ಅದು ಅದ್ಭುತಗಳ ಗೂಡು"* ಊಹಿಸಲಾಗದ ಸತ್ಯ....!! ಭಾಗ 8

ಒಂದು ದಿನ ಮಹಮ್ಮದ್ ಇಬ್ನು ಸಿನಾನ್ ಸುಲಾಮಿ ರಹ್ಮವುಲ್ಲಾ ರವರು ಬಗ್ದಾದಿನಲ್ಲಿ ಯಾತ್ರೆ ನಡೆಸುವಾಗ ಓರ್ವ ಕಬ್ಬಿಣದ ವ್ಯಾಪಾರಸ್ಥನ ಕೈಯಲ್ಲಿ  ಬಂದು ಕಬ್ಬಿಣದ ಮೊಳೆಯನ್ನು ಕಂಡರು.

    *"ಆ ಕಬ್ಬಿಣದ ಮೊಳೆಯ ಎರಡು ಬಾಗವೂ ಚೂಪಾಗಿತ್ತು, ಮತ್ತು ಅದನ್ನು ಬೆಂಕಿಯಲ್ಲಿ ಉರಿಸಿದರೂ‌.. ಅದು ಕರಗುತ್ತಿರಲಿಲ್ಲ."*

      ಇದನ್ನು ಕಂಡ ಅವರು ಅದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಆ ಮೊಳೆಯನ್ನು ಅಂಗಡಿಗೆ ಮಾರಾಟ ಮಾಡಿದವನ ಅನ್ವೇಷಣೆಯಲ್ಲಿ ನಿರತರಾದರು.

    ಹಲವು ದಿನಗಳ ಅನ್ವೇಷಣೆಯ ನಂತರ ಆ ಕಬ್ಬಿಣದ ಮೊಳೆ ಮಾರಾಟ ಮಾಡಿದವನ ಕಂಡುಹಿಡಿದರು. ಆ ಕಬ್ಬಿಣದ ಮೊಳೆಯ  ವಿವರ ಕೇಳಿದಾಗ ಅವನು....

    *"ನನಗದು ಆ ಖಬರಿನ ಒಳ ಭಾಗದಿಂದ ಸಿಕ್ಕಿದ್ದು, ಈ ರೀತಿಯ ಹಲವು ಮೊಳೆಗಳು ಮನುಷ್ಯನ ಮೂಳೆಗಳಲ್ಲಿ ಹೊಡೆಯಲಾಗಿತ್ತು, ನಾನು ಆ ಮೂಳೆಯನ್ನು ಹುಡಿಮಾಡಿ ಈ ಮೊಳೆಯನ್ನು ಹೊರತೆಗೆದಿದ್ದೇನೆ. ಎಂದರು"*.

     ಈಗೆ ಹಲವಾರು ಖಬರಿನಲ್ಲಿ ಕಬ್ಬಿಣದ ಮೊಲೆಗಳು, ಕಬ್ಬಿಣದ ಗುಂಡು ಆಕ್ರೃತಿಯ ವಸ್ತುಗಳನ್ನು ಕಂಡವರ ಬಗ್ಗೆ, ಇತಿಹಾಸ ಗ್ರಂಥಗಳಲ್ಲಿ ನಾವು ಕಾಣಬಹುದು..

     ಕೆಲವು ಪುರಾತನ  ಖಬರಿನಲ್ಲಿ, ಮೃತದೇಹವನ್ನು   ಕಿಬ್ಲಾ (ಮಕ್ಕಾ ಕಡೆಗೆ) ತಿರುಗಿಸಿದ್ದನ್ನು, ಅದಲು ಬದಲು ರೂಪದಲ್ಲಿ ಮಲಗಿಸಿದ ಚರಿತ್ರೆಗಳು ಕಂಡವರಿದ್ದಾರೆ.

     ನೋಡಿ ಸಹೋದರರೆ ಅಹಂಕಾರ ಅನ್ಯಾಯ ಅಕ್ರಮ ಎಸಗುವವರು, ಖಬರಿನಲ್ಲಿ ನೀಡುವ ಶಿಕ್ಷೆಯ ಬಗ್ಗೆ ನಂಬಿಕೆ ಇಲ್ಲದವರು,  ಈ ಚರಿತ್ರೆಯಿಂದ ಪಾಠ ಕಳಿಯಬೇಕಾಗಿದೆಯಲ್ಲವೇ...

      _ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳು ಹಲವು ಸ್ವಹಾಬಿಗಳು ಕಣ್ಣಾರೆ ಕಂಡಿದ್ದಾರೆ.  ಇದರ ಮುಂದುವರಿದ ಭಾಗ ನಾಳೆ...._

- *ಮುಂದುವರಿಯುವುದು*

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ