Posts

Showing posts from December, 2016

ಭಾಗ 14

ಧೀರ ಮಹಿಳೆಯೊಬ್ಬರ ರೋಚಕ ಕಥೆ              ಅವರೇ... #ಸುರಾಖರ_ಮಗಳು: #ಭಾಗ - 14 ಒಂದು ಭಾಗದಲ್ಲಿ ನಮಾಝ್; ಇನ್ನೊಂದು ಭಾಗದಲ್ಲಿ ಮದ್ಯ ಸೇವನೆ.            ಅವನಿಗೆ ಅಚ್ಚರಿಯಾಯಿತು. ಸಹದ್ ರ.ಅ ರವರ ನೇತೃತ್ವದ ಸೈನ್ಯವು ಉತ್ತಮವದ ಸೈನ್ಯ ತಂಡವೆಂದು ಮನಸಲ್ಲೇ ಒಪ್ಪಿಕೊಂಡನು.        ಮನಸ್ಸಿನ ಒಪ್ಪಿಗೆಯ ಮೇರೆಗೆ ನಾನು ಇಸ್ಲಾಂ ಧರ್ಮ ಸ್ವೀಕರಿಸುತ್ತೇನೆಂದು ಹೇಳಿದರು. ಆದರೆ ಮೊದಲೇ ಮದ್ಯ ಸೇವಿಸಿದ್ದ ಇವರು, ಮದ್ಯದ ಅಮಲಿನಲ್ಲಿ ಹೇಳಿರ ಬಹುದೆಂದು ಮೊದಲು ಯಾರು ನಂಬಿರಲಿಲ್ಲ. ಮತ್ತೆ ಮತ್ತೆ  ನಾನು ಧರ್ಮದ ಮೇಲೆ ವಿಶ್ವಾಸ ಇಟ್ಟವನೆಂದು ಹೇಳಿದ ಕಾರಣ ಶಆ ದತ್ ಕಲಿಮ ಹೇಳಿ ಇಸ್ಲಾಮಿಗೆ ಸ್ವೀಕರಿಸಲಾಯಿತು.   *ಅವರ ಹೆಸರನ್ನು ಮುಸ್ಲಿಂ ಎಂದು ನಾಮಕರಣ ಕೂಡಾ ಮಾಡಲಾಯಿತು*      *********     ತಂಡದೊಳಗಡೆ ಚರ್ಚೆ ನಡೆಯಿತಿತ್ತು. ಹಾಗೆ ಅಲ್ಲಿಗೆ ಯಶ್ಚುದುರ್ಗ ಸೌನ್ಯದ ಇನ್ನೊಂದು ವ್ಯಕ್ತಿ ಬಂದು ಸಹದ್ ರ.ಅ ರವರಲ್ಲಿ ಸಲಾಂ ಹೇಳಿದರು. ಉದ್ದವಾದ ಗಡ್ಡದಾರೀಯಾಗಿದ್ದರು ಅವರು.   ಎಲ್ಲರೂ ಕೂತಹಲದಿಂದ ಅವರನ್ನೇ ಗಮನಿಸಿದರು.     ಅವರೇ ಸ್ವತ್ಹ ಪರಿಚಯ ಮಾಡಿಕೊಂಡರು. ನಾನು ಅನಸ್ ಬಿನ್ ಹಿಲಾಲ್. ನಾನೊಬ್ಬ ಕ್ರೈಸ್ತ ಪಂಡಿತನಾಗಿದ್ದೇನೆ. ಯಶ್ಚುದುರ್ಗ್ ಕೋಟೆಯಲ...

ಭಾಗ 13

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... *ಸುರಾಖರ ಮಗಳು* : *ಭಾಗ - 13*    ಫರಕ್ ಸಾದ್ ನನ್ನು ಬಿಟ್ಟು ಕೊಡಲು ಯಶ್ಚುದುರ್ಗ ಒಂದು ಸವಾಲು ನೀಡಿದ್ದರು.     *ಸವಾಲಿಗೆ ಸಿದ್ದರಿದ್ದಲ್ಲಿ ನಾಳೆ ಇರಾನಿನ "ಖಾದ್ಸೀಯ್ಯ" ರಣಾಂಗಣಕ್ಕೆ ಬನ್ನಿರಿ ಎಂಬ ಆಹ್ವಾನ ನೀಡಿದರು..*     ಸವಾಲನ್ನು ನಗುಮುಖದಿಂದಲೇ ಸ್ವೀಕರಿಸಿದ ಮೊಘೇರಾ ರ.ಅ "ಇನ್ಶಾ ಅಲ್ಲಾ" ಎಂದು ಹೇಳಿ, ತಮ್ಮ ಸೈನ್ಯ ತಂಡ ತಂಗಿರುವ ಸ್ಥಳಕ್ಕೆ ಮರಳಿದರು.                    ************      ನಾಯಕ ಸಅದ್ ರ.ಅ ರವರು ತಂಗಿದ್ದ ಶರಾಫಾ ಎಂಬ ಸ್ಥಳಕ್ಕೆ ಬಂದು ಮೊಘೇರಾ ರ.ಅ ಯಶ್ಚುದುರ್ಗ್ ಕೋಟೆಯಲ್ಲಾದ ಎಲ್ಲಾ ಘಟನೆಯನ್ನು ವಿವರಿಸಿದರು.            ಯಶ್ಚುದುರ್ಗ್ ರ ಮಾತಿನಂತೆ ಮರುದಿನ 'ಖಾದ್ಸೀಯ್ಯ' ರಣಾಂಗಣಕ್ಕೆ ಎರಡು ಕಡೆಯವರೂ ಬಂದು ತಲುಪಿದರು.      *ಒಂದು ಬದಿಯಲ್ಲಿ ಸಹದ್ ರ.ಅ ನೇತೃತ್ವದ ಸೈನ್ಯ ತಂಗಿದ್ದರೆ ಇನ್ನೊಂದು ಬದಿಯಲ್ಲಿ ಯಶ್ಚುದುರ್ಗ್ ಸೈನ್ಯವೂ ತಂಗಿತ್ತು.*      ಯುದ್ಧದ ಮೊದಲು ಎರಡು ಭಾಗದ ಹಲವು ನಾಯಕರ ಸಮ್ಮುಖದಲ್ಲಿ ಹಲವು ಬಾರಿ ಸಂಧಾನ ಸಭೆಯು ನಡೆಯಿತು. ಆದ...

ಭಾಗ 12

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... *ಸುರಾಖರ ಮಗಳು* : *ಭಾಗ - 12*    ಯಶ್ಚುದುರ್ಗ್ ಮೊಘೇರಾ ರ.ಅ ರವರ ಖಡ್ಗದ ಕಡೆ ಗಮನಿಸಿದರು. ಅತ್ತ ಗಮನಿಸಿದಾಗ ಖಡ್ಗದ ವರೆ (ಖಡ್ಗ ಇರಿಸುವ ಚೀಲ) ಹರಿದಿತ್ತು. ಇದನ್ನೂ ಯಶ್ಚುದುರ್ಗ್ ಅಪಹಾಸ್ಯ ಮಾಡಿದರು ..       ಮತ್ತೆ ಕೆರಳಿದ ಮೊಘೇರಾ ರ.ಅ ಖಡ್ಗವನ್ನು ವರೆಯಿಂದ ಹೊರ ತೆಗೆದು ಇದೋ ನೋಡಿ ಎಂದು, ಯಶ್ಚುದುರ್ಗ್ ಕೂತಿದ್ದ ಸಿಂಹಾಸನದ ಎದುರಲ್ಲೇ ಗರಗರನೆ ತಿರುಗಿಸಿ ಕವಾಯತು ಪ್ರದರ್ಶಿಸಿದರು. ಇದನ್ನು ಕಂಡು ಯಶ್ಚುದುರ್ಗ್ ಐಶ್ವರ್ಯಗೊಂಡರು .       ಅತ್ತ ದೂರದಿಂದಲೇ ಇದನ್ನೆಲ್ಲ ವೀಕ್ಷಿಸುತಿದ್ದ ಯಶ್ಚುದುರ್ಗ್ ರ ಮಗಳಾದ ತಹ್ಮಿನಾ ಅಲ್ಲಿಗೆ ಬಂದಳು. ಮೊಘೇರಾ ರ.ಅ ರವರ ಕವಾಯತು ಕಂಡು ತಹ್ಮಿನಾಗೆ ಸಹಿಸಿರಲಿಲ್ಲ.   ಖಡ್ಗ ಹೋರಾಟದಲ್ಲಿ ಖ್ಯಾತಿ ಹೊಂದಿರುವ ನನ್ನೆದುರು ನಿನ್ನದೇನು ಆಟ ಎಂದು, ಯಶ್ಚುದುರ್ಗ್ ಕುಳಿತ ಪಕ್ಕದಲ್ಲಿದ್ದ ಟೇಬಲಿನ ಮೇಲಿನ ಬಟ್ಟೆಯನ್ನು ಗಾಳಿಗೆ ತೂರಿ, ಎತ್ತರದಿಂದ ಹಾರಿ ಎರಡು ತುಂಡು ಮಾಡಿದಳು. (ಇದೊಂದು ಸವಾಲಾಗಿತ್ತು) ಅದರಲ್ಲಿ ಒಂದು ತುಂಡು ದೊಡ್ಡದಾಗಿ ಇನ್ನೊಂದು ತುಂಡು ಚಿಕ್ಕದಾಗಿ ಕತ್ತರಿಸಲ್ಪಟ್ಟಿತು. ದೊಡ್ಡ ತುಂಡು ಕೈಗೆತ್ತಿಕೊಂಡ ತಹ್ಮಿನಾ ಮೊಘೇರಾರವರೊಂದಿಗೆ ಹೇಳಿದಳು. ತಾಕತ್ತಿದ್ದರೆ ಈ ಕವಾಯತನ್ನು ಮಾಡಿರಿ......

ಭಾಗ 11

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... *ಸುರಾಖರ ಮಗಳು* : *ಭಾಗ - 11*    ಹಸನ್ ಮುಸನ್ನಾ ರ.ಅ  ರವರ ಮಾತಿಗೆ ಅನುಸಾರವಾಗಿ ಮೂರೂ ಗುಂಪು ಯಶ್ಚುದುರ್ಗ್ ಸೈನಿಕರ ಆಯುಧಗಳ ಶೇಖರಣಾ ಕೇಂದ್ರ ಗಿಝ್ಬಾ ಕೋಟೆಯನ್ನು ಸುತ್ತುವರಿಯಿತು.     ಹಸನ್ ಮುಸನ್ನಾ ರ.ಅ ಕೋಟೆಯ ಬಳಿ ತೆರಳಿದರು. ಅಲ್ಲಿ ಎರಡು ದೈತ್ಯ ಗಾತ್ರದ ಸೈನಿಕರು ದ್ವಾರಪಾಲಕರಾಗಿ ಇದ್ದರು.  ಅವರಲ್ಲಿ ಒಬ್ಬ ಮಲಗಿದ್ದು, ಇನ್ನೊಬ್ಬ ದ್ವಾರವನ್ನು ಕಾಯುತ್ತಿದ್ದ..    *ದ್ವಾರಪಾಲಕ :* ಹಸನ್ ಮುಸನ್ನಾ ರ.ಅ ಕಂಡಾಕ್ಷಣ :  *ಯಾರಲ್ಲಿ...   ನಿಂತುಕೊಳ್ಳಿ...*   *ಹಸನ್ ಮುಸನ್ನಾ ರ.ಅ :* ನನ್ನ ವಸ್ತ್ರ ಕಂಡು ಅರಿತಿಲ್ಲವೇ. ನಾನೊಬ್ಬ ಇರಾನಿ ಪ್ರಜೆ.  *ದ್ವಾರಪಾಲಕ:*  ಯಾಕಾಗಿ ನೀವು ಈ ರಾತ್ರಿ ಈ ಕೋಟೆಯ ಬಳಿ ಬಂದಿರುವಿರಿ.   *ಹಸನ್ ಮುಸನ್ನಾ ರ.ಅ:* ಶತ್ರುಗಳು ಈ ಕೋಟೆಯನ್ನು ಆವರಿಸಿದ್ದು, ನಿಮ್ಮ ಬಳಿ ಒಂದು ರಹಸ್ಯ ಹೇಳಲು ಬಂದಿದ್ದೇನೆ. *ದ್ವಾರಪಾಲಕ:*  ಹೇಳಿ ಏನದು ಆ ರಹಸ್ಯ. *ಹಸನ್ ಮುಸನ್ನಾ ರ.ಅ:* ಆ ರಹಸ್ಯ ಹೇಳಬೇಕಾದರೆ ನೀವು ಸ್ವಲ್ಪ ಸರಿದು ನಿಲ್ಲಿರಿ,  ಸ್ವಲ್ಪ ಸರಿದು ನಿಂತರೆ ನಾನು ಆ ರಹಸ್ಯ ಹೇಳುತ್ತೇನೆ.   ಹಸನ್ ಮುಸನ್ನಾ ರ.ಅ ರವರ ಮಾತನ್ನು ನಂಬುತ್ತಾ ದ್ವಾರಪಾ...

ಭಾಗ - 10

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ...         *ಸುರಾಖರ ಮಗಳು* *ಭಾಗ - 10*     ಯಶ್ಚುದುರ್ಗ್ ರ ಕೋಟೆಯನ್ನು ಗುರಿಯಾಗಿಸಿದ ಸಹದ್ ರ.ಅ ರವರ ನೇತೃತ್ವದ ಸೈನ್ಯ ಸ್ವಲ್ಪ ಸಂಚರಿಸಿದ ಬಳಿಕ ಹಸನ್ ಮುಸನ್ನಾ ರೊಂದಿಗೆ ನಾಯಕ ಸಹದ್ ರ.ಅ ಕೇಳಿದರು...     *ಈ ಶರಾಫಾ ಎಂಬ ಸ್ಥಳ ಯಾವುದು..??* ಹಸನ್ ಮುಸನ್ನಾ ರ.ಅ: ಇದುವೇ ಶರಾಫಾ.. ಕೂಡಲೇ ನೆನಪಿಸಿಕೊಂಡ ಸಹದ್ ರ.ಅ ಉಮರ್ ರ.ಅ ತನಗೆ ನೀಡಿದ್ದ ಪತ್ರವನ್ನು ಕೈಗೆತ್ತಿಕೊಂಡರು, ಪತ್ರವು ಈ ಕೆಳಗಿನಂತಿತ್ತು...       ***************       *ಅಸ್ಸಲಾಂ ಅಲೈಕುಂ..*  "ಪ್ರೀತಿಯ ಸಹದ್ ರವರೇ..        ನೀವು ಈಗ ನಿಂತಿರುವ ಸ್ಥಳ "ಶರಾಫಾ". ನೀವು ಬಲಗಡಗೆ ತಿರುಗಿದಾಗ ಎರಡು ಬೆಟ್ಟಗಳು ಕಾಣಲು ಸಿಗುತ್ತವೆ. ಆ ಬೆಟ್ಟದ ತಪ್ಪಲಲ್ಲಿ *ಗಿಝ್ಬಾ* ಎಂಬ ಮರದ ಕೋಟೆಯಿದೆ. ಅದು ಯಶ್ಚುದುರ್ಗ್ ರ ಸೈನ್ಯಾಧಿಪತಿಗಳು ಆಯುಧಗಳನ್ನು ಶೇಖರಿಸುವ ಸ್ಥಳವಾಗಿದೆ. ಮೊದಲನೆಯದಾಗಿ ನೀವು ಅದನ್ನು ನಾಶಪಡಿಸಬೇಕು. ಹೆಚ್ಚಿನ ಮಾಹಿತಿಯನ್ನು ಹಸನ್ ಮುಸನ್ನಾರೊಂದಿಗೆ ಕೇಳಿ ಅರಿಯಿರಿ..."       ***************     ಹಸನ್ ಮುಸನ್ನಾ ರ.ಅ ರವರು ನಗುತ್ತಲೇ....

ಭಾಗ 9

ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... #ಸುರಾಖರ_ಮಗಳು #ಭಾಗ - 9     ಶೈಬಾನ್ ಬೆಟ್ಟದ ಮೇಲೆ ಬಂದ ಹಸನ್ ಮುಸನ್ನಾ ರ.ಅ : ನನ್ನ ಈ ಮುಸ್ಲಿಂ ಸಹೋದರನನ್ನು ಯಾಕಾಗಿ ಕೊಂದೆ..? ಎಂದು ಫರಕ್ ಸಾದ್ ರ ಬಳಿ ಪ್ರಶ್ನಿಸಿದರು.    ಫರಕ್ ಸಾದ್ : ಅದು ಒಂದು ಅವಘಡ ಸಂಭವಿಸಿತು... ಕ್ಷಮಿಸಿ ಎಂದು ಬೇಡಿಕೊಂಡರು...    ಹಸನ್ ಮುಸನ್ನಾ ರ.ಅ : ಹಾಗಾದರೆ ನನಗೂ ಒಂದು ಅವಘಡ ಸಂಭವಿಸಲಿದೆ. ಎಂದರು.  ಭಯಭೀತರಾದ ಫರಕ್ ಸಾದ್ ನೇರವಾಗಿ ಮತ್ತೆ ಯಶ್ಚುದುರ್ಗ್ ಕೋಟಯತ್ತ ಓಡಿದರು.       ತನ್ನ ಬಳಿ ಓಡೋಡಿ ಬರುತ್ತಿದ್ದ ಫರಕ್ ಸಾದನ್ನು ಕಂಡು ನಗುತ್ತಲೇ ಯಶ್ಚುದುರ್ಗ್ ಕೇಳಿದರು : ಯಾಕಾಗಿ ಇತ್ತ ಓಡೋಡಿ ಬಂದೆ ನೀನು..  ಫರಕ್ ಸಾದ್ : ನಾನು ಒಂದು ಮುಸ್ಲಿಮನು ನಮಾಝ್ ಮಾಡುತ್ತಿರುವಾಗ, ಬಾಣ ಬಿಟ್ಟು ಕೊಂದು ಹಾಕಿದ್ದೇನೆ. ಅದಕ್ಕಾಗಿ ಹಸನ್ ಮುಸನ್ನಾರವರು ನನ್ನನ್ನು ಬೆನ್ನಟ್ಟಿ ಬರುತ್ತಿದ್ದಾರೆ.  ದಯವಿಟ್ಟು ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡರು, ಇದನ್ನು ಕೇಳಿ ಖುಷಿಗೊಂಡ ಯಶ್ಚುದುರ್ಗ್, ಅವರನ್ನು ಕೋಟೆಯ ಒಳ ಭಾಗದ  ಒಂದು ಬದಿಯಲ್ಲಿ ನಿಲ್ಲಿಸಿದರು.     ಹಸನ್ ಮುಸನ್ನಾ ರ.ಅ : ಫರಕ್ ಸಾದ್ ನನ್ನು ಬೆನ್ನಟ್ಟುತ್ತಾ ನೇರವಾಗಿ ಯಶ್ಚುದುರ್ಗ್  ರ ಬಳಿ ಬಂದು ನಿಂತ...

ಭಾಗ 8

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ..  #ಸುರಾಖರ_ಮಗಳು    #ಭಾಗ - 8     ಯಶ್ಚುದುರ್ಗ್ ರ ಮಗಳು(ತಹ್ಮಿನಾ) ಒಂದು ಪ್ರಕಟಣೆ ನಡೆಸಿದ್ದಳು    " ಖಡ್ಗದೊಂದಿಗಿನ ಹೋರಾಟದಲ್ಲಿ ನನ್ನನ್ನು ಸೋಲಿಸುವ ಹುಡುಗನನ್ನು ಮಾತ್ರ ನಾನು ವಿವಾಹ ಆಗುವುಂದೆಂದು"            ತಹ್ಮಿನಾಳ ಪ್ರಕಟಣೆಯನ್ನು ಕೇಳುತ್ತಲೇ ಊರಿಡೀ ಭಾರೀ ಚರ್ಚೆಯಾಗುತ್ತಿತ್ತು. ಕೆಲವರು ತಹ್ಮಿನಾಳ ಹಾವ, ಭಾವ  ನೋಡಿಯೇ ಹೋರಾಟ ನಡೆಸಲು ಹಿಂದೇಟು ಹಾಕುತ್ತಿದ್ದರು.     **************       *ಒಂದು ದಿನ, ಗವರ್ನರ್ ಖುರಾಸಾನ್  ರ ಮಗ ಫರಕ್ ಸಾದ್ ಎನ್ನುವವರು, ತಹ್ಮನಾಳೊಂದಿಗೆ ಖಡ್ಗ ಹೋರಾಟ ನಡೆಸಲು ಸಿದ್ಧರಾಗಿ ಅರಮನೆಯತ್ತ ದೌಡಾಯಿಸಿ ಬಂದರು*.         ( *ಯಶ್ಚುದುರ್ಗ್ ಗೆ ಪರಕ್ ಸಾದ್ ರ ಈ ಮೋದಲೇ ಬಹಳಾ ಪರಿಚಯವಿತ್ತು.*)  ಅರಮನೆಗೆ ಬಂದ ಫರಕ್ ಸಾದ್ ರ ಕಂಡೊಡನೆ ಯಶ್ಚುದುರ್ಗ್ ಕೇಳಿದರು ಎಲ್ಲಿಗೆ ಹೊರಟಿರುವಿರಿ...? ಫರಕ್ ಸಾದ್ : ತಮ್ಮ ಮಗಳೊಂದಿಗೆ ಖಡ್ಗ ಹೋರಾಟ ನಡೆಸಿ ಮದುವೆಯಾಗಲು ಎಂದು ಉತ್ತರಿಸಿದರು.     ಆದರೆ, ಯಶ್ಚುದುರ್ಗ್ ಈ ವಿಷಯದಿಂದ ಪರಕ್ ಸಾದ್ ರಲ್ಲಿ ಹಿಂದೇಟು ಹಾಕುವಂತೆ ಮನವಿ ಮಾಡಿದರೂ...

ಭಾಗ 7

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ*                  ಅವರೇ..#ಸುರಾಖರ_ಮಗಳು #ಭಾಗ - 7*       ಸುಮಾರು ಮೂವತ್ತು ಸಾವಿರ ಸೈನ್ಯವನ್ನು ಮುನ್ನಡೆಸುತ್ತಾ ಸಹದ್ ರ.ಅ ರವರು ಯಾತ್ರೆ ಹೊರಟುರು . ಯಾತ್ರೆಯ ದಾರಿ ಮಧ್ಯೆ ಒಂದು ನದಿ ಅಡ್ಡವಾಗಿ ಹರಿಯುತ್ತೀತ್ತು.           ನೀರು ಬಹಳಾ ರಭಸದಿಂದ ಹರಿಯುತ್ತಿತ್ತು. ಸಹದ್ ರ.ಅ ನೇತೃತ್ವದ ಸೈನ್ಯದ ಬಳಿ, ನದಿ ದಾಟುವ ಯಾವುದೇ ಸಲಕರಣೆ ಇರಲಿಲ್ಲ. ನದಿಗೆ ಯಾವುದೇ ಸೇತುವೆಯೂ ಇರಲಿಲ್ಲ, ಜೊತೆಗೆ ನದಿಯ ಬದಿಯಲ್ಲಿ ಯಾವುದೇ ದೋಣಿಯೂ ಕಾಣುತ್ತಿರಲಿಲ್ಲ.    ಹತಾಶರಾದ ಸ್ವಹಾಬಿವರ್ಯರನ್ನೊಳಗೊಂಡ ಸೈನ್ಯವು ನಾಯಕರ ಕಡೆ ಮುಖಮಾಡಿದರು. ನಾಯಕರಾದ ಸಹದ್ ರ.ಅ ರವರು ಸೈನ್ಯದೊಂದಿಗೆ ಕೇಳಿದರು.     ಈ ಧರ್ಮ ಯಾರದ್ದಾಗಿದೆ...? ಸ್ವಹಾಬಿವರ್ಯರು : ಅಲ್ಲಾಹನದ್ದಾಗಿದೆ.    ಈ ನದಿ ಯಾರದ್ದಾಗಿದೆ....? ಸ್ವಹಾಬಿವರ್ಯರು : ಅಲ್ಲಾಹನದ್ದಾಗಿದೆ.     ಹಾಗಾದಲ್ಲಿ ಅಲ್ಲಾಹನ ಧರ್ಮ ಪ್ರಚಾರಕರಾದ ನಮ್ಮನ್ನು ತಡೆಯಲು, ಅಲ್ಲಾಹನ ಸೃಷ್ಟಿಯಾದ ಈ ನದಿಗೆ ಸಾಧ್ಯವಿಲ್ಲ.    ನೀವು ನನ್ನನ್ನು ಹಿಂಬಾಲಿಸಿರಿ... ಎಂದು   ಮುಂದೆ ಸಾಗಿದರು. ಸೈನಿಕರೆಲ್ಲ ಸಹದ್ ರ.ಅ ರವರನ್ನು ಹಿಂಬಾಲಿಸಿದರೂ..         ...

ಭಾಗ 6

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ... #ಸುರಾಖರ_ಮಗಳು  #ಭಾಗ - 6         ಸುರಾಖ ರ.ಅ ರವರ ಮಾತುಗಳಿಂದ ಆವೇಶಭರಿತರಾದ ಸಹದ್ ರ.ಅ ರವರ ನೇತೃತ್ವದ ಸ್ವಹಾಬಿವರ್ಯರ ಯುದ್ಧ  ಸೈನ್ಯಕ್ಕೆ,  ಖಲೀಫ  ಉಮರ್ ರ.ಅ ಕೆಲ ಉಪದೇಶಗಳನ್ನು ನೀಡಿದರು.            ಪ್ರವಾದಿ ಸ.ಅ ರವರು ತೋರಿಸಿಕೊಟ್ಟ ರೀತಿಯಲ್ಲೇ ಯುದ್ಧ ಮಾಡಲು ಹೇಳಿಕೊಟ್ಟು, ನೀವು ಲೋಕದ ಒಂದು ಬಲಿಷ್ಠ ಸೈನ್ಯದೆದುರು ಯುದ್ಧ ಮಾಡಲು ಹೊರಟಿದ್ದೀರಿ, *ಸುಮಾರು ಒಂದು ಲಕ್ಷದಷ್ಟು ಸೈನಿಕರನ್ನು ಹೊಂದಿರುವ ಸರ್ವ ಸನ್ನಧ್ಧ ಸೈನ್ಯದೆದುರು ಕೇವಲ ಮೂವತ್ತು ಸಾವಿರದಷ್ಟಿರುವ ನಮ್ಮ ಸೈನ್ಯವು ಹೋರಾಡಲಿದೆ.*        ಕ್ರೂರರಾದ ಯಶ್ಜುದುರ್ಗ್ ಸೈನ್ಯದಲ್ಲೆಲ್ಲೂ ಮಕ್ಕಳು ಹಾಗೂ ಮಹಿಳೆಯರು ಕಂಡರೆ ಖಡ್ಗ ಝಳಪಿಸಬಾರದು. ಆರೀತಿ ಮಕ್ಕಳನ್ನು ಹಾಗೂ ಮಹಿಳೆಯರು ಕಂಡರೆ ಖಡ್ಗವನ್ನು ಅಡಗಿಸಿ ಇಡಬೇಕೆಂದು ಆಜ್ಞೆ ನೀಡಿದರು. ( *ಆಶ್ಚರ್ಯವಲ್ಲವೇ ನಮ್ಮ ಇಸ್ಲಾಂ ಧರ್ಮದ ನೀತಿ ಹಾಗೂ ನಿಯಮ*).  ಜೊತೆಗೆ, ನೀವು ಹೋಗುವ ರಾಜ್ಯದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಕಾಪಾಡಬೇಕೆಂದು ಹೇಳಿದರು.           *******   ಖಲೀಫ ಉಮರ್ ರ.ಅ ರವರಿಗೆ ಸಹದ್ ರ.ಅ ರವರು ನೆರೆ...

ಭಾಗ 5

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ*   ಅವರೇ..  #ಸುರಾಖರ_ಮಗಳು*    #ಭಾಗ - 5          ಸ್ವಹಾಬಿವರ್ಯರ ಮಕ್ಕಳು ಸಿಗದ ಚಿಂತೆಯಲ್ಲಿದ್ದ ಸುರಾಖ ರ.ಅ ಹಾಗೂ ಆಶಿಂ ರ.ಅ ರಲ್ಲಿ ಸುರಾಖರ ಮಗಳಾದ ಆಶಿಮಾ ನಾನು ಯುದ್ಧಕ್ಕೆ ಬರುವುದಾಗಿ, ನಿಮ್ಮ ಚಿಂತೆಯನ್ನು ದೂರಮಾಡುವುದಾಗಿ ಹೇಳಿದರು.     ಆದರೆ... ಆಶಿಂ ರ.ಅ ಇದನ್ನು ನಿರಾಕರಿಸಿದರು.  ನಾವು ಉಮರ್ ರ.ಅ ರವರ ಬಳಿಗೆ ತೆರಳುವುದು, ಅವರು ಅಪಾರ ಜ್ಞಾನ ಹಾಗೂ ಬುದ್ಧಿವಂತರು. ಅವರೆದುರು ನಮ್ಮ ನಾಟಕವೇನು ನಡೋಯುವುದಿಲ್ಲ ಎಂದರು.       ಮತ್ತೆ ಮತ್ತೆ ಹಠದಿಂದಿದ್ದ ಸುರಾಖರ ಮಗಳು ಆಶಿಮಾ ನಾನು ಬರುವುದಾಗಿಯೂ ಅದರ ಬಗ್ಗೆ ಚಿಂತಿಸಬೇಡಿಯೆಂದು, ರೂಮಿಗೆ ಹೋದವರೇ ನೇರವಾಗಿ ಬಟ್ಟೆ ಬದಲಾಯಿಸಿ ಬಂದರು..        ಅರೇ....  ತಂದೆ ಸುರಾಖ ರ.ಅ ರವರ ನೀಲ ಅಂಗಿ (ಅರಬಿ ಉಡುಪು) ಧರಿಸಿ ತಲೆಯನ್ನೆಲ್ಲ ಭದ್ರವಾಗಿ ಶಾಲಿನಿಂದ ಕಟ್ಟಿಕೊಂಡು ಯಾರಿಗೂ ಗುರುತು ಹಿಡಿಯಲಾಗದ ರೀತಿಯಲ್ಲಿ ಯುದ್ಧಕ್ಕೆ ಹೊರಟೇ ನಿಂತರು.        ತಂದೆ ಸುರಾಖತಿಬ್ನು ಮಾಲಿಕರ ಅನುವಾದವು ಸಿಕ್ಕಿತು. ಇಬ್ಬರೂ ಮದೀನ ಮಸೀದಿಯತ್ತ ಬಂದರು. ಮದೀನಾ ಮಸೀದಿಯ ಹೊರಾಂಗಣದಲ್ಲಿ ಜನರೆಲ್ಲ ತುಂಬಿ ತುಳುಕುತಿದ್ದರು. (ಸಮಾರು ಮೂವತ್ತು ಸಾವಿರದಷ್ಟು ಜನರನ್ನು ಹೊಂದಿತ್ತು). ಎಲ್ಲರೂ ಯುದ್ದ...

ಭಾಗ 4

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ...         #ಸುರಾಖರ_ಮಗಳು #ಭಾಗ - 4*  ಮಸ್ಜಿದುಲ್ ನಬವೀಯ ಒಂದು ಭಾಗದಿಂದ ಒಂದು ಮಹಿಳೆ ಬಂದು ಅಲ್ಲಿ ನೆರೆದಿರುವ ಸ್ವಹಾಬಿಯವರ ಗುಂಪಿಗೆ ಸಲಾಂ ಹೇಳಿದರು. ನಂತರ ಹೇಳಿದರು, ಉಮರ್ ರ.ಅ ರವರೇ...  ನೀವು ಇರಾನಿಗೆ ಯುದ್ಧಕ್ಕೆಂದು ಒಂದು ಸೈನ್ಯವನ್ನು ಕಳುಹಿಸಲು ತೀರ್ಮಾನಿಸಿದ್ದು, ನಾಯಕರ ಕೊರತೆ ನಿಮ್ಮಲ್ಲಿ ಎದ್ದು ಕಾಣುತ್ತಿದೆ.  ಆದರೆ, ಯಾರನ್ನಾದರೂ ನಾಯಕನಾಗಿ ನೀವು ಯುದ್ಧಕ್ಕೆ ಕಳುಹಿಸಿ ಕೊಟ್ಟರೂ ನಿಮ್ಮ ಪಾಲಿಗೆ ವಿಜಯ ನಿಶ್ಚಿತಾ ಎಂದು ನನ್ನ ತಂದೆ ಹೇಳಿ ಕಳುಹಿಸಿದ್ದಾರೆ ಎಂದರು.    ಕೂಡಲೇ ಕೆಲ ಸ್ವಹಾಬಿಗಳು ನಗುತ್ತಲೇ ಹೇಳಿದರು. ನೆಬಿ ಸ.ಅ ನೇತೃತ್ವ ಕೊಟ್ಟ ಉಹದ್ ಯುದ್ದದಲ್ಲಿ ಸೋತವರು ನಾವು, ನಾವು ಹೇಗೆ ವಿಜಯಿಯಾಗುವೆವು... ಇವರ ತಂದೆಗೇನು ಅಲ್ಲಾಹನ ದೂತರು ಹೇಳಿ ಕಳುಹಿಸಿದರೇ...!!       ಆದರೆ ಉಮರ್ ರ.ಅ ಈರೀತಿ ಹೇಳಿದ ಸ್ವಹಾಬಿಯವರನ್ನು ಮಾತು ನಿಲ್ಲಿ ಸಲು ಹೇಳಿ, ಮಹಿಳೆಯೊಂದಿಗೆ : ಯಾರಾಗಿದ್ದಾರೆ ನಿನ್ನ ತಂದೆ ಎಂದರು.     ಆಗ ಮಹಿಳೆ : ನಿಮ್ಮ ಮುಂಭಾಗದಲ್ಲಿ ಕೂತಿರುವ ಆಶಿಂ ರ.ಅ ರವರ ತಂದೆ ಮತ್ತು ಶೈಬಾನ್ ಬೆಟ್ಟದಲ್ಲಿ ಕೊಲ್ಲಲ್ಪಟ್ಟ ಖಾಸಿಂ ರ.ಅ ಹಾಗೂ ನನ್ನ ತಂದೆ ಸುರಾಖತಿಬ್ನು ಮಾಲಿಕ್ ರ.ಅ ರವರು ...

ಭಾಗ 3

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ... #ಸುರಾಖರ_ಮಗಳು  #ಭಾಗ - 3*    ಯುದ್ಧಕ್ಕೆ ಹೊರಟು ನಿಂತ ತಂಡದೊಳಗೆ ನಾಯಕನಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು.    ಅಲೀ ರ.ಅ ಅವರನ್ನು ಉಮರ್ ರ.ಅ ಯಾಕೆ ತಿರಸ್ಕರಿಸಿದರು ಎಂಬ ಸ್ವಹಾಬಿಗಳ ಪ್ರಶ್ನೆಗೆ ಉತ್ತರಿಸಿದ ಉಮರ್ ರ.ಅ.,  ನನ್ನ ಆಡಳಿತದಲ್ಲಿ ಸಂಶಯ ನಿವಾರಕರು ಅಲೀ ರ.ಅ ರವರು ಆಗಿದ್ದಾರೆ. ಅವರನ್ನು ಯುದ್ಧಕ್ಕೆ ಕಳುಹಿಸಿಕೊಟ್ಟರೆ, ನನಗೆ ನನ್ನ ಆಡಳತದಲ್ಲಿ ಒಂದು ಸಂಶಯ ಬಂದರೆ, ಆ ಸಂಶಯ ನಿವಾರಿಸಲು ನಾನು ಯಾರ ಬಳಿಗೆ ತೆರಳಲಿ ಎಂದು ಪ್ರಶ್ನಿಸಿದರು...        ( ಅಲೀ ರ.ಅ ಆ ಕಾಲಘಟ್ಟದಲ್ಲಿನ ಅಪಾರ ಜ್ಞಾನವಂತರಾಗಿದ್ದರು. ಅಲೀ ರ.ಅ ರವರ ಕುರಿತು ನೆಬಿ ಮಹಮ್ಮದ್ ಮುಸ್ತಫಾ ಸ.ಅ ರವರು ಈ ರೀತಿ ಹೇಳಿಕೊಂಡಿದ್ದರು. " *ನಾನು ಅರಿವಿನ ಪಟ್ಟಣವಾದರೂ, ಅದರ ಬಾಗಿಲು ಅಲೀಯವರಾಗಿದ್ದಾರೆ*".)      ಇಂತಹಾ ಜ್ಞಾನ ಪಂಡಿತನನ್ನು ನಾನು ಹೇಗೆ ಯುದ್ಧಕ್ಕೆ ಕಳುಹಿಸಿ ಕೊಡಲಿ ಎಂದು ಉಮರ್ ರ.ಅ ಸಭೀಕರೊಂದಿಗೆ ಪ್ರಶ್ನಿಸಿದರು .      ನಾಯಕನಿಗಾಗಿ ಚರ್ಚೆಯು ಮುಂದುವರಿಯಿತು. ನೆರೆದಿದ್ದ ಸ್ವಹಾಬಿಗಳಲ್ಲಿ ಮತ್ತೊಬ್ಬ ಸ್ವಹಾಬಿ ಓರ್ವ ನಾಯಕನ ಹೆಸರು ಸೂಚಿಸಿದರು. ಅವರೇ *ಸಹದ್ ಇಬ್ನು ಅಬೀ ವಕ್ಕಾಸ್ ರ.ಅ*. ...

ಭಾಗ 2

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ...         #ಸುರಾಖರ_ಮಗಳು       #ಭಾಗ - 2*     ಖಲೀಫ ಉಮರ್ ರ.ಅ ರವರು ಆಡಳಿತವನ್ನು ನಡೆಸತೊಡಗಿದರು. ಇಸ್ಲಾಂ ಧರ್ಮ ನಾನಾ ದೇಶಗಳತ್ತ ವ್ಯಾಪಿಸುತಿತ್ತು. ಏಕ ದೈವಾರಾಧನೆ ಹಾಗು ಸತ್ಯ ಧರ್ಮದ ಬಗೆಗಿನ ವಿಶ್ವಾಸ ಜನರಲ್ಲಿ ಮೂಡಿ ಅನೇಕ ರಾಜ್ಯ ಹಾಗೂ ರಾಷ್ಟ್ರಗಳು ಇಸ್ಲಾಂ ಧರ್ಮವನ್ನು ಆವರಿಸುತಿತ್ತು. ಆದರೆ ಲೋಕದ ಚಿತ್ತ ಪುಣ್ಯ ಮದೀನದ ಕಡೆಗೆ ಇತ್ತು, ಜೊತೆಗೆ ಆಡಳಿತಗಾರ ಖಲೀಫ ಉಮರ್ ರ.ಅ ರವರ ಮೇಲೆ ಇತ್ತು.       ಒಂದು ದಿನ ಮದೀನಾ ಮಸೀದಿಯಲ್ಲಿ ಅಸರ್ ನಮಾಝಿನ ಬಳಿಕ ಉಮರ್ ರ.ಅ ರವರು ಹೇಳಿದರು...  ಎಲ್ಲರೂ ಅಲ್ಪ ಹೊತ್ತು ಅಲ್ಲೇ ಕುಳಿತುಕೊಳ್ಳಿರಿ....   ಸ್ವಹಾಬಿಗಳೆಲ್ಲರೂ ಗಮನವನ್ನು ಅತ್ತ ಅಮೀರುಲ್ ಮುಹ್ಮಿನೀನ್ ಕಡೆಗೆ ನೆಟ್ಟರು... ಉಮರ್ ರ.ಅ ವಿಷಯವನ್ನು ಪ್ರಸ್ತಾಪಿಸಿದರು..    ಈ ಮದೀನಾದ ಪ್ರತಿನಿಧಿಯಾಗಿ ಅಥವಾ ಈ ಇಸ್ಲಾಂ ಧರ್ಮದ ಪ್ರತಿನಿಧಿಯಾಗಿ ಇರಾನಿನ ಪರ್ಶಿಯನ್ ಗೆ ನಾನು ಕಳುಹಿಸಿಕೊಟ್ಟ ನನ್ನ ಪ್ರತಿನಿಧಿ *ಸುರಾಖತಿಬ್ನು ಮಾಲಿಕರ ಮಗ ಖಾಸಿಂ ಸುರಾಖರನ್ನು* ಇರಾನ್ ಹಾಗೂ ಇರಾಖಿನ ಮಧ್ಯೆ ಇರುವ ಶೈಬಾನ್ ಬೆಟ್ಟದಲ್ಲಿ ಕಾರಣವಿಲ್ಲದೆ ಇರಾನಿನ ಪರ್ಶಿಯನ್ನರು ಕೊಂದು ಹಾಕಿದ್ದಾರೆ. ಅದು ನನ್ನ ಧೀರತ...

ಭಾಗ 1

#ಅಸ್ಸಲಾಂ_ಅಲೈಕುಂ ಇಸ್ಲಾಂ ಧರ್ಮದೊಳಗಡೆ ಹಾಗೂ ಗ್ರಂಥಗಳಲ್ಲಿ, ಪುಸ್ತಕಗಳಲ್ಲಿ ಹಲವಾರು ಚರಿತ್ರೆಗಳು ಹಾಗೂ ಇತಿಹಾಸಗಳು ಕಾಣಲು ಸಿಗುತ್ತದೆ. ಈ ರೀತಿಯ ಚರಿತ್ರೆಗಳನ್ನು ತಿಳಿದವರು ಕೆಲವರು, ಆದರೆ... ತಿಳಿಯದವರು ಹಲವರು....      ನನ್ನ ಅರಿವಿನಲ್ಲಿ ಹಾಗೂ ಕೇಳಿ ತಿಳಿಯಲ್ಪಟ್ಟ ಕೆಲ ಚರಿತ್ರೆಗಳನ್ನು ಇತರರೊಂದಿಗೆ ಹಂಚುವ ಇರಾದೆ ನನ್ನದಾಗಿದೆ..  ಇನ್ಶಾ ಅಲ್ಲಾ....         ------*******------- ಮಹಿಳೆಯ ಬಗ್ಗೆ ಇಸ್ಲಾಂ ಧರ್ಮ ಸ್ವಾತಂತ್ರ ನೀಡುತ್ತಿಲ್ಲ. ಅವರನ್ನು ಧಾರ್ಮಿಕ ಚೌಕಟ್ಟಿನೊಳಗೆ ಬಂಧನದಲ್ಲಿಡಲಾಗಿದೆ, ಎಂಬಿತ್ಯಾದಿ ಸುಳ್ಳು ವಾದ, ಅಪವಾದಗಳ ಎಡೆಯಲ್ಲಿ..  ನಾವು ತಿಳಿಯಲೇ ಬೇಕಾದ ಹದಿನೈದು ಶತಮಾನದ ಹಿಂದಿನ ಒಂದು ಸ್ವಹಾಬಿಯವರ ಮಗಳ ಸುಂದರ ಕಥೆ.... ಧೀರ ಮಹಿಳೆಯೊಬ್ಬರ ರೋಚಕ ಕಥೆ                  ಅವರೇ...         #ಸುರಾಖರ_ಮಗಳು                 ಲೋಕ ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರು ಹಿಜಿರಾ ಯಾತ್ರೆ ಹೊರಡುವ ಸಮಯದಲ್ಲಿ ಪ್ರವಾದಿ (ಸ.ಅ) ರನ್ನು ಕೊಲ್ಲಲು ಖಡ್ಗದೊಂದಿಗೆ ಹೊರಟು ನಿಂತ ಮಕ್ಕಾ ಮುಶ್ರಿಕರ ತಂಡದಲ್ಲಿದ್ದ ಕುದುರೆ ಪಡೆಯ  ಓರ್ವ ನಾಯಕರಾಗಿದ್ದರು. ಅವರೇ *ಸುರಾಖತಿಬ್ನು ಮಾಲಿಕ್*. ...