ಭಾಗ 15

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ..
ಅವರೇ... #ಸುರಾಖರ_ಮಗಳು #ಭಾಗ - 15

       ತಹ್ಮಿನಾ ತನ್ನ ಹೋರಾಟ ಕೊನೆಗೊಳಿಸಿರಲಿಲ್ಲ. ನೇರವಾಗಿ ಆಶಿಮಾರ ಮೇಲೆ ಜಿಗಿದರು. ಆಶಿಮಾರನ್ನು ನೆಲಕ್ಕೆ ಬೀಳಿಸಿ, ಅವರನ್ನು ಬಂಧಿಸಿ, ಮತ್ತೊಂದು ಕುದುರೆಯ ಮೇಲೆ ಹತ್ತಿ ಅಲ್ಲಿಂದ ನೇರವಾಗಿ ತನ್ನ ಸೈನ್ಯದ ಎಡೆಯಿಂದು ಹಾದುಕೊಂಡು ದೂರ ತೆರಳಿದರು..

       ಈ ಸನ್ನಿವೇಶವನ್ನೆಲ್ಲ ದೂರದಿಂದ ವೀಕ್ಷಿಸುತ್ತಿದ್ದ ಸ್ವಹಾಬಿಗಳೆಲ್ಲರೂ ಗಾಬರಿಗೊಂಡರು. ಸಹದ್ ರ.ಅ ರವರ ಹತ್ತಿ ಓಡೋಡಿ ಬಂದ ಹಸನ್ ಮುಸನ್ನಾ ರ.ಅ ಹಾಗೂ ಆಶಿಂ ಸುರಾಖ ರ.ಅ ಹೇಳಿದರು. "ಸಹದ್ ರ.ಅ ರವರೇ ನಾವು ಅವರನ್ನು ಹಿಂಬಾಲಿಸಿಕೊಂಡು ಹೋಗಿ ಆಶಿಮಾರನ್ನು ರಕ್ಷಿಸುತ್ತೇವೆ". ಸಹದ್ ರ.ಅ ರವರ ಒಪ್ಪಿಗೆಯೂ ಸಿಕ್ಕಿತ್ತು. ತಕ್ಷಣ ಕುದುರೆಯನ್ನೇರಿ ಅವರಿಬ್ಬರು ಅಲ್ಲಿಂದ ತೆರಳಿದರು.

      ಅಲ್ಪ ಸಮಯ ಪರಿಸರ ಪ್ರದೇಶದ ಸುತ್ತಲೂ ಹುಡುಕಿದರೂ ಅವರಿಗೆ ತಹ್ಮಿನಾಳನ್ನು ಕಂಡುಹಿಡಿಯಲು ಆಗಲಿಲ್ಲ.

     ಆಗ ಸಹದ್ ರ.ಅ ರವರ ಬಳಿ ಇಸ್ಲಾಂ ಧರ್ಮ ಸ್ವೀಕರಿಸಿದ್ದ ಮುಸ್ಲಿ ಮತ್ತು ಅನಸ್ ಬಿನ್ ಹಿಲಾಲ್ ಬಂದು ಹೇಳಿದರು. "ಸಹದ್ ರ.ಅ ರವರೇ ಈಗಾಗಲೇ ತೆರಳಿರುವ ಅವರಿಗೆ ಇರಾನಿನ ಬಗ್ಗೆ ಅಷ್ಟೇನೂ ತಿಳಿದಿಲ್ಲ. ನಾವು ಹೋಗಿ ಆಶಿಮಾರನ್ನು ರಕ್ಷಿಸುತ್ತೇವೆ" ಎಂದರು. ಅದಕ್ಕೂ ಸಹದ್ ರ.ಅ ರವರ ಒಪ್ಪಿಗೆ ಸಿಕ್ಕಿತು. ಆ ಎರಡು ಹೊಸ ಮುಸ್ಲಿಮರೂ ತಹ್ಮಿನಾಳನ್ನು ಹುಡುಕ ತೋಡಗಿದರು.

       ಹಸನ್ ಮುಸನ್ನಾ ರ.ಅ ಹಾಗೂ ಆಶಿಂ ರ.ಅ ರವರು ದಿಜಿಲಾ ನದಿ ಭಾಗದಲ್ಲಿ ಸಂಚರಿಸುವಾಗ, ನೀರನ್ನು ಕಂಡು ಸ್ವಲ್ಪ ವಿಶ್ರಾಂತಿ ಪಡೆದರು. ಜೊತೆಗೆ, ಉಝೂ ಮಾಡಿ ನಮಾಝ್ ನಿರ್ವಿಸುತ್ತಿದ್ದರು.

   ಆಗ ಅಲ್ಲಿಗೆ ತಹ್ಮಿನಾಳನ್ನು ಹುಡುಕುತ್ತಾ ತೆರಳಿದ್ದ ಎರಡನೇ ತಂಡ ಮುಸ್ಲಿಂ ಹಾಗೂ ಅನಸ್ ಬಿನ್ ಹಿಲಾಲ್ ಅವರ ಬಳಿ ಬಂದರು.
    ಆಶಿಂ ಹಾಗೂ ಹಸನ್ ಮುಸನ್ನಾ ರ.ಅ ರವರು ಸಲಾಂ ಹೇಳಿದರು. ಆದರೆ, ಅವರು ಹೇಳಿದ ಸಲಾಂಗೆ ಉತ್ತರ ನೀಡಲಿಲ್ಲ. ಬದಲಾಗಿ ಇಬ್ಬರ ಕೈಗಳನ್ನು ಬಿಗಿಯಾಗಿ ಕಟ್ಟಿ ಹಾಕಿ, ಅವರನ್ನು ಬಂಧಿಸಿದರು. ಆಶಿಂ ರ.ಅ ಹಾಗೂ ಹಸನ್ ಮುಸನ್ನಾ ರ.ಅ ರವರಿಗೆ ಆಶ್ಚರ್ಯವಾಯಿತು.
     ಕೈಗೆ ಕಟ್ಟಿದ ಹಗ್ಗದ ತುದಿಯನ್ನು ಹಿಡಿದುಕೊಂಡು ಮುಸ್ಲಿಂ ಮತ್ತು ಅನಸ್ ಬಿನ್ ಹಿಲಾಲ್ ನೇರವಾಗಿ ಅಬವಾನ್ ಗ್ರಾಮದ, ಗ್ರಾಮ ಗವರ್ನರ್ ಸಾಬಿರ್ ಬಳಿ ಬಂದರು.

     ಗ್ರಾಮ ಗವರ್ನರ್ ಸಾಬಿರ್ ಬಳಿ ಹೇಳಿದರು. *"ನಾವು ಈ ಇಬ್ಬರು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಇವರನ್ನು ಕರೆದುಕೊಂಡು ನಾವು ತಹ್ಮಿನಾರ ವಾಸ ಕೇಂದ್ರವಾದ ಬಹರ್ ಹರಮ್ ಗೆ ತೆರುಳುತ್ತಿದ್ದೇವೆ. ಅಲ್ಲಿ ಈ ಎರಡು ಮುಸ್ಲಿಮರನ್ನು ಕೊಲ್ಲಲಿದ್ದೇವೆ, ದಯವಿಟ್ಟು ಬಹರ್ ಹರಮಿಗೆ ತೆರಳುವ ದಾರಿಯನ್ನು ತಿಳಿಸಿಕೊಡಿ"*

   *(ಬಹರ್ ಹರಮ್ ಎಂಬುವುದು ತಹ್ಮಿನಾ ವಾಸಿಸುತ್ತಿದ್ದ ನಿಗೂಢವಾದ ಮತ್ತು ರಹಸ್ಯವಾದ ಕೇಂದ್ರವಾಗಿತ್ತು. ಇದರ ಬಗ್ಗೆ ಯಾರಿಗೂ ಹೆಚ್ಚು ಮಾಹಿತಿ ಇರಲಿಲ್ಲ.)*

      ಮುಸ್ಲಿಮರನ್ನು ಕೊಲ್ಲಲು ಎಂಬ ವಿಷಯ ತಿಳಿದ ತಕ್ಷಣ ಆ ಗವರ್ನರ್ ಸಾಬಿರ್ ಬಹರ್ ಹರಮಿನ ದಾರಿಯನ್ನು ತಿಳಿಸಿಕೊಟ್ಟರು. ಗವರ್ನರ್ ಸಾಬಿರ್ ತಿಳಿಸಿದ ದಾರಿಯ ಅನುಸಾರ ಅವರು ಅಲ್ಲಿಂದ ತೆರಳಿದರು.

       ಸ್ವಲ್ಪ ದೂರ ತೆರಳಿದ ನಂತರ ಮುಸ್ಲಿಂ ಹಾಗೂ ಅನಸ್ ಬಿನ್ ಹಿಲಾಲ್, ಆಶಿಂ ರ.ಅ ಹಾಗೂ ಹಸನ್ ಮುಸನ್ನಾರನ್ನು ಒಂದು ಮರಕ್ಕೆ ಕಟ್ಟಿ ಹಾಕಿದರು.
    ಅವರ ಬಳಿ ಹೇಳಿದರು.. *ನಾವು ಮುಸ್ಲಿಮರೇ.. ನಾವು ಬಹರ್ ಹರಮಿನ ದಾರಿಯನ್ನು ಕಂಡು ಹಿಡಿಯಲು ಮಾಡಿದ ಸೂತ್ರವಾಗಿದೆ ಇದು.. ದಯವಿಟ್ಟು ನಮ್ಮನ್ನು ಕ್ಷಮಿಸಿರಿ*..
   ಎಂದು ಹೇಳಿ ಅವರ ಕೈಗೆ ಕಟ್ಟಲಾದ ಹಗ್ಗವನ್ನು ಬಿಚ್ಚಿದರು.

    ಮತ್ತೆ ಸಂಚಾರವನ್ನು ಮುಂದುವರಿಸಿದರು. ನಾಲ್ಕೂ ಜನರು ಬಹರ್ ಹರಮಿನ ಹತ್ತಿರ ತಲುಪಿದರು.

  *ಬಹರ್ ಹರಮ್ ಒಂದು ಸಣ್ಣ ಕೋಟೆಯಾಗಿತ್ತು. ಕೋಟೆಯ ಸುತ್ತಲೂ ಸ್ವಲ್ಪ ಎತ್ತರವಾಗಿ ಕಟ್ಟಲಾದ ತಡೆಗೋಡೆಯಿಂದ ಆವೃತವಾಗಿತ್ತು.)
 ಈ ನಾಲ್ಕೂ ಜನರೂ ತಡೆಗೋಡೆಯನ್ನು ಹಾರಿ ಬಹರ್ ಹರಮಿನ ಓಳಗೆ ನುಗ್ಗಿದರು...


ಮುಂದೇನಾಯಿತು....

 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

 ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ