ಯಾರಿಗಯ್ಯ ಈ ಬಾಳು..😢😢

ಯಾರಿಗಯ್ಯ ಈ ಬಾಳು..😢😢

ಬರಿಗೈಯಲಿ ಬಂದವರು ನಾವು
ಕಾಲಿ ಕೈಯಲಿ ಹೋಗುವರೇನು
ಮಧ್ಯದಿ ನಮಗೆ ವ್ಯಾಮೋಹ
ಭೂಲೋಕ ನಶ್ವರವೆಂದರಿತೂ...!!

ಹಣದಿ ಆಸೆಪಟ್ಟವರು ನಾವು
ಹೆಣವಾಗುದು ಮರೆತವರೇನು
ಕಾರು ಬಂಗಲೆ ಸಾಲು ಸಾಲು
ಬಂಗಾರದ ಬೆಟ್ಟ ಕಡಿಮೆಯೇನು...!!

ಊರಿಗೆ ನಾನೊಬ್ಬ ಮುಂದಾಳು
ಹೆಸರು, ಪ್ರಶಸ್ತಿ ನಮಗೆ ಸೀಮಿತ
ನಮ್ಮಷ್ಟಿಲ್ಲ ಅವರೆಲ್ಲ ಎನ್ನುವ
ನಮಗೂ ಇದೆ ಓ ಮಾನವ...
ಆರಡಿ ಮಣ್ಣಿನ ಅರಮನೆ...!!

ಲಾಭ ನಷ್ಟದ ಭೂಮಿಯೊಳಗೆ
ಸೋಲುತ್ತಿದ್ದರೂ ಹಿಂಜರಿಯದಿರು
ಆ ದಿನದ ವಿಜಯಕ್ಕೆ
ಮನ್ನುಡಿ ಬರೆಯುತ್ತಲೇ ಇರು
ನಿನ್ನ ಧರ್ಮ ನಿಷ್ಠೆಯ ಮೂಲಕ...!!

- ನಿಝಾಮುದ್ದೀನ್.ಉಪ್ಪಿನಂಗಡಿ.ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ