ನಮ್ಮೊಳಗೆ ಮರೆಯಾಗುತ್ತಿರುವ. "ಅಕ್ಷರ ಸಂತ" ಹಾಜಬ್ಬ ----------------------------
ನಮ್ಮೊಳಗೆ ಮರೆಯಾಗುತ್ತಿರುವ. "ಅಕ್ಷರ ಸಂತ" ಹಾಜಬ್ಬ
----------------------------
✒ N.U.T (ತಬೂಕ್)
ಅದೊಂದು ಪುಟ್ಟ ಊರು, ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆ ಸಮೀಪದ ಪುಟ್ಟ ಊರೇ ಹರೇಕಳ. ಅಲ್ಲಿ ಒಬ್ಬರು ಬೀದಿ ಬದಿ ವ್ಯಾಪರಸ್ಥರು, ಅವರ ಹೆಸರೇ ಹಾಜಬ್ಬ. ಸುಮಾರು ಅರುವತ್ತು ವರ್ಷ ಪ್ರಾಯದ ಈ ವ್ಯಕ್ತಿ ಬೆಳೆಗ್ಗೆ ಎದ್ದು ಬಸ್ಸು ಹತ್ತಿ ದೂರದ ಮಂಗಳೂರಿಗೆ ತೆರಳಿ, ಅಲ್ಲಿನ ಪರಿಸರದಲ್ಲಿ ಕಿತ್ತಳೆ ಮಾರುತ್ತಲೇ ಜೀವನ ಸಾಗಿಸಿದವರು.
ವಿದ್ಯಭ್ಯಾಸದ ಬಗ್ಗೆ ಅರಿವೇ ಇಲ್ಲದ ಇವರ ಆಡು ಬಾಷೆ ಬ್ಯಾರಿ ಬಿಟ್ಟರೆ ಬೇರೇನು ತಿಳಿದವರಲ್ಲ. ಊರಿನಲ್ಲಿ ತನ್ನ ಹಾಗೆ ಅಕ್ಷರ ಜ್ಞಾನವಿಲ್ಲದ ಮಕ್ಕಳು ಹೆಚ್ಚಾಗುದನ್ನು ಮನಗಂಡ ಈ ಬೀದಿ ಬದಿ ವ್ಯಾಪಾರಸ್ತ, ಕೈಗೊಂಡ ಆ ಮಹಾ ಯೋಜನೆಗೆ ಎಷ್ಟು ಅಭಿನಂದಿಸಿದರೂ ಸಾಲದು.
* ಹರೇಕಳ ಹಾಜಬ್ಬರ ಸಾಧನೆ:=
ಹರೇಕಳದ ಸಮೀಪ ಸ್ವಲ್ಪ ಕಾಲಿ ಪ್ರದೇಶದ ಬಗ್ಗೆ ವಿವರ ಅರೆತವರೇ ಈ ಹಾಜಬ್ಬ, ಓರ್ವ ಕೇರಳದ ಹೆಸರಾಂತ ವ್ಯಕ್ತಿಯ ಬಳಿ ಸಹಾಯ ಯಾಚಿಸಿ ಅಂದಿನ 5000 ರೂ ಪಡೆದುಕೊಂಡರು. ತಾನು ಚಾಚಿದ ಮೊದಲ ಕೈಗೇ 5000 ರೂ ಸಿಕ್ಕಾಗ ಹಾಜಬ್ಬರ ಕನಸು ದುಪ್ಪಟ್ಟುಗೊಂಡಿತು. ತದನಂತರ ಮತ್ತೊಬ್ಬರು ಮಂಗಳೂರಿನ ಹೆಸರಾಂತ ವ್ಯಕ್ತಿಯ ಬಳಿ ತೆರಳಿ ಜೆ.ಸಿ.ಬಿ ಯಂತ್ರದ ವ್ಯವಸ್ಥೆಯೂ ಮಾಡಿಕೊಂಡರು. ಹಲವರ ಸಹಾಯ ಹಸ್ತದ ಪರಿಯಾಗಿ ಕೊನೇಗೆ 51 ಸೆಂಟ್ಸ್ ಸ್ಥಳವನ್ನು 40 ಸಾವಿರ ರುಪಾಯಿಗೆ ಕರೀದಿಸಿದರು. ಈಗ ಇದರ ಒಟ್ಟು ವಿಸ್ತೀರ್ಣ ಒಂದು ಎಕರೆ ಹಾಗು 35 ಸೆಂಟ್ಸ್.
ಮೊದಲ ಬಾರಿಗೆ ಕೇವಲ 28 ವಿಧ್ಯಾರ್ಥಿಗಳು ಹಾಗು ಒಂದು ಕನ್ನಡ ಟೀಚರ್ ಸಹಾಯದಿಂದ ಆರಂಭವಾದ ಈ ಶಿಕ್ಷಣ ಸಂಸ್ಥೆ, ಎರಡನೇ ವರ್ಷ 50 ವಿದ್ಯಾರ್ಥಿಗಳು ದಾಖಲಾದಾಗ ಹಾಜಬ್ಬರವರಿಗೆ ಉತ್ಸಾಹ ಹೆಚ್ಚಾಯಿತು. 2001 ರಲ್ಲಿ 150 ವಿದ್ಯಾರ್ಥಿಗಳು ಸೇರ್ಪಡೆಗೊಂಡಾಗ ಕರ್ನಾಟಕ ಸರ್ಕಾದಿಂದ ಮಾನ್ಯತೆಯೂ ದೊರೆಯಿತು. ಇದೀಗ ಕೊಠಡಿಗಳ ಸಂಖ್ಯೆ ಹತ್ತು.
ಬೆಳಿಗ್ಗೆ ಮಾರುಕಟ್ಟೆಗೆ ತೆರಳಿ ಒಂದು ಬುಟ್ಟಿ ಕಿತ್ತಾಳೆ ಹಣ್ಣನ್ನು ಸಾಲವಾಗಿ ಪಡೆದು, ಸಂಜೆಯಾಗುವಷ್ಟರಲ್ಲಿ ಅದರೀಂದ ಸಿಗುವ ವರಮಾನದಿಂದ ಸಾಲದ ಹಣ ಹಿಂದಿರುಗಿಸಿ ಉಳಿದ ನೂರು, ನೂರೈವತ್ತು ರುಪಾಯಿಯನ್ನು ತನ್ನ ಮನೆ ಹಾಗು ಶಾಲೆಯ ಕರ್ಚು ವೆಚ್ಚಗಳನ್ನು ಭರಿಸುವ ಈ ಹಾಜಬ್ಬರ ತ್ಯಾಗ ಆ ಭಗವಂತನೇ ಬಲ್ಲ.
* ತನಗೆ ಸಿಕ್ಕಿದೆಲ್ಲವೂ ಆ ಶಾಲೆಗಾಗಿ:=
ಪ್ರಸಸ್ತಿಗಳ ಸರಮಾಲೆಯೇ ಹರಿದು ಬಂದ ಹಾಜಬ್ಬರವರಿಗೆ ತನ್ನ ವ್ಯಕ್ತಿತ್ವದ ಬಗ್ಗೆ ಅರಿವೇ ಇಲ್ಲದ ಅನಕ್ಷರಸ್ತ.
ಕನ್ನಡ ಪ್ರಭದವರು ನೀಡಿದ 'ರಿಯಲ್ ಹೀರೋ' ಇದರ ಒಂದು ಲಕ್ಷ ರುಪಾಯಿ, ಅಮೀರ್ ಖಾನ್ ನೇತೃತ್ವದ CIN ಕಾರ್ಯಕ್ರಮದ ವತಿಯಿಂದ ಸಿಕ್ಕ ಐದು ಲಕ್ಷ ರುಪಾಯಿ, ಹಾಗು ತನಗೆ ಸಿಕ್ಕ ಒಟ್ಟು ಲಕ್ಷಾಂತರ ರುಪಾಯಿಗಳ ಪ್ರಸಸ್ತಿ ಮೊತ್ತಗಳನ್ನು ಶಾಲೆಯ ಏಳಿಗೆಗಾಗಿಯೇ ವ್ಯಯಿಸಿದ್ದಾರೆ.
* ಹಾಜಬ್ಬರವರ ದಯನೀಯ ಸ್ಥಿತಿ:=
ತೀರಾ ಬಡ ಕುಟುಂಭದವರಾದ ಹಾಜಬ್ಬರವರಿಗೆ ಎರಡು ಹೆಣ್ಣು ಒಂದು ಗಂಡು, ಒಟ್ಟು ಮೂರು ಮಕ್ಕಳು. ಹೆಂಡತಿ ಹಾಗು ಒಂದು ಹೆಣ್ಣು ಮಗಳು ಅನಾರೋಗ್ಯದಿಂದ ಬಳಲುತಿದ್ದಾರೆ. ಮನೆಯಲ್ಲಿ ಏನೂ ವರಮಾನವಿಲ್ಲದೆ, ಕೇವಲ ತಾನು ಬೀದಿ ಬದಿಯಲ್ಲಿ ಕಿತ್ತಾಳೆ ಮಾರಿ ಸಿಗುವ ಅಲ್ಪ ಮೊತ್ತದಿಂದ ಮನೆಯಲ್ಲಿನ ಊಟೋಪಚಾರಕ್ಕೆ ಹಾಗು ಔಷದಿಗೆ ವ್ಯಯಿಸುತಿದ್ದಾರೆ.
* ತನ್ನ ವೃತ್ತಿಯಲ್ಲಿ 25 ವರ್ಷ :=
ಹಾಜಬ್ಬರವರ ಏಳಿಗೆಗೆ ಕಾರಣವಾದ ಈ ಬೀದಿ ಬದಿ ಕಿತ್ತಾಳೆ ಹಣ್ಣು ಮಾರುವ ವೃತ್ತಿಯಲ್ಲಿ ಬರೋಬ್ಬರಿ 25 ವರ್ಷಗಳೇ ಕಳೆದವು. ಆದರೆ ಎಂದೂ ತನ್ನ ವೃತ್ತಿಗೆ ಗುಡ್ ಬೈ ಹೇಳಲು ಇಚ್ಛಿಸಿಲ್ಲ.
* ಮನೆ ಇಲ್ಲದೆ ಬಳಲಿದ ಹಾಜಬ್ಬ:=
ಲಕ್ಷ ಲಕ್ಷ ರೂ ಕೈಯಂಗಳದಲ್ಲಿದ್ದರೂ ಒಂದು ರೂ ಇತರ ಕರ್ಚಿಗೆ ವ್ಯಯಿಸದ ಹಾಜಬ್ಬರವರಿಗೆ, ಇರಲು ಸೂರು ಇಲ್ಲ ಎಂಬುದು ವಿಷಾದನೀಯ. ಸಣ್ಣ ಗುಡಿಸಲಾಕಾರದ ಮನೆಯಲ್ಲಿ ಆಶ್ರಯ ಪಡೆದಿರುವ ಹಾಜಬ್ಬರವರಿಗೆ ಇದೀಗ 'ಕ್ರಿಷ್ಚಿಯನ್ ಅಸೋಶಿಯೇಶನ್' ಎಂಬ ಸಂಸ್ಥೆಯ ವತಿಯಿಂದ ಸಮಾರು 15 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣಗೊಳ್ಳುತ್ತಿದೆ.
ಆದರೆ....,
ಇಷ್ಟೆಲ್ಲ ಕೊಡುಗೈ ದಾನಿಗಳಿಂದ ಕೂಡಿದ ಬ್ಯಾರಿ ಸಮುದಾಯದ ಕಣ್ಣಿಗೆ ಇವರ ದಯನಿಯ ಸ್ಥಿತಿ ಬಿಳದಿರುವುದು ವಿಪರ್ಯಾಸವೇ ಸರಿ.
* ಹಾಜಬ್ಬರ ಮುಂದಿನ ಗುರಿ:=
ಅಕ್ಷರ ಸಂತ ಹಾಜಬ್ಬರವರು ಮುಂದಿನ ಗುರಿ ಒಂದು ಕಾಲೇಜು. ಈಗ ಇರುವ ಶಾಲೆಯ ಪಕ್ಕದಲ್ಲೇ ಒಂದು ಕಾಲೇಜಿನ ಕನಸು ಕಂಡಿದ್ದಾರೆ. ಈ ಅಕ್ಷರ ಸಂತ ಹರೇಕಳ ಹಾಜಬ್ಬರವರ ಕನಸು ಆದಷ್ಟು ಬೇಗ ಈಡೇರಲಿ.........
- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್
http://nizamuddintabukuppinangady.blogspot.com/?m=1
Comments
Post a Comment