ಅದು ಅದ್ಭುತಗಳ ಗೂಡು" _ಊಹಿಸಲಾಗದ ಸತ್ಯ....!! ಭಾಗ 3
*﷽*
*ಭಾಗ - 0⃣3⃣*
ಪ್ರವಾದಿಯವರಿಗೆ ಕನಸಿನಲ್ಲಿ ಬಂದಂತಹ ಎರಡು ಜನರು ಕೆಲವು ವಾಸ್ತವತೆಯನ್ನು ತೋರಿಸುಕೊಡುತ್ತಿದ್ದರು. ಇದರ ವಿವರಣೆಗೆ ಪ್ರವಾದಿ ಸ.ಅ ಭೇಡಿಕೆ ಇಟ್ಟಾಗ,, ಆ ಎರಡು ಜನರು....
ಪ್ರವಾದಿಯವರೇ ನೀವು ಮೊದಲು ಕಂಡಂತಹ ಕಬ್ಬಿಣದ ಸಂಕೋಲೆಗಳಿಂದ ಬಂದಿಸಿ ಮುಖ ಹಾಗೂ ಬೆನ್ನಿನ ಭಾಗ ಸೀಳಿ ಹಾಕುತಿದ್ದರಲ್ಲವೇ... ಆ ಶಿಕ್ಷೆಗೆ ಒಳಪಟ್ಟ ಮನುಷ್ಯ... ಮಹಾ ಸುಳ್ಳುಗಾರ. ಒಂದು ಸುಳ್ಳಿನ್ನು ಇಡೀ ಪ್ರದೇಶಕ್ಕೆ ಹರಡುವವನಾಗಿದ್ದಾನೆ.
ಸ್ವಲ್ಪ ಮುಂಚೆ ಸಂಚರಿಸಿದಾಗ ತಲೆಗೆ ಕಲ್ಲಿನಿಂದ ಜಜ್ಜಲ್ಪಡುತಿದ್ದ ಮನುಷ್ಯನು, ಕುರಾನ್ ಹಾಗೂ ಇಸ್ಲಾಮಿಕ್ ವಿಧ್ಯಾಭ್ಯಾಸ ಬಲ್ಲವನಾಗಿದ್ದೂ, ಇಸ್ಲಾಂ ಧಾರ್ಮಿಕತೆಯನ್ನು ಯಾರಿಗೂ ಪರಿಚಯಿಸದೆ ದೂರವಿರುವವನಾಗಿದ್ದಾನೆ.
ಮೂರನೆಯದಾಗಿ ನೀವು ಕಂಡ, ಬೆಂಕಿಯಲ್ಲಿ ಬಿದ್ದು ನರಳುತ್ತಿರುವ ಜನ ಸಮೂಹವು, ಅದು ವ್ಯಭಿಚಾರಿಗಳ ಗುಂಪಾಗಿದೆ. ಅನ್ಯ ಸ್ತ್ರೀಯರು ಹಾಗೂ ಅನ್ಯ ಪುರುಷರೊಂದಿಗೆ ಸಂಗ ಹೊಂದಿ, ಕಾಮ ಮೋಹವು ತೀರಿಸಿಕೊಳ್ಳುವ ಜನರಾಗಿದ್ದಾರೆ.
ನಾಲ್ಕನೇಯದಾಗಿ ಕೆಂಪು ಬಣ್ಣದ ನದಿಯನ್ನು ದಡ ಸೇರಲಾಗದೆ, ಚಡಪಡಿಸುತ್ತಿದ್ದ ಮನುಷ್ಯನನ್ನು ನೋಡಿದ್ದೀರಲ್ಲವೇ... ಅವನು ಬಡ್ಡಿ ವ್ಯವಹಾರದಲ್ಲಿ ನಿರತನಾದವನು, ಬಡ್ಡಿ ವ್ಯವಹಾರದಲ್ಲಿ ಪಾಲುದಾರನಾಗಿ, ಬಡ್ಡಿ ವ್ಯವಹಾರದಿಂದ ಜೀವನೋಪಾಯ ನಡೆಸುವವನಾಗಿದ್ದಾನೆ.
ಒಂದು ಹಸಿರು ಮರದ ಕೆಳಗೆ ಒಂದು ವೃದ್ದ ಮನುಷ್ಯರು ಮತ್ತು ಹಲವು ಮಕ್ಕಳನ್ನು ಕಂಡಿರಲ್ಲವೇ... ಆ ಮಕ್ಕಳು ಸಣ್ಣ ಪ್ರಾಯದಲ್ಲಿ ಮರಣ ಹೊಂದಿದ ಮಕ್ಕಳಾಗಿದ್ದಾರೆ. ಅವರ ಬಳಿ ಇರುವ ಆ ವೃದ್ದ ಮನುಷ್ಯರು ಇಬ್ರಾಹಿಂ ನೆಬಿ ಅ.ಸ ರವರಾಗಿದ್ದಾರೆ. ಸಣ್ಣ ಪ್ರಾಯದಲ್ಲೇ ಮರಣ ಹೊಂದಿದ ಮಕ್ಕಳನ್ನು ಅವರು ಸಂರಕ್ಷಣೆ ಮಾಡುತಿದ್ದಾರೆ. ಅದರ ಬಳಿ ಇದ್ದ ಸುಂದರ ಮನೆ ಅದು, ಸತ್ಯ ವಿಸ್ವಾಸಿಗಳ ಮನೆಯಾಗಿದೆ. ಅದರ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಮನಮೋಹಕ ಮನೆ ಕಂಡಿದ್ದೀರಲ್ಲವೇ.. ಅದು ಶುಹದಾಗಳ ಮನೆಯಾಗಿದೆ.
ನೀವು ಸ್ವಲ್ಪ ತಲೆಯೆತ್ತಿ ನೋಡಿ, ಮೋಡದ ಎಡೆಯಿಂದ ಒಂದು ಸುಂದರ ಅತ್ಯಾಕರ್ಷಕ ಮನೆ ಕಾಣುವುದಿಲ್ಲವೇ.. ಅದು ನಿಮ್ಮ ಮನೆಯಾಗಿದೆ. ನಿಮ್ಮ ಭೂ ಲೋಕ ಜೀವನದ ಬಳಿಕ ಇಲ್ಲಿ ವಾಸ್ಥವ್ಯ ಹೂಡಲಿದ್ದೀರಿ ಎಂದರು...
ನಂತರ ನೆಬಿ ಸ.ಅ ರವರಿಗೆ ಇದನ್ನೆಲ್ಲ ಪರಿಚಯಿಸಿದ ಅವರಿಬ್ಬರನ್ನು ಪರಿಚಯಿಸಲಾಯಿತು..
ನಾನು ಜಿಬ್ರೀಲ್ ಅ.ಸ ಮತ್ತು ಅವರು ಮೀಕಾಯಿಲ್ ಅ.ಸ ಎಂದರು..
ಇದು ನೆಬಿ ಸ.ಅ ರವರಿಗೆ ಕನಸಿನಲ್ಲಿ ಕಂಡ ಪಾರತ್ರಿಕ ಲೋಕದ ಜೀವನ ಹಾಗೂ ಶಿಕ್ಷೆಯನ್ನು ಸ್ವಹಾಬಿಗಳ ಮುಕಾಂತರ ಈ ಮುಸ್ಲಿಂ ಉಮ್ಮತಿಗೆ ಕಲಿಸಿಕೊಟ್ಟಿದ್ದಾರೆ..
- *ಮುಂದುವರಿಯುವುದು*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1
Comments
Post a Comment