ಜಗದೊಡಯನೆ.....

ಜಗದೊಡಯನೆ.....

ಜಗದೊಳಗಿನ ತಾಂಡವು
ಇದು ನಿನ್ನ ಲೀಲೆಯು
ಕರುಣೆ ತೋರು ಯಾ ರಬ್ಬೇ
ಈ ಪಾಪಿ ಜನಕೋಟಿಯ ಮೇಲೆ...!!

ಏನೂ ಅರಿಯದವರು ನಾವು
ಮೊತ್ತ ಅರಿಯುವವನು ನೀನು
ನೀನಲ್ಲದೆ ಇಲಾಹಿಲ್ಲ
ನಮ್ಮ ನೋವ ಕೊನೆಗಾಣಿಸು...!!

ಇಷ್ಟ ಕಷ್ಟ ಸೃಷ್ಠಿಸಿದವನೇ
ಬೇಕೆನ್ನುವ ಹಕ್ಕು ನಮಗಿಲ್ಲ
ಆದರೂ ನಿನ್ನ ಕರುಣೆಯ ನೋಟ
ಈ ಜನಕೋಟಿಯ ಮೇಲಿರಲಿ...!!

ಪಾಪ ಪುಣ್ಯವ ತೂಗಿದ ಮೇಲೆ
ಪಾಪವ ಮನ್ನಿಸು ಯಾ ದೇವಾ
ಪಾಪಿ ನಾನು, ದೋಶಿ ನಾನು
ಕೇಳು ನಮ್ಮ ಮನಸೀನ ನೋವಾ...!!

- ನಿಝಾಮುದ್ದೀನ್, ಉಪ್ಪಿನಂಗಡಿ, ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ