ಅದು ಅದ್ಭುತಗಳ ಗೂಡು"* *_ಊಹಿಸಲಾಗದ ಸತ್ಯ....!!* ಭಾಗ 4

Allah says :
"Kullu nafsin zaikatul maut"
means – "Every soul shall taste death"
          - (surah 3: verse 185).

     ಮರಣವು ಮನುಷ್ಯನಿಗೆ ಕಟ್ಟಿಟ್ಟ ಬುತ್ತಿ. ಮನುಷ್ಯನ ದೇಹವನ್ನಾದರೂ ಅಲ್ಲಾಹು ಶಾಶ್ವತವಾಗಿ ಇಟ್ಟರೂ, ರೂಹ್ ಅಥವಾ ಆಯುಷ್ಯ ಮಾತ್ರ ಅವರವರ ವಿಧಿಬರಹದ ಅನುಸಾರವಾಗಿರುತ್ತದೆ.   ಕೆಲವು ಇಸ್ಲಾಂ ಪಂಡಿತ ಶಿರೋಮಣಿಗಳ ಮರಣವು ವ್ಯತ್ಯಸ್ಥವಾಗಿ ನಡೆದದ್ದು, ಬಹಳಾ ಅಚ್ಚರಿ ಮೂಡಿಸುವಂತಹದ್ದು.
ಪ್ರವಾದಿಯವರ ಹಾಗೂ ನಂತರದ ಪಂಡಿತರ ಅಥವಾ ಅದಕ್ಕಿಂತಲೂ ಮುಂದೆ ಬಂದು ಹೋದ ಹಲವು ಪ್ರವಾದಿಗಳ ಪಾಲಿಗೆ ಅಲ್ಲಾಹನು ಮರಣವನ್ನು ಬಹಳಾ ಅಚ್ಚುಕಟ್ಟಾಗಿ ನಿರ್ವಹಿಸಿ ಕೊಟ್ಟಿದ್ದಾನೆ. ಶಹಾದತ್ ಕಲಿಮ,  ಪಾರತ್ರಿಕ ಲೋಖದ ದರ್ಶನ, ಸುಬಹ್ ನಮಾಝಿನ ನಂತರದ ಮರಣ, ಅಲ್ಲಾಹನ ಮಲಾಇಕತ್ ಗಳ ನೇತೃತ್ವ, ಸುಗಂಧ ಭರಿತ ಪ್ರದೇಶದಲ್ಲಿ ಹೀಗೇ ಹಲವಾರು ವ್ಯತ್ಯಸ್ಥ ಅನುಭವಗಳು ಹಲವು ಗ್ರಂಥಗಳಲ್ಲಿ ಕಾಣಬಹುದು.

    ಒಂದು ದಿನ ಮುಹಮ್ಮದ್ ವಝೀಝುಲ್ ರಹ್ಮಾನಿ ರಹ್ಮವುಳ್ಳಾ ರವರು ಖುರಾಸಾನ್ ಪ್ರದೇಶದ ಆಮದ್ ಎಂಬಲ್ಲಿ ಜೀವಿಸುತಿದ್ದರು. ತನ್ನ ಮನೆಯ ಸಮೀಪ ಇರುವ ತೋಟದ ಮಧ್ಯ ಭಾಗದಲ್ಲಿ ಹಾದು ಹೊದಾಗ, ಸಿಗುವ ಖಬರ್ ಸ್ಥಾನದ ಬಳಿ ಸೂರ್ಯಾಸ್ತದ ವೇಳೆಯಲಿ ವಿಶ್ರಾಂತಿ ಪಡೆಯುತಿದ್ದರು. ಸ್ವಲ್ಪ ಸಮಯದ ಬಳಿಕ ಆ ಖಬರ್ ಸ್ಥಾನ ಒಂದು ಖಬರಿನ ಒಳ ಭಾಗದಿಂದ ಬೆಂಕಿಯ ಜ್ವಾಲೆಯು ಚಿಮ್ಮುತ್ತಾ ಹೊತ್ತಿ ಉರಿಯುತಿತ್ತು. ಇದನ್ನು ಊಹಿಸಲೂ ಅವರಿಗೆ ಅಸಾಧ್ಯವಾಯಿತು. ತಾನು ಕನಸು ಕಾಣುತ್ತಿದ್ದೇನೆಯೇ ಎಂದು ಭಾಸವಾಗತೊಡಗಿತು. ಅದು ಅಷ್ಟು ಭೀಕರತೆಯೂ ಭಯವೂ ಸೃಷ್ಟಿಸಿತು. ಇದನ್ನೆಲ್ಲಾ ಕಣ್ಣಾರೆ ಕಂಡ ಅವರು ಕೂಡಲೇ ಅಲ್ಲಿಂದ ಕಾಲ್ಕಿತ್ತು ಮನೆಗೆ ತೆರಳಿದರು.

   ಮನೆಯಲ್ಲಿ ಮಡದಿಯು ಊಟ ಬಡಿಸಿಟ್ಟಿದ್ದರು, ಆದರೆ ಭೀಕರ ದೃಷ್ಯವನ್ನು ಕಣ್ಣಾರೆ ಕಂಡ ಅವರಿಗೆ ಊಟ ಹೊಟ್ಟೆ ಸೇರಲೇ ಇಲ್ಲ. ಆ ದಿನ ರಾತ್ರಿ  ಅವರಿಗೆ ನಿದ್ದೆಯೂ ಬರಲಿಲ್ಲ.   ಮರುದಿನ ಬೆಳಿಗ್ಗೆ ಆ ಪ್ರದೇಶದತ್ತ ಕಣ್ಣು ಹಾಯಿಸಿದಾಗ ಅಲ್ಲಿ ಶಾಂತವಾಗಿತ್ತು. ಈ ವಿಚಿತ್ರತೆಯನ್ನು ಕಣ್ಣಾರೆ ಕಂಡ ಮೊಹಮ್ಮದ್ ವಝೀಝುಲ್ ರಹ್ಮಾನಿ ರಹ್ಮವುಳ್ಳಾ ರವರು ಊರಿನ ಜನರ ಬಳಿ ಆ ಖಬರ್ ಯಾರದ್ದು ಎಂದು ಪ್ರಶ್ನಿಸಿದರು.

   ಪ್ರಶ್ನೆಗೆ ಉತ್ತರಿಸಿದ ಪರಿಸರ ನಿವಾಸಿಗಳು *"ಅದು ಓರ್ವ ವ್ಯಾಪಾರಸ್ಥರ ಖಬರ್ ಆಗಿದೆ, ಅವರು ಕಲಪೆ ಮಟ್ಟದ ವಸ್ತುಗಳನ್ನು ಮಾರಾಟ ಮಾಡಿ ಜನರನ್ನು ವಂಚಿಸುತಿದ್ದರು. ಅವರ ವ್ಯಾಪಾರದಲ್ಲಿ ವಂಚನೆಯು ಬಹಳಾ ಅಧಿಕವಾಗಿತ್ತು".*

      ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳು ಹಲವು ಸ್ವಹಾಬಿಗಳು ಕಣ್ಣಾರೆ ಕಂಡಿದ್ದಾರೆ.  ಇದರ ಮುಂದುವರಿದ ಭಾಗ ನಾಳೆ....

- *ಮುಂದುವರಿಯುವುದು*

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ