Posts

Showing posts from September, 2015

ಯಾರಿಗಯ್ಯ ಈ ಬಾಳು..😢😢

ಯಾರಿಗಯ್ಯ ಈ ಬಾಳು..😢😢 ಬರಿಗೈಯಲಿ ಬಂದವರು ನಾವು ಕಾಲಿ ಕೈಯಲಿ ಹೋಗುವರೇನು ಮಧ್ಯದಿ ನಮಗೆ ವ್ಯಾಮೋಹ ಭೂಲೋಕ ನಶ್ವರವೆಂದರಿತೂ...!! ಹಣದಿ ಆಸೆಪಟ್ಟವರು ನಾವು ಹೆಣವಾಗುದು ಮರೆತವರೇನು ಕಾರು ಬಂಗಲೆ ಸಾಲು ಸಾಲು ಬಂಗಾರದ ಬೆಟ್ಟ ಕಡಿಮೆಯೇನು...!! ಊರಿಗೆ ನಾನೊಬ್ಬ ಮುಂದಾಳು ಹೆಸರು, ಪ್ರಶಸ್ತಿ ನಮಗೆ ಸೀಮಿತ ನಮ್ಮಷ್ಟಿಲ್ಲ ಅವರೆಲ್ಲ ಎನ್ನುವ ನಮಗೂ ಇದೆ ಓ ಮಾನವ... ಆರಡಿ ಮಣ್ಣಿನ ಅರಮನೆ...!! ಲಾಭ ನಷ್ಟದ ಭೂಮಿಯೊಳಗೆ ಸೋಲುತ್ತಿದ್ದರೂ ಹಿಂಜರಿಯದಿರು ಆ ದಿನದ ವಿಜಯಕ್ಕೆ ಮನ್ನುಡಿ ಬರೆಯುತ್ತಲೇ ಇರು ನಿನ್ನ ಧರ್ಮ ನಿಷ್ಠೆಯ ಮೂಲಕ...!! - ನಿಝಾಮುದ್ದೀನ್.ಉಪ್ಪಿನಂಗಡಿ.ತಬೂಕ್

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?       ಪ್ರತಿಭಟನೆ ಅಂದಾಕ್ಷಣ ತಮಗಾದ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸಿ ಕೊಡುಲು ಒಟ್ಟು ಸೇರುವ ಜನ ಸಮೂಹವನ್ನು ಪ್ರಿಭಟನೆ ಎನ್ನುತಿದ್ದರು.       ಕೆಲವೋಂದು ಪ್ರತಿಭಟನೆಗಳು ವಿಕೋಪಕ್ಕೆ ತಿರುಗಿ ಮೂರು ದಿನ ಕಳೆದರೂ ಪ್ರತಿಭಟನೆಯ ಕಾವು ಕಡಿಮೆಯಾಗಿರುದಿಲ್ಲ.          ಕೆಲವೊಂದು ಯೋಜನೆಗಳನ್ನು ಸರ್ಕಾರ ಸ್ವಇಚ್ಚೆಯಿಂದ ನಡೆಸುದು, ಆ ಪ್ರದೇಶದ ಜನರು ಒಗ್ಗೂಡಿ ಹೋರಾಡುದು ಸರ್ವೆ ಸಾಮಾನ್ಯ.        ಕೆಲವು ಪ್ರತಿಭಟನೆಗಳು ಇನ್ನೊಂದು ಕೋಮಿನ ಮೇಲೆ ಅಪವಾದ ಹಾಕಿ ಪ್ರತಿಭಟನೆ ಮಾಡಿ ಜನರ ಸಿಳ್ಳೆ ಪಡೆಯಲಷ್ಟೇ ಯಸಶ್ವಿಯಾಗುದೇ ಹೊರತು ಬೇರೇನು ಪ್ರಯೋಜನವಿರೋದಿಲ್ಲ.        ಇನ್ನು ಎಷ್ಟೇ ಹೆದ್ದಾರಿ ಬಂದ್ ಅಥವಾ ರಾಜ್ಯ ಬಂದ್ ಅಥವಾ ಭಾರತ್ ಬಂದ್ ನಡೆಸಿದರೂ ನಮ್ಮ ಗುರಿ, ಪ್ರತಿಭಟನೆಯ ರೀತಿ, ಅದು ಸಾದ್ಯವೇ ಅನ್ನುವ ನಮ್ಮ ಕಾರ್ಯವೈಕರಿಯಿಂದ ತೀರ್ಮಾನಗೊಳ್ಳಬೇಕೇ ಹೊರತು, ನೂರಾರು ಮಂದಿ ಒಂದೆಡೆ ಸೇರಿದಾಗ ಯಾರು ನ್ಯಾಯಕೊಡಲು ಮುಂದೆ ಬರೋದಿಲ್ಲ.        ಪ್ರತಿಭಟನೆಯ ಹೆಸರಿನಲ್ಲಿ ಬೀದಿಗಿಳಿದು ಹೋರಾಟನಡೆಸಿ ಸಾರ್ವಜನಿಕರ ಆಸ್ತಿ ಪಾಸ್ತಿ ಸೊತ್ತು ನಷ್ಟಗೊಳಿಸಿ ಒಂದು ರೀತಿಯ ಸುಖಪಡೆಯುವನೇ ಜೊ...

ಜಗದೊಡಯನೆ.....

ಜಗದೊಡಯನೆ..... ಜಗದೊಳಗಿನ ತಾಂಡವು ಇದು ನಿನ್ನ ಲೀಲೆಯು ಕರುಣೆ ತೋರು ಯಾ ರಬ್ಬೇ ಈ ಪಾಪಿ ಜನಕೋಟಿಯ ಮೇಲೆ...!! ಏನೂ ಅರಿಯದವರು ನಾವು ಮೊತ್ತ ಅರಿಯುವವನು ನೀನು ನೀನಲ್ಲದೆ ಇಲಾಹಿಲ್ಲ ನಮ್ಮ ನೋವ ಕೊನೆಗಾಣಿಸು...!! ಇಷ್ಟ ಕಷ್ಟ ಸೃಷ್ಠಿಸಿದವನೇ ಬೇಕೆನ್ನುವ ಹಕ್ಕು ನಮಗಿಲ್ಲ ಆದರೂ ನಿನ್ನ ಕರುಣೆಯ ನೋಟ ಈ ಜನಕೋಟಿಯ ಮೇಲಿರಲಿ...!! ಪಾಪ ಪುಣ್ಯವ ತೂಗಿದ ಮೇಲೆ ಪಾಪವ ಮನ್ನಿಸು ಯಾ ದೇವಾ ಪಾಪಿ ನಾನು, ದೋಶಿ ನಾನು ಕೇಳು ನಮ್ಮ ಮನಸೀನ ನೋವಾ...!! - ನಿಝಾಮುದ್ದೀನ್, ಉಪ್ಪಿನಂಗಡಿ, ತಬೂಕ್

ಆಧುನಿಕ ತಂತ್ರಜ್ಞಾನ ಮತ್ತು ವಿವಾದಗಳು.

ಆಧುನಿಕ ತಂತ್ರಜ್ಞಾನ ಮತ್ತು ವಿವಾದಗಳು.          ವ್ರತ್ತಾಕಾರದ ಈ ಭೂ ಮಂಡಲದೊಳಗೆ ಏನೆಲ್ಲಾ ವಿವಾದಗಳು, ಅದರೊಂದಿಗೆ ವಿಮರ್ಶೆಗಳು.  ತಿಳಿಯದಾದದ್ದು ಒಂದೇ ನಾವೆಲ್ಲ ವಿವಾದಗಳಿಂದ ಮುಕ್ತಗೊಳ್ಳುದು ಯಾವಾಗ...?         ಹೌದು , ಎಗ್ಗಿಲ್ಲದೆ ನಡೆಯುತ್ತಿರುವ ವಿವಾದಗಳಿಗೆ ತುಪ್ಪ ಸುರಿಯುತ್ತಿರುದು ನಮ್ಮ ದಿನಬಳಕೆಯ ಆಧುನಿಕ ತಂತ್ರಜ್ಞಾನ.   ಇದನ್ನು ವಿರೋದಿಸಲು ಯಾರಿಂದಲೂ ಸಾಧ್ಯವಿಲ್ಲ.   ಒಂದು ಕಾಲದಲ್ಲಿ ಮೊಬೈಲ್ ಕಂಪ್ಯೂಟರ್ ಹಾಗು ಇತರೇ ಎಲೆಕ್ಟ್ರಾನಿಕ್ ಉಪಕರಣಗಳು ಇಲ್ಲದ ಸಮಯದಲ್ಲಿದ್ದ ಸೌಹಾರ್ದತೆ, ಮಾನವೀಯತೆ, ಸಂಬಂಧ ಇದನ್ನೆಲ್ಲ ನಮ್ಮ ಹಿರಿಯರು ನಮ್ಮ ಬಳಿ ಹೇಳುವಾಗ ನಮಗಾಗುವ ರೋಮಾಂಚನವೇ ಬೇರೆ. ನನಗೆ ತಳಿಯದ ವಿಷಯವೇನೆಂದರೆ, ಆಗಿನ ಕಾಲದಲ್ಲಿದ್ದ ಆ ಜೀವನವನ್ನು, ಈಗಿನ ಕಾಲದಲ್ಲಿ  ಜೀವಿಸಲಾಗುದಿಲ್ಲವೇ....?          ಆಗಬಹುದು ಆದರೆ ನಮ್ಮ ಮನಸ್ಥಿತಿ ನಮ್ಮ ನಿರ್ಧಾರ ಮತ್ತು ನಮ್ಮ  ಕೈಯಲ್ಲಿರುವ ಮೊಬೈಲ್ ಬದಲಾಗಬೇಕು.            ಇತ್ತೀಚೆಗೆ ನಡೆಯುವ ಕೆಲವು ಸಣ್ಣ ಪುಟ್ಟ ವಿವಾದಗಳು ಅದನ್ನು ಆನೆಯಷ್ಟೆತ್ತರದಲ್ಲಿ ತೋರಿಸುವ ಮಾಧ್ಯಮಗಳು ಅದನ್ನು ಫೋಟೋ ಅಥವಾ ವಿಡಿಯೋ ಮಾಡಿ ಕ್ಷಣಾರ್ದದಲ್ಲಿ ಲೋಕಾದ್ಯಂತ ತಲುಪಿಸುವ ವಾಟ್ಸಾಪ್ ಅಥವಾ ಪೇಸ್ಬುಕ್ ನಂಥಹಾ ಆದುನಿ...