ಮಾರುಕಟ್ಟೆಯಲ್ಲಿ ಬೇಡಿಕೆಯಾಗುತ್ತಿದೆ ವೀಟ್'ಗ್ರಾಸ್ (ಗೋಧಿ ಹುಲ್ಲು) ತಂಪು ಪಾನೀಯ
ಬೆಂಗಳೂರು : ಬೇಸಿಗೆ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಹಲವು ವಿಧಗಳಲ್ಲಿ ದೊರಕುವ ತಂಪು ಪಾನೀಯಗಳನ್ನು ನಾವು ಕಂಡಿದ್ದೇವೆ. ಜನರ ದಾಹಕ್ಕೆ ಪೈಪೋಟಿ ನೀಡುವ ಕೆಲವೊಂದು ಉತ್ಪನ್ನಗಳನ್ನು ಪರಿಚಿತರು ನಾವು. ಆದರೆ ಹೊಸದೊಂದು ಉತ್ಪನ್ನವು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಜನರಿಗೆ ಆರೋಗ್ಯದಾಯಕ ರಸ ನೀಡಿತ್ತಿದೆ.
ಗೋಧಿ ಹುಲ್ಲು ಇತಿಹಾಸದಲ್ಲಿ 5000 ವರ್ಷಗಳಿಗೂ ಹಿಂದಿನದು, ಪುರಾತನ ಈಜಿಪ್ಟ್ ಮತ್ತು ಬಹುಶಃ ಆರಂಭಿಕ ಮೆಸೊಪಟ್ಯಾಮಿಯಾದ ನಾಗರಿಕತೆಯವರಲ್ಲಿ ಈ ರೀತಿಯ ರಸದ ಬಗ್ಗೆ ಉಲ್ಲೇಖವಿದೆ. ಪುರಾತನ ಈಜಿಪ್ಟಿನವರು ಗೋಧಿಯ ಎಲೆಗಳನ್ನು ಆರಾಧಿಸುತಿದ್ದು ಇದರ ಪ್ರಯೋಜನ ಮತ್ತು ಧನಾತ್ಮಕ ಗುಣಗಳ ಬಗ್ಗೆ ಅವರಿಗೆ ನಂಬಿಕೆ ಇತ್ತು.
ಬೆಂಗಳೂರಿನ ನಗರ ಪ್ರದೇಶಗಳಲ್ಲಿ ಸಿಗುವ ತಂಪು ಪಾನೀಯಾದ ಅಂಗಡಿಗಳಲ್ಲಿ ದೊರಕುವ ಈ ವೀಟ್'ಗ್ರಾಸ್ ಎಷ್ಟು ಆರೋಗ್ಯ ದಾಯಕವೆಂದರೆ ಒಂದು ಗ್ಲಾಸ್ ವೀಟ್'ಗ್ರಾಸ್ ಬರೊಬ್ಬರಿ ಎರಡು ಕಿಲೋ ತರಕಾರಿ ಸೇವಿಸಿದಷ್ಟು ಆರೋಗ್ಯಕರವಾಗಿದೆ.
ವೀಟ್ ಗ್ರಾಸ್ ಸಾಮಾನ್ಯ ಗೋಧಿ ಸಸ್ಯದ ಹೊಸದಾಗಿ ಮೊಳಕೆಯೊಡೆಯುವ ಮೊದಲ ಎಲೆಗಳಿಂದ ತಯಾರಿಸಲ್ಪಟ್ಟ ಆಹಾರವಾಗಿದೆ. ವೀಟ್ ಗ್ರಾಸ್ ಮತ್ತು ಗೋಧಿ ಜ್ಯೂಸ್ ಭಿನ್ನವಾಗಿರುತ್ತದೆ, ವೀಟ್ ಗ್ರಾಸ್ ತಾಜಾದಾಗಿರುತ್ತದೆ. ಹೆಚ್ಚಿನ ಸಸ್ಯಗಳಂತೆ, ಅದು ಕ್ಲೋರೊಫಿಲ್, ಅಮೈನೊ ಆಮ್ಲಗಳು, ಖನಿಜಗಳು, ಜೀವಸತ್ವಗಳು, ಮತ್ತು ಕಿಣ್ವಗಳನ್ನು ಹೊಂದಿರುತ್ತದೆ. ವೀಟ್ ಗ್ರಾಸ್ನ ಆರೋಗ್ಯ ಪೂರಕವಾದ ಪೌಷ್ಠಿಕಾಂಶವನ್ನು ಹೊಂದಿದೆ.
ಕೆಲವು ಗ್ರಾಹಕರು ತಮ್ಮ ಮನೆಗಳಲ್ಲಿ ವೀಟ್ ಗ್ರಾಸ್ ಅನ್ನು ಬೆಳೆಯುತ್ತಾರೆ ಮತ್ತು ಜ್ಯೂಸ್ ಮಾಡುತ್ತಾರೆ. ಇದು ತಾಜಾ ಉತ್ಪನ್ನಗಳು, ಹೆಪ್ಪುಗಟ್ಟಿದ ರಸ ಮತ್ತು ಪುಡಿಮಾಡಿದ ಡಬ್ಬಗಳ ರೂಪದಲ್ಲಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ವೀಟ್ ಗ್ರಾಸ್ ರಸವನ್ನು ವೀಟ್ ಗ್ರಾಸ್ ಗಿಡಗಳಿಂದ ತೆಗೆಯಲಾಗುವುದು ಅಂದರೆ, ಗೋಧಿ ಬೀಜವು ರೂಪುಗೊಳ್ಳಲು ಪ್ರಾರಂಭವಾಗುವ ಮೊದಲೇ ಇದನ್ನು ಕೊಯ್ದು ಉಪಯೋಗಿಸಲಾಗುತ್ತದೆ.
ವೀಟ್'ಗ್ರಾಸ್ ಪಾನೀಯವು ಇತರ ಹಣ್ಣು ಹಂಪಲಿನೊಂದಿಗೆ ಬೆರಸಿಯೂ ಸೇವಿಸಬಹುದು. ಇದು ಲಿಂಬೆಹಣ್ಣು, ಬಾಳೆಹಣ್ಣು, ಕಿತ್ತಳೆ, ದಾಳಿಂಬೆ, ಸೇಬು, ಕಲ್ಲಂಗಡಿ ಹೀಗೆ ಹಲವು ಹಣ್ಣಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ಅರೆದು ರಸವನ್ನು ಹಿಂಡಿ ಸೇವಿಸಬಹುದು. ಮೊದಮೊದಲು ಇದು ಸೇವಿಸಲು ಅಷ್ಟೇನೂ ರುಚಿಕರವಲ್ಲದಿದ್ದರೂ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಊರು ಹಳ್ಳಿಗಳಲ್ಲಿ ಇದನ್ನು ಹಿಂದಿನಿಂದಲೂ ಉಪಯೋಗಿಸುತಿದ್ದು, ಇದರ ಉಪಯೋಗ ಅರಿಯತೊಡಗಿದಾಗ ಇದನ್ನೇ ಬಂಡವಾಳವಾಗಿಸಿದ ಉದ್ಯಮಿಗಳು ರೆಕ್ಕೆಪುಕ್ಕ ಸೇರಿಸಿ ಮಾರುಕಟ್ಟೆಯಲ್ಲಿ ಛೂ ಬಿಟ್ಟಿದ್ದಾರೆ.
ಸಂಶೋಧಕರು ಹೇಳಿದಂತೆ ಈ ವೀಟ್'ಗ್ರಾಸ್ ರಸ ಕುಡಿಯುವುದರಿಂದ ದೇಹದಲ್ಲಿ ರಕ್ತ ಉತ್ಪತಿ ಹೆಚ್ಚಿಸುತ್ತದೆ. ಚರ್ಮದ ತ್ವಚೆ ಹೆಚ್ಚಾಗುವುದು ಮತ್ತು ದೇಹವನ್ನು ನಿಯಂತ್ರಿಸಲು ಇದು ಸುಲಭ ಮಾರ್ಗ. ಶ್ವಾಸಕೋಶದ ತೊಂದರೆಗೊಳಗಾದವರು ಇದನ್ನು ಸೇವಿಸುದರಿಂದ ಶೀಘ್ರ ಗುಣಮುಖರಾಗಬಹುದು.
ಇನ್ನು ಇದನ್ನು ಇತರ ಹಣ್ಣಿನ ರಸಗಳಿಗೆ ಹೋಲಿಸಿದರೆ ಹೆಚ್ಚು ಗುಣಮಟ್ಟ ಮತ್ತು ಅಂಶಗಳನ್ನು ಹೊಂದಿದೆ. ಈ ವೀಟ್'ಗ್ರಾಸಿನ ಒಂದು ಲೋಟ ರಸದಲ್ಲಿ 25 ಗ್ರಾಮ್ ಪ್ರೋಟೀನ್, 308 ಮಿಲೀಗ್ರಾಮ್ ಕ್ಯಾಲ್ಸಿಯಂ, 3221 ಮಿಲೀಗ್ರಾಮ್ ಪೊಟಾಶಿಯಂ, 112 ಮಿಲೀಗ್ರಾಮ್ ಮ್ಯಾಗ್ನೀಶಿಯಂ, 214.5 ವಿಟಮಿನ್ ಸಿ, 513 ಮಿಲೀಗ್ರಾಮ್ ವಿಟಮಿನ್ ಎ, 9.1 ಮಿಲೀಗ್ರಾಮ್ ವಿಟಮಿನ್ ಇ ಹೊಂದಿದೆ.
- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್
nizamcity09@gmail.com
-

Comments
Post a Comment