ಆಧುನಿಕ ತಂತ್ರಜ್ಞಾನ ಮತ್ತು ವಿವಾದಗಳು.
ಆಧುನಿಕ ತಂತ್ರಜ್ಞಾನ ಮತ್ತು ವಿವಾದಗಳು.
ವ್ರತ್ತಾಕಾರದ ಈ ಭೂ ಮಂಡಲದೊಳಗೆ ಏನೆಲ್ಲಾ ವಿವಾದಗಳು, ಅದರೊಂದಿಗೆ ವಿಮರ್ಶೆಗಳು. ತಿಳಿಯದಾದದ್ದು ಒಂದೇ ನಾವೆಲ್ಲ ವಿವಾದಗಳಿಂದ ಮುಕ್ತಗೊಳ್ಳುದು ಯಾವಾಗ...?
ಹೌದು , ಎಗ್ಗಿಲ್ಲದೆ ನಡೆಯುತ್ತಿರುವ ವಿವಾದಗಳಿಗೆ ತುಪ್ಪ ಸುರಿಯುತ್ತಿರುದು ನಮ್ಮ ದಿನಬಳಕೆಯ ಆಧುನಿಕ ತಂತ್ರಜ್ಞಾನ. ಇದನ್ನು ವಿರೋದಿಸಲು ಯಾರಿಂದಲೂ ಸಾಧ್ಯವಿಲ್ಲ.
ಒಂದು ಕಾಲದಲ್ಲಿ ಮೊಬೈಲ್ ಕಂಪ್ಯೂಟರ್ ಹಾಗು ಇತರೇ ಎಲೆಕ್ಟ್ರಾನಿಕ್ ಉಪಕರಣಗಳು ಇಲ್ಲದ ಸಮಯದಲ್ಲಿದ್ದ ಸೌಹಾರ್ದತೆ, ಮಾನವೀಯತೆ, ಸಂಬಂಧ ಇದನ್ನೆಲ್ಲ ನಮ್ಮ ಹಿರಿಯರು ನಮ್ಮ ಬಳಿ ಹೇಳುವಾಗ ನಮಗಾಗುವ ರೋಮಾಂಚನವೇ ಬೇರೆ. ನನಗೆ ತಳಿಯದ ವಿಷಯವೇನೆಂದರೆ, ಆಗಿನ ಕಾಲದಲ್ಲಿದ್ದ ಆ ಜೀವನವನ್ನು, ಈಗಿನ ಕಾಲದಲ್ಲಿ ಜೀವಿಸಲಾಗುದಿಲ್ಲವೇ....?
ಆಗಬಹುದು ಆದರೆ ನಮ್ಮ ಮನಸ್ಥಿತಿ ನಮ್ಮ ನಿರ್ಧಾರ ಮತ್ತು ನಮ್ಮ ಕೈಯಲ್ಲಿರುವ ಮೊಬೈಲ್ ಬದಲಾಗಬೇಕು.
ಇತ್ತೀಚೆಗೆ ನಡೆಯುವ ಕೆಲವು ಸಣ್ಣ ಪುಟ್ಟ ವಿವಾದಗಳು ಅದನ್ನು ಆನೆಯಷ್ಟೆತ್ತರದಲ್ಲಿ ತೋರಿಸುವ ಮಾಧ್ಯಮಗಳು ಅದನ್ನು ಫೋಟೋ ಅಥವಾ ವಿಡಿಯೋ ಮಾಡಿ ಕ್ಷಣಾರ್ದದಲ್ಲಿ ಲೋಕಾದ್ಯಂತ ತಲುಪಿಸುವ ವಾಟ್ಸಾಪ್ ಅಥವಾ ಪೇಸ್ಬುಕ್ ನಂಥಹಾ ಆದುನಿಕ ತಂತ್ರಜ್ಞಾನಕ್ಕೆ ನಾವೆಂದು ವಿರಾಮ ಹಾಕುತ್ತೇವೋ ಅಂದು ಕೊನೆಗಾಣುವ ಸಮಸ್ಯೆಯಾಗಿದೆ ಈ ವಿವಾದಗಳು.
ಯಾರೋ ಮಾಡಿದ ತಪ್ಪಿಗೆ, ಅವನ ಬೆಂಬಲಿಗನೋ ಅಥವಾ ಅವನ ಧರ್ಮದವನೋ ಆದ ಮಾತ್ರಕ್ಕೆ ಕೆಂಗಣ್ಣಿನಿಂದ ನೋಡುದು ಸರಿಯಲ್ಲ. ಇವನು ಈ ಕೆಂಗಣ್ಣಿಗೆ ಕಾರಣವಾದವನು ದಿನ ಬಳಕೆಯ ವಸ್ತುವಾದ ಮೊಬೈಲ್ ನಿಂದಲೇ ಪ್ರಚೋದನೆಗೊಂಡಿರುತ್ತಾನೆ.
ಕೆಲವರಂತೂ ಹಾಗಲ್ಲ... ಯಾರೋ ಇಬ್ಬರ ನಡುವಿನ ಜಗಳಕ್ಕೆ ಬೆಣ್ಣೆ ಸುರಿಸಲಂದೇ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಅಂತಹಾ ಕೆಲ ಮನಸ್ಥಿಯ ಜನರಿಂದಲೇ ಈ ಸಮಾಜ ಹಾಲಾಗುತ್ತಿದೆ ಎನ್ನದರಲ್ಲಿ ಎರಡು ಮಾತಿಲ್ಲ.
ಅವರ ಮುಖ್ಯ ಕಸುಬೆನ್ನುದೇ ಸಾಮಾಜಿಕ ತಾಣಗಳಲ್ಲಿ ಅನಾಮಧೇಯ ಹೆಸರು ಸೃಷ್ಟಿಸಿ ಇತರರ ನಡುವೆ ಜಗಳಕ್ಕೆ ಪ್ರೋತ್ಸಾಹ ಕೊಡುವುದು. ಇದರಿಂದೇನೋ ಒಂದು ರೀತಿಯ ನೆಮ್ಮದಿ ಪಡೆಯುವ ವಿಕೃತ ಮೋಸ್ಥಿತಿಯಿಂದ ದೂರವಿದ್ದರೆ ಮಾತ್ರ ನಮ್ಮ ಸಹೋದರರರು, ನಮ್ಮ ನೆರೆಯವರೋಂದಿಗೆ ಉತ್ತಮ ಸಂಭಂಧ ಉತ್ತಮ ಬಾಂಧವ್ಯದಿಂದಿರಳು ಸಾದ್ಯ.
* ಫೇಕ್ ಸುದ್ದಿಗಳ ಹಾವಳಿ...
ವಿವಾದಗಳಿಗೆ ಇನ್ನೊಂದು ಬಹು ಮುಖ್ಯ ಕಾರಣವಾದದ್ದು ಫೇಕ್ ನ್ಯೂಸ್... ಹೌದು ಯಾರನ್ನೋ ಕೊಂದರು, ಯಾರಿಗೋ ಹೋಡೆದರು, ಯಾರನ್ನೋ ಬಂಧಿಸಿದರು ಅಂದ ಮಾತ್ರಕ್ಕೆ ಶುರು ಹಚ್ಚುವರು ಫೇಕ್ ಸುದ್ದಿಗಳ ಸರಮಾಲೆ. ಈ ರೀತಿಯ ಫೇಕ್ ಸುದ್ದಿಗಳಿಂದ ಕುಪಿತಗೊಂಡ ಅರೆ ಜ್ಞಾನಿ ತನ್ನ ಕೈಯೋಳಗಿರುವ ಆಧುನಿಕ ತಂತ್ರಜ್ಞಾನದಿಂದ ಇದನ್ನು ಕೊಲ್ಲಿಯಿಂದ ಡೆಲ್ಲಿಯವರೆಗೆ ತಲುಪಿಸಲು ಸಹಕಾರಿಯಾಗುತ್ತಾನೆ. ಕೊನೇಗೆ ಇದೊಂದು ಫೇಕ್ ನ್ಯೂಸ್ ಎನ್ನುವಾಗ ತಲೆ ಮರೆಸಿಕೊಳ್ಳುತ್ತಾನೆ.
ಏನೇ ಆಗಲಿ ಇತರ ವಿವಾದಿತ ಸುದ್ದಿಗಳಿಂದ ನಾವು ಆದಷ್ಟು ದೂರವಿದ್ದು ನಮ್ಮ ಆಧುನಿಕ ತಂತ್ರಜ್ಞಾನಕ್ಕೆ ಕಡಿವಾಣ ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಸಹಕಾರಿಯಾಗಬೇಕು.
- ನಿಝಾಮುದ್ದೀನ್. ಉಪ್ಪಿನಂಗಡಿ. ತಬೂಕ್

Comments
Post a Comment