ಭಾಗ 2

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ
                 ಅವರೇ...
        #ಸುರಾಖರ_ಮಗಳು       #ಭಾಗ - 2*

    ಖಲೀಫ ಉಮರ್ ರ.ಅ ರವರು ಆಡಳಿತವನ್ನು ನಡೆಸತೊಡಗಿದರು. ಇಸ್ಲಾಂ ಧರ್ಮ ನಾನಾ ದೇಶಗಳತ್ತ ವ್ಯಾಪಿಸುತಿತ್ತು. ಏಕ ದೈವಾರಾಧನೆ ಹಾಗು ಸತ್ಯ ಧರ್ಮದ ಬಗೆಗಿನ ವಿಶ್ವಾಸ ಜನರಲ್ಲಿ ಮೂಡಿ ಅನೇಕ ರಾಜ್ಯ ಹಾಗೂ ರಾಷ್ಟ್ರಗಳು ಇಸ್ಲಾಂ ಧರ್ಮವನ್ನು ಆವರಿಸುತಿತ್ತು. ಆದರೆ ಲೋಕದ ಚಿತ್ತ ಪುಣ್ಯ ಮದೀನದ ಕಡೆಗೆ ಇತ್ತು, ಜೊತೆಗೆ ಆಡಳಿತಗಾರ ಖಲೀಫ ಉಮರ್ ರ.ಅ ರವರ ಮೇಲೆ ಇತ್ತು.

      ಒಂದು ದಿನ ಮದೀನಾ ಮಸೀದಿಯಲ್ಲಿ ಅಸರ್ ನಮಾಝಿನ ಬಳಿಕ ಉಮರ್ ರ.ಅ ರವರು ಹೇಳಿದರು...
 ಎಲ್ಲರೂ ಅಲ್ಪ ಹೊತ್ತು ಅಲ್ಲೇ ಕುಳಿತುಕೊಳ್ಳಿರಿ....   ಸ್ವಹಾಬಿಗಳೆಲ್ಲರೂ ಗಮನವನ್ನು ಅತ್ತ ಅಮೀರುಲ್ ಮುಹ್ಮಿನೀನ್ ಕಡೆಗೆ ನೆಟ್ಟರು...
ಉಮರ್ ರ.ಅ ವಿಷಯವನ್ನು ಪ್ರಸ್ತಾಪಿಸಿದರು..

   ಈ ಮದೀನಾದ ಪ್ರತಿನಿಧಿಯಾಗಿ ಅಥವಾ ಈ ಇಸ್ಲಾಂ ಧರ್ಮದ ಪ್ರತಿನಿಧಿಯಾಗಿ ಇರಾನಿನ ಪರ್ಶಿಯನ್ ಗೆ ನಾನು ಕಳುಹಿಸಿಕೊಟ್ಟ ನನ್ನ ಪ್ರತಿನಿಧಿ *ಸುರಾಖತಿಬ್ನು ಮಾಲಿಕರ ಮಗ ಖಾಸಿಂ ಸುರಾಖರನ್ನು* ಇರಾನ್ ಹಾಗೂ ಇರಾಖಿನ ಮಧ್ಯೆ ಇರುವ ಶೈಬಾನ್ ಬೆಟ್ಟದಲ್ಲಿ ಕಾರಣವಿಲ್ಲದೆ ಇರಾನಿನ ಪರ್ಶಿಯನ್ನರು ಕೊಂದು ಹಾಕಿದ್ದಾರೆ. ಅದು ನನ್ನ ಧೀರತೆಗೆ ಹಾಗೂ ಇಂಸ್ಲಾಂ ಗೆ ಒಂದು ಸವಾಲು ಹಾಕಿದ್ದಾರೆ. ಆದ್ದರಿಂದ ಆ ಧಿಕ್ಕಾರಿ ರಾಷ್ಟ್ರವಾದ ಇರಾನಿನೊಂದಿಗೆ ಯುದ್ಧ ಸಾರಲು ನಾನು ಒಂದು ಯುದ್ಧ ಪಡೆಯನ್ನು ಅತ್ತ ಕಳುಹಿಸುವ ತೀರ್ಮಾನ ಕೈಗೊಂಡಿದ್ದೇನೆ.
         
( *ಆ ಕಾಲ ಘಟ್ಟದಲ್ಲಿ ಇರಾನ್ ಹಾಗೂ ರೋಮ್ ಎರಡೂ ಧಿಕ್ಕಾರಿ ರಾಷ್ಟ್ರಗಳಾಗಿದ್ದವು*).

ಮಾತು ಮುಂದುವರಿಸುತ್ತಾ ಉಮರ್ ರ.ಅ ರವರು ಸ್ವಹಾಬಿಗಳೊಂದಿಗೆ ಅಭಿಪ್ರಾಯ ಸಂಗ್ರಹಿಸತೊಡಗಿದರು. ಅದಾಗಲೇ ಯುದ್ದಕ್ಕೆ ಯಾವ ಸಮಯವೂ ತ್ಯಾಗಕ್ಕೆ ಸಿದ್ದಗೊಂಡಿದ್ದ ಮದೀನಾದ ಸ್ವಹಾಬಿಗಳು ಒಂದೇ ವಾಕ್ಯದಲ್ಲಿ ಒಮ್ಮತ ಸೂಚಿಸಿದರು.

ಉಮರ್ ರ.ಅ ಹೇಳಿದರು : ಹೌದು ಯತಾ ಸಮಯದಲ್ಲೂ ತ್ಯಾಗಕ್ಕೆ ನೀವು ಸಿದ್ಧರಿದ್ದೀರಿ. ಆದರೆ ಇರಾನಿನೊಂದಿಗೆ ಯುದ್ಧ ನಡೆಸಲು ನೇತೃತ್ವವನ್ನು (ಅಮೀರ್ ಪಟ್ಟ) ಯಾರಿಗೆ ನೀಡಬಹುದು..?
 ಅನುಭವೀ ಸ್ವಹಾಬಿ ಖಾಲಿದಿಬ್ನು ವಲೀದ್ ಇನ್ನೊಂದು ಯುದ್ಧಕ್ಕೆ ಹೋಗಿದ್ದಾರೆ. ಫಾತೆಹ್ ಇಬ್ನು ಅಂಬ್ರುನ್ನಾಸ್ ಇನ್ನೊಂದು ಕಡೆಗೆ ಹೋಗಿದ್ದಾರೆ. ಯುದ್ಧದ ನೇತೃತ್ವ ಪಡೆಯುವ ಅರ್ಹರಾರು ಈ ಗುಂಪಿನಲ್ಲಿ ಇಲ್ಲ.

 ಆದರೆ..., ಆ ಮಾತನ್ನು ತಿರಸ್ಕರಿತ್ತಾ ಸ್ವಹಾಬಿಗಳು ಉಮರ್ ರ.ಅ ರವರನ್ನೇ ಆಯ್ಕೆಗೊಳಿಸಿದರು.
       ಆದಕ್ಕೆ ಪ್ರತ್ಯುತ್ತರ ನೀಡದ ಉಮರ್ ರ.ಅ ರವರ ಮೌನವನ್ನು ಅಲ್ಲಿ ನೆರೆದಿದ್ದ ಜನರು ಅಂಗೀಕಾರ ಮಾಡಲು ಹೊರಟಾಗಲೇ ಆ ಗುಂಪಿನ ಹಿಂಬದಿಯಿಂದ ಓರ್ವ ಸ್ವಹಾಬಿ ಎದ್ದು ನಿಂತು ಉಮರ್ ರ.ಅ ರವರು ಬೇಡ.  ಅಲೀ ರ.ಅ ಅರ್ಹ ಹಾಗೂ ಸೂಕ್ತ ವ್ಯಕ್ತಿಯೆಂದು ಹೇಳಿದರು.
     ಅದಾಗಲೇ ಅಮೀರ್ ಪಟ್ಟ ಸ್ವೀಕರಿಸಲು ಆಸಕ್ತಿಯಿಂದಿದ್ದ ಅಲೀಯತ್ತ ನೋಡುತ್ತಾ ಉಮರ್ ರ.ಅ ಅಲೀಯವರು ಬೇಡ ಎಂದು ಘೋಷಿಸಿದರು.
   
     ಅಲ್ಲಿ ನೆರೆದಿದ್ದ ಸ್ವಹಾಬಿಗಳು  ಅಲೀ ರ.ಅ ರವರೊಂದಿಗೆ ಉಮರ್ ರ.ಅ ರವರನ್ನು ತಿರಸ್ಕರಿಸಲು ಕಾರಣ ಕೇಳಿದಾಗ..  ಅಲೀ ರ.ಅ ಹೇಳಿದರು, ಉಮರ್ ರ.ಅ ಕೇವಲ  ಮದೀನಾದ ಆಡಳಿತಗಾರ ಮಾತ್ರವಲ್ಲ. ಇಡೀ ವಿಶ್ವದ ಓರ್ವ ಆಡಳಿತಾಧಿಕಾರಿ. ಅವರು ಇಸ್ಲಾಂ ಧರ್ಮದ ಓರ್ವ ಖಲೀಫ.
      ನಾವಿರುವಾಗ ಅವರನ್ನು ಯುದ್ಧಕ್ಕೆ ಕಳುಹಿಸಿಕೊಡುವುದು ಸಮಂಜಸವಲ್ಲ ಎಂದರು...
   ಅದನ್ನು ಸ್ವಹಾಬಿಗಳು ಒಪ್ಪಿಕೊಂಡರು.

  ಆದರೆ...!!  ಅಲೀ ರ.ಅ ಅವರನ್ನು ಉಮರ್ ರ.ಅ ಯಾಕೆ ತಿರಸ್ಕರಿಸಿದರು..?

( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

https://www.facebook.com/Nizamuddin-Uppinangady-Tabuk-Page-1058686387577670/

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ