ಭಾಗ 6

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ
                 ಅವರೇ... #ಸುರಾಖರ_ಮಗಳು  #ಭಾಗ - 6

        ಸುರಾಖ ರ.ಅ ರವರ ಮಾತುಗಳಿಂದ ಆವೇಶಭರಿತರಾದ ಸಹದ್ ರ.ಅ ರವರ ನೇತೃತ್ವದ ಸ್ವಹಾಬಿವರ್ಯರ ಯುದ್ಧ  ಸೈನ್ಯಕ್ಕೆ,  ಖಲೀಫ  ಉಮರ್ ರ.ಅ ಕೆಲ ಉಪದೇಶಗಳನ್ನು ನೀಡಿದರು.

           ಪ್ರವಾದಿ ಸ.ಅ ರವರು ತೋರಿಸಿಕೊಟ್ಟ ರೀತಿಯಲ್ಲೇ ಯುದ್ಧ ಮಾಡಲು ಹೇಳಿಕೊಟ್ಟು, ನೀವು ಲೋಕದ ಒಂದು ಬಲಿಷ್ಠ ಸೈನ್ಯದೆದುರು ಯುದ್ಧ ಮಾಡಲು ಹೊರಟಿದ್ದೀರಿ,
*ಸುಮಾರು ಒಂದು ಲಕ್ಷದಷ್ಟು ಸೈನಿಕರನ್ನು ಹೊಂದಿರುವ ಸರ್ವ ಸನ್ನಧ್ಧ ಸೈನ್ಯದೆದುರು ಕೇವಲ ಮೂವತ್ತು ಸಾವಿರದಷ್ಟಿರುವ ನಮ್ಮ ಸೈನ್ಯವು ಹೋರಾಡಲಿದೆ.*

       ಕ್ರೂರರಾದ ಯಶ್ಜುದುರ್ಗ್ ಸೈನ್ಯದಲ್ಲೆಲ್ಲೂ ಮಕ್ಕಳು ಹಾಗೂ ಮಹಿಳೆಯರು ಕಂಡರೆ ಖಡ್ಗ ಝಳಪಿಸಬಾರದು. ಆರೀತಿ ಮಕ್ಕಳನ್ನು ಹಾಗೂ ಮಹಿಳೆಯರು ಕಂಡರೆ ಖಡ್ಗವನ್ನು ಅಡಗಿಸಿ ಇಡಬೇಕೆಂದು ಆಜ್ಞೆ ನೀಡಿದರು. ( *ಆಶ್ಚರ್ಯವಲ್ಲವೇ ನಮ್ಮ ಇಸ್ಲಾಂ ಧರ್ಮದ ನೀತಿ ಹಾಗೂ ನಿಯಮ*).
 ಜೊತೆಗೆ, ನೀವು ಹೋಗುವ ರಾಜ್ಯದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಕಾಪಾಡಬೇಕೆಂದು ಹೇಳಿದರು.

          *******

  ಖಲೀಫ ಉಮರ್ ರ.ಅ ರವರಿಗೆ ಸಹದ್ ರ.ಅ ರವರು ನೆರೆದಿದ್ದ ಮೂವತ್ತು ಸಾವಿರದಷ್ಟಿರುವ ಸೈನ್ಯದ ವಿವರಣೆ ನೀಡಿದರು. ಜೊತೆಗೆ ತಂಡಗಳ ವಿವರಣೆಯೂ ನೀಡಿದರು. ಹೀಗಿರುವಾಗ ಆಶಿಂ ರ.ಅ ರವರ ವಿಚಾರಣೆ ನಡೆಯಿತು, ಆಗಲೇ ಆಶಿಂ ರ.ಅ ರವರ ಹಿಂಭಾಗದಲ್ಲಿದ್ದ ಆಶಿಮಾರ ಕುರಿತು ಸ್ಪಷ್ಟನೆ ಕೇಳಿದ ಉಮರ್ ರ.ಅ ರವರಿಗೆ ಸಹದ್ ರ.ಅ ರವರು,
    "ಅವರು ಯಾರೆಂದು ನನಗೆ ಗೊತ್ತಿಲ್ಲ, ನಾನು ವಿಚಾರಣೆ ನಡೆಸಿಲ್ಲ ಎಂದು ಉತ್ತರಿಸಿದರು".  

   ಉಮರ್ ರ.ಅ ಸಹದ್ ರ.ಅ ರವರನ್ನು ಒಂದು ಬದಿಗೆ ಕರೆದು, ಯಾತ್ರೆ ಅಥವಾ ಯುದ್ಧದ ಸಂಧರ್ಭದಲ್ಲಿ ನಿಮಗೆ ಯಾವುದೇ ಸಂಶಯ ಬಂದರೂ ಯಾರ ಬಳಿ ಹೇಳಬಾರದು ಎಂದು ಹೇಳಿದರು.

        *ಖಲೀಫರು ಯುದ್ಧ ತಂಡವನ್ನು ಬೀಳ್ಕೊಡುವ ಸಮಯವಾಯಿತು. ಕೊನೆಯಾದಾಗಿ ಉಮರ್ ರ.ಅ ಸಹದ್ ರ.ಅ ರವರೊಂದಿಗೆ ಎರಡು ವಿಷಯಗಳನ್ನು ತಿಳಿಸಿದರು.*
 
  *  ಕೈ ಚಿಲದಿಂದ ಒಂದು ಪತ್ರ ಹೊರತೆಗೆದ ಉಮರ್ ರ.ಅ ಹೇಳಿದರು. ಇರಾನಿನಲ್ಲಿ *ಶರಾಫ* ಎಂಬ ಒಂದು ಸ್ಥಳವಿದೆ ಆ ಸ್ಥಳಕ್ಕೆ ತಲುಪಿದಾಗ ಮಾತ್ರ ನೀವು ಈ ಪತ್ರವನ್ನು ತೆಗೆದು ಓದ ತಕ್ಕದ್ದು.

* ನೀವು ಇರಾನಿಗೆ ತಳುಪಿದಾಗ, *ಶೈಬಾನ್ ಬೆಟ್ಟದ ಕೆಳ ಭಾಗದಲ್ಲಿ ಹಸನ್ ಮುಸನ್ನಾ ಎಂಬ ಮುಸ್ಲಿಂ ವ್ಯಕ್ತಿ ಇದ್ದಾರೆ. ಜಿಸ್'ನ್ ಎಂಬ ಗೊತ್ರ ಯುದ್ದದಲ್ಲಿ ಕೊಲ್ಲಲ್ಪಟ್ಟ ಹಸನ್ ಬನ್ನಾ ಇವರ ಮಗನಾಗಿದ್ದಾನೆ ಹಸನ್ ಮುಸನ್ನಾ ರ.ಅ.* ಇರಾನಿನ ಧೀರ ಹೋರಟಗಾರಾಗಿದ್ದಾರೆ ಅವರು. ಅವರೊಂದಿಗೆ ಕೇಳಿದರೆ ಸಾಕು, ಯಾರಾಗಿದ್ದಾರೆ ಖಾಸಿಂ ಸರಾಖ ರವರನ್ನು ಕೊಂದದ್ದು, ಯಾಕೆ ಅವರನ್ನು ಕೊಂದರು..?. ಅದಕ್ಕೆ ಉತ್ತರ ನಿಮಗೆ ಅಲ್ಲಿ ದೊರಕಲಿದೆ. ಹಸನ್ನ್ ಮುಸನ್ನಾ ಇರಾನನ್ನು ಸಂಪೂರ್ಣ ಬಲ್ಲವರಾಗಿದ್ದಾರೆ ಎಂದು ಉಮರ್ ರ.ಅ ಸಹದ್ ರ.ಅ ರವರೊಂದಿಗೆ ತಿಳಿಸಿದರು.

         ******

ಸುಮಾರು ಮೂವತ್ತು ಸಾವಿರ ಸೈನ್ಯವನ್ನು ಮುನ್ನಡೆಸುತ್ತಾ ಸಹದ್ ರ.ಅ ರವರು ಯಾತ್ರೆ ಹೊರಟುರು . ಯಾತ್ರೆಯ ದಾರಿ ಮಧ್ಯೆ ಒಂದು ನದಿ ಅಡ್ಡವಾಗಿ ಹರಿಯುತ್ತೀತ್ತು.

    ಆ ನದಿಯಲ್ಲಾದ ವಿಸ್ಮಯವಾದರೂ ಏನು...!!

 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ   ತಬೂಕ್*

https://www.facebook.com/Nizamuddin-Uppinangady-Tabuk-Page-1058686387577670/

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ