Posts

Image
ಮೊಹಿಯದ್ದೀನ್ ಜುಮಾ ಮಸೀದಿ ಪೆರಿಯಡ್ಕ  ಇದರ ಆಶ್ರಯದಲ್ಲಿ ಜರುಗುವ ಖತಮುಲ್ ಖುರ್ ಆನ್ ಮತ್ತು ತಹ್ಲೀಲ್ ಸಮರ್ಪಣಾ ಕಾರ್ಯಕ್ರಮವು ದಿನಾಂಕ 05/08/2018 ರಂದು ಬೆಳಿಗ್ಗೆ 10 ಘಂಟೆಗೆ ಪೆರಿಯಡ್ಕ ಜುಮಾ ಮಸೀದಿ ಇದರ ಸಭಾಂಗಣದಲ್ಲಿ ಜರುಗಳಿದೆ.    ಕಾರ್ಯಕ್ರಮದ  ನೇತೃತ್ವ ಹಾಗೂ ದುಃಆವನ್ನು ಸೈಯದ್ ಹಾಶಿರ್ ಅಲೀ ಶಿಹಾಬ್ ತಂಙಲ್, ಪಾಣಕ್ಕಾಡ್ ವಹಿಸಲಿದ್ದು ಅಧ್ಯಕ್ಷತೆಯನ್ನು ಕೆ.ಪಿ ಬಶೀರ್ ಅಧ್ಯಕ್ಷರು mjm ಪೆರಿಯಡ್ಕ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಣೆ  ಉಮರ್ ದಾರಿಮಿ,  ಖತೀಬರು MJM ಪೆರಿಯಡ್ಕ ನಡೆಸಲಿದ್ದಾರೆ. ಮುಖ್ಯ ಅತಿಥಿಗಳು ಜ|| ಯು ಟಿ ಖಾದರ್ ( ವಸತಿ & ನಗರ ಸಚಿವರು ಕರ್ಣಾಟಕ), ಬಹು ಸಿ ಎಂ ಅನ್ಸಾರ್ ಫೈಝೀ ಅಲ್ ಬುರ್ಹಾನಿ (ಮುದರ್ರಿಸ್ ಕಣ್ಣೂರು) ಹಾಜೀ ಮುಸ್ತಫಾ ಕೆಂಪಿ (ಅಧ್ಯಕ್ಷರು JM ಉಪ್ಪಿನಂಗಡಿ ) ಹಾಗೂ ಹಲವಾರು ಸಾಮಾಜಿಕ, ಧಾರ್ಮಿಕ ಮುಖಂಡರೂ ಭಾಗವಹಿಸಲಿದ್ದಾರೆ.    ಸ್ಥಳೀಯ 30 ಧಾರ್ಮಿಕ ಗುರುಗಳ ನೇತೃತ್ವದಲ್ಲಿ ನಡೆಯಲಿರುವ ಖತಮುಲ್ ಕುರ್ ಆನ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶವಿದ್ದು, ಕಾರ್ಯಕ್ರಮದ ನಂತರ ಅನ್ನದಾನ ನಡೆಯಲಿದೆ.

ಶುಹೈಬ್ ಸ್ಮರಣಾರ್ಥ ಕಾಂಗ್ರೆಸ್ ಮಂಜೇಶ್ವರ ಮತ್ತು ಬ್ಲಡ್ ಡೋಶರ್ಸ್ ಮಂಗಳೂರು ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Image

ಮಾರುಕಟ್ಟೆಯಲ್ಲಿ ಬೇಡಿಕೆಯಾಗುತ್ತಿದೆ ವೀಟ್'ಗ್ರಾಸ್ (ಗೋಧಿ ಹುಲ್ಲು) ತಂಪು ಪಾನೀಯ

Image
ಬೆಂಗಳೂರು : ಬೇಸಿಗೆ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಹಲವು ವಿಧಗಳಲ್ಲಿ ದೊರಕುವ ತಂಪು ಪಾನೀಯಗಳನ್ನು ನಾವು ಕಂಡಿದ್ದೇವೆ. ಜನರ ದಾಹಕ್ಕೆ ಪೈಪೋಟಿ ನೀಡುವ ಕೆಲವೊಂದು ಉತ್ಪನ್ನಗಳನ್ನು ಪರಿಚಿತರು ನಾವು. ಆದರೆ ಹೊಸದೊಂದು ಉತ್ಪನ್ನವು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಜನರಿಗೆ ಆರೋಗ್ಯದಾಯಕ ರಸ ನೀಡಿತ್ತಿದೆ. ಗೋಧಿ ಹುಲ್ಲು ಇತಿಹಾಸದಲ್ಲಿ 5000 ವರ್ಷಗಳಿಗೂ ಹಿಂದಿನದು, ಪುರಾತನ ಈಜಿಪ್ಟ್ ಮತ್ತು ಬಹುಶಃ ಆರಂಭಿಕ ಮೆಸೊಪಟ್ಯಾಮಿಯಾದ ನಾಗರಿಕತೆಯವರಲ್ಲಿ ಈ ರೀತಿಯ ರಸದ ಬಗ್ಗೆ ಉಲ್ಲೇಖವಿದೆ. ಪುರಾತನ ಈಜಿಪ್ಟಿನವರು ಗೋಧಿಯ ಎಲೆಗಳನ್ನು ಆರಾಧಿಸುತಿದ್ದು ಇದರ ಪ್ರಯೋಜನ ಮತ್ತು ಧನಾತ್ಮಕ ಗುಣಗಳ ಬಗ್ಗೆ ಅವರಿಗೆ ನಂಬಿಕೆ ಇತ್ತು.      ಬೆಂಗಳೂರಿನ ನಗರ ಪ್ರದೇಶಗಳಲ್ಲಿ ಸಿಗುವ ತಂಪು ಪಾನೀಯಾದ ಅಂಗಡಿಗಳಲ್ಲಿ ದೊರಕುವ ಈ ವೀಟ್'ಗ್ರಾಸ್ ಎಷ್ಟು ಆರೋಗ್ಯ ದಾಯಕವೆಂದರೆ ಒಂದು ಗ್ಲಾಸ್ ವೀಟ್'ಗ್ರಾಸ್ ಬರೊಬ್ಬರಿ ಎರಡು ಕಿಲೋ ತರಕಾರಿ ಸೇವಿಸಿದಷ್ಟು ಆರೋಗ್ಯಕರವಾಗಿದೆ. ವೀಟ್ ಗ್ರಾಸ್ ಸಾಮಾನ್ಯ ಗೋಧಿ ಸಸ್ಯದ ಹೊಸದಾಗಿ ಮೊಳಕೆಯೊಡೆಯುವ ಮೊದಲ ಎಲೆಗಳಿಂದ ತಯಾರಿಸಲ್ಪಟ್ಟ ಆಹಾರವಾಗಿದೆ.  ವೀಟ್ ಗ್ರಾಸ್ ಮತ್ತು ಗೋಧಿ ಜ್ಯೂಸ್ ಭಿನ್ನವಾಗಿರುತ್ತದೆ, ವೀಟ್ ಗ್ರಾಸ್ ತಾಜಾದಾಗಿರುತ್ತದೆ. ಹೆಚ್ಚಿನ ಸಸ್ಯಗಳಂತೆ, ಅದು ಕ್ಲೋರೊಫಿಲ್, ಅಮೈನೊ ಆಮ್ಲಗಳು, ಖನಿಜಗಳು, ಜೀವಸತ್ವಗಳು, ಮತ್ತು ಕಿಣ್ವಗಳನ್ನು ಹೊಂದಿರುತ್ತದೆ. ವೀಟ್ ಗ್ರಾಸ್ನ...

ಅದು ಅದ್ಭುತಗಳ ಗೂಡು " *ಊಹಿಸಲಾಗದ ಸತ್ಯ....!!* ಭಾಗ 9

ಅದೊಂದು ಪ್ರಶಾಂತ ಪ್ರದೇಶವಲ್ಲವೇ.. ತನ್ನವರು, ತಿಳಿದವರು, ಅಹಂಕಾರಿಯೂ  ಬಡ ಬಲ್ಲಿಗನೂ ವಾಸಿಸಲಿರುವ ಅಗಾಧ ಸ್ಥಳವಲ್ಲವೇ.. ಖಬರ್.       ನಾವು ಆಗ್ರಹಿಸಿದರೂ... ಆಗ್ರಹಿಸದಿದ್ದರೂ ಖಬರಿನಿಂದ ಹಾಗೂ ಅಲ್ಲಿನ ಶಿಕ್ಷೆಯಿಂದ ನಮಗೆ ರಕ್ಷೆ ಇಲ್ಲವೇ ಇಲ್ಲ. ಅನುಭವಿಸುವವರು ನಾವು ಎಲ್ಲವೂ ಅನುಭವಿಸಲೇಬೇಕು. ಇಂದು ಮರಣ ಹೊಂದಿದವನ ದಫನ ಮಾಡಿ ಬಂದವನು ನಾಳೆ ಸ್ವ ಮಲಗಬೇಕಾದ ಜಾಗವೇ ಖಬರ್...   *"ನಾವು ಸ್ವ ಇಚ್ಛೆಯಿಂದ ಇಲ್ಲಿ ಬಂದವರಲ್ಲ..*  *ನಾಳೆ ಸ್ವ ಇಚ್ಛೆಯಿಂದ ತೆರಳುವವರೂ ಅಲ್ಲ.."*           ಎಲ್ಲವೂ ಅಲ್ಲಾಹನ ಇಚ್ಛೆ...       ಖಬರಿನಲ್ಲಿ ಕೆಲವರಿಗೆ ಶಿಕ್ಷೆ ಇನ್ನೂ ಕೆಲವರಿಗೆ ರಕ್ಷೆ...   ಜೀವನವೆಂಬ ಯಾತ್ರೆಯಲ್ಲಿ ತಾನು ಮಾಡಿದ ಕರ್ಮದ ಫಲ ಅವನು ಖಂಡಿತವಾಗಿಯೂ ಅನುಭವಿಸುಲರಿವನು..      ಕೆಲವು ಧರ್ಮದ ಜನರ ನಂಬಿಕೆ,,, ಇದೆಲ್ಲವೂ ಸುಳ್ಳು, ಅದರಲ್ಲೇನು ಮರ್ಮವಿಲ್ಲವೆಂದು.   ಆದರೆ,, ಇತಿಹಾಸದ ಪುರಾವೆಗಳು ಇಸ್ಲಾಂ ಧರ್ಮದಲ್ಲಿ ಬಹಳಷ್ಟಿದೆ. ಅದರ ಕೆಲ ಭಾಗಗಳನ್ನು ನಾ ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೇನೆ..     ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳನ್ನು ಹಲವು ಸ್ವಹಾಬಿಗಳು, ಪಂಡಿತರು.. ಕಣ್ಣಾರೆ ಕಂಡಿದ್ದಾರೆ. ...

ಅದು ಅದ್ಭುತಗಳ ಗೂಡು"* ಊಹಿಸಲಾಗದ ಸತ್ಯ....!! ಭಾಗ 8

ಒಂದು ದಿನ ಮಹಮ್ಮದ್ ಇಬ್ನು ಸಿನಾನ್ ಸುಲಾಮಿ ರಹ್ಮವುಲ್ಲಾ ರವರು ಬಗ್ದಾದಿನಲ್ಲಿ ಯಾತ್ರೆ ನಡೆಸುವಾಗ ಓರ್ವ ಕಬ್ಬಿಣದ ವ್ಯಾಪಾರಸ್ಥನ ಕೈಯಲ್ಲಿ  ಬಂದು ಕಬ್ಬಿಣದ ಮೊಳೆಯನ್ನು ಕಂಡರು.     *"ಆ ಕಬ್ಬಿಣದ ಮೊಳೆಯ ಎರಡು ಬಾಗವೂ ಚೂಪಾಗಿತ್ತು, ಮತ್ತು ಅದನ್ನು ಬೆಂಕಿಯಲ್ಲಿ ಉರಿಸಿದರೂ‌.. ಅದು ಕರಗುತ್ತಿರಲಿಲ್ಲ."*       ಇದನ್ನು ಕಂಡ ಅವರು ಅದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಆ ಮೊಳೆಯನ್ನು ಅಂಗಡಿಗೆ ಮಾರಾಟ ಮಾಡಿದವನ ಅನ್ವೇಷಣೆಯಲ್ಲಿ ನಿರತರಾದರು.     ಹಲವು ದಿನಗಳ ಅನ್ವೇಷಣೆಯ ನಂತರ ಆ ಕಬ್ಬಿಣದ ಮೊಳೆ ಮಾರಾಟ ಮಾಡಿದವನ ಕಂಡುಹಿಡಿದರು. ಆ ಕಬ್ಬಿಣದ ಮೊಳೆಯ  ವಿವರ ಕೇಳಿದಾಗ ಅವನು....     *"ನನಗದು ಆ ಖಬರಿನ ಒಳ ಭಾಗದಿಂದ ಸಿಕ್ಕಿದ್ದು, ಈ ರೀತಿಯ ಹಲವು ಮೊಳೆಗಳು ಮನುಷ್ಯನ ಮೂಳೆಗಳಲ್ಲಿ ಹೊಡೆಯಲಾಗಿತ್ತು, ನಾನು ಆ ಮೂಳೆಯನ್ನು ಹುಡಿಮಾಡಿ ಈ ಮೊಳೆಯನ್ನು ಹೊರತೆಗೆದಿದ್ದೇನೆ. ಎಂದರು"*.      ಈಗೆ ಹಲವಾರು ಖಬರಿನಲ್ಲಿ ಕಬ್ಬಿಣದ ಮೊಲೆಗಳು, ಕಬ್ಬಿಣದ ಗುಂಡು ಆಕ್ರೃತಿಯ ವಸ್ತುಗಳನ್ನು ಕಂಡವರ ಬಗ್ಗೆ, ಇತಿಹಾಸ ಗ್ರಂಥಗಳಲ್ಲಿ ನಾವು ಕಾಣಬಹುದು..      ಕೆಲವು ಪುರಾತನ  ಖಬರಿನಲ್ಲಿ, ಮೃತದೇಹವನ್ನು   ಕಿಬ್ಲಾ (ಮಕ್ಕಾ ಕಡೆಗೆ) ತಿರುಗಿಸಿದ್ದನ್ನು, ಅದಲು ಬದಲು ರೂಪದಲ್ಲಿ ಮಲಗಿಸಿದ ಚರಿತ್ರೆಗಳು ಕಂಡವರಿದ್ದಾರೆ. ...

"ಅದು ಅದ್ಭುತಗಳ ಗೂಡು"* ಊಹಿಸಲಾಗದ ಸತ್ಯ....!! ಭಗ 7

ದು ದಿನ ಪ್ರಸಿದ್ದ ಸೂಫೀ ವರ್ಯರೂ  ಪಂಡಿತರೂ ಆದ ಮಿರ್ಹದ್  ರ.ಅ ರವರ ಬಳಿ ಓರ್ವ ಯುವಕ ಬಂದ. ಅವನ ಮೊಗದ ಒಂದು ಭಾಗವು ಕಬ್ಬಿಣದಂತೆ ಗಟ್ಟಿಯಾಗಿತ್ತು.  ಇದರ ಬಗ್ಗೆ ವಿವರ ಅರಿಯಲು ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಆ ಯುವಕ ಮಿರ್ಹದ್ ರ.ಅ ರವರಲ್ಲಿ ವಿವರಿಸತೊಡಗಿದ.     "ನಾನು ಆಡಂಬರದಿ ಜೀವಿಸುತಿದ್ದ  ಯುವಕನಾಗಿದ್ದೆ, ಬಹಳಾ ಕೆಟ್ಟವನಾಗಿದ್ದೆ ನಾನು.  ಅತ್ಯಾಚಾರ, ಅನೈತಿಕ ಸಂಬಂಧ ನನ್ನ ಬಳಿ ಇತ್ತು. ನನಗೇನು ಉದ್ಯೋಗ ಇರಲಿಲ್ಲ.  ಕೊನೆಗೆ ವಿದ್ಯಬ್ಯಾಸ ಕೊರತೆ ಇರುವ ನಾನು ನೇರವಾಗಿ ಖಬರ್ ಅಗೆಯುವ ಕೆಲಸಕ್ಕೆ ಸೇರಿಕೊಂಡೆನು.     ..ಒಂದು ದಿನ ಮಗರಿಬ್ ಹಾಗೂ ಇಶಾ ನಡುವೆ (ಅಂದಾಜು 6 ರಿಂದ 9 ಘಂಟೆ) ತಾನು ಅಗೆದ ಖಬರಿಗೆ ಒಂದು ಮೃತದೇಹವನ್ನು ತಂದು ದಫನ ಮಾಡಲಾಯಿತು, ದಫನದ ವಿದಿ ವಿಧಾನದ ನಂತರ ಎಲ್ಲರೂ ಅಲ್ಲಿಂದ ಹೊರಟುಹೋದರು. ನಾನು ಪಕ್ಕದ ಖಬರಿಗೆ ಒರಗಿ ಇನ್ನೂ ಯಾರಾದರೂ ಮೃತದೇಹ ಕೊಂಡುಬರಬಹುದೇ..? ಎಂದು ಕಾಯುತ್ತಾ.. ವಿಶ್ರಾಂತಿ ಪಡೆಯುತಿದ್ದೆ.    ಆಗ ಅಲ್ಲಗೆ ಎರಡು ಬೃಹತ್ ಆಕಾರದ ಬಿಳಿ ಬಣ್ಣದ  ಪಕ್ಷಿಗಳು ಬಂದವು, ಅದರಲ್ಲಿ ಒಂದು ಪಕ್ಷಿ ನೇರವಾಗಿ ಈಗಾಗಲೇ ದಫನ ಮಾಡಿ ಹೋದ ಹೋಸ ಖಬರಿನ ಮೇಲಿದ್ದ ಕಲ್ಲುಗಳನ್ನು ಸರಿಸಿ ಖಬರಿನ ಒಳಗೆ ನುಗ್ಗಿತು. ಇನ್ನೊಂದು ಪಕ್ಷಿ ಖಬರಿನ ಹೊರಭಾಗದಲ್ಲಿ ನಿಂತು ಕಾವಲು ಕಾಯುತಿತ್ತು.  ನನಗೆ ಆ ಸಂದರ್ಭದಲ...

*"ಅದು ಅದ್ಭುತಗಳ ಗೂಡು" ಊಹಿಸಲಾಗದ ಸತ್ಯ....!! ಭಾಗ - 6

ಒಂದು ದಿನ ಅಲ್ಲಾಮಾ ಅಬೀ ಗುಝ್ಹ ರ.ಅ ರವರು ಇರಾಕಿನ ಬಸರ ಎಂಬ ಪ್ರದೇಶದಲ್ಲಿ ಹಾದುಹೋಗುತಿದ್ದರು. ಅಲ್ಲಿ ಒಂದು ಕತ್ತೆ ಅಳುವ ಶಬ್ದ ವಿಪರೀತವಾಗಿ ಕೇಳುತಿತ್ತು. ಆ ಪ್ರದೇಶದ ಸುತ್ತಲೂ ಕಣ್ಣಾಯಿಸಿದರೂ ಅಲ್ಲ...