#ಸಿಗದ_ಸ್ವಾತಂತ್ರ್ಯ

ಕಿಂಚಿತ್ತೂ ಕರುಣೆ ತೋರಿಸದ
ಬಿಳಿಯರ ನರಕ ಗುಂಡಿಯಿಂದ ಹೋರಾಡಿ ಗೆದ್ದು ಬಂದ ಭಾರತೀಯರು ನಾವು...
ಅಧಿಕಾರ, ವ್ಯಾಮೋಹ, ಹಣದಾಸೆಗಾರರ ಬಲೆಯಲ್ಲಿ ಸಿಕ್ಕಿಕೊಂಡಿರುವುದು ಒಗ್ಗಟ್ಟಿನ ಕೊರತೆಯೇ ಸರಿ,

ಒಂದರ್ಥದಲ್ಲಿ...
ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದೂ ಅದನ್ನು  ಉಪಯೋಗಿಸುತ್ತಿರುವುದು ಸಾಮಾನ್ಯ ದೇಶ ಪ್ರೇಮಿ ಭಾರತೀಯರಲ್ಲ, ದಚಶ ದ್ರೋಹಿ ಭಾಗ್ಯವಂತರು ಎನ್ನುವಷ್ಟರ ಮಟ್ಟಿಗೆ ದೇಶ ಮುಂದುವರಿಯುತ್ತಿದೆ...!

*ಹೌದು..*
ಸ್ವಾತಂತ್ಯ ಹೋರಾಟಗಾರರು ರಕ್ತ ಹರಿಸುತ್ತಿದ್ದು ಶಾಂತಿ ಸಹಬಾಳ್ವೆಗಾಗಿಯಾದರೂ,ಇಂದು
ರಕ್ತ ಕಸಿದು ಅಶಾಂತಿ ಸೃಷ್ಟಿಸುವುದು ಮೇಲ್ಜಾತಿಗಳ ದೊಡ್ಡಸ್ತಿಕೆ ಉಳಿಸಿಕೊಳ್ಳಲು...

ಏಕೆಂದರೆ --
ಹೊಡಿ, ಬಡಿ, ಕಡಿ, ಎಂದು ಆಜ್ಞೆಮಾಡುತ್ತಿರುವ ಮೇಲ್ಜಾತಿ ಪಿಶಾಚಿಗಳು ಸಾಮಾನ್ಯ ಜನರ ವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿರುವುದು ಕಂಡೂ ದೇಶದ ಪ್ರೌಢ ಪ್ರಜೆಗಳು ಸುಮ್ಮನಾಗಿರುವುದು ಖೇದಕರ,

ಎಲ್ಲಿಯವರೆಗೆ ಮೌನಮುರಿದು ಒಗ್ಗಟ್ಟು ಸಾರಿ ಮುಂದುವರಿಯುವುದಿಲ್ಲವೋ
ಅಲ್ಲಿಯವರೆಗೆ ಸ್ವಾತಂತ್ರ್ಯ ಕೇವಲ ಕನಸು ಮಾತ್ರ..

*ಓ ಅಧಿಕಾರ ದಾಹಿಗಳೇ ಕೇಳಿರಿ,..!!*

ನೈಜ ಭಾರತೀಯರ ಹಣ, ಅಧಿಕಾರ, ಸಂಪತ್ತು, ನ್ಯಾಯ, ರಕ್ಷಣೆ, ಸಮಾನತೆ, ಐಕ್ಯತೆ ಮತ್ತೆ ಒಂದಾಗಿ ಮತ್ತೆ ಪಡೆಯುವೆವು ಕೇಸರಿ,ಬಿಳಿ,ಹಸಿರಿನ ಧ್ಯೇಯವನ್ನು ಎತ್ತಿ ಕಟ್ಟುವೆವು,ಇದು ದೇಶಭಕ್ತ ನೈಜ ಪ್ರಜೆಗಳ ಸ್ವಾತಂತ್ರ್ಯದ ನಮ್ಮ ಗುರಿ,

*- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ