ಭಾಗ 11

*ಧೀರ ಮಹಿಳೆಯೊಬ್ಬರ ರೋಚಕ ಕಥೆ*
                 ಅವರೇ...
*ಸುರಾಖರ ಮಗಳು* : *ಭಾಗ - 11*

   ಹಸನ್ ಮುಸನ್ನಾ ರ.ಅ  ರವರ ಮಾತಿಗೆ ಅನುಸಾರವಾಗಿ ಮೂರೂ ಗುಂಪು ಯಶ್ಚುದುರ್ಗ್ ಸೈನಿಕರ ಆಯುಧಗಳ ಶೇಖರಣಾ ಕೇಂದ್ರ ಗಿಝ್ಬಾ ಕೋಟೆಯನ್ನು ಸುತ್ತುವರಿಯಿತು.

    ಹಸನ್ ಮುಸನ್ನಾ ರ.ಅ ಕೋಟೆಯ ಬಳಿ ತೆರಳಿದರು. ಅಲ್ಲಿ ಎರಡು ದೈತ್ಯ ಗಾತ್ರದ ಸೈನಿಕರು ದ್ವಾರಪಾಲಕರಾಗಿ ಇದ್ದರು.  ಅವರಲ್ಲಿ ಒಬ್ಬ ಮಲಗಿದ್ದು, ಇನ್ನೊಬ್ಬ ದ್ವಾರವನ್ನು ಕಾಯುತ್ತಿದ್ದ..

   *ದ್ವಾರಪಾಲಕ :* ಹಸನ್ ಮುಸನ್ನಾ ರ.ಅ ಕಂಡಾಕ್ಷಣ :  *ಯಾರಲ್ಲಿ...   ನಿಂತುಕೊಳ್ಳಿ...*

  *ಹಸನ್ ಮುಸನ್ನಾ ರ.ಅ :* ನನ್ನ ವಸ್ತ್ರ ಕಂಡು ಅರಿತಿಲ್ಲವೇ. ನಾನೊಬ್ಬ ಇರಾನಿ ಪ್ರಜೆ.
 *ದ್ವಾರಪಾಲಕ:*  ಯಾಕಾಗಿ ನೀವು ಈ ರಾತ್ರಿ ಈ ಕೋಟೆಯ ಬಳಿ ಬಂದಿರುವಿರಿ.
  *ಹಸನ್ ಮುಸನ್ನಾ ರ.ಅ:* ಶತ್ರುಗಳು ಈ ಕೋಟೆಯನ್ನು ಆವರಿಸಿದ್ದು, ನಿಮ್ಮ ಬಳಿ ಒಂದು ರಹಸ್ಯ ಹೇಳಲು ಬಂದಿದ್ದೇನೆ.
*ದ್ವಾರಪಾಲಕ:*  ಹೇಳಿ ಏನದು ಆ ರಹಸ್ಯ.
*ಹಸನ್ ಮುಸನ್ನಾ ರ.ಅ:* ಆ ರಹಸ್ಯ ಹೇಳಬೇಕಾದರೆ ನೀವು ಸ್ವಲ್ಪ ಸರಿದು ನಿಲ್ಲಿರಿ,  ಸ್ವಲ್ಪ ಸರಿದು ನಿಂತರೆ ನಾನು ಆ ರಹಸ್ಯ ಹೇಳುತ್ತೇನೆ.

  ಹಸನ್ ಮುಸನ್ನಾ ರ.ಅ ರವರ ಮಾತನ್ನು ನಂಬುತ್ತಾ ದ್ವಾರಪಾಲಕ ಪಕ್ಕಕ್ಕೆ ಸರಿದು ಬಂದ. ದ್ವಾರಪಾಲಕ ಸರಿದು ಬಂದೊಡನೆ, ಹಸನ್ ಮುಸನ್ನಾ ರ.ಅ ಅವರನ್ನು ಹೊಡೆದುರುಳಿಸಿದರು. ಕುಸಿದು ಬಿದ್ದ ದ್ವಾರಪಾಲಕನ ಶಬ್ದ ಕೇಳಿ ಇನ್ನೊಬ್ಬ ದ್ವಾರಪಾಲಕ ಎಚ್ಚರಗೊಂಡ.   ಹಸನ್ ಮುಸನ್ನಾ ರ.ಅ ರವರು ಎರಡನೇ ದ್ವಾರಪಾಲಕನನ್ನೂ ಉಪಾಯದಿಂದ ಹೊಡೆದುರುಳಿಸಿ, ನೇರವಾಗಿ ಕೋಟೆಯ ಹತ್ತಿರ ಓಡಿದರು....

    ಗಟ್ಟಿ ಸ್ವರದಿಂದ ತಕ್ಬೀರ್ ಹೇಳಿದರು. " *ಅಲ್ಲಾಹು - ಅಕ್ಬರ್.. ಅಲ್ಲಾಹು - ಅಕ್ಬರ್....*"
      ತಕ್ಬೀರಿನ ಶಬ್ದ ಕೇಳಿದ ಕೋಟೆಯನ್ನು ಸುತ್ತುವರಿದಿದ್ದ ಸೈನಿಕರೆಲ್ಲ ಬೆಂಕಿ ಹೊತ್ತಿಸಿ, ಕೋಟೆಗೆ ಹಚ್ಚಿದರು. ನಾಲ್ಕೂ ಮೂಲೆಯಿಂದಲೂ ಬೆಂಕಿ ಹಚ್ಚಿದ ಕಾರಣ, ಗಿಝ್ಬಾ ಮರದ ಕೋಟೆ ಹೊತ್ತಿ ಉರಿಯಿತು.

     ಹೊತ್ತಿ ಉರಿಯುತ್ತಿದ್ದ ಕೋಟೆಯನ್ನು ಸಮೀಪದಿಂದಲೇ ವೀಕ್ಷಿಸುತ್ತಿದ್ದ ಆಶಿಮಾ ರ ಬಳಿ ಸ್ವಲ್ಪ ಸರಿದು ನಿಲ್ಲುವಂತೆ ಸ್ವಹಾಬಿಗಳು ಸೂಚಿಸಿದರು. ಸ್ವಹಾಬಿಗಳ ಮಾತಿಗೆ ಕಿವಿಕೊಡದ ಆಶಿಮಾ ಅಲ್ಲೇ ನಿಂತಿದ್ದರು. ಬೆಂಕಿ ಉರಿಯುತ್ತಲೇ ಕೋಟೆಯ ಛಾವಣಿಯನ್ನು ಆವರಿಸಿತ್ತು. ಛಾವಣಿಯ ಒಂದು ದೊಡ್ಡದಾದ ಮರದ ತುಂಡು ಉರಿಯುತ್ತಲೇ ಆಶಿಮಾರ ಮೇಲೆ ಬಿತ್ತು.
  ಇದನ್ನು ದೂರದಿಂದ ವೀಕ್ಷಿಸಿದ   ಹಸನ್ ಮುಸನ್ನಾ ರ.ಅ ಆಶಿಮಾರನ್ನು ರಕ್ಷಿಸಲು ಧಾವಿಸಿ ಬಂದರು.

    ಬೆಂಕಿಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಆಶಿಮಾರನ್ನು ಹಿಡಿದು ಎಳೆದು ಇತ್ತ ಖಾಲಿ ಜಾಗದತ್ತ ಹಾಕಿದರು. ಆಶಿಮಾರನ್ನು ಬೆಂಕಿಯ ಮರದ ಅಡಿಯಿಂದ ಹಿಡಿದೆಳೆಯುವಾಗ ಅವರು ಧರಿಸಿದ್ದ ಖಮೀಸ್ (ಅರಬ್ಬೀ ಉಡುಪು) ಹರಿಯಿತು.

    ಇದನ್ನು ಗಮನಿಸಿದಾಗ ಖಮೀಸಿನ ಒಳಗಿರುವುದು ಹೆಣ್ಣು ಎಂದು  ಹಸನ್ ಮುಸನ್ನಾ ರ.ಅ ರವರಿಗೆ ತಿಳಿಯಿತು.  ಆಗಲೇ *ಅಸ್ತಗಫಿರುಲ್ಲಾ...* ಎಂದು ಹೇಳಿದರು.
    ಆಗ ಆಶಿಮಾ ತನ್ನ ವಿವರವನ್ನು ತಿಳಿಸಿದರು, ಜೊತೆಗೆ ರಹಸ್ಯವನ್ನು ಯಾರಿಗೂ ಹೇಳದಂತೆ ಮಾತು ಕೊಟ್ಟರು.
   ಕೋಟೆಯನ್ನು ಬಸ್ಮಗೊಳಿಸಿದ ಬಳಿಕ ತಂಡವು ನೇರವಾಗಿ ಶರಾಫಾದ ಬಳಿ ಇರುವ ತಂಗುಸ್ಥಾಳವನ್ನು ಸೇರಿದರು.

     **************
       ಮರುದಿನ ಯಶ್ಚುದುರ್ಗ್ ರ ಬಳಿ ವಿವರ ತಿಳಿಸಲು ಹನ್ನೊಂದು ಜನರ ಒಂದು ತಂಡವನ್ನು ನೇಮಿಸಲಾಯಿತು.
    ಆ ತಂಡದ ನಾಯಕನಾಗಿ ಮೊಘೇರಾ ರ.ಅ ನೇಮಿಸಲಾಯಿತು , ಜೊತೆಗೆ ತಂಡದಲ್ಲಿ ಹಸನ್ ಮುಸನ್ನಾ ರ.ಅ, ಆಶಿಮಾ ರೂ ಇದ್ದರು.

   *(ಸಾವಿರಾರು ಮೈಲುಗಳನ್ನು ದಾಟಿ ಬಂದಿದ್ದ ಸೈನಿಕರೆಲ್ಲರೂ, ಹರಿದ ಮುರುಕಲು ವಸ್ತ್ರವನ್ನು ತೊಟ್ಟು ತೆರಳಿದ್ದರು. ಸ್ವಹಾಬಿಗಳೆಲ್ಲರೂ ಇರುವ ವಸ್ತ್ರಗಳಲ್ಲೇ ತೃಪ್ತಿ ಪಡುತ್ತಿದ್ದವರಾಗಿದ್ದರು)*

   ಹನ್ನೊಂದು ಜನರ ತಂಡವನ್ನು ದೂರದಿಂದಲೇ ಕಂಡು ಸಿಂಹಾಸನದಲ್ಲಿ ಕೂತಿದ್ದ ಯಶ್ಚುದುರ್ಗ ನಗುತ್ತಲೇ ಹೇಳಿದ.
    ಏನಿದು.., ಓರ್ವ ರಾಜನ ಮುಂದೆ ಬರುವಾಗ ಈ ರೀತಿಯ ವಸ್ತ್ರ ತೊಟ್ಟು ಬರುವುದೇ ಅಸಹ್ಯ ಇದು..
   ನಿಮ್ಮ ನಾಯಕ ಉಮರ್ ರ.ಅ ರವರಿಗೆ ಒಂದು ಸರಿಯಾದ ಬಟ್ಟೆ ಕೊಡಲು ಸಾಧ್ಯವಿಲ್ಲವೇ..!!

  ( ತೀರಾ ದುಡುಕು ಸ್ವಬಾವದವರಾಗಿದ್ದರು ಮೊಘೇರಾ ರ.ಅ. ಹೇಳಿದ ಮಾತಿಗೆ ಮರು ಉತ್ತರ ನೀಡುವಷ್ಟು ಚಲಾಕಿತನ ಅವರಲ್ಲಿತ್ತು)
       ಯಶ್ಚುದುರ್ಗ್ ನ ಮಾತು ಕೇಳಿ ಸಹಿಸದ ಮೊಘೇರಾ ರ.ಅ, ನಮ್ಮ ನಾಯಕರು ಇಂತಹಾ ವಸ್ತ್ರ ದರಿಸಿದ ಮೇಲೆ, ನಾವು ಇಂತಹದ್ದೇ ಧರಿಸುವುದು. ಆಡಂಬರವನ್ನು ಮೈಗೂಡಿಸಿದ ನಾಯಕರು ನಮ್ಮವರಲ್ಲ...
 ಮತ್ತೆ...,  ನಿಮ್ಮಂತೆ ಶೌಚಾಲಯದ ಕೆಲಸ ಮಾಡುವವರು ನಾವಲ್ಲ ಎಂದರು..
(ಶೌಚಾಲಯ ಎಂಬ ಮಾತಿನ ಉದ್ದೇಶ, ಹೊರಗೆ ಸೊಬಗು, ಒಳಗೆ ಅಸಯ್ಯವೂ)

   ಮತ್ತೆ ಯಶ್ಚುದುರ್ಗ್ ನೇರವಾಗಿ ಮೊಘೇರಾ ರ.ಅ ರವರ ಖಡ್ಗದ ಕಡೆ ಗಮನಿಸಿದರು. ಅತ್ತ ಗಮನಿಸಿದಾಗ ಖಡ್ಗದ ವರೆ (ಖಡ್ಗ ಇರಿಸುವ ಚೀಲ) ಹರಿದಿತ್ತು. ಇದನ್ನೂ ಅಪಹಾಸ್ಯ ಮಾಡಿದ ಯಶ್ಚುದುರ್ಗ್..
      ಮತ್ತೆ ಕೆರಳಿದ ಮೊಘೇರಾ ರ.ಅ ಖಡ್ಗವನ್ನು ವರೆಯಿಂದ ಹೊರ ತೆಗೆದು ಇದೋ ನೋಡಿ ಎಂದು ..

ಮುಂದೇನಾಯಿತು....
 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ    ತಬೂಕ್*

 ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ