ಖಲೀಫರ ಚರಿತ್ರೆ

*ಶ್ರೀಮಂತರೂ, ಖಲೀಫರೂ, ಶಹೀದರೂ*  *ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ*

 *ಕಿರು ಪರಿಚಯ*

          ಇಸ್ಲಾಂ ಧರ್ಮದ ಚರಿತ್ರೆಯ ಇತಿಹಾಸದ ಮೂರನೇ ಖಲೀಫರಾದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ಕ್ರಿ.ಶ 576 ರಲ್ಲಿ ಸೌದಿ ಅರೇಬಿಯಾದ ತಾಯಿಫ್ ಎಂಬ ಪ್ರದೇಶದಲ್ಲಿ ತಂದೆ ಅಫ್ಫಾನ್ ಇಬ್ನ್ ಅಲ್ ಅಸ್ ಹಾಗೂ ತಾಯಿ ಅರ್ವಾ ಬಿಂತ್ ಕುರಯ್ಯ ಇವರ ಮಗನಾಗಿ ಜನಿಸಿದರು. ಇಸ್ಲಾಂ ಇತಿಹಾಸದಲ್ಲಿ ಕಿ.ಶ 644 ರ ನವೆಂಬರ್ ತಿಂಗಳಿನಿಂದ ಕಿ.ಶ 656 ರ ಜೂನ್ ತಿಂಗಳ ವರೆಗೆ ಖಲೀಫರಾಗಿ ಅಧಿಕಾರ ನಿರ್ವಹಿಸಿದರು.
  ತನ್ನ ಜೀವನದ 79ನೇ ವರ್ಷದಲ್ಲಿ ಕಿ.ಶ 656 ಜೂನ್ 17 ರಂದು  (18 Dhul-Hijjah 35 AH) ಸೌದಿ ಅರೇಬಿಯಾದ ಮದೀನಾ ಎಂಬ ಪ್ರದೇದಲ್ಲಿ ವಿಧಿವಶರಾದರು.

*ಆಡಳಿತ, ತ್ಯಾಗ, ಮರಣ*....

          ಇಸ್ಲಾಮಿನ ಇತಿಹಾಸದಲ್ಲಿ ಕೊಟ್ಯಾದಿಪತಿಯಾದ ಶ್ರೀಮಂತರಾದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ರಹಸ್ಯವಾಗಿಯೂ ಪರಸ್ಯವಾಗಿಯೂ ಕೊಡುಗೈ ದಾನಿಯಾಗಿದ್ದರು. ಇವರು ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರ ಸ್ವರ್ಗಲೋಕದ ಆತ್ಮೀಯ ಗೆಳೆಯನಾಗಿದ್ದಾರೆಂದು ಹದೀಸ್'ಗಳಲ್ಲಿ ಕಾಣಬಹುದು. ಪ್ರವಾದಿ ಮಹಮ್ಮದ್ ಸ.ಅ ರವರು ಜೀವಿತಾವಧಿಯಲ್ಲೇ ಅನಸ್ ರ.ಅ ರವರೊಂದಿಗೆ ಹೇಳುತ್ತಾರೆ, ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ತನ್ನ ತ್ಯಾಗದ ಫಲವಾಗಿ ಅವರಿಗೆ ಸ್ವರ್ಗಲೋಕವು ನಿಶ್ಚಯವಾಗಿದೆಯೆಂದು. ಹೌದು ಅವರ ತ್ಯಾಗವೂ ಅಂತಹದೇ ಆಗಿತ್ತು.
       
          ಅದೊಂದು ದಿನ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ಹಾಗೂ ಸಹಾಬಿಗಳು ಮರಳುಗಾಡಲ್ಲಿ ಸಂಚರಿಸುತಿದ್ದರು. ಸಹಾಬತರೆಲ್ಲರೂ ವಿಪರೀತ ದಾಹದಿಂದ ಬಳಲುತಿದ್ದರು. ಅವರಲ್ಲೋರ್ವರು ಪ್ರವಾದಿಗೆ ವಿಷಯ ತಿಳಿಸಿ ದೂರದಲ್ಲಿ ಕಾಣುತಿದ್ದ ಬಾವಿಯ ಬಳಿ ನೀರಿಗಾಗಿ ತೆರಳಿದರು. ಆದರೆ ಅದು ಒಂದು ಇಸ್ಲಾಮಿನ ಶತ್ರು ಭಾಗದವನ ಬಾವಿಯಾಗಿತ್ತು. ಅಲ್ಲಿ ನೀರು ಪಡೆಯಲು ವಿರೋಧಿಸಿದಾಗ, ಪ್ರವಾದಿಯವರು ಸ್ವಹಾಬತರ ಕಡೆ ಮುಖಮಾಡಿ ಕೇಳಿದರು ನನಗೂ ನನ್ನ ಸ್ವಾಹಬತರಿಗೂ ನೀರು ನೀಡಿ ದಾಹ ತೀರಿಸಲು ಯಾರು ಮುಂದೆ ಬರುತ್ತೀರಿಯೆಂದು ಕೇಳಿದಾಗ ಅವರೆಡೆಯೆಂದ ಎದ್ದೇಳಿದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ಆ ಶತ್ರು ಭಾಗದವ ನೀರಿಗಾಗಿ ಕೇಳಿದ ಹಣದ ದುಪ್ಪಟ್ಟು ಹಣ ನೀಡಿದರು. ಆ ಮರುಭೂಮಿಯ ಮಧ್ಯೆ ಎಲ್ಲರಿಗೂ ನೀರು ನೀಡಿದ ಪುಣ್ಯವು ಇವರಿಗೆ ಸಲ್ಲುತ್ತದೆ.

          ಪ್ರವಾದಿಯ ಕಾಲಘಟ್ಟದಲ್ಲಿ  ನೆಬಿ ಸ.ಅ ಸ್ವಹಾಬತರನ್ನು ಒಟ್ಟುಗೂಡಿಸಿ ಇಸ್ಲಾಂ ಧರ್ಮಕ್ಕಾಗಿ ಸಂಪತ್ತಿನ ಆವಶ್ಯವನ್ನು ಮುಂದಿಟ್ಟಾಗ ಮೊದಲ ಬಾರಿ ನೂರು ಎರಡನೇ ಬಾರಿ ಇನ್ನೂರು ಮೂರನೇ ಬಾರಿ ಮನ್ನೂರು ಒಂಟೆಯನ್ನು ದಾನವಾಗಿ ನೀಡಿ ಉದಾರ ಮನಸ್ಕನಾಗಿದ್ದರು ಈ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು..

     *ಇಷ್ಟೆಲ್ಲಾ ಉದಾರದಾನಿಯೂ ತ್ಯಾಗಮಯಿಯೂ ಆದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರ ಮರಣವು ಒಂದು ಮಹಾ ಸಂಭವವಾಗಿತ್ತು*
 
         ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ಖಲೀಫರಾಗಿದ್ದ ಸಂದರ್ಭವಾಗಿತ್ತು ಅದು. ಅವರ ಆಡಳಿತಾ ಸಂದರ್ಭ ಸುತ್ತಲ ಪ್ರದೇಶದ ಹಾಗೂ ರಾಜ್ಯದ  ಸ್ಥಿತಿ ಚಿಂತಾಜನಕವಾಗಿತ್ತು. ಈ ಸಂಧರ್ಭದಲ್ಲಿ ಅಲ್ಲಿ ಅವರಿಗೆ ಹಲವಾರು ಶತ್ರುಗಳು ಹುಟ್ಟಿಕೊಂಡಿದ್ದರು. ಶತ್ರುಗಳ ಸಂಖ್ಯೆ ಹೆಚ್ಚಾದಂತೆ ಗೂಢಾಲೋಚನೆಯ ಫಲವಾಗಿ ಒಗ್ಗಟ್ಟಾದ ಶತ್ರುಗಳು ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರನ್ನು ಕೊಲ್ಲಲು ತೀರ್ಮಾನಿಸಿದರು. ತೀರ್ಮಾನದ ಹಂತವಾಗಿ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರಿಗೆ ನೀರು ಆಹಾರವಸ್ತುವೆಲ್ಲ ತಡೆಹಿಡಿದರು. ಕಂಗಾಲದ ಖಲೀಫರು ತಿನ್ನಲು ಹಾಗೂ ಕುಡಿಯಲಿಲ್ಲದೆ ಉಪವಾಸ ನಡೆಸಿದರು. ತನ್ನ ನಿದ್ರೆಯಲ್ಲಿ ಪ್ರವಾದಿಯವರ ಕನಸು ಕಂಡ ಖಲೀಫ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರಿಗೆ ಧೈರ್ಯ ತುಂಬಿದರು. ನಂತರ ಮುಹಿಜಿಝತ್ತ್ ಅಂದರೆ ಕರಾಮತ್ತಿನಿಂದ ಸ್ವರ್ಗದ ಪಾನೀಯ ನೀಡಿದರು.  

          ನಿದ್ರೆಯಿಂದ ಎಚ್ಚೆತ್ತ ಖಲೀಫರು ಮಗರಿಬ್ ಸಮಯದಲ್ಲಿ ವ್ರತ ಕೊನೆಗೊಳಿಸಿ ಖುರಾನ್ ಓದಲು ತೊಡಗಿದರು, ಅದಾಗಲೇ ಅಲ್ಲಿಗೆ ಧಾವಿಸಿದ ಶತ್ರು ಪಾಳಯದವರು ಖಲೀಫರತ್ತ ಖಡ್ಗ ಬೀಸಿದರು, ಅಡ್ಡ ಬಂದ ಖಲೀಫರ ಮಡದಿಯ ಮೇಲೆ ಕುಪಿತರಾದ ಶತ್ರುಗಳು ಅವರ ಕೈ ಹಾಗೂ ಕಾಲುಗಳನ್ನು ಕಡಿದು ಮನೆಯಿಂದ ಹೊರಗೆಸೆದರು.  ನಂತರ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರ ಹಿಂದಿನಿಂದ ಖಡ್ಗದಿಂದ ಕಡಿದು ಕರುಳುಗಳನ್ನು ಹೊರ ಚೆಲ್ಲಿದರು.   ಹೀಗೆ ಖಲೀಫ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ಶಖುರಾನನ್ನು ಎದೆಗೆ ಅಪ್ಪಿಕೊಂಡು ರಕ್ತಸಾಕ್ಷಿಯಾದರು.

          ಇದರ ಮುಂದುವರಿದ ಭಾಗವಾಗಿ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರ ಮೃತದೇಹವನ್ನು ಮದೀನಾದ ಸ್ಮಶಾನ ಭೂಮಿ ಜನ್ನತುಲ್ ಬಕೀಯದ ಬಳಿ ದಫನ್ ಮಾಡಲು ಕೊಂಡುಹೊಂದಾಗ ಶತ್ರುಗಳು ಕಲ್ಲು ಎಸೆಯಲಾರಂಭಿಸಿದರು. ನಿರಂತರ ತಲ್ಲೆಸೆತದಿಂದ ತಪ್ಪಿಸಲು ಸ್ವಹಾಬತರು ಮೃತದೇಹವನ್ನು ಅಲ್ಲೇ ಇಟ್ಟು ಓಡಿ ಹೋದರು.  ಮತ್ತೆಯೂ ಜನ್ನತ್ ಬಕೀಯದಲ್ಲಿ ದಫನ್ ಮಾಡಲು ಅನುವು ಮಾಡಿಕೊಡದಿದ್ದಾಗ, ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರ ಮೃತದೇಹವನ್ನು ಜನ್ನತುಲ್ ಬಕೀಯದ ಹೊರಗೆ ದಫನ್ ಮಾಡಿದರು ....  
    ಮುಂದಿನ ದಿನಗಳಲ್ಲಿ ಸ್ಮಶಾನ ಭೂಮಿ ವಿಸ್ತರಿಸಿದಾಗ ಇವರ ಖಬರ್ ಜನ್ನತುಲ್ ಬಕೀಯಾದ ಒಳಗೆ ಒಳಪಟ್ಟಿತು..

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ