Posts

Showing posts from 2017

ಅದು ಅದ್ಭುತಗಳ ಗೂಡು " *ಊಹಿಸಲಾಗದ ಸತ್ಯ....!!* ಭಾಗ 9

ಅದೊಂದು ಪ್ರಶಾಂತ ಪ್ರದೇಶವಲ್ಲವೇ.. ತನ್ನವರು, ತಿಳಿದವರು, ಅಹಂಕಾರಿಯೂ  ಬಡ ಬಲ್ಲಿಗನೂ ವಾಸಿಸಲಿರುವ ಅಗಾಧ ಸ್ಥಳವಲ್ಲವೇ.. ಖಬರ್.       ನಾವು ಆಗ್ರಹಿಸಿದರೂ... ಆಗ್ರಹಿಸದಿದ್ದರೂ ಖಬರಿನಿಂದ ಹಾಗೂ ಅಲ್ಲಿನ ಶಿಕ್ಷೆಯಿಂದ ನಮಗೆ ರಕ್ಷೆ ಇಲ್ಲವೇ ಇಲ್ಲ. ಅನುಭವಿಸುವವರು ನಾವು ಎಲ್ಲವೂ ಅನುಭವಿಸಲೇಬೇಕು. ಇಂದು ಮರಣ ಹೊಂದಿದವನ ದಫನ ಮಾಡಿ ಬಂದವನು ನಾಳೆ ಸ್ವ ಮಲಗಬೇಕಾದ ಜಾಗವೇ ಖಬರ್...   *"ನಾವು ಸ್ವ ಇಚ್ಛೆಯಿಂದ ಇಲ್ಲಿ ಬಂದವರಲ್ಲ..*  *ನಾಳೆ ಸ್ವ ಇಚ್ಛೆಯಿಂದ ತೆರಳುವವರೂ ಅಲ್ಲ.."*           ಎಲ್ಲವೂ ಅಲ್ಲಾಹನ ಇಚ್ಛೆ...       ಖಬರಿನಲ್ಲಿ ಕೆಲವರಿಗೆ ಶಿಕ್ಷೆ ಇನ್ನೂ ಕೆಲವರಿಗೆ ರಕ್ಷೆ...   ಜೀವನವೆಂಬ ಯಾತ್ರೆಯಲ್ಲಿ ತಾನು ಮಾಡಿದ ಕರ್ಮದ ಫಲ ಅವನು ಖಂಡಿತವಾಗಿಯೂ ಅನುಭವಿಸುಲರಿವನು..      ಕೆಲವು ಧರ್ಮದ ಜನರ ನಂಬಿಕೆ,,, ಇದೆಲ್ಲವೂ ಸುಳ್ಳು, ಅದರಲ್ಲೇನು ಮರ್ಮವಿಲ್ಲವೆಂದು.   ಆದರೆ,, ಇತಿಹಾಸದ ಪುರಾವೆಗಳು ಇಸ್ಲಾಂ ಧರ್ಮದಲ್ಲಿ ಬಹಳಷ್ಟಿದೆ. ಅದರ ಕೆಲ ಭಾಗಗಳನ್ನು ನಾ ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೇನೆ..     ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳನ್ನು ಹಲವು ಸ್ವಹಾಬಿಗಳು, ಪಂಡಿತರು.. ಕಣ್ಣಾರೆ ಕಂಡಿದ್ದಾರೆ. ...

ಅದು ಅದ್ಭುತಗಳ ಗೂಡು"* ಊಹಿಸಲಾಗದ ಸತ್ಯ....!! ಭಾಗ 8

ಒಂದು ದಿನ ಮಹಮ್ಮದ್ ಇಬ್ನು ಸಿನಾನ್ ಸುಲಾಮಿ ರಹ್ಮವುಲ್ಲಾ ರವರು ಬಗ್ದಾದಿನಲ್ಲಿ ಯಾತ್ರೆ ನಡೆಸುವಾಗ ಓರ್ವ ಕಬ್ಬಿಣದ ವ್ಯಾಪಾರಸ್ಥನ ಕೈಯಲ್ಲಿ  ಬಂದು ಕಬ್ಬಿಣದ ಮೊಳೆಯನ್ನು ಕಂಡರು.     *"ಆ ಕಬ್ಬಿಣದ ಮೊಳೆಯ ಎರಡು ಬಾಗವೂ ಚೂಪಾಗಿತ್ತು, ಮತ್ತು ಅದನ್ನು ಬೆಂಕಿಯಲ್ಲಿ ಉರಿಸಿದರೂ‌.. ಅದು ಕರಗುತ್ತಿರಲಿಲ್ಲ."*       ಇದನ್ನು ಕಂಡ ಅವರು ಅದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಆ ಮೊಳೆಯನ್ನು ಅಂಗಡಿಗೆ ಮಾರಾಟ ಮಾಡಿದವನ ಅನ್ವೇಷಣೆಯಲ್ಲಿ ನಿರತರಾದರು.     ಹಲವು ದಿನಗಳ ಅನ್ವೇಷಣೆಯ ನಂತರ ಆ ಕಬ್ಬಿಣದ ಮೊಳೆ ಮಾರಾಟ ಮಾಡಿದವನ ಕಂಡುಹಿಡಿದರು. ಆ ಕಬ್ಬಿಣದ ಮೊಳೆಯ  ವಿವರ ಕೇಳಿದಾಗ ಅವನು....     *"ನನಗದು ಆ ಖಬರಿನ ಒಳ ಭಾಗದಿಂದ ಸಿಕ್ಕಿದ್ದು, ಈ ರೀತಿಯ ಹಲವು ಮೊಳೆಗಳು ಮನುಷ್ಯನ ಮೂಳೆಗಳಲ್ಲಿ ಹೊಡೆಯಲಾಗಿತ್ತು, ನಾನು ಆ ಮೂಳೆಯನ್ನು ಹುಡಿಮಾಡಿ ಈ ಮೊಳೆಯನ್ನು ಹೊರತೆಗೆದಿದ್ದೇನೆ. ಎಂದರು"*.      ಈಗೆ ಹಲವಾರು ಖಬರಿನಲ್ಲಿ ಕಬ್ಬಿಣದ ಮೊಲೆಗಳು, ಕಬ್ಬಿಣದ ಗುಂಡು ಆಕ್ರೃತಿಯ ವಸ್ತುಗಳನ್ನು ಕಂಡವರ ಬಗ್ಗೆ, ಇತಿಹಾಸ ಗ್ರಂಥಗಳಲ್ಲಿ ನಾವು ಕಾಣಬಹುದು..      ಕೆಲವು ಪುರಾತನ  ಖಬರಿನಲ್ಲಿ, ಮೃತದೇಹವನ್ನು   ಕಿಬ್ಲಾ (ಮಕ್ಕಾ ಕಡೆಗೆ) ತಿರುಗಿಸಿದ್ದನ್ನು, ಅದಲು ಬದಲು ರೂಪದಲ್ಲಿ ಮಲಗಿಸಿದ ಚರಿತ್ರೆಗಳು ಕಂಡವರಿದ್ದಾರೆ. ...

"ಅದು ಅದ್ಭುತಗಳ ಗೂಡು"* ಊಹಿಸಲಾಗದ ಸತ್ಯ....!! ಭಗ 7

ದು ದಿನ ಪ್ರಸಿದ್ದ ಸೂಫೀ ವರ್ಯರೂ  ಪಂಡಿತರೂ ಆದ ಮಿರ್ಹದ್  ರ.ಅ ರವರ ಬಳಿ ಓರ್ವ ಯುವಕ ಬಂದ. ಅವನ ಮೊಗದ ಒಂದು ಭಾಗವು ಕಬ್ಬಿಣದಂತೆ ಗಟ್ಟಿಯಾಗಿತ್ತು.  ಇದರ ಬಗ್ಗೆ ವಿವರ ಅರಿಯಲು ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಆ ಯುವಕ ಮಿರ್ಹದ್ ರ.ಅ ರವರಲ್ಲಿ ವಿವರಿಸತೊಡಗಿದ.     "ನಾನು ಆಡಂಬರದಿ ಜೀವಿಸುತಿದ್ದ  ಯುವಕನಾಗಿದ್ದೆ, ಬಹಳಾ ಕೆಟ್ಟವನಾಗಿದ್ದೆ ನಾನು.  ಅತ್ಯಾಚಾರ, ಅನೈತಿಕ ಸಂಬಂಧ ನನ್ನ ಬಳಿ ಇತ್ತು. ನನಗೇನು ಉದ್ಯೋಗ ಇರಲಿಲ್ಲ.  ಕೊನೆಗೆ ವಿದ್ಯಬ್ಯಾಸ ಕೊರತೆ ಇರುವ ನಾನು ನೇರವಾಗಿ ಖಬರ್ ಅಗೆಯುವ ಕೆಲಸಕ್ಕೆ ಸೇರಿಕೊಂಡೆನು.     ..ಒಂದು ದಿನ ಮಗರಿಬ್ ಹಾಗೂ ಇಶಾ ನಡುವೆ (ಅಂದಾಜು 6 ರಿಂದ 9 ಘಂಟೆ) ತಾನು ಅಗೆದ ಖಬರಿಗೆ ಒಂದು ಮೃತದೇಹವನ್ನು ತಂದು ದಫನ ಮಾಡಲಾಯಿತು, ದಫನದ ವಿದಿ ವಿಧಾನದ ನಂತರ ಎಲ್ಲರೂ ಅಲ್ಲಿಂದ ಹೊರಟುಹೋದರು. ನಾನು ಪಕ್ಕದ ಖಬರಿಗೆ ಒರಗಿ ಇನ್ನೂ ಯಾರಾದರೂ ಮೃತದೇಹ ಕೊಂಡುಬರಬಹುದೇ..? ಎಂದು ಕಾಯುತ್ತಾ.. ವಿಶ್ರಾಂತಿ ಪಡೆಯುತಿದ್ದೆ.    ಆಗ ಅಲ್ಲಗೆ ಎರಡು ಬೃಹತ್ ಆಕಾರದ ಬಿಳಿ ಬಣ್ಣದ  ಪಕ್ಷಿಗಳು ಬಂದವು, ಅದರಲ್ಲಿ ಒಂದು ಪಕ್ಷಿ ನೇರವಾಗಿ ಈಗಾಗಲೇ ದಫನ ಮಾಡಿ ಹೋದ ಹೋಸ ಖಬರಿನ ಮೇಲಿದ್ದ ಕಲ್ಲುಗಳನ್ನು ಸರಿಸಿ ಖಬರಿನ ಒಳಗೆ ನುಗ್ಗಿತು. ಇನ್ನೊಂದು ಪಕ್ಷಿ ಖಬರಿನ ಹೊರಭಾಗದಲ್ಲಿ ನಿಂತು ಕಾವಲು ಕಾಯುತಿತ್ತು.  ನನಗೆ ಆ ಸಂದರ್ಭದಲ...

*"ಅದು ಅದ್ಭುತಗಳ ಗೂಡು" ಊಹಿಸಲಾಗದ ಸತ್ಯ....!! ಭಾಗ - 6

ಒಂದು ದಿನ ಅಲ್ಲಾಮಾ ಅಬೀ ಗುಝ್ಹ ರ.ಅ ರವರು ಇರಾಕಿನ ಬಸರ ಎಂಬ ಪ್ರದೇಶದಲ್ಲಿ ಹಾದುಹೋಗುತಿದ್ದರು. ಅಲ್ಲಿ ಒಂದು ಕತ್ತೆ ಅಳುವ ಶಬ್ದ ವಿಪರೀತವಾಗಿ ಕೇಳುತಿತ್ತು. ಆ ಪ್ರದೇಶದ ಸುತ್ತಲೂ ಕಣ್ಣಾಯಿಸಿದರೂ ಅಲ್ಲ...

ಅದು ಅದ್ಭುತಗಳ ಗೂಡು"* *_ಊಹಿಸಲಾಗದ ಸತ್ಯ....!! ಭಾಗ - 5

ಒಂದು ದಿನ ಅಬ್ದುಲ್ಲಾ ಇಬ್ನ್ ಉಮರ್ ರ.ಅ ರವರು ಕುದುರೆಯ ಮೇಲೆ ಮಕ್ಕಾ ಹಾಗೂ ಮದೀನಾದ ನಡುವೆ  ಯಾತ್ರೆ ಹೊರಟಿದ್ದರು. ದಾರಿ ಮಧ್ಯೆ ಒಂದು ಖಬರ್ ಸ್ಥಾನವು ಇತ್ತು. ಆ ಖಬರ್ ಸ್ಥಾನ ಮಧ್ಯೆ ಒಂದು ಖಬರಿನೊಳಗಿನಿ...

ಅದು ಅದ್ಭುತಗಳ ಗೂಡು"* *_ಊಹಿಸಲಾಗದ ಸತ್ಯ....!!* ಭಾಗ 4

Allah says : "Kullu nafsin zaikatul maut" means – "Every soul shall taste death"           - (surah 3: verse 185).      ಮರಣವು ಮನುಷ್ಯನಿಗೆ ಕಟ್ಟಿಟ್ಟ ಬುತ್ತಿ. ಮನುಷ್ಯನ ದೇಹವನ್ನಾದರೂ ಅಲ್ಲಾಹು ಶಾಶ್ವತವಾಗಿ ಇಟ್ಟರೂ, ರೂಹ್ ಅಥವಾ ಆಯುಷ್ಯ ಮಾತ್ರ ಅವರವರ ವಿಧಿಬರಹದ ಅನುಸಾರವಾಗಿ...

ಅದು ಅದ್ಭುತಗಳ ಗೂಡು" _ಊಹಿಸಲಾಗದ ಸತ್ಯ....!! ಭಾಗ 3

*﷽* *ಭಾಗ - 0⃣3⃣* ಪ್ರವಾದಿಯವರಿಗೆ ಕನಸಿನಲ್ಲಿ ಬಂದಂತಹ ಎರಡು ಜನರು ಕೆಲವು ವಾಸ್ತವತೆಯನ್ನು ತೋರಿಸುಕೊಡುತ್ತಿದ್ದರು. ಇದರ ವಿವರಣೆಗೆ ಪ್ರವಾದಿ ಸ.ಅ ಭೇಡಿಕೆ ಇಟ್ಟಾಗ,,  ಆ ಎರಡು ಜನರು....     ಪ್ರವಾದಿಯವರೇ ನ...

ಅದು ಅದ್ಭುತಗಳ ಗೂಡು"* *_ಊಹಿಸಲಾಗದ ಸತ್ಯ....!!* ಭಾಗ 2

*﷽* *ಭಾಗ - 0⃣2⃣* ಅಲೀ ರ.ಅ ಜನರಿಗೆ ಮೂರು ಕಾರ್ಯಗಳನ್ನು ವಿವರಿಸುತ್ತಿದ್ದರು. 1) ನೀವು ಖಬರ್ ಸ್ಥಾನವನ್ನು ಸಂದರ್ಶಿಸಿರಿ, ಅದು ನಿಮಗೆ ಪರಲೋಕದ ಬಗ್ಗೆ ಚಿಂತೆ ಮೂಡಿಸುತ್ತದೆ. 2) ನೀವು ಯಾರಾದರೂ ಮರಣ ಹೊಂದಿದರೆ ಅವ...

ಅದು ಅದ್ಭುತಗಳ ಗೂಡು". ಊಹಿಸಲಾಗದ ಸತ್ಯ..!! ಭಾಗ - ೧

*"ಅದು ಅದ್ಭುತಗಳ ಗೂಡು"*       _ಊಹಿಸಲಾಗದ ಸತ್ಯ....!! ಭಾಗ - ೧_ ■ಅಸ್ಸಲಾಂ ಅಲೈಕುಂ ಸಹೋದರರೆ.    ಈ ಭೂಮಿಯು ಹಲವು ವಿಸ್ಮಯ, ಅಗೋಚರಗಳು ಸಂಭವಿಸುವ ಒಂದು ಕೇಂದ್ರ. ಮನುಷ್ಯನಿಗೆ ಈ ಭೂಮಿಯು ಜೀವನದಲ್ಲೂ ಮತ್ತು ಮರಣಾ ...

ಭಾಗ 17 (ಕೊನೇಯ ಭಾಗ)

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ.. ಅವರೇ... #ಸುರಾಖರ_ಮಗಳು : #ಭಾಗ - 17         (ಓದಲೇ ಬೇಕಾದ ಕೊನೇಯ ಭಾಗ)       ಅಲ್ಲಿಂದ ಮರಳಿದ ಐದು ಜನರು, ಖಾದ್ಸೀಯ್ಯ ರಣಾಂಗಣಕ್ಕೆ ತಲುಪಿದರು. ತಹ್ಮಿನಾ ನೇರವಾಗಿ ಸಹದ್ ರ.ಅ ರವರ ನೇತೃತ್ವದ ಸೈನ್ಯದ ಕಡೆಗೆ ತೆರಳಿದರು...    ಎದುರಾಳಿಯ ತಂಡದ ಸೈನಿಕರೆಲ್ಲರೂ ಆಶ್ಚರ್ಯಗೊಂಡು ತಹ್ಮಿನಾರನ್ನು ಮತ್ತೆ ಮತ್ತೆ ಕರೆದರು.    ತಹ್ಮಿನಾ: ನಾನು ಇವತ್ತಿನಿಂದ ಇವರೊಂದಿಗೆ ಇರುವೆನು. ನಿಮ್ಮನ್ನು ತೊರೆದಿರುವೆನೆಂದು ಹೇಳಿದರು.    ತಹ್ಮಿನಾ ನೇರವಾಗಿ ಸಹದ್ ರ.ಅ ರವರ ಮುಂದೆ ಬಂದು ಶಆ-ದತ್ ಕಲಿಮ ಹೇಳಿ ಮುಸ್ಲಿಂ ಸ್ತ್ರೀಯಾಗಿ ಸೈನ್ಯವನ್ನು ಸೇರ್ಪಡೆಗೊಂಡರು.  ( *ಎದುರಾಳಿ ತಂಡದ ರಾಜಕುಮಾರಿ ತಮ್ಮ ತಂಡವನ್ನು ಸೇರಿಕೊಂಡದ್ದು ಸ್ವಹಾಬಿವರ್ಯರಿಗೆಲ್ಲ ತುಂಭಾ ಸಂತೋಷವಾಯಿತು.*)      **********   ತಹ್ಮಿನಾ ಸಹದ್ ರ.ಅ ರವರೊಂದಿಗೆ : ಇದೀಗ ಮರ್ಧಾನ್ ಶೈ ಅವರ ನೇತೃತ್ವದಲ್ಲಿ ಆನೆಗಳ ತಂಡವು ನಮ್ಮನ್ನು ಸದೆಬಡಿಯಲು ಬರಲಿವೆ. ನೀಮ್ಮ ಸೈನ್ಯದಲ್ಲೇನಿದೆ ಅದಕ್ಕೆ ಪ್ರತಿರೋಧಕ ಅಸ್ತ್ರ ಸಹದ್ ರ.ಅ : ನಾವು ಖಡ್ಗವನ್ನು ಬಳಸಿ ಯುದ್ಧ ನಡೆಸುವೆವು. ತಹ್ಮಿನಾ : ಇಲ್ಲ ಅದು ಸಾಧ್ಯವಿಲ್ಲ. ಆನೆಗಳ ತಲೆಯ ಗುರಿಯಾಗಿಸಿ ಬಾಣ ಬಿಟ್ಟರೆ ಮಾತ್ರ ಆನೆಯನ್ನು ಸೋಲಿಸಬಹುದು. ಬಿಲ್ಲು ಪರಿಣ...

ಭಾಗ 16

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ.. ಅವರೇ... #ಸುರಾಖರ_ಮಗಳು : #ಭಾಗ - 16   *(ಬಹರ್ ಹರಮ್ ಒಂದು ಸಣ್ಣ ಕೋಟೆಯಾಗಿತ್ತು. ಕೋಟೆಯ ಸುತ್ತಲೂ ಸ್ವಲ್ಪ ಎತ್ತರವಾಗಿ ಕಟ್ಟಲಾದ ತಡೆಗೋಡೆಯಿಂದ ಆವೃತವಾಗಿತ್ತು. ಕೋಟೆಯ ಒಳ ಭಾಖದಲ್ಲಿ ಹೂ ತೋಟವೂ ಇತ್ತು)*  ಈ ನಾಲ್ಕೂ ಜನರೂ ತಡೆಗೋಡೆಯನ್ನು ಹಾರಿ ಬಹರ್ ಹರಮಿನ ಓಳಗೆ ನುಗ್ಗಿದರು. ಆ ಕೋಟೆಯ ಒಳಗೆ ಎಲ್ಲಾ ಹುಡುಕಿದರೂ ಇವರಿಗೆ ಆಶಿಮಾ ಹಾಗೂ ತಹ್ಮಿನಾರನ್ನು ಕಂಡು ಹಿಡಿಯಲು ಆಗಿರಲಿಲ್ಲ.        ಸ್ವಲ್ಪ ಸಮಯದ ನಂತರ, ಅಲ್ಲಿ ಇದ್ದ ಒಂದು ಗಿಡದ ಹಿಂಬದಿಯಲ್ಲಿ ಏನೋ ಪಿಸುಗುಟ್ಟುವ ಶಬ್ದ ಕೇಳಿತು. ಶಬ್ದ ಆಲಿಸಿ ಅತ್ತ ತೆರಳಿದಾಗ    *"ತಹ್ಮಿನಾ ಆಶಿಮಾರಲ್ಲಿ ನನನ್ನು ನೀನು ವಿವಾಹವಾಗಬೇಕು, ಎಂದು ನಿರ್ಭಂದ ಹೇರುತ್ತಿದ್ದಳು."*    (ಅರಬೀ ವಸ್ತ್ರ ದರಿಸಿರುದರಿಂದ ಆಶಿಮಾರು ಸ್ತ್ರೀ ಎಂಬ ವಿವರ ತಹ್ಮಿನಾಳಿಗೆ ತಿಳಿದಿರಲಿಲ್ಲ.)    ತಹ್ಮಿನಾರ ಮಾತಿಗೆ ಒಪ್ಪಿಕೊಳ್ಳದ, ತಹ್ಮಿನಾ ಹಾಗೂ ಆಶಿಮಾರಿಗೆ ಚಿಕ್ಕ ಜಗಳ ನಡೆಯಿತು. ಜಗಳ ತಾರಕಕ್ಕೇರಿದಾಗ ಹೊಯಿಕೈ ನಡೆಯಿತು. ಇಬ್ಬರೂ ನೆಲದಲ್ಲಿ ಹೊರಳಾಡಿದರು.     ಆಗ ತಹ್ಮಿನಾಳಿಗೆ ಆಶಿಮಾ ಹೆಣ್ಣು ಎಂಬುವುದು ಮನದಟ್ಟಾಯಿತು.     "ಖಡ್ಗ ಹೊರಟದಲ್ಲಿ ನನ್ನನ್ನು ಸೋಲಿಸಿದಾಗಿನಿಂದ ಇಲ್ಲಿಯವರೆಗೆ ಪ್ರೀತಿಸಿದ್ದ ಈ ವ್ಯಕ್ತಿ ಹೆಣ್ಣು ಎಂಬುವುದು ತೆಳಿದಾಗ ...

ಭಾಗ 15

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ.. ಅವರೇ... #ಸುರಾಖರ_ಮಗಳು #ಭಾಗ - 15        ತಹ್ಮಿನಾ ತನ್ನ ಹೋರಾಟ ಕೊನೆಗೊಳಿಸಿರಲಿಲ್ಲ. ನೇರವಾಗಿ ಆಶಿಮಾರ ಮೇಲೆ ಜಿಗಿದರು. ಆಶಿಮಾರನ್ನು ನೆಲಕ್ಕೆ ಬೀಳಿಸಿ, ಅವರನ್ನು ಬಂಧಿಸಿ, ಮತ್ತೊಂದು ಕುದುರೆಯ ಮೇಲೆ ಹತ್ತಿ ಅಲ್ಲಿಂದ ನೇರವಾಗಿ ತನ್ನ ಸೈನ್ಯದ ಎಡೆಯಿಂದು ಹಾದುಕೊಂಡು ದೂರ ತೆರಳಿದರು..        ಈ ಸನ್ನಿವೇಶವನ್ನೆಲ್ಲ ದೂರದಿಂದ ವೀಕ್ಷಿಸುತ್ತಿದ್ದ ಸ್ವಹಾಬಿಗಳೆಲ್ಲರೂ ಗಾಬರಿಗೊಂಡರು. ಸಹದ್ ರ.ಅ ರವರ ಹತ್ತಿ ಓಡೋಡಿ ಬಂದ ಹಸನ್ ಮುಸನ್ನಾ ರ.ಅ ಹಾಗೂ ಆಶಿಂ ಸುರಾಖ ರ.ಅ ಹೇಳಿದರು. "ಸಹದ್ ರ.ಅ ರವರೇ ನಾವು ಅವರನ್ನು ಹಿಂಬಾಲಿಸಿಕೊಂಡು ಹೋಗಿ ಆಶಿಮಾರನ್ನು ರಕ್ಷಿಸುತ್ತೇವೆ". ಸಹದ್ ರ.ಅ ರವರ ಒಪ್ಪಿಗೆಯೂ ಸಿಕ್ಕಿತ್ತು. ತಕ್ಷಣ ಕುದುರೆಯನ್ನೇರಿ ಅವರಿಬ್ಬರು ಅಲ್ಲಿಂದ ತೆರಳಿದರು.       ಅಲ್ಪ ಸಮಯ ಪರಿಸರ ಪ್ರದೇಶದ ಸುತ್ತಲೂ ಹುಡುಕಿದರೂ ಅವರಿಗೆ ತಹ್ಮಿನಾಳನ್ನು ಕಂಡುಹಿಡಿಯಲು ಆಗಲಿಲ್ಲ.      ಆಗ ಸಹದ್ ರ.ಅ ರವರ ಬಳಿ ಇಸ್ಲಾಂ ಧರ್ಮ ಸ್ವೀಕರಿಸಿದ್ದ ಮುಸ್ಲಿ ಮತ್ತು ಅನಸ್ ಬಿನ್ ಹಿಲಾಲ್ ಬಂದು ಹೇಳಿದರು. "ಸಹದ್ ರ.ಅ ರವರೇ ಈಗಾಗಲೇ ತೆರಳಿರುವ ಅವರಿಗೆ ಇರಾನಿನ ಬಗ್ಗೆ ಅಷ್ಟೇನೂ ತಿಳಿದಿಲ್ಲ. ನಾವು ಹೋಗಿ ಆಶಿಮಾರನ್ನು ರಕ್ಷಿಸುತ್ತೇವೆ" ಎಂದರು. ಅದಕ್ಕೂ ಸಹದ್ ರ.ಅ ರವರ ಒಪ್ಪಿಗೆ ಸಿಕ್ಕಿತು. ಆ ಎರಡು ...