ಅದು ಅದ್ಭುತಗಳ ಗೂಡು"* *_ಊಹಿಸಲಾಗದ ಸತ್ಯ....!!* ಭಾಗ 2
*﷽*
*ಭಾಗ - 0⃣2⃣*
ಅಲೀ ರ.ಅ ಜನರಿಗೆ ಮೂರು ಕಾರ್ಯಗಳನ್ನು ವಿವರಿಸುತ್ತಿದ್ದರು.
1) ನೀವು ಖಬರ್ ಸ್ಥಾನವನ್ನು ಸಂದರ್ಶಿಸಿರಿ, ಅದು ನಿಮಗೆ ಪರಲೋಕದ ಬಗ್ಗೆ ಚಿಂತೆ ಮೂಡಿಸುತ್ತದೆ.
2) ನೀವು ಯಾರಾದರೂ ಮರಣ ಹೊಂದಿದರೆ ಅವರ ಮಯ್ಯತ್ ಸ್ಥಾನವನ್ನು ನಿರ್ವಹಿಸಲು ಮುಂಚೂಣಿಯಲ್ಲಿರಿ, ಅದು ನಿಮ್ಮ ಹೃದಯದಲ್ಲಿ ಬದಲಾವಣೆ ಉಂಟುಮಾಡುತ್ತದೆ.
3) ನೀವು ಮಯ್ಯತ್ ನಮಾಝಿಗೆ ನೇತೃತ್ವ ವಹಿಸಿರಿ, ಅದರಿಂದ ನಿಮ್ಮ ಮನಸ್ಸಿಗೆ ನೋವು ಉಂಟಾಗಲಿದೆ. ಮನಸ್ಸಿನಲ್ಲಿ ದುಃಖಿತನಾದವನಿಗೆ ಮಹ್ಶರದ ಚಿಂತೆ ಹೆಚ್ಚಾಗಲಿದೆ.
ಖಬರ್ ಜೀವನದ ಬಗ್ಗೆ ಹತ್ತಾರು ವಿವರಗಳನ್ನು ಪ್ರವಾದಿ ಮುಹಮ್ಮದ್ ಸ.ಅ ರವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವುಗಳೆಂದರೆ.. ಮಯ್ಯತ್ತಿನ ವಸ್ತ್ರ ಉತ್ತಮಗೊಳಿಸಿರಿ, ಅವರ ಆಗ್ರಹಗಳನ್ನು ತ್ವರಿತವಾಗಿ ಈಡೇರಿಸಿರಿ, ಖಬರ್ ಆಳವಾಗಿ ತೋಡಿರಿ, ಉತ್ತಮ ವ್ಯಕ್ತಿಗಳ ಖಬರನ್ನು ಕೆಟ್ಟ ವ್ಯಕ್ತಿಗಳ ಖಬರಿನ ಹತ್ತಿರ ದಫನ ಮಾಡಬೇಡಿ. ಇತ್ಯಾದಿ....
ಮರಣಾ ನಂತರ ಖಬರಿನಲ್ಲೇ ಕೆಟ್ಟವನಿಗೆ ಶಿಕ್ಷೆ, ಉತ್ತಮನಿಗೆ ಆರಾಮದಾಯಕ ಜೀವನವು ಶುರುವಾಗಲಿದೆ. ಖಬರಿನಲ್ಲಿ ಬರುವ ಮಲಕ್ ಗಳ ಪ್ರಶ್ನೋತ್ತರವು ಅದನ್ನು ನಿರ್ಣಯಿಸಲಿರುದಲ್ಲವೇ...!!
ಖಬರಿನ ಶಿಕ್ಷೆಯು ಮನುಷ್ಯನಿಗೆ ಕಾಣುದಿಲ್ಲವಾದರೂ ಕೆಲವೊಮ್ಮೆ ಪ್ರಾಣಿಗಳಿಗೆ ಅದು ಕೇಳಲ್ಪಡುವುದು ಎಂದು ಪ್ರವಾದಿ ಸ.ಅ ರವರು ತಿಳಿಸಿದ್ದಾರೆ.
ಪ್ರತೀ ದಿನವು ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರು ಪಜರ್ ನಮಾಝಿನ ಬಳಿಕ ಸ್ವಹಾಬಿಗಳೊಂದಿಗೆ ಕೇಳುತಿದ್ದರೂ. "ಇವತ್ತು ಯಾರಿಗಾದರೂ ಕನಸು ಕಂಡಿದೆಯೇ.. ? ಎಂದು" ಸ್ವಹಾಬಿಗಳಲ್ಲಿ ಕೆಲವರು ಇಲ್ಲ ಎಂದು ಉತ್ತರಿಸುತಿದ್ದರು. ಕೆಲವರು ಕಂಡ ಕನಸನ್ನು ವಿವರಿಸುತಿದ್ದರು.
ಒಂದು ದಿನ ಫಜರ್ ನಮಾಜಿನ ಬಳಿಕ ನೆಬಿ ಸ.ಅ ರವರು ತನಗೆ ಕಂಡ ಕನಸನ್ನು ಈ ರೀತಿ ವಿವರಿಸುತ್ತಾರೆ.
ನನ್ನನ್ನು ಎರಡು ವ್ಯಕ್ತಿಗಳು ಅಲ್ಲಾಹನ ಪವಿತ್ರ ಭೂಮಿ ಬೈತುಲ್ ಮುಕದ್ದಸಿನ ಬಳಿಗೆ ಕರೊದುಕೊಂಡು ಹೋದರು. ಅಲ್ಲಿ ಒಬ್ಬರನ್ನು ಕಟ್ಟಿಹಾಕಲಾಗಿತ್ತು ಅವರ ದೇಹವನ್ನು ಕಬ್ಬಿನದ ಸಂಕೊಲೆ ಬಳಸಿ ಮೊಗ ಹಾಗೂ ಬೆನ್ನಿನ ಭಾಗವನ್ನು ಸೀಳಿ ಹಾಕಲಾಗುತಿತ್ತು. ನಾನು ಅವರ ಬಳಿ ಅದರ ವಿವರಣೆ ಕೇಳಿದಾಗ ವಿವರಣೆ ನೀಡದೆ ನನ್ನನ್ನು ಮುಂದೆ ಕರೆದುಕೊಂಡು ಹೋದರು. ಆಗ ಅಲ್ಲಿ ಇನ್ನೊಬ್ಬನ ತಲೆಯನ್ನು ಕಲ್ಲಿನಿಂದ ಜಜ್ಜಿ ಹಾಕಲಾಗುತಿತ್ತು. ಅದರ ಬಗ್ಗೆಯೂ ವಿವರಣೆ ನೀಡದೆ ಮುಂದೆ ಕರೆದುಕೊಂಡು ಹೋದರು. ಆಗ ಅಲ್ಲಿ ಒಂದು ಬೃಹತ್ ಗಾತ್ರದ ಬೆಂಕಿ ಹೊತ್ತಿ ಉರಿಯುತಿತ್ತು. ಅದರ ಕೆಲಭಾಗದಲ್ಲಿ ಗಂಡಸರು ಹಾಗೂ ಹೆಂಗಸರು ಸುಟ್ಟುಹೋಗುತಿದ್ದರು. ಅವರು ರಕ್ಷಣೆಗಾಗಿ ಅರುಚುತಿದ್ದರು. ಅವರ ಬಟ್ಟೆ ಕಳಚಲಾಗಿತ್ತು. ಅದರ ಬಗ್ಗೆಯೂ ವಿವರಣೆ ನೀಡದೆ ಮುಂದೆ ಕರೆದುಕೊಂಡು ಹೋದರು. ಅಲ್ಲಿ ಒಂದು ಕೆಂಪು ಬಣ್ಣದ ನದಿ ಹರಿಯುತಿತ್ತು. ಆ ನದಿಯಲ್ಲಿ ಓರ್ವ ಈಜಿ ದಡ ಸೆರಲು ಯತ್ನಿಸುತಿದ್ದ, ಆದರೆ ಅವನನ್ನು ಆ ನದಿಯ ದಡ, ದಡ ಸೇರಿಸದೆ, ನದಿಯ ಮಧ್ಯ ಭಾಗಕ್ಕೆ ತಳ್ಳಿ ಹಾಕುತಿತ್ತು. ಅದರ ವಿವರಣೆಯೂ ನೀಡದೆ ಇನ್ನೂ ಸ್ವಲ್ಪ ಮುಂದೆ ನಡೆದರು.. ಆಗ ಅಲ್ಲಿ ಒಂದು ಹಸಿರು ಫಲವತ್ತಾದ ಮರದ ಕೆಳಗೆ ಓರ್ವ ವೃದ್ಧರು ಕೆಲವು ಮಕ್ಕಳೊಂದಿಗೆ ಕುಳಿತಿದ್ದರು. ಅದರ ಪಕ್ಕದಲ್ಲಿ ಮನಮೋಹಕ ಮನೆಗಳು ಕಾಣುತಿತ್ತು. ಅದರ ಪಕ್ಕದಲ್ಲಿ ಅದಕ್ಕಿಂತಲೂ ಮನೋಹರವಾದ ಮನೆಗಳು ಗೋಚರಿಸುತಿತ್ತು. ಇದರ ಬಗ್ಗೆ ವಿವರಣೆ ಕೇಳಿದಾಗ ಮುಂದೆ ಕರೆದುಕೊಂಡು ಹೋಗಲು ತಯಾರಾದರು. ಆಗ ನೆಬಿ. ಸ.ಅ ಹೇಳಿದರು "ಇಲ್ಲ ಇವತ್ತು ನಾವು ಹಲವು ಪ್ರದೇಶಗಳನ್ನು ಸಂದರ್ಶಿಸಿದೆವು ಇದರ ಬಗ್ಗೆ ವಿವರಣೆ ನೀಡಿ" ಎಂಬ ಮಾತಿಗೆ ಅವರು ಉತ್ತರಿಸುತ್ತಾ....
ಪ್ರವಾದಿಯವರೇ ನೀವು ಮೊದಲು ಕಂಡ ಮನುಷ್ಯ...
- *ಮುಂದುವರಿಯುವುದು*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1
Comments
Post a Comment