ಅದು ಅದ್ಭುತಗಳ ಗೂಡು". ಊಹಿಸಲಾಗದ ಸತ್ಯ..!! ಭಾಗ - ೧
*"ಅದು ಅದ್ಭುತಗಳ ಗೂಡು"*
_ಊಹಿಸಲಾಗದ ಸತ್ಯ....!! ಭಾಗ - ೧_
■ಅಸ್ಸಲಾಂ ಅಲೈಕುಂ
ಸಹೋದರರೆ.
ಈ ಭೂಮಿಯು ಹಲವು ವಿಸ್ಮಯ, ಅಗೋಚರಗಳು ಸಂಭವಿಸುವ ಒಂದು ಕೇಂದ್ರ. ಮನುಷ್ಯನಿಗೆ ಈ ಭೂಮಿಯು ಜೀವನದಲ್ಲೂ ಮತ್ತು ಮರಣಾ ನಂತರವೂ ಒಂದು ಪರೀಕ್ಷಣಾ ಕೇಂದ್ರ. ಜೀವನದಲ್ಲೂ, ಖಬರಿನಲ್ಲೂ ಅವನಿಗೆ ಹೊಸ ಹೊಸ ಅನುಭವಗಳು, ಅವನಿಗಿರುವ ಶಿಕ್ಷೆಗಳು ಬಹಳಾ ಚಿತ್ರ ವಿಚಿತ್ರವಾದದ್ದು. ಇದು ಅವನ ಮಹ್ಶರ ಜೀವನವನ್ನು ನಿರ್ಧರಿಸುತ್ತದೆ.
ಖಬರಿನಲ್ಲಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳು, ಮರಣಾ ನಂತರ ನಡೆಯುವ ಕೆಲವು ವಿಸ್ಮಯಕಾರಿ ಘಟನೆಗಳನ್ನು, ನನಗರಿವ ಹಾಗೂ ನಾ ಅರಿತ ಕೆಲ ವಿವರಗಳನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ. ಇಂಶಾ ಅಲ್ಲಾ...
ನಮ್ಮ ದಿನವಹಿ ಅಥವಾ ಪ್ರಾರ್ಥನಾ ವೇಳೆಯಲ್ಲೂ ನಮಗೆ ಬರಲಿರುವ ಖಬರ್ ಶಿಕ್ಷೆಯ ವಿಮೋಚನೆಗಾಗಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ. ಖಬರ್ ಜೀವನ ವಿವರಿಸಲಾಗದ ಪದ. ಖಬರಿನಲ್ಲಿ ಉಂಟಾಗುವ ಅದ್ಭುತಗಳು ಕೆಲವು ಚರಿತ್ರೆಗಳಲ್ಲಿ ಉಲ್ಲೇಖವಾದರೆ ಇನ್ನು ಕೆಲವು ಸ್ವಹಾಬಿಗಳ ನಿಜ ಜೀವನದಲ್ಲಿ ಕಂಡು ಅದನ್ನು ವಿಶ್ಲೇಷಿಸಿ, ಅದರ ಬಗ್ಗೆ ಪ್ರವಾದಿ ಸ.ಅ ರವರಲ್ಲಿ ವಿವರಗಳನ್ನು ಅರಿತು ತಮ್ಮ ಖಿತಾಬ್ ಗಳಲ್ಲಿ ಉಲ್ಲೇಖಿಸಿದ್ದಾರೆ.
ಉಮರ್ ಇಬ್ನು ಅಬ್ದುಲ್ ಅಝೀಝ್ ರ.ಅ ರವರು ಮರಣ ಹೊಂದಿದ ನಂತರ ಅವರ ಮಯ್ಮತ್ ಖಬರಿನಲ್ಲಿ ದಫನ್ ಮಾಡಲು ಖಬರ್ ಸ್ಥಾನಕ್ಕೆ ಕೊಂಡು ಹೋಗಲಾಯಿತು. ಆ ಸಂದರ್ಭದಲ್ಲಿ ವಿಪರೀತ ಮಳೆ ಬರುತಿತ್ತು. ಅಲ್ಲಿ ನೆರೆದಿದ್ದ ಜನರಿಗೆ ಖಬರಿನ ಭಾಗದಲ್ಲಿ ಒಂದು ಬಿಳಿ ಬಣ್ಣದ ಬಟ್ಟೆ ದೊರಕಿತು. ಆ ಬಟ್ಟೆಯಲ್ಲಿ ಪ್ರಕಾಶಯುಕ್ತ ಬೆಳಕಿನಿಂದ ಈ ರೀತಿ ಬರೆಯಲಾಗಿತ್ತು, "ಬಿಸ್ಮಿಲ್ಲಾಹಿ ರಹ್ಮಾನಿ ರಹೀಂ.. ಉಮರ್ ಇಬ್ನು ಅಬ್ದುಲ್ ಅಝೀಝ್ ಎಂಬವರ ದೇಹವನ್ನು ನರಕವು ಮುಟ್ಟುವುದಿಲ್ಲ" (ಅರಬಿಕ್ ಬರಹವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ).
ಇದನ್ನು ಕಂಡ ಅಲ್ಲಿನ ಜನರು ಕುತೂಹಲದಿಂದಲೇ ಆ ಬರಹದ ಬಟ್ಟೆಯ ತುಂಡಿನೊಂದಿಗೆ ಉಮರ್ ಇಬ್ನು ಅಬ್ದುಲ್ ಅಝೀಝ್ ರ.ಅ ಜನಾಝ ದಫನ ಮಾಡಲಾಯಿತು...
ಇದು ವಿಸ್ಮಯಕಾರಿ ಸತ್ಯ...
- ಮುಂದುವರಿಯುವುದು..
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
Comments
Post a Comment