ಭಾಗ 13

*ಧೀರ ಮಹಿಳೆಯೊಬ್ಬರ ರೋಚಕ ಕಥೆ*
                 ಅವರೇ...
*ಸುರಾಖರ ಮಗಳು* : *ಭಾಗ - 13*


   ಫರಕ್ ಸಾದ್ ನನ್ನು ಬಿಟ್ಟು ಕೊಡಲು ಯಶ್ಚುದುರ್ಗ ಒಂದು ಸವಾಲು ನೀಡಿದ್ದರು.

    *ಸವಾಲಿಗೆ ಸಿದ್ದರಿದ್ದಲ್ಲಿ ನಾಳೆ ಇರಾನಿನ "ಖಾದ್ಸೀಯ್ಯ" ರಣಾಂಗಣಕ್ಕೆ ಬನ್ನಿರಿ ಎಂಬ ಆಹ್ವಾನ ನೀಡಿದರು..*

    ಸವಾಲನ್ನು ನಗುಮುಖದಿಂದಲೇ ಸ್ವೀಕರಿಸಿದ ಮೊಘೇರಾ ರ.ಅ "ಇನ್ಶಾ ಅಲ್ಲಾ" ಎಂದು ಹೇಳಿ, ತಮ್ಮ ಸೈನ್ಯ ತಂಡ ತಂಗಿರುವ ಸ್ಥಳಕ್ಕೆ ಮರಳಿದರು.

                   ************

     ನಾಯಕ ಸಅದ್ ರ.ಅ ರವರು ತಂಗಿದ್ದ ಶರಾಫಾ ಎಂಬ ಸ್ಥಳಕ್ಕೆ ಬಂದು ಮೊಘೇರಾ ರ.ಅ ಯಶ್ಚುದುರ್ಗ್ ಕೋಟೆಯಲ್ಲಾದ ಎಲ್ಲಾ ಘಟನೆಯನ್ನು ವಿವರಿಸಿದರು.

           ಯಶ್ಚುದುರ್ಗ್ ರ ಮಾತಿನಂತೆ ಮರುದಿನ 'ಖಾದ್ಸೀಯ್ಯ' ರಣಾಂಗಣಕ್ಕೆ ಎರಡು ಕಡೆಯವರೂ ಬಂದು ತಲುಪಿದರು.

     *ಒಂದು ಬದಿಯಲ್ಲಿ ಸಹದ್ ರ.ಅ ನೇತೃತ್ವದ ಸೈನ್ಯ ತಂಗಿದ್ದರೆ ಇನ್ನೊಂದು ಬದಿಯಲ್ಲಿ ಯಶ್ಚುದುರ್ಗ್ ಸೈನ್ಯವೂ ತಂಗಿತ್ತು.*

     ಯುದ್ಧದ ಮೊದಲು ಎರಡು ಭಾಗದ ಹಲವು ನಾಯಕರ ಸಮ್ಮುಖದಲ್ಲಿ ಹಲವು ಬಾರಿ ಸಂಧಾನ ಸಭೆಯು ನಡೆಯಿತು. ಆದರೆ ಸಂಧಾನ ಸಭೆಗೆ ಯಾವುದೇ ಫಲ ಕಾಣದ ವೇಳೆಯಲ್ಲಿ.. ಯುದ್ಧದ ಘೋಷಣೆಯಾಯಿತು.

     ************

       ಯುದ್ಧ ಘೋಷಣೆಯಾಗುತ್ತಿದ್ದಂತೆ ಎರಡೂ ಭಾಗದ ಸೈನಿಕರೂ ಹೋರಾಡಲು ಸರ್ವ ಸನ್ನಧ್ಧರಾಗಿ ನಿಲ್ಲತೊಡಗಿದರು.

       ಈ ಒಂದು ಕೊನೇಯ ಘಟ್ಟದಲ್ಲಿ ಸಹದ್ ರ.ಅ ನೇತೃತ್ವದ ಸೈನ್ಯದಲ್ಲಿದ್ದ ತಲ್ಹಾ ಎಂಬ ಸೈನಿಕ, ಸೈನ್ಯ ಸಂಘದಿಂದ ತಪ್ಪಿಸಿಕೊಂಡರು. (ಯಶ್ಚುದುರ್ಗ್ ಸೈನ್ಯದ ರಹಸ್ಯ ಅರಿಯಲು ಇವರು ತಪ್ಪಿಸಿಕೊಂಡದ್ದಾಗಿತ್ತು.) ತಪ್ಪಿಸಿಕೊಂಡ ತಲ್ಹಾ ನೇರವಾಗಿ ಯಶ್ಚುದುರ್ಗ್ ಸೈನಿಕರ ಹಿಂಬದಿಯಿಂದ ಬಂದು ನೋಡಿದರು.

         ಯಶ್ಚುದುರ್ಗ್ ರ ಸೈನ್ಯದ ಹಿಂಭಾಗದಲ್ಲಿ ಅಥವಾ ಕೊನೇಯಲ್ಲಿ ಕೆಲ ಜನರು ಗುಂಪು ಗುಂಪಾಗಿ ಮದ್ಯ ಸೇವಿಸುತ್ತಿದ್ದರು. ಅದರಲ್ಲೂ ಒಂದು ಬದಿಯಲ್ಲಿ ಇಬ್ಬರು ಒಟ್ಟಾಗಿ ವಿಪರೀತ ಮದ್ಯ ಸೇವಿಸುತ್ತಿದ್ದರು.
     ತಲ್ಹಾ ರವರು ನೇರವಾಗಿ ಅವರ ಬಳಿ ತೆರಳಿದರು. ಬಂದ ಅಪರಿಚಿತ ವ್ಯಕ್ತಿಯನ್ನು ನೋಡುತ್ತಿದ್ದಂತೆಯೇ...
 ನೀವು ಯಾರು..?
ಯಾಕಾಗಿ ಬಂದಿರುವರಿ...?
 ಎಂದು ಪ್ರಶ್ನಿಸಿದರು.
  ಆಗ ತಲ್ಹಾ : ನಾನು ಓರ್ವ ಮುಸ್ಲಿಂ ಸೈನಿಕ. ನಿಮ್ಮ ಜೊತೆ ಮಾತನಾಡಲು ಬಂದಿರುವೆನು ಎಂದು ಹೇಳಿದರು.

   ತಲ್ಹಾ : *ನೀವಿಬ್ಬರು ಸ್ವಲ್ಪ ಸರಿದು ಬನ್ನಿರಿ, ನಿಮ್ಮ ಜೂತೆ ಮಾತನಾಡಲಿದೆ.. ಎಂದು ಸೂಚಿಸಿದರು*.

      ಆದರೆ ತಲ್ಹಾ ಅವರ ಮಾತಿಗೆ ಅವರಲ್ಲಿದ್ದ ಓರ್ವ ಸೈನಿಕ ಭಾರೀ ವಿರೋಧ ವ್ಯಕ್ತಪಡಿಸಿದ. ಇದನ್ನು ಕಂಡು ಸಹಿಸದ ತಲ್ಹಾ ಅವನನ್ನು ಕೊಂದೇ ಬಿಟ್ಟರು. ಇದನ್ನು ಕಂಡು ಭಯಗೊಂಡ ಮತ್ತೊಬ್ಬ ಸೈನಿಕ ಹೇಳಿರಿ : ನಾನು ನಿಮ್ಮ ಮಾತು ಕೇಳುತ್ತೇನೆ ಎಂದನು.

   ತಲ್ಹಾ : ನೀನು ಈ ನಿಮ್ಮ ಸೈನ್ಯದ ಮಧ್ಯದಲ್ಲಿ ಸವಾರಿ ನಡೆಸಬೇಕು, ನಿನ್ನ ಹಿಂಭಾಗದಿಂದ ನಾನು ನಿನ್ನನ್ನು ಹಿಂಬಾಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು.

  ತಲ್ಹಾರವರ ಮಾತಿನ ಅನುಸಾರವಾಗಿ ಯಶ್ಚುದುರ್ಗ್ ಸೈನ್ಯ ಮಧ್ಯದಲ್ಲಿ ಅವನು ಮುಂದೆ ನಡೆದನು. ತಲ್ಹಾರವರು ಅವನನ್ನು ಹಿಂಬಾಲಿಸಿದರು.
    ಹಾಗೆಯೇ ಮುಂದೆ ಸಾಗಿದಾಗ. ಸಹದ್ ರ.ಅ ನೇತೃತ್ವದ ಸೈನ್ಯವೂ ಯುದ್ಧಕ್ಕೆ ಸಜ್ಜಾಗಿ ನಿಂತ್ತು. ಅವರ ಸೈನ್ಯದ ಮಧ್ಯ ಭಾಗದಿಂದಲೂ ಸಂಚರಿಸಿ (ಹಿಂಭಾಗದಲ್ಲಿ ಕೆಲವರು ನಮಾಝ್ ಮಾಡುತ್ತಿದ್ದರು) ಅಲ್ಲಿಗೆ ತಲುಪಿದರು.

  *ಒಂದು ಭಾಗದಲ್ಲಿ ನಮಾಝ್; ಇನ್ನೊಂದು ಭಾಗದಲ್ಲಿ ಮದ್ಯ ಸೇವನೆ*.
   
       ಅವನಿಗೆ ಅಚ್ಚರಿಯಾಯಿತು. ಸಹದ್ ರ.ಅ ರವರ ನೇತೃತ್ವದ ಸೈನ್ಯವು ಉತ್ತಮವದ ಸೈನ್ಯ ತಂಡವೆಂದು ಮನಸಲ್ಲೇ ಒಪ್ಪಿಕೊಂಡನು.

ಮುಂದೇನಾಯಿತು....

 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

 ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ