ಭಾಗ 4
#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ
ಅವರೇ...
#ಸುರಾಖರ_ಮಗಳು #ಭಾಗ - 4*
ಮಸ್ಜಿದುಲ್ ನಬವೀಯ ಒಂದು ಭಾಗದಿಂದ ಒಂದು ಮಹಿಳೆ ಬಂದು ಅಲ್ಲಿ ನೆರೆದಿರುವ ಸ್ವಹಾಬಿಯವರ ಗುಂಪಿಗೆ ಸಲಾಂ ಹೇಳಿದರು.
ನಂತರ ಹೇಳಿದರು, ಉಮರ್ ರ.ಅ ರವರೇ... ನೀವು ಇರಾನಿಗೆ ಯುದ್ಧಕ್ಕೆಂದು ಒಂದು ಸೈನ್ಯವನ್ನು ಕಳುಹಿಸಲು ತೀರ್ಮಾನಿಸಿದ್ದು, ನಾಯಕರ ಕೊರತೆ ನಿಮ್ಮಲ್ಲಿ ಎದ್ದು ಕಾಣುತ್ತಿದೆ. ಆದರೆ, ಯಾರನ್ನಾದರೂ ನಾಯಕನಾಗಿ ನೀವು ಯುದ್ಧಕ್ಕೆ ಕಳುಹಿಸಿ ಕೊಟ್ಟರೂ ನಿಮ್ಮ ಪಾಲಿಗೆ ವಿಜಯ ನಿಶ್ಚಿತಾ ಎಂದು ನನ್ನ ತಂದೆ ಹೇಳಿ ಕಳುಹಿಸಿದ್ದಾರೆ ಎಂದರು.
ಕೂಡಲೇ ಕೆಲ ಸ್ವಹಾಬಿಗಳು ನಗುತ್ತಲೇ ಹೇಳಿದರು. ನೆಬಿ ಸ.ಅ ನೇತೃತ್ವ ಕೊಟ್ಟ ಉಹದ್ ಯುದ್ದದಲ್ಲಿ ಸೋತವರು ನಾವು, ನಾವು ಹೇಗೆ ವಿಜಯಿಯಾಗುವೆವು... ಇವರ ತಂದೆಗೇನು ಅಲ್ಲಾಹನ ದೂತರು ಹೇಳಿ ಕಳುಹಿಸಿದರೇ...!!
ಆದರೆ ಉಮರ್ ರ.ಅ ಈರೀತಿ ಹೇಳಿದ ಸ್ವಹಾಬಿಯವರನ್ನು ಮಾತು ನಿಲ್ಲಿ ಸಲು ಹೇಳಿ, ಮಹಿಳೆಯೊಂದಿಗೆ : ಯಾರಾಗಿದ್ದಾರೆ ನಿನ್ನ ತಂದೆ ಎಂದರು.
ಆಗ ಮಹಿಳೆ : ನಿಮ್ಮ ಮುಂಭಾಗದಲ್ಲಿ ಕೂತಿರುವ ಆಶಿಂ ರ.ಅ ರವರ ತಂದೆ ಮತ್ತು ಶೈಬಾನ್ ಬೆಟ್ಟದಲ್ಲಿ ಕೊಲ್ಲಲ್ಪಟ್ಟ ಖಾಸಿಂ ರ.ಅ ಹಾಗೂ ನನ್ನ ತಂದೆ ಸುರಾಖತಿಬ್ನು ಮಾಲಿಕ್ ರ.ಅ ರವರು ಆಗಿದ್ದಾರೆ ಎಂದರು.
ಉಮರ್ ರ.ಅ : ಸ್ವಹಾಬಿಗಳ ಗುಂಪಿನೊಂದಿಗೆ ಹೇಳಿದರು. ಸುರಾಖತಿಬ್ನು ಮಾಲಿಕ ಕುರಿತು ನನಗೆ ಎಲ್ಲಾ ವಿಷಯ ಗೊತ್ತಿದೆ ಎಂದರು. ಮಹಿಳೆಯೊಂದಿಗೆ ಹೇಳಿದರು ನೀವು ಮನೆಯ ಕಡೆ ಹೊರಡಿ. ಆಮೇಲೆ ನಿಮ್ಮ ತಂದೆಯವರನ್ನು ನಾನು ಮುಖತ್ವ ಭೇಟಿಯಾಗುತ್ತೇನೆ ಎಂದು ಮಹಿಳೆಯನ್ನು ಕಳುಹಿಸಿ ಕೊಟ್ಟರು.
************
( *ಸ್ವಹಾಬಿವರ್ಯರ ಅಭಿಪ್ರಾಯದಂತೆ ಸಹದ್ ರ.ಅ ರವರ ಹೆಸರು ನಾಯಕ ಸ್ಥಾನಕ್ಕೆ ಖಲೀಫ ಉಮರ್ ರ.ಅ ರವರು ಅಂಗೀಕರಿಸಿದರು. ಯಾವುದೇ ಸಮಯದಲ್ಲೂ ಯುದ್ಧಕ್ಕೆ ಹೊರಡಲು ಸಜ್ಜಾಗಿರುವಂತೆ ಸೂಚಿಸಿದರು. ಖಲೀಪರ ಆದೇಶದನುಸಾರ ಸ್ಯನೈ ತಂಡದ ಪೂರ್ವ ಸಿದ್ದತೆ ತೊಡಗಿಸಿಕೊಳ್ಳಲು ಹೇಳಿದರು. ಜೊತೆಗೆ ಕೆಲ ಯುವಕರನ್ನು ಬೇರೆ ಬೇರೆ ತಂಡಗಳಾಗಿ ವಿಂಗಡಿಸಿದರು. ಅದರಲ್ಲಿ ಒಂದು ತಂಡದ ನಾಯಕ ಸ್ಥಾನವನ್ನು ಆಶಿಂ ರ.ಅ ರವರಿಗೆ ನೀಡಿದರು*)
ಒಂದು ತಂಡದ ನಾಯನಾಗುವಂತೆ ಸೂಚಿಸಿದ ಉಮರ್ ರ.ಅ ಹೇಳಿದರು : ಆಶಿಂ ನೀವು ಏಳು ಜನರ ಒಂದು ತಂಡ ರಚಿಸಿಕೊಳ್ಳಬೇಕು. ಆದರೆ....,, ಆ ಏಳು ಜನರೂ ನೇರ ಸ್ವಹಾಬಿಗಳ ಮಕ್ಕಳಾಗಿರಬೇಕು ಎಂಬ ನಿಬಂಧನೆ ನೀಡಿದ್ದರು.
ಆಶಿಂ ರ.ಅ ರವರು ಉಮರ್ ರ.ಅ ಮಾತಿಗೆ ಅನುಸಾರವಾಗಿ ಸ್ವಹಾಬಿಗಳ ಮಕ್ಕಳಿಂದ ಕೂಡಿದ ಏಳು ಜನರ ಒಂದು ತಂಡ ರಚಿಸುವಲ್ಲಿ ಯಶಸ್ವಿಯಾದರು.
ಖಲೀಫರ ಆದೇಶ ಹೊರಬಿತ್ತು. ಯುದ್ಧಕ್ಕೆ ಹೊರಡುವ ದಿನ ಹಾಗೂ ಸಮಯ ನಿಶ್ಚಯಗೊಂಡಿತು. ಸ್ವಹಾಬಿಗಳೆಲ್ಲರೂ ಸೈನ್ಯದಲ್ಲಿ ಸೇರಿಕೊಂಡರು. ಅದೇ ರೀತಿ ಆಶಿಂ ರ.ಅ ರವರೂ ಸಿದ್ದಗೊಂಡರು. ತನ್ನ ತಂಡದ ಏಳು ಜನರ ಒಟ್ಟುಗೂಡಿಸುವಾಗ ಒರ್ವ ಸ್ವಹಾಬಿಯವರ ಮಗನ ಅನುಪಸ್ಥಿತಿಯಿತ್ತು. ಆಶಿಂ ಬಿನ್ ಉತ್ಬಾ ಎನ್ನುವವರು ವಿಪರೀತ ಜ್ವರದಿಂದ ಬಳಲುತ್ತಿದ್ದರು.
ಆಶಿಂ ರ.ಅ ರವರು ನೇರವಾಗಿ ಅವರ ಬಳಿ ತೆರಳಿದಾಗ ತೀರಾ ಅಸ್ವಸ್ತರಾಗಿ ಮಲಗಿರುವುದು ಕಂಡು ಬಂತು. ಆದರೂ ನಾನು ಯುದ್ಧಕ್ಕೆ ತೆರಳಲು ಸಿದ್ದಸಿದ್ದೇನೆಂದು ಹೇಳಿದರು. ಆದರೆ ಅವರ ಬರುವಿಕೆಯನ್ನು ಸ್ವತ್ಹಃ ಆಶಿಂ ರ.ಅ ರವರೇ ನಿರಾಕರಿಸಿದರು.
ಮತ್ತೆ ಸ್ವಹಾಬಿಯವರ ಮಕ್ಕಳ ಅನ್ವೇಷಣೆಯಲ್ಲಿ ಆಶಿಂ ರ.ಅ ತೊಡಗಿಕೊಂಡರು. ಆದರೆ ಆಶಿಂ ರ.ಅ ರವರಿಗೆ ಯಾವುದೇ ಸ್ವಹಾಬಿಯವರ ಮಕ್ಕಳೂ ಸಿಗಲಿಲ್ಲ. ನಿರಾಶೆಗೊಂಡ ಆಶಿಂ ರ.ಅ ನೇರವಾಗಿ ತಂದೆ ಸುರಾಖತಿಬ್ನು ಮಾಲಿಕರ ಬಳಿ ತೆರಳಿದರು.
ನಡೆದ ವಿಷಯವನ್ನೆಲ್ಲಾ ಸವಿವರವಾಗಿ ತಂದೆಯ ಬಳಿ ವಿವರಿದಾಗ, ತಂದೆ ಸುರಾಖ ರ.ಅ ಕೆಲ ಸ್ವಹಾಬಿಯವರ ಮಕ್ಕಳ ಹೆಸರು ಸೂಚಿಸಿದರು. ಆದರೆ, ಅಲ್ಲಿಗೆ ಈಗಾಗಲೇ ಆಶಿಂ ರ.ಅ ತೆರಳಿದ್ದರು. ಅವರೆಲ್ಲರೂ ಇತರ ತಂಡದೊಂದಿಗೆ ಸೇರಿಕೊಂಡಿದ್ದರು. ನಿರಾಶಾದಾಯಕರಾದ ತಂದೆ ಮಕ್ಕಳ ಎಡೆಯಲ್ಲಿ ಓಂದು ಶಬ್ದ ಕೇಳಿತು..
ನಾನೂ ಸ್ವಹಾಬಿಯವ ಮಕ್ಕಳಲ್ಲಿ ಓರ್ವ.. ನಾನು ಬರಬಹುದೇ....!!
ಆ ಶಬ್ದ ಯಾರದ್ದಾಗಿತ್ತು....???
( *ಮುಂದುವರಿಯುವುದು...*)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
https://www.facebook.com/Nizamuddin-Uppinangady-Tabuk-Page-1058686387577670/

Comments
Post a Comment