*"ಅದು ಅದ್ಭುತಗಳ ಗೂಡು" ಊಹಿಸಲಾಗದ ಸತ್ಯ....!! ಭಾಗ - 6
ಒಂದು ದಿನ ಅಲ್ಲಾಮಾ ಅಬೀ ಗುಝ್ಹ ರ.ಅ ರವರು ಇರಾಕಿನ ಬಸರ ಎಂಬ ಪ್ರದೇಶದಲ್ಲಿ ಹಾದುಹೋಗುತಿದ್ದರು. ಅಲ್ಲಿ ಒಂದು ಕತ್ತೆ ಅಳುವ ಶಬ್ದ ವಿಪರೀತವಾಗಿ ಕೇಳುತಿತ್ತು. ಆ ಪ್ರದೇಶದ ಸುತ್ತಲೂ ಕಣ್ಣಾಯಿಸಿದರೂ ಅಲ್ಲಿ ಯಾವ ಕತ್ತೆಯೂ ಕಾಣಲಿಲ್ಲ. ಅತ್ತ ಸ್ವಲ್ಪ ದೂರದಲ್ಲಿ ಒಂದು ಖಬರ್ ಸ್ಥಾನ ಅವರ ಕಣ್ಣಿಗೆ ಕಾಣಲು ಸಿಕ್ಕಿತು. ಅದರ ಬಳಿ ತೆರಳಿದಾಗ ಆ ಕತ್ತೆಯ ಶಬ್ದ ಆ ಖಬರಿನ ಒಳಭಾಗದಿಂದ ಕೇಳಿಸುತಿತ್ತು. ಅಲ್ಲೇ ಪಕ್ಕದಲ್ಲಿದ್ದ ಓರ್ವರಲ್ಲಿ ಈ ಖಬರಿನ ಕುರಿತು ಮಾಹಿತಿ ಕೇಳಿದಾಗ ಅವರು...
    *"ಈ ಖಬರ್ ನಮ್ಮ ಊರಿನ ಓರ್ವ ಯುವಕನದ್ದಾಗಿದೆ. ಅವನು ಪ್ರತಿದಿನವೂ ತನ್ನ ತಾಯಿಯೊಂದಿಗೆ ಈ ರೀತಿ ಹೇಳುತಿದ್ದ.. ಓ.. ಅಮ್ಮಾ.. ನಿನು ಕತ್ತೆಯ ಹಾಗೆ ಮಾತನಾಡು ಎಂದು."* 
     ತದನಂತರ ಅವನ ಮರಣಾ ನಂತರ ಪ್ರತೀದಿನ ರಾತ್ರಿ ವೇಳೆಯಲ್ಲಿ ಅವನ ಖಬರಿನ ಒಳಭಾಗದಿಂದ ಈ ರೀತಿ ಶಬ್ದ ಕೇಳುತ್ತದೆ..
ನೋಡಿ ಸಹೋದರರೆ. ಹೆತ್ತ ತಾಯಿ ಹಾಗೂ ತಂದೆಯನ್ನು ಅವಹೇಳಿಸುವವರಿಗೆ ಇದೊಂದು ಪಾಠ ಅಲ್ಲವೇ... ತನ್ನನ್ನು ಕಷ್ಟಪಟ್ಟು ಓದಿಸಿ ಬೆಳೆಸಿದ ತಾಯಿಯನ್ನು ಯಾವತ್ತೂ ನೀಚವಾಗಿ ಚಿತ್ರಿಸಬಾರದು, ಇದರ ಪ್ರತಿಫಲ ಅಲ್ಲಾಹು ನಮ್ಮ ಖಬರಿನಲ್ಲಿ ನಮಗೆ ನೀಡುತ್ತಾನೆ.
*******
ಅಮ್ರು ಇಬ್ನು ದಿನಾರ್ ರ.ಅ ತನ್ನ ಒಂದು ಅನುಭವ ಕತೆ ತನ್ನ ಗ್ರಂಥದಲ್ಲಿ ತಿಳಿಸಿದರು. ಅದೇನೆಂದರೆ...
    ಒಂದು ದಿನ ಮದೀನಾದ ಪ್ರಾಂತ ಪ್ರದೇಶದ ಒಂದು ಮನೆಯಲ್ಲಿ ಓರ್ವ ಸಹೋದರಿ ಅನಾರೋಗ್ಯದಿಂದ ಬಳಲುತ್ತಿದ್ದಲು. ವಿಷಯವರಿತ ಸಹೋದರ ತನ್ನ ಸಹೋದರಿಗೆ ನೆರವಾಗಲು ಮನೆಗೆ ಬಂದ. ಕೆಲ ದಿನಗಳು ಸಹೋದರಿಗೆ ಇವನು ಆಶ್ರಯವಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವಳು ಮರಣ ಹೊಂದಿದಳು.  ಹಾಗೆ ಅವಳ ಮೃತದೇಹವನ್ನು ನೇರವಾಗಿ ಖಬರ್ ಸ್ಥಾನಕ್ಕೆ ಕೊಂಡುಹೋಗಿ ದಫನ ಮಾಡಲಾಯಿತು. ದಫನದ ನಂತರ ಎಲ್ಲರೂ ಅಲ್ಲಿಂದ ತೆರಳಿದರು. 
     ಸ್ವಲ್ಪ ಸಮಯದ ಬಳಿಕ ಆ ದಫನ್ ಮಾಡಿದ ಸಹೋದರನ ಬೆಲೆಬಾಳುವ ವಸ್ತುವೊಂದು ಕಾಣದಾಯಿತು. ಹಾಗೆ ಆ ವಸ್ತುವನ್ನು ಹುಡುಕುತ್ತಾ ಸಹೋದರಿಯ ಖಬರಿನ ಹತ್ತಿರ ಬಂದ. ಈಗಾಗಲೇ ದಫನ್ ಮಾಡಿದ್ದ ಖಬರಿನ ಮಣ್ಣು ಸರಿಸಿ ಹುಡುಕಿದ. ಆಗ ಅವನಿಗೆ ತನ್ನ ಬೆಲೆಬಾಳುವ ವಸ್ತು ಸಿಕ್ಕಿತು. ಅವನಿಗೆ ಖಬರಿನ ಒಳಗಿದ್ದ ತನ್ನ ಸಹೋದರಿಯನ್ನು ಒಮ್ಮೆ ನೋಡಬೇಕು ಎಂದು ಇರಾದೆ ಉಂಟಾಯಿತು. ತನ್ನ ಬಳಿ ಇದ್ದ ಗೆಳೆಯನ ಸಹಾಯದೊಡನೆ, ಆ ಮೃತದೇಹದ ಮೇಲಿದ್ದ ಕಲ್ಲು ಅಲ್ಪ ಸರಿಸಲಾಯಿತು, ಆಗ ಅವನಿಗೆ ಖಬರಿನ ಒಳಗಿನಿಂದ ಬೆಂಕಿ ಕಾಣಿಸಿತು. ಕೂಡಲೇ ಅವನು ಖಬರ್ ಸಹಜಸ್ಥಿತಿಯಲ್ಲಿ ಮುಚ್ಚಿ ತಾಯಿಯ ಬಳಿ ಹೋಗಿ ವಿಷಯ ತಿಳಿಸಿದ. ತಾಯಿ ತನ್ನ ಮಗಳ ಕುರಿತು ವಿವರವೇನೂ ತಿಳಿಸಲಿಲ್ಲ. ಆದರೆ ವಿವರಗಳಿಗೆ ಮಗ ಆಗ್ರಹಿಸಿದಾಗ ತಾಯಿ ಹೇಳಿದರು..  
*" ನನ್ನ ಮಗಳು ಅನಾವಶ್ಯಕವಾಗಿ ನಮಾಝ್ ಕಳಾ ಮಾಡುತ್ತಿದ್ದಲು, ಮತ್ತೆ ಉಝೂ ಇಲ್ಲದೇನೇ ನಮಾಝ್ ನಿರ್ವಹಿಸುತಿದ್ದಲು, ಜೊತೆಗೆ ಪಕ್ಕದ ಮನೆಯಲ್ಲಿ ನಡೆಯುವ ಗುಪ್ತ ಚರ್ಚೆಯನ್ನು ಅವರಿಗೆ ಅರಿಯದಂತೆ ಆಲಿಸಿ ಊರಿಡೀ ಹಬ್ಬುತಿದ್ದಲು.. ಎಂದು ತಿಳಿಸಿದರು"*.
   
       ನೋಡಿ ಗೆಳೆಯರೆ,  ಈ ಮೇಲಿನ ಚರಿತ್ರೆ ನಮಗೊಂದು ಪಾಠ ಆಗಬೇಕು. ಆಧುನಿಕ ಸ್ತೀಯರಲ್ಲಿ ಈ ಮೇಲಿನ ದೋಷಗಳು ಅದಿಕವಾಗಿ ಕಾಣಲು ಸಿಗುತ್ತದೆ, ಅವರ ಖಬರ್ ಜೀವನದ ಭಯವನ್ನು ನಾವು ಅವರಲ್ಲಿ ಹುಟ್ಟಿಸಬೇಕಾಗಿದೆ...
_ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳು ಹಲವು ಸ್ವಹಾಬಿಗಳು ಕಣ್ಣಾರೆ ಕಂಡಿದ್ದಾರೆ. ಇದರ ಮುಂದುವರಿದ ಭಾಗ ನಾಳೆ...._
- *ಮುಂದುವರಿಯುವುದು*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1
Comments
Post a Comment