ಭಾಗ 1
#ಅಸ್ಸಲಾಂ_ಅಲೈಕುಂ
ಇಸ್ಲಾಂ ಧರ್ಮದೊಳಗಡೆ ಹಾಗೂ ಗ್ರಂಥಗಳಲ್ಲಿ, ಪುಸ್ತಕಗಳಲ್ಲಿ ಹಲವಾರು ಚರಿತ್ರೆಗಳು ಹಾಗೂ ಇತಿಹಾಸಗಳು ಕಾಣಲು ಸಿಗುತ್ತದೆ. ಈ ರೀತಿಯ ಚರಿತ್ರೆಗಳನ್ನು ತಿಳಿದವರು ಕೆಲವರು, ಆದರೆ... ತಿಳಿಯದವರು ಹಲವರು....
ನನ್ನ ಅರಿವಿನಲ್ಲಿ ಹಾಗೂ ಕೇಳಿ ತಿಳಿಯಲ್ಪಟ್ಟ ಕೆಲ ಚರಿತ್ರೆಗಳನ್ನು ಇತರರೊಂದಿಗೆ ಹಂಚುವ ಇರಾದೆ ನನ್ನದಾಗಿದೆ.. ಇನ್ಶಾ ಅಲ್ಲಾ....
    
------*******-------
ಮಹಿಳೆಯ ಬಗ್ಗೆ ಇಸ್ಲಾಂ ಧರ್ಮ ಸ್ವಾತಂತ್ರ ನೀಡುತ್ತಿಲ್ಲ. ಅವರನ್ನು ಧಾರ್ಮಿಕ ಚೌಕಟ್ಟಿನೊಳಗೆ ಬಂಧನದಲ್ಲಿಡಲಾಗಿದೆ, ಎಂಬಿತ್ಯಾದಿ ಸುಳ್ಳು ವಾದ, ಅಪವಾದಗಳ ಎಡೆಯಲ್ಲಿ.. ನಾವು ತಿಳಿಯಲೇ ಬೇಕಾದ ಹದಿನೈದು ಶತಮಾನದ ಹಿಂದಿನ ಒಂದು ಸ್ವಹಾಬಿಯವರ ಮಗಳ ಸುಂದರ ಕಥೆ....
ಧೀರ ಮಹಿಳೆಯೊಬ್ಬರ ರೋಚಕ ಕಥೆ
ಅವರೇ...
#ಸುರಾಖರ_ಮಗಳು
           
ಲೋಕ ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರು ಹಿಜಿರಾ ಯಾತ್ರೆ ಹೊರಡುವ ಸಮಯದಲ್ಲಿ ಪ್ರವಾದಿ (ಸ.ಅ) ರನ್ನು ಕೊಲ್ಲಲು ಖಡ್ಗದೊಂದಿಗೆ ಹೊರಟು ನಿಂತ ಮಕ್ಕಾ ಮುಶ್ರಿಕರ ತಂಡದಲ್ಲಿದ್ದ ಕುದುರೆ ಪಡೆಯ ಓರ್ವ ನಾಯಕರಾಗಿದ್ದರು. ಅವರೇ *ಸುರಾಖತಿಬ್ನು ಮಾಲಿಕ್*.
ಮಹಮ್ಮದ್ ಮುಸ್ತಫಾ ಸ.ಅ ರವರನ್ನು ಕೊಲ್ಲುವ ಗುರಿಯಾಗಿಸಿ ಖಡ್ಗದೊಂದಿಗೆ ಹಿಂಬಾಲಿಸಿ ಬರುವಾಗ ತಾನು ಸಂಚರಿಸುತಿದ್ದ ವಾಹನ ನೆಲದಲ್ಲಿ ಹೂತು ಹೋದಾಗ ಭಯಭೀತರಾಗಿ, ಪ್ರವಾದಿಯವರೇ ನನ್ನನ್ನು ರಕ್ಷಿಸಬೇಕೆಂದು ಬೇಡಿಕೊಂಡರು. ಕೂಡಲೇ ಕಾರುಣ್ಯದ ಕಡಲು ನಮ್ಮ ಪ್ರವಾದಿ ಸ.ಅ ಅವರನ್ನು ರಕ್ಷಿಸಿದರು. ಅದಾಗಲೇ ಸುರಾಖ ರವರು ಇಸ್ಲಾಂ ಧರ್ಮದ ಉಚ್ಚ ವಾಖ್ಯಗಳನ್ನು ಉಚ್ಚರಿಸಿ ಇಸ್ಲಾಮಿನೆಡೆಗೆ ಆಕರ್ಷಿತರಾದರು. ಕೈಯಲಿನ್ನೂ ಖಡ್ಗ ಎತ್ತಿಕೊಂಡಿದ್ದರು ಸುರಾಖ. ಆ ಖಡ್ಗವನ್ನೇ ಗಮನಿಸುತ್ತಾ ಪ್ರವಾದಿ ಸ.ಅ ಹೇಳಿದರು..
*ಓ.. ಸುರಾಖ.. ನನ್ನ ಕೊಲ್ಲಲು ಖಡ್ಗದೊಂದಿಗೆ ಬಂದ ಈ ಕೈಗಳಲ್ಲಿ, ಇರಾನಿಯನ್ ಚಕ್ರವರ್ತಿ ಪರ್ಷಿಯನ್ ದೊರೆ ಯಶ್ಜುದುಗ್'ರ ಅಧಿಕಾರದ ಸಂಕೋಲೆಯು ಬರುವುದನ್ನು ನಾನು ಕಾಣುತಿದ್ದೇನೆ. ನಿನ್ನ ಈ ಕಲೆಕಟ್ಟಿಗೆ ಬದಲಾಗಿ ಯಶ್ಜುದುಗ್ ರ ಕಿರೀಟವು ಬರುವುದನ್ನು ನಾನು ಕಾಣುತಿದ್ದೇನೆ. ನಿನ್ನ ಈ ಅರೇಬಿಯನ್ ಉಡುಗೆಗೆ ಬದಲಾಗಿ ಯಶ್ಜುದುಗ್ ರ ಪಡೆಯ ಅಂಗಿಯು ಧರಿಸುವುದನ್ನು ನಾನು ಕಾಣುತಿದ್ದೇನೆ.*
ಹೀಗೇ ಕಾಲವು ಕ್ರಮೇಣ ಮುಂದುವರಿಯಿತು. ಸುರಾಖ ನೆಬಿ ಸ.ಅ ರವರ ಇಷ್ಟದ ಸ್ವಹಾಬಿಗಳಲ್ಲಿ ಓರ್ವರಾದರು. ಇಷ್ಟದ ಸ್ವಹಾಬಿಗಳಲ್ಲಿ ಓರ್ವರಾದ ಸುರಾಖ ರ.ಅ ರವರು ಇಸ್ಲಾಂ ಧರ್ಮದ ಪ್ರಸಿದ್ದ ಸ್ವಹಾಬಿಗಳ ಪಟ್ಟಿಯಲ್ಲಿ ಓರ್ವರಾದರು.
ಕಾಲ ಕ್ರಮೇಣ.. ಲೋಕ ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರು ವಫಾತಾದರು. ನೆಬಿ ಸ.ಅ ರವರು ವಫಾತಾದ ನಂತರ ಖಲೀಫರಾಗಿ ಅಬೂಬಕ್ಕರ್ ಸಿದ್ದೀಕ್ ರ.ಅ ರವರು ಅಧಿಕಾರ ವಹಿಸಿಕೊಂಡರು. ಅವರ ಆಡಳಿತದ ಕೆಲ ವರ್ಷಗಳ ನಂತರ ಅಬೂಬಕ್ಕರ್ ಸಿದ್ದೀಕ್ ರ.ಅ ರವರೂ ವಫಾತಾದರು. ಇವರ ವಫಾತಿನ ನಂತರ ಹೊಸ ಖಲೀಫರಾಗಿ ಉಮರುಲ್ ಫಾರೂಕ್ ರ.ಅ ರವರು ಅಧಿಕಾರ ವಹಿಸಿಕೊಂಡರು....
(ಮುಂದುವರಿಯುವುದು....)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
https://www.facebook.com/Nizamuddin-Uppinangady-Tabuk-Page-1058686387577670/

Comments
Post a Comment