ತಪ್ಪದೇ ಓದಿ ಸತ್ಯ ಘಟನೆ.... ನೆರೆ ಮನೆಯವನ ಮೋಸದ ಪ್ರೀತಿಗೆ ಬಲಿಯಾದಲೇ ರಮ್ಯಾ...?

ತಪ್ಪದೇ ಓದಿ

ಸತ್ಯ ಘಟನೆ....

ನೆರೆ ಮನೆಯವನ ಮೋಸದ ಪ್ರೀತಿಗೆ ಬಲಿಯಾದಲೇ ರಮ್ಯಾ...?

          ಅದೊಂದು ಬಡ ಹಿಂದೂ ಕುಟುಂಭ. ಒಂದು ಹೆಣ್ಣು ಎರಡು ಗಂಡು ಮಕ್ಕಳೊಂದಿಗೆ ಸುಖವಾಗಿ ಜೀವಿಸುತಿದ್ದ ಶ್ರಮ ಜೀವಿಗಳು. ಉಪ್ಪಿನಂಗಡಿಯಿಂದ ನಮ್ಮ ಮನೆಗೆ ಸುಮಾರು ನಾಲ್ಕು ಕಿಲೋ ಮೀಟರ್ ದೂರವಿದೆ. ನಮ್ಮ ಮನೆಯ ಸಮೀಪ ಅವರು ವಾಸಿಸುತಿದ್ದರು. ಅವರ ತಂದೆ ದಿನಾಲು ಬೆಳಿಗ್ಗೆ ನಾಲ್ಕು ಘಂಟೆಗೆ ಕಾಲ್ನಡಿಗೆಯಲ್ಲೇ ನಾಲ್ಕು ಕಿ.ಮೀ ಕ್ರಮಿಸಿ ರಾತ್ರಿ ಎಂಟು ಘಂಟೆಗೆ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಕೆಲಸಕ್ಕೆ ತೆರಳುತ್ತಿದ್ದರು. ಉಪ್ಪಿನಂಗಡಿಯ ಹೆಸರಾಂತ ಹೋಟೇಲೊಂದರಲ್ಲಿ ಕೆಲಸ ಮಾಡುತಿದ್ದ ಅವರು ಸಿಕ್ಕ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ತನ್ನ ದೊಡ್ಡ ಮಗಳ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಉಳಿದಿಬ್ಬರು ಗಂಡು ಮಕ್ಕಳು ಇನ್ನು ಕಾಲೇಜು ವ್ಯಾಸಾಂಗ ಮಾಡುತ್ತಿದ್ದರು.

         ತಾಯಿ ಕೂಡಾ ಶ್ರಮ ಜೀವಿ.  ನೆರೆ ಹೊರೆಯವರೊಂದಿಗೆ ಉತ್ತಮ ಭಾಂಧವ್ಯ, ವಿನಯತೆ, ಮತ್ತೆ ನಾವು ಅನ್ಯ ಧರ್ಮದವರಾಗಿದ್ದರೂ ಸದಾ ಪ್ರೀತಿಯಿಂದಲೇ ಮಾತಾಡಿಸುತಿದ್ದರು. 

      ದೊಡ್ಡವಳಾದ ಹೆಣ್ಣು ಮಗಳು ರಮ್ಯಾ(ಹೆಸರು ಬದಲಿಸಲಾಗಿದೆ) ದ್ವಿತಿಯ ಪಿ.ಯು.ಸಿ ಮುಗಿಸಿ ಮನೆಯಲ್ಲಿದ್ದಳು. ಮದುವೆ ಪ್ರಾಯ ಆದ್ದರಿಂದ ತಂದೆ ತಾಯಿಯ ಶ್ರಮದಿಂದ ಒಂದು ಹುಡುಗನ ಕಂಡು ಮದುವೆ ಮಾಡಿಕೊಡಲು ತೀರ್ಮಾನಿಸಿದರು. ತಂದೆ ತಾಯಿಯ ತೀರ್ಮಾನಕ್ಕೆ ಒಪ್ಪಿಗೆ ವ್ಯಕ್ತಪಡಿಸಿದ ರಮ್ಯನ ಮದುವೆಯು, ಪರಿಚಯದವರೊಂದಿಗೆ ಸಾಲವನ್ನು ಪಡೆದು ಕಲ್ಯಾಣ ಮಂಟಪದಲ್ಲಿ ನೆರವೇರಿತು. 

           ಮದುವೆಯ ನಂತರವೂ ಉತ್ತಮವಾಗಿದ್ದ ಕುಟುಂಭಕ್ಕೆ ಹೊಸ ವರನೊಂದಿಗೆ ಮನೆಗೆ ಬರುತಿದ್ದ ರಮ್ಯನನ್ನು ಮನೆಯವರು ತಂಭಾ ಪ್ರೀತಿಯಿಂದ ಬರಮಾಡಿಕೊಳ್ಳುತಿದ್ದರು. ತಂದೆ ಮಾತ್ರ ದಿನಾ ಬೆಳಿಗ್ಗೆ ನಾಲ್ಕು ಘಂಟೆಗೆ ತನ್ನ ಸಾಲ ತೀರಿಸಲು ನಾಲ್ಕು ಕಿ.ಮೀ ನಡೆಯುತ್ತಲೇ ಇದ್ದರು.

       ಹೀಗೆ ಸಾಗುತ್ತಿದ್ದಾಗ ಒಂದು ದಿನ ಬೆಳಿಗ್ಗೆ ರಮ್ಯಾ ನಾಪತ್ತೆಯಾಗಿದ್ದಳು. ಗಾಭರಿಗೊಂಡ ಮನೆಯವರು ಊರಲ್ಲೆಲ್ಲಾ ಹುಡುಕಾಡತೊಡಗಿದರು. ಎಷ್ಟೇ ಹುಡುಕಾಡಿದರೂ ರಮ್ಯಾನ ಸುಳಿವು ಸಿಗಳಿಲ್ಲ.
       ಅದೇ ಸಮಯ ಪಕ್ಕದ ಮನೆಯ ರಾಜು(ಹೆಸರು ಬದಲಿಸಲಾಗಿದೆ) ಎಂಬುವವನ ನಾಪತ್ತೆಯ ವಿಷಯವೂ ಊರಲೆಲ್ಲಾ ಹಬ್ಬಿತು. ಊರ ಜನರು ಏನೆಲ್ಲಾ ಮಾತನಾಡತೊಡಗಿದರು.

         ಗಾಭರಿಗೊಂಡ ಮನೆಯವರು ಮಗಳಿಗಾಗಿ ಪೋಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ.  ಪೋಲೀಸರ ತನಿಕೆ ಚುರುಕುಗೊಂಡರೂ ಏನೇ ಪ್ರಯೋಜನವಾಗಳಿಲ್ಲ. 
        ಸ್ವಲ್ಪ ದಿನದ ನಂತರ ದೂರದ ತಮಿಳು ನಾಡಿನಿಂದ ಉಪ್ಪಿನಂಗಡಿ ಠಾಣೆಗೆ  ಒಂದು ದೂರವಾಣಿ ಕರೆ ಬರುತ್ತದೆ. ಇಲ್ಲಿ ಒಂದು ಹುಡುಗನ ಶವ ಸಿಕ್ಕಿದೆಯೆಂದು ಅವರು ಹೇಳುತ್ತಾರೆ. ಸಂಶಯಗೊಂಡ ಪೋಲೀಸರು ರಾಜುನ ಮನೆಯವರೊಂದಿಗೆ ತಮಿಳು ನಾಡಿಗೆ ತೆರಳುತ್ತಾರೆ. 

      ಒಂದು ಕಾಡಿನಲ್ಲಿ ಮರದ ಕೆಳಗೆ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ರಾಜುನ ಶವ ಸಿಕ್ಕಿತು. ಶವವನ್ನು ಆಬ್ಯುಲೆನ್ಸಿನ  ಮೂಲಕ ಉಪ್ಪಿನಂಗಡಿಗೆ ತಂದು ಮರಣೋತ್ತರ ಪರಿಕ್ಷೆ ನಡೆಸಿ ದಫನು ಮಾಡಿದರು.

    ಆದರೆ ರಮ್ಯಾಳ ಸುಳಿವು ಇದುವರೆಗೆ ಲಭ್ಯವಾಗಲೇ ಇಲ್ಲ. 

      ಮನೆಯಲಿದ್ದ ಒಡವೆ ಹಣದೊಂದಿಗೆ ಪರಾರಿಯಾಗಿದ್ದ ಮಗಳನ್ನು ರಾಜು ಮೋಸದ ಪ್ರೀತಿಯ ಬಲೆಗೆ ಬೀಳಿಸಿದ್ದನೇ....?
ಅಥವಾ ರಮ್ಯಾಳನ್ನು ರಾಜು ಅಪಹರಿಸಿದ್ದನೇ....?  ಎನ್ನುವ ನೂರಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಶೂನ್ಯ.

     ತನ್ನ ಮಗಳ ಬರುವಿಕೆಗಾಗಿ ಕಾದುಕುಳಿತಿರು ತಂದೆ ತಾಯಿ.....
ಶ್ರಮ ಜೀವಿಯಾದ ತಂದೆ ಕಳೆದುಕೊಂಡ ಮಾನಸಿಕ ಸ್ತೈರ್ಯ......
ಮಗಳಿಗಾಗಿ ಮಾಡಿಟ್ಟ ಸಾಲ.......
ಇಂತಹಾ ನೂರಾರು ಕಷ್ಟಗಳನ್ನು ಹೆತ್ತು ಸಾಕಿ ಸಲಹಿದ ಮನೆಯವರಿಗೆ ಕೊಟ್ಟು ನೀನೆಲ್ಲಿರುವೆ ಓ ರಮ್ಯಾ.......!!

ನೀನೆಲ್ಲಿದ್ದರೂ ಬೇಗ ಬಂದು ನಿನ್ನ ಮನೆಯಲ್ಲಿ ದೀಪ ಬೆಳಗಿ, ತಂದೆ ತಾಯಿಯ ಕಣ್ಣೀರ ಒರೆಸು  ಬಾ.....

- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ