ಭಾಗ 17 (ಕೊನೇಯ ಭಾಗ)
#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ..
ಅವರೇ... #ಸುರಾಖರ_ಮಗಳು : #ಭಾಗ - 17
(ಓದಲೇ ಬೇಕಾದ ಕೊನೇಯ ಭಾಗ)
ಅಲ್ಲಿಂದ ಮರಳಿದ ಐದು ಜನರು, ಖಾದ್ಸೀಯ್ಯ ರಣಾಂಗಣಕ್ಕೆ ತಲುಪಿದರು. ತಹ್ಮಿನಾ ನೇರವಾಗಿ ಸಹದ್ ರ.ಅ ರವರ ನೇತೃತ್ವದ ಸೈನ್ಯದ ಕಡೆಗೆ ತೆರಳಿದರು...
ಎದುರಾಳಿಯ ತಂಡದ ಸೈನಿಕರೆಲ್ಲರೂ ಆಶ್ಚರ್ಯಗೊಂಡು ತಹ್ಮಿನಾರನ್ನು ಮತ್ತೆ ಮತ್ತೆ ಕರೆದರು.
ತಹ್ಮಿನಾ: ನಾನು ಇವತ್ತಿನಿಂದ ಇವರೊಂದಿಗೆ ಇರುವೆನು. ನಿಮ್ಮನ್ನು ತೊರೆದಿರುವೆನೆಂದು ಹೇಳಿದರು.
ತಹ್ಮಿನಾ ನೇರವಾಗಿ ಸಹದ್ ರ.ಅ ರವರ ಮುಂದೆ ಬಂದು ಶಆ-ದತ್ ಕಲಿಮ ಹೇಳಿ ಮುಸ್ಲಿಂ ಸ್ತ್ರೀಯಾಗಿ ಸೈನ್ಯವನ್ನು ಸೇರ್ಪಡೆಗೊಂಡರು.
( *ಎದುರಾಳಿ ತಂಡದ ರಾಜಕುಮಾರಿ ತಮ್ಮ ತಂಡವನ್ನು ಸೇರಿಕೊಂಡದ್ದು ಸ್ವಹಾಬಿವರ್ಯರಿಗೆಲ್ಲ ತುಂಭಾ ಸಂತೋಷವಾಯಿತು.*)
**********
ತಹ್ಮಿನಾ ಸಹದ್ ರ.ಅ ರವರೊಂದಿಗೆ : ಇದೀಗ ಮರ್ಧಾನ್ ಶೈ ಅವರ ನೇತೃತ್ವದಲ್ಲಿ ಆನೆಗಳ ತಂಡವು ನಮ್ಮನ್ನು ಸದೆಬಡಿಯಲು ಬರಲಿವೆ. ನೀಮ್ಮ ಸೈನ್ಯದಲ್ಲೇನಿದೆ ಅದಕ್ಕೆ ಪ್ರತಿರೋಧಕ ಅಸ್ತ್ರ
ಸಹದ್ ರ.ಅ : ನಾವು ಖಡ್ಗವನ್ನು ಬಳಸಿ ಯುದ್ಧ ನಡೆಸುವೆವು.
ತಹ್ಮಿನಾ : ಇಲ್ಲ ಅದು ಸಾಧ್ಯವಿಲ್ಲ. ಆನೆಗಳ ತಲೆಯ ಗುರಿಯಾಗಿಸಿ ಬಾಣ ಬಿಟ್ಟರೆ ಮಾತ್ರ ಆನೆಯನ್ನು ಸೋಲಿಸಬಹುದು. ಬಿಲ್ಲು ಪರಿಣತರನ್ನು ನನ್ನ ಬಳಿ ಕಳುಹಿಸಿ ಕೊಡಿ. ಅದನ್ನು ನಾವು ಎದುರಿಸಲಿದ್ದೇವೆ.
(ತಹ್ಮಿನಾರ ಮಾತಿನ ಅನುಸಾರವಾಗಿ ಬಾಣ ಬಿಡುವುದರಲ್ಲಿ ಪರಿಣತರಾದ ಒಂದು ತಂಡವನ್ನು ರಚಿಸಲಾಯಿತು. ಅದರಲ್ಲಿ *ನಮ್ಮ ಧೀರ ಮಹಿಳೆ ಆಶಿಮಾ ಸುರಾಖರೂ ಇದ್ದರು*)
**********
ಮರ್ಧಾನ್ ಶೈ ಯವರ ನೇತೃತ್ವದಲ್ಲಿ ಆನೆಗಳು ರಣಾಂಗಣಕ್ಕೆ ಬಂದವು. ಆನೆಗಳ ಗುಂಪು ಕಂಡು ಎರಡನೇಯ ರುಸ್ತುಂ ಹಾಗೂ ಸೈನಿಕರು ಸಂತೋಷಪಟ್ಟರು.
ಇತ್ತ ತನ್ನ ತಂದೆ ಯುದ್ಧಕ್ಕೆ ಕಳುಹಿಸಿಕೊಟ್ಟ ಸೈನಿಕರನ್ನು ಹಾಗೂ ಆನೆಗಳನ್ನು ಹೊಡೆದುರುಳಿಸಲು ತಹ್ಮಿನಾ ಹಾಗೂ ತಂಡವು ಸಜ್ಜುಗೊಂಡವು.
ಆನೆಗಳ ಮೇಲೆ ಶತೃಗಳ ಸೈನ್ಯದ ಮಾವುತರು ಹತ್ತಿಕೊಂಡು ಇಸ್ಲಾಂ ಸೈನ್ಯವನ್ನು ಯುದ್ಧಕ್ಕೆ ಆಹ್ವಾನ ನೀಡಿದರು.
ತಹ್ಮಿನಾ ಆಶಿಮಾರೊಂದಿಗೆ : ಆ ಮಧ್ಯಭಾಗದಲ್ಲಿರುವ ಆನೆಯ ಕಣ್ಣಿಗೆ ಒಂದು ಬಾಣ ಬಿಡುವಂತೆ ಸೂಚಿಸಿದರು. ತಹ್ಮಿನಾರ ಸೂಚನೆಯಂತೆ ಆಶಾಮಾ ಬಾಣವನ್ನು ಆನೆಯ ಕಣ್ಣಿಗೆ ಬಿಟ್ಟರು. ಆನೆ ನೋವು ತಡೆಯಲಾರದೆ ಸೊಂಡಿಲು ಎತ್ತಿ ಕಿರುಚಾಡತೊಡಗಿತು. ಇತರ ಆನೆಗಳು ಗಾಬರಿಗೊಂಡವು. ಆನೆಗಳ ಮೇಲಿದ್ದ ಮಾವುತನನ್ನು ಕಿತ್ತೆಸೆದ ಆನೆಗಳ ಶತ್ರುಗಳ ಸೈನದೆಡೆಯಲ್ಲಿ ದಿಕ್ಕುಪಾಲಾಗಿ ಓಡತೊಡಗಿತು. ಆನೆಯ ಉಪಟಳದಿಂದ ಶತ್ರು ಸೈನ್ಯದ ಸೈನಿಕರು ಕಂಗಾಳಾದರು. ಇತ್ತ ಮುಸ್ಲಿಂ ಸೈನಿಕರೂ ಶತ್ರು ಸೈನಿಕರನ್ನು ಹೊಡೆದುರುಳಿಸತೊಡಗಿದರು. ಅವರನ್ನು ರಣಾಂಗಣದಿಂದ ಹೊಡೆದೋಡಿಸಲಾಯಿತು.
*ನಾಯಕ ಎರಡೇನೇಯ ರುಸ್ತುಂ, ಫರಕ್ ಸಾದ್, ಮರ್ಧಾನ್ ಶೈ ಯವರನ್ನು ಕೊಲ್ಲಲಾಯಿತು. ಅವರ ರುಂಡಗಳನ್ನು ಪ್ರದರ್ಶನಕ್ಕಿಡಲಾಯಿತು.*
ದಿಕ್ಕುಪಾಲಾಗಿ ಓಡುತ್ತಿದ್ದ ಸೈನಿಕರಲ್ಲಿ ಓರ್ವ ಸೈನಿಕ ನೇರವಾಗಿ ಅರಮನೆಗೆ ಓಡಿದ. ತಮ್ಮ ಸೈನ್ಯದ ಯುದ್ಧ ವಾರ್ತೆಯನ್ನು ಕೇಳಲು ಕುತೂಹಲದಿಂದ ಕಾಯುತ್ತಿದ್ದ ಯಶ್ಚುದುರ್ಗ್ ರ ಬಳಿ ಬಂದ ಆ ಸೈನಿಕ : *ದೊರೆಯೇ... ನಾವು ಯುದ್ಧದಲ್ಲಿ ಸೋತಿದ್ದೇವೆ. ಆ ಮುಸ್ಲಿಂ ಸೈನ್ಯ ಅರಮನೆಗೆ ಬರುವ ಮೊದಲೇ ನೀವು ಇಲ್ಲಿ ಪಲಾಯಣ ಮಾಡಿರಿ.*
ಭಯಭೀತರಾದ ಯಶ್ಚುದುರ್ಗ್ ಕಾಡಿನ ಮಧ್ಯೆ ಇರುವ ಹಲ್ವಾನ್ ಎಂಬ ಊರಿಗೆ ಪಲಾಯಣಗೊಂಡರು.
ಇರಾನಿನಲ್ಲಿ ಯಶ್ಚುದುರ್ಗ್ ಆಡಳಿತ ನಡೆಸುತಿದ್ದ ಕೋಟೆಯನ್ನು ಮುಸ್ಲಿಂ ಸೈನ್ಯ ವಶಕ್ಕೆ ಪಡೆಯಿತು. *ಯಶ್ಚುದುರ್ಗ್ ದರ್ಬಾರು ನಡೆಸುತ್ತಿದ್ದ ಸಿಂಹಾಸನವನ್ನು ಬದಿಗೆ ಸರಿಸಿ ಅಲ್ಲಿ "ಖುತುಬಾ ಮಿಂಬರ್" ಸ್ಥಾಪಿಸಲಾಯಿತು.*
ಯಶ್ಚುದುರ್ಗ್ ರ ಕೋಟೆಯೊಳಗಿದ್ದ ಸಂಪತ್ತೆನ್ನೆಲ್ಲ ತನ್ನ ರಾಜ್ಯ ಮದಿನಾಗೆ ತರಲು ಒಟ್ಟುಗೂಡಿಸಿ ಇಡಲಾಯಿತು.
ತಮ್ಮ ವಿಜಯದ ಶುಭ ವಾರ್ತೆಯನ್ನು ಕಾತುರದಿಂದ ಕಾಯುತ್ತಿರುವ ಖಲೀಫ ಉಮರ್ ರ.ಅ ರವರಿಗೆ ವಿಷಯ ತಿಳಿಸಲು ಎರಡು ಸ್ವಹಾಬಿಗಳನ್ನು ಮದಿನಾಕ್ಕೆ ಕಳುಹಿಸಿ ಕೊಡಲಾಯಿತು.
ಇರಾನಿನಿಂದ ಯಾರಾದರು ಶುಭವಾರ್ತೆಯೊಂದಿಗೆ ಬರುವರೆಂದು ಕಾತುರದಿಂದ ಕಾಯುತ್ತಿದ್ದ ಉಮರ್ ರ.ಅ ರವರ ಬಳಿ ಬಂದ ಸೈನಿಕರು. *ಅಲ್ಲಾಹನ ಸಹಾಯ ಮತ್ತು ದಯೆಯಿಂದ ನಾವು ಯುದ್ಧವನ್ನು ಜಯಗಳಿಸಿದ್ದೇವೆ* ಎಂದರು. ಉಮರ್ ರ.ಅ ಅಲ್ ಹಂಬ್ದುಲಿಲ್ಲಾ ಎಂದು ಹೇಳಿದರು. ಮತ್ತು ಸಂತೋಷಗೊಂಡರು.
ಮದೀನಾ ತುಂಬಾ ವಿಷಯ ವಿಸ್ತಾರವಾಯಿತು. ಮದೀನಾ ನಿವಾಸಿಗಳೆಲ್ಲಾ ಕಾತುರದಿಂದ ವಿಜಯೀ ಸೈನ್ಯ ಬರುವಿಕೆಯನ್ನು ಕಾಯುತ್ತಿದ್ದರು.
ಸಹದ್ ರ.ಅ ರವರ ನೇತೃತ್ವದ ಸೈನ್ಯದ ಆಗಮನವನ್ನು ಸ್ವಾಗತಿಸಲು ಮದೀನಾ ನಿವಾಸಿಗಳೆಲ್ಲ ಕುತೂಹಲದಿಂದ ಕಾಯುತ್ತಿದ್ದರು.
**********
ಹಾಗೆಯೇ... ಒಂದು ಬೃಹತ್ ಆಕಾರ ಪೆಟ್ಟಿಗೆಯೊಂದಿಗೆ ಸಹದ್ ರ.ಅ ರವರ ನೇತೃತ್ವದ ಸೈನ್ಯ ತಂಡ ಮಸ್ಜಿದುಲ್ ನಬವಿಯ ಸಭಾಂಗಣದಲ್ಲಿ ಬಂದು ಸೇರಿತು.
ಪೆಟ್ಟಿಗೆಯ ಕೀಲಿ ಕೈಯನ್ನು ಸಹದ್ ರ.ಅ ರವರು ಖಲೀಫ ಉಮರ್ ರ.ಅ ರವರ ಕೈಗೆ ಹಸ್ತಾಂತರಿಸಿದರು.
ಕುತೂಹಲದಿಂದ ಕಾಯುತ್ತಿದ್ದ ಸ್ವಹಾಬಿಗಳ ಸಮ್ಮುಖದಲ್ಲಿ ಉಮರ್ ರ.ಅ ಪೆಟ್ಟಿಗೆಯನ್ನು ತೆರದರು. ಪೆಟ್ಟಿಗೆಯ ಒಳ ಭಾಗದಲ್ಲಿ ವಜ್ರಾಭರಣಗಳು ರತ್ನ ವೈದೂರ್ಯಗಳು ತುಂಬಿಕೊಂಡಿದ್ದವು.
*************
ಖಲೀಫ ಉಮರ್ ರ.ಅ ಸೂಚನೆಯಂತೆ ಎರಡು ಸ್ವಹಾಬಿಗಳು ನೇರವಾಗಿ ಸುರಾಖತಿಬ್ನು ಮಾಲಿಕ್ ರ.ಅ ರವರ ಮನೆಗೆ ತೆರಳಿದರು. ಸುರಾಖ ರ.ಅ ರವರನ್ನು ಕರೆತಂದು ಮಸ್ಜಿದುಲ್ ನಬವಿ ಮಸೀದಿಯ ಮುಂಭಾಗದಲ್ಲಿ ನಿಲ್ಲಿಸಲಾಯಿತು. ನಂತರ *ಸುರಾಖ ರ.ಅ ರವರ ಹಳೆಯ ಬಟ್ಟೆ ಹಾಗೂ ತಲೆಗೆ ಕಟ್ಟಿದ್ದ ಮುಂಡಾಸು ತೆಗೆದು ಯಶ್ಚುದುರ್ಗ್ ರ ರತ್ನ ವೈದೂರ್ಯ ಖಚಿತವಾದ ಅಂಗಿ ಹಾಗೂ ಕಿರೀಟವನ್ನು ಉಮರ್ ರ.ಅ ಧರಿಸಿಕೊಟ್ಟರು. ನಂತರ ಸುರಾಖ ರ.ಅ ಕೈಗೆ ಯಶ್ಚುದುರ್ಗ ಅಧಿಕಾರದ ಸಂಕೋಲೆ (ಬಳೆ) ಯನ್ನು ತೋಡಿಸಲಾಯಿತು.*
ಸುರಾಖ ರ.ಅ ನೇರವಾಗಿ ಮಹಮ್ಮದ್ ಮುಸ್ತಫಾ ಸ.ಅ ರವರ ಮಕ್ಬರದ ಹತ್ತಿರ ಹೋಗಿ ಜೋರಾಗಿ ಅಳಲು ಆರಂಭಿಸಿದರು. *"ನೋಡಿ ರಸೂಲರೇ ನಿಮ್ಮ ಪಕ್ಕದಲ್ಲಿ ಮಲಗಿರುವ ಅಬೂಬಕ್ಕರ್ ರ.ಅ ರವರು ಸಾಕ್ಷಿಯಲ್ಲವೇ.. ನೀವು ಅಂದು ಆಡಿದ ಮಾತು ಸತ್ಯವಾಯಿತು. ಕೆಲ ವರ್ಷಗಳ ನಂತರ ಯಶ್ಚುದುರ್ಗ್ ರ ಅಧಿಕಾರ ನಮ್ಮ ಕೈಯಲ್ಲಿ ಬಂದಿದೆ. ಅವರ ಸಂಪತ್ತು ನಮ್ಮ ಬಳಿ ಇದೆ"*
ಅಲ್ಲಿಗೆ ಬಂದ ಉಮರ್ ರ.ಅ ಸುರಾಖರನ್ನು ಮದೀನಾದ ಜನರ ಮುಂದೆ ಕರೆದು ತಂದರು.
ಸರಾಖ ರ.ಅ ಹೇಳಿದರು: ಉಮರ್ ರ.ಅ ರವರೇ ಈ ಕಿರೀಟ, ವಸ್ತ್ರ ಬಳೆ ಹಿಂಪಡೆದುಕೊಳ್ಳಿ. ರಸೂಲ್ ಸ.ಅ ರವರ ಮಾತಿನ ವಾಸ್ತವ ಸತ್ಯ ಜಗತ್ತು ತೋರಿಸಲು ಮಾತ್ರ ನಾನು ಈ ವಸ್ತು ಧರಿಸಿದ್ದೇನೆಂದು, ಕಿರೀಟ, ವಸ್ತ್ರ, ಬಳೆಯನ್ನು ಉಮರ್ ರ.ಅ ಕೈಗಿತ್ತರು. ಉಮರ್ ರ.ಅ ಹಳೇಯ ನೆನಪುಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು.
*********
ನಂತರ ಆಶಿಮಾ ಸುರಾಖ, ಹಸನ್ ಮುಸನ್ನಾ, ಆಶಿಂ ಸುರಾಖ ಹಾಗೂ ತಹ್ಮಿನಾರನ್ನು ವೇದಿಕೆಯ ಮುಂಭಾಗಕ್ಕೆ ಕರೆಸಲಾಯಿತು. *(ಆಶಿಮಾ ಓರ್ವ ಸ್ತ್ರೀ ಎಂದು ಉಮರ್ ರ.ಅ, ಹಸನ್ ಮುಸನ್ನಾ ರ.ಅ, ಸಹದ್ ರ.ಅ ಮೊದಲೇ ತಿಳಿದಿತ್ತಾದರೂ.. ಜೊತೆಗೆ ತೆರಳಿದ್ದ ಸೈನಿಕರಿಗೆ ಸ್ವಹಾಬಿಗಳಿಗೆ ಆ ಸಮಯದಲ್ಲಿ ತಿಳಿಯಿತು. ಸ್ವಹಾಬಿಗಳೆಲ್ಲ ಆಶ್ಚರ್ಯಗೊಂಡರು.)*
ತಹ್ಮೀನಾರನ್ನು ಆಶಿಮಾರ ಅಣ್ಣ ಆಶಿಂ ಸುರಾಖ ರ.ಅ ರವರಿಗೆ ಹಾಗೂ ಆಶಿಮಾರನ್ನು ಹಸನ್ ಮುಸನ್ನಾ ರ.ಅ ರವರಿಗೆ ವಿವಾಹ ಮಾಡಲು ತೀರ್ಮಾನಿಸಿದರು. ಎಲ್ಲರ ಸಮ್ಮತಿಯೂ ಸಿಕ್ಕಿತು.
ಮದೀನಾದ ಮಸ್ಜಿದುಲ್ ನಬವೀಯಲ್ಲಿ ವಿವಾಹ ನಡೆಸಲು ತೀರ್ಮಾನಿಸಿದರು. ಸುರಾಖ ರ.ಅ ರವರ ಮನೆಯಲ್ಲಿ ಮುದುಮಗಳಾದ ತಹ್ಮಿನಾ ಹಾಗೂ ಆಶಿಮಾರ ಅಲಂಕಾರ ನಡೆಯಿತು.
ಮಸ್ಚಿದುಲ್ ನಬವೀಯಲ್ಲಿ ಇಬ್ಬರ ನಿಖಾಃ ನಡೆದ ನಂತರ, ಮದುವೆಯ ಭೋಜನವೂ ನಡೆಯಿತು. ಎಲ್ಲರೂ ಮದುವೆಯನ್ನು ಸಂಭ್ರಮದಿಂದ ಆಚರಿಸಿದರು.
*******,******
ಮೂರು ದಿನಗಳ ನಂತರ ಸುರಾಖತಿಬ್ನು ಮಾಲಿಕ್ ರ.ಅ ರವರು ವಫಾತಾದರು. ಇಡೀ ಮದೀನಾ ಪಟ್ಟಣವೇ ಕಣ್ಣೀರಲ್ಲಿ ತೇಲಿಕೊಂಡಿತ್ತು.
*ಇನ್ನಾ ಲಿಲ್ಲಾಹಿ ಲ ಇನ್ನಾ ಇಲೈಹಿ ರಾಜಿಹೂನ್*
( *ಮುಕ್ತಾಯವಾಯಿತು.....*)
*ನನ್ನೆಲ್ಲಾ ಓದು ಮಿತ್ರರಿಗೂ, ಸಹಕರಿಸಿದವರಿಗೂ ಧನ್ಯವಾದಗಳು.*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...
http://nizamuddintabukuppinangady.blogspot.com/?m=1

Comments
Post a Comment