ನಮ್ಮೊಳಗೆ ಮರೆಯಾಗುತ್ತಿರುವ. "ಅಕ್ಷರ ಸಂತ" ಹಾಜಬ್ಬ ----------------------------
ನಮ್ಮೊಳಗೆ ಮರೆಯಾಗುತ್ತಿರುವ. "ಅಕ್ಷರ ಸಂತ" ಹಾಜಬ್ಬ ---------------------------- ✒ N.U.T (ತಬೂಕ್) ಅದೊಂದು ಪುಟ್ಟ ಊರು, ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆ ಸಮೀಪದ ಪುಟ್ಟ ಊರೇ ಹರೇಕಳ. ಅಲ್ಲಿ ಒಬ್ಬರು ಬೀದಿ ಬದಿ ವ್ಯಾಪರಸ್ಥರು, ಅವರ ಹೆಸರೇ ಹಾಜಬ್ಬ. ಸುಮಾರು ಅರುವತ್ತು ವರ್ಷ ಪ್ರಾಯದ ಈ ವ್ಯಕ್ತಿ ಬೆಳೆಗ್ಗೆ ಎದ್ದು ಬಸ್ಸು ಹತ್ತಿ ದೂರದ ಮಂಗಳೂರಿಗೆ ತೆರಳಿ, ಅಲ್ಲಿನ ಪರಿಸರದಲ್ಲಿ ಕಿತ್ತಳೆ ಮಾರುತ್ತಲೇ ಜೀವನ ಸಾಗಿಸಿದವರು. ವಿದ್ಯಭ್ಯಾಸದ ಬಗ್ಗೆ ಅರಿವೇ ಇಲ್ಲದ ಇವರ ಆಡು ಬಾಷೆ ಬ್ಯಾರಿ ಬಿಟ್ಟರೆ ಬೇರೇನು ತಿಳಿದವರಲ್ಲ. ಊರಿನಲ್ಲಿ ತನ್ನ ಹಾಗೆ ಅಕ್ಷರ ಜ್ಞಾನವಿಲ್ಲದ ಮಕ್ಕಳು ಹೆಚ್ಚಾಗುದನ್ನು ಮನಗಂಡ ಈ ಬೀದಿ ಬದಿ ವ್ಯಾಪಾರಸ್ತ, ಕೈಗೊಂಡ ಆ ಮಹಾ ಯೋಜನೆಗೆ ಎಷ್ಟು ಅಭಿನಂದಿಸಿದರೂ ಸಾಲದು. * ಹರೇಕಳ ಹಾಜಬ್ಬರ ಸಾಧನೆ:= ಹರೇಕಳದ ಸಮೀಪ ಸ್ವಲ್ಪ ಕಾಲಿ ಪ್ರದೇಶದ ಬಗ್ಗೆ ವಿವರ ಅರೆತವರೇ ಈ ಹಾಜಬ್ಬ, ಓರ್ವ ಕೇರಳದ ಹೆಸರಾಂತ ವ್ಯಕ್ತಿಯ ಬಳಿ ಸಹಾಯ ಯಾಚಿಸಿ ಅಂದಿನ 5000 ರೂ ಪಡೆದುಕೊಂಡರು. ತಾನು ಚಾಚಿದ ಮೊದಲ ಕೈಗೇ 5000 ರೂ ಸಿಕ್ಕಾಗ ಹಾಜಬ್ಬರ ಕನಸು ದುಪ್ಪಟ್ಟುಗೊಂಡಿತು. ತದನಂತರ ಮತ್ತೊಬ್ಬರು ಮಂಗಳೂರಿನ ಹೆಸರಾಂತ ವ್ಯಕ್ತಿಯ ...