*ನಕಲಿ ಹಾವಳಿ*

*ನಕಲಿ ಹಾವಳಿ*

ನಕಲಿ ಗಾಂಧಿಯರೆಡೆಯಲಿ
ಅಸಲಿ ಗಾಂಧಿಯು ಮರೆಯಾದವೇ..?
ಕೊಳ್ಳೆ ಹೊಡೆಯಲು ನೆನಪು ಉಳಿಯಿತು
ಗಾಂಧಿ ನೋಟದು ಮಾತ್ರವೇ..!!!

ಖಾದಿ ವಸ್ತ್ರವ ಧರಿಸಿದವನಲಿ
ಅಹಂಕಾರದೊಳೇನಿದು ನೋಟವೇ...?
ಬಟ್ಟೆಗಿಲ್ಲದ ಬಡವನಿರುವನು
ಅವನೆದುರು ಇವನದು ಹವ್ಯಾಸವೇ...!!!

ಮನೆಯ ಕಸವನು ಗುಡಿಸದವನು
ದೇಶ ಸ್ವಚ್ಚ ಹೇಗೆ ಮಾಡುವ ತಟ್ಟನೇ..?
ಪರರ ಮೆಚ್ಚಿಸಲು ಬಂದ ತಂಡವು
ಸ್ವ ಪ್ರಚಾರಕೆ ನೋಟನು ಕೊಟ್ಟನೇ...!!

ದೋಚಿ ಬಾಚಿದ ಹೊಟ್ಟೆ ಬಾಕರು
ತಿಂಡು ತೇಗುತ ಹೋದರೇ...?
ಗಾಂಧಿ ಹೆಸರನು ಬಳಸಿ ಕಲಸುತ
ಉಂಡು ಕೊಂಡು ಹೋದರೇ...!!!

ಜಾತಿ ನೆಪದಲಿ ದಿನವ ದೂಡುತ
ಅಂಟುರೋಗ ಜ್ವರವನು ಬಿಟ್ಟರೇ...?
ಜ್ಯೋತಿ ಬೆಳಗುವ ದೇಶ ದೊರೆಗಳು
ಗಂಟು ಕೂಡಿಸಿ ಇಟ್ಟರೇ...!!!

ಧರಿಸಿ ಹರಸುವ ದಿನಗೆಳೆಡೆಯಲಿ
ಗಾಂಧಿಯ ಅಹಿಂಸೆ ತತ್ವವು ಬೆಳೆದವೇ...?
ಬಾಪುಜಿ ಬಾಳಿನ ಧ್ಯೇಯ ನೆನಪದು
ದೇಶ ಉಳಿಸಲು ನೆನಪಿಸೋಣವೇ....!!!

- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ