ಅದು ಅದ್ಭುತಗಳ ಗೂಡು"* *_ಊಹಿಸಲಾಗದ ಸತ್ಯ....!! ಭಾಗ - 5
ಒಂದು ದಿನ ಅಬ್ದುಲ್ಲಾ ಇಬ್ನ್ ಉಮರ್ ರ.ಅ ರವರು ಕುದುರೆಯ ಮೇಲೆ ಮಕ್ಕಾ ಹಾಗೂ ಮದೀನಾದ ನಡುವೆ ಯಾತ್ರೆ ಹೊರಟಿದ್ದರು. ದಾರಿ ಮಧ್ಯೆ ಒಂದು ಖಬರ್ ಸ್ಥಾನವು ಇತ್ತು. ಆ ಖಬರ್ ಸ್ಥಾನ ಮಧ್ಯೆ ಒಂದು ಖಬರಿನೊಳಗಿನಿಂದ ಮೃತದೇಹ ಹೊರಗೆ ಬಂದಿತ್ತು. ಆ ಮೃತದೇಹದ ಕುತ್ತಿಗೆಯನ್ನು ಸಂಕೊಲೆ ಬಿಗಿದಿತ್ತು, ಜತೊಗೆ ಮೈತುಂಬ ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು. ಅದೇ ದಾರಿಯಲ್ಲಿ ಸಾಗುತ್ತಿದ್ದ ಅಬ್ದುಲ್ಲಾ ಇಬ್ನ್ ಉಮರ್ ರವರನ್ನು ಕಂಡ ಆ ವ್ಯಕ್ತಿ ಓಡಿ ಬಂದು...
*"ಓ ಅಬ್ದುಲ್ಲಾರವರೇ... ದಯವಿಟ್ಟು ನನ್ನನ್ನು ರಕ್ಷಿಸಿ, ನನ್ನ ಮೇಲಿನ ಬೆಂಕಿಯನ್ನು ನಂದಿಸಿ"* ಎಂದು ಬೇಡಿಕೊಂಡರು.
ಕೂಡಲೇ ಅಬ್ದುಲ್ಲಾ ಇಬ್ನ್ ಉಮರ್ ರ.ಅ ರವರು ನೀರು ಎರಚಿ ಬೆಂಕಿ ನಂದಿಸಲು ಹೊರಟರು...
ಆಗ ಹಿಂದಿನಿಂದ ಓರ್ವ ಅಪರಿಚಿತ ವ್ಯಕ್ತಿ ಬಂದು ಈ ರೀತಿ ಹೇಳಿದರು *"ಓ.. ಅಬ್ದುಲ್ಲಾರವರೆ ಬೆಂಕಿ ನಂದಿಸಬೇಡಿ, ಅದು ಹೊತ್ತಿ ಉರಿಯಲಿ"* ಎಂದರು.
ಈ ಎಲ್ಲಾ ಘಟನೆಯನ್ನು ಕಣ್ಣಾರೆ ಕಂಡ ಅಬ್ದುಲ್ಲಾ ಇಬ್ನ್ ಉಮರ್ ರ.ಅ ಚಂಚಲ ಮನಸ್ಸಿನಿಂದಲೇ ಅಲ್ಲಿಂದ ಹಿಂತಿರುಗಿದರು.
ಆ ಸಮಯದಲ್ಲಿ ಮದೀನದಲ್ಲಿ ಖಲೀಫ ಉಸ್ಮಾನ್ ಇಬ್ನು ಅಫ್ವಾನ್ ರ.ಅ ರವರು ಆಡಳಿತ ನಡೆಸುತ್ತಿದ್ದರು. ಅಲ್ಲಿ ನಡೆದ ಘಟನೆಯನ್ನು ಅಬ್ದುಲ್ಲಾ ಇಬ್ನು ಉಮರ್ ರ.ಅ ನೇರವಾಗಿ ಬಂದು ಖಲೀಫರಿಗೆ ತಿಳಿಸಿದರು. ಘಟನೆಯ ಗಂಭೀರತೆ ಅರಿತ ಖಲೀಫರು ಮಕ್ಕಾ ಹಾಗೂ ಮದೀನಾದ ನಡುವಿನ ಒಂಟಿ ಯಾತ್ರೆಯನ್ನು ನಿಷೇಧಗೊಳಿಸಿದರು.
*"ನನ್ನ ಆಡಳಿತದಲ್ಲಿ ಮಕ್ಕಾ ಹಾಗೂ ಮದೀನಾದ ನಡುವೆ ಯಾರೂ ಒಬ್ಬಂಟಿಯಾಗಿ ಯಾತ್ರೆ ಮಾಡಬಾರದು ಎಂದು ಆಜ್ಞಾಪಿಸಿದರು*..
ಈ ರೀತಿಯ ಹಲವು ಘಟನೆಗಳು ನೆಬಿ ಸ.ಅ ರವರ ಹಾಗೂ ಅವರ ನಂತರದ ದಿನಗಳಲ್ಲಿ ನಡೆದಿದೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾದರೂ ಆಧುನಿಕ ದಿನಗಳಲ್ಲಿ ಆಡಂಬರ, ವಂಚನೆ, ಅಕ್ರಮ ಅನ್ಯಾಯವ ಮೈಗೂಡಿಸಿ ಈ ಜಗತ್ತಿನಲ್ಲಿ ಮೆರೆಯುವ ವ್ಯಕ್ತಿಗಳು ಮನವರಿಕೆ ಮಾಡಿಕೊಳ್ಳಬೇಕು.
_ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳು ಹಲವು ಸ್ವಹಾಬಿಗಳು ಕಣ್ಣಾರೆ ಕಂಡಿದ್ದಾರೆ. ಇದರ ಮುಂದುವರಿದ ಭಾಗ ನಾಳೆ...._
- *ಮುಂದುವರಿಯುವುದು*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1
Comments
Post a Comment