ಭಾಗ 17 (ಕೊನೇಯ ಭಾಗ)
#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ.. ಅವರೇ... #ಸುರಾಖರ_ಮಗಳು : #ಭಾಗ - 17 (ಓದಲೇ ಬೇಕಾದ ಕೊನೇಯ ಭಾಗ) ಅಲ್ಲಿಂದ ಮರಳಿದ ಐದು ಜನರು, ಖಾದ್ಸೀಯ್ಯ ರಣಾಂಗಣಕ್ಕೆ ತಲುಪಿದರು. ತಹ್ಮಿನಾ ನೇರವಾಗಿ ಸಹದ್ ರ.ಅ ರವರ ನೇತೃತ್ವದ ಸೈನ್ಯದ ಕಡೆಗೆ ತೆರಳಿದರು... ಎದುರಾಳಿಯ ತಂಡದ ಸೈನಿಕರೆಲ್ಲರೂ ಆಶ್ಚರ್ಯಗೊಂಡು ತಹ್ಮಿನಾರನ್ನು ಮತ್ತೆ ಮತ್ತೆ ಕರೆದರು. ತಹ್ಮಿನಾ: ನಾನು ಇವತ್ತಿನಿಂದ ಇವರೊಂದಿಗೆ ಇರುವೆನು. ನಿಮ್ಮನ್ನು ತೊರೆದಿರುವೆನೆಂದು ಹೇಳಿದರು. ತಹ್ಮಿನಾ ನೇರವಾಗಿ ಸಹದ್ ರ.ಅ ರವರ ಮುಂದೆ ಬಂದು ಶಆ-ದತ್ ಕಲಿಮ ಹೇಳಿ ಮುಸ್ಲಿಂ ಸ್ತ್ರೀಯಾಗಿ ಸೈನ್ಯವನ್ನು ಸೇರ್ಪಡೆಗೊಂಡರು. ( *ಎದುರಾಳಿ ತಂಡದ ರಾಜಕುಮಾರಿ ತಮ್ಮ ತಂಡವನ್ನು ಸೇರಿಕೊಂಡದ್ದು ಸ್ವಹಾಬಿವರ್ಯರಿಗೆಲ್ಲ ತುಂಭಾ ಸಂತೋಷವಾಯಿತು.*) ********** ತಹ್ಮಿನಾ ಸಹದ್ ರ.ಅ ರವರೊಂದಿಗೆ : ಇದೀಗ ಮರ್ಧಾನ್ ಶೈ ಅವರ ನೇತೃತ್ವದಲ್ಲಿ ಆನೆಗಳ ತಂಡವು ನಮ್ಮನ್ನು ಸದೆಬಡಿಯಲು ಬರಲಿವೆ. ನೀಮ್ಮ ಸೈನ್ಯದಲ್ಲೇನಿದೆ ಅದಕ್ಕೆ ಪ್ರತಿರೋಧಕ ಅಸ್ತ್ರ ಸಹದ್ ರ.ಅ : ನಾವು ಖಡ್ಗವನ್ನು ಬಳಸಿ ಯುದ್ಧ ನಡೆಸುವೆವು. ತಹ್ಮಿನಾ : ಇಲ್ಲ ಅದು ಸಾಧ್ಯವಿಲ್ಲ. ಆನೆಗಳ ತಲೆಯ ಗುರಿಯಾಗಿಸಿ ಬಾಣ ಬಿಟ್ಟರೆ ಮಾತ್ರ ಆನೆಯನ್ನು ಸೋಲಿಸಬಹುದು. ಬಿಲ್ಲು ಪರಿಣ...