ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"
*ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"* ಕೆಲವೊಂದು ಕುಟುಂಬ ಮದುವೆಯ ನಂತರ ಬೇರ್ಪಡುವುದುಂಟು. ಇನ್ನೂ ಕೆಲವರು ಒಟ್ಟಿಗೇನೇ ತಂದೆ ತಾಯಿಯೊಂದಿಗೆ ಹೆಂಡತಿ ಹಾಗೂ ಮಕ್ಕಳು ಜೊತೆಗೇ ಇರುತ್ತಾರೆ. ತಂದೆ ತಾಯಿಯ ಜೊತೆಗೆ ಬೆಳೆಯುವ ಕೆಲವೊಂದು ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗುತಿದ್ದಾರೆ. ಕೆಲಸದ ಒತ್ತಡ, ಹಣಕ್ಕಾಗಿ ಕೆಲಸದ ಅನಿವಾರ್ಯತೆ, ಮನೆಯಲ್ಲಿ ಕೂರದೆ ಗೆಳೆಯ ಮನೆಯಲ್ಲಿ ನೆಮ್ಮದಿ ಈ ರೀತಿಯಾಗಿ ಕಾರಣ ಹೇಳಿ ಮನೆಯಿಂದ ಕಾಲ್ಕಿತ್ತವರು ಮಕ್ಕಳನ್ನು ಬಂಧಿಯಾಗಿಸುತ್ತಿದ್ದಾರೆ. ಇದು ಸಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತಪ್ಪು. ಇದನ್ನು ತಿದ್ದಿ ಕೊಳ್ಳುವ ಅನಿವಾರ್ಯತೆ ನಮ್ಮೆಡೆಯಲ್ಲಿದೆ. ದಿನಂಪ್ರತೀ ಬೆಳಿಗ್ಗೆ ಸೂರ್ಯೋದಯದ ಮೊದಲು ತನ್ನ ದಿನಚರಿ ವಸ್ತುಗಳೊಂದಿಗೆ ಮನೆ ಬಿಟ್ಟು ದೂರದ ಆಫೀಸಿಗೋ ಅಥವಾ ಹೊಲಕ್ಕೆ ಕೆಲಸಕ್ಕೆಂದು ಹೊರಟ ಅಪ್ಪ ನಂತರ ಸಾಯಂಕಾಲ ಆರು ಘಂಟೆಗೆ ಬಳಲಿದ ದೇಹದೊಂದಿಗೆ ಮನೆಯ ಕಡೆ ಬರುತ್ತಾನೆ. ಮಧ್ಯಾಹ್ನ ಸಾಬಾನ ಕೈಯಿಂದ ಖರೀದಿಸಿದ ಮೀನಿನ ಜೊತೆಗೆ ಗಂಜಿ ಚಟ್ನಿಯನ್ನೂ ಸೇವಿಸಿ ಸ್ವಲ್ಪ ಹೊತ್ತು ಮೊಬೈಲಲ್ಲೋ ಅಥವಾ ದಿನ ಪತ್ರಿಕೆ ಓದಿಯೋ ಕಾಲ ಕಳೆದು ಮಲಗುತ್ತಾನೆ... ಮರುದಿನ ಅದೇ ಅಪ್ಪ, ಅದೇ ರೀತಿ.. ಒಂದು ರೀತಿಯಾಗಿ ಹೇಳಬೇಕಾದರೆ, ದೂರದ ದುಬಾಯಿ ಅಥವಾ ಸೌದಿಯಲ್ಲಿರುವ ಉದ್ಯೋಗಿ ತನ್ನ ವರ್ಷದ ಅವಧಿಯ ತಿಂಗಳ ರಜೆಯಲ್ಲಿ ಬಂದು ಮ...