡಿ) ಗೆ ಹೋಗಿ ಅಗತ್ಯ ಸಾಮಾನುಗಳನ್ನು ಖರೀದಿಸಿ ಬಿಸಿ ಬಸಿ ಬಿರಿಯಾನಿ ತಯಾರಿಸಿದೆವು. ಅವನಿಗೂ ನೀಡಿ, ಜೊತೆಗೆ ನಾವು ಹೊಟ್ಟೆ ತುಂಬಾ ಉಂಡೆವು.
ಅವನ ಮುಗುಳ್ನಗೆಯು ನಮಗೆ ಸಂಪೂರ್ಣ ತೃಪ್ತಿ ತಂದಿತ್ತು.
ನಂತರ ಮಲಗುವ ಎಲ್ಲ ತಯಾರಿ ನಡಿಸಿ, ಳೊಹರ್ ನಮಾಝಿನ ಬಳಿಕ ಸಂಪೂರ್ಣವಾಗಿ ನಿದ್ದೆಗೆ ಜಾರಿದೆವು...
- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್
Comments
Post a Comment