ಭಾಗ 5
#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ*
ಅವರೇ.. #ಸುರಾಖರ_ಮಗಳು* #ಭಾಗ - 5
ಸ್ವಹಾಬಿವರ್ಯರ ಮಕ್ಕಳು ಸಿಗದ ಚಿಂತೆಯಲ್ಲಿದ್ದ ಸುರಾಖ ರ.ಅ ಹಾಗೂ ಆಶಿಂ ರ.ಅ ರಲ್ಲಿ ಸುರಾಖರ ಮಗಳಾದ ಆಶಿಮಾ ನಾನು ಯುದ್ಧಕ್ಕೆ ಬರುವುದಾಗಿ, ನಿಮ್ಮ ಚಿಂತೆಯನ್ನು ದೂರಮಾಡುವುದಾಗಿ ಹೇಳಿದರು.
ಆದರೆ... ಆಶಿಂ ರ.ಅ ಇದನ್ನು ನಿರಾಕರಿಸಿದರು. ನಾವು ಉಮರ್ ರ.ಅ ರವರ ಬಳಿಗೆ ತೆರಳುವುದು, ಅವರು ಅಪಾರ ಜ್ಞಾನ ಹಾಗೂ ಬುದ್ಧಿವಂತರು. ಅವರೆದುರು ನಮ್ಮ ನಾಟಕವೇನು ನಡೋಯುವುದಿಲ್ಲ ಎಂದರು.
ಮತ್ತೆ ಮತ್ತೆ ಹಠದಿಂದಿದ್ದ ಸುರಾಖರ ಮಗಳು ಆಶಿಮಾ ನಾನು ಬರುವುದಾಗಿಯೂ ಅದರ ಬಗ್ಗೆ ಚಿಂತಿಸಬೇಡಿಯೆಂದು, ರೂಮಿಗೆ ಹೋದವರೇ ನೇರವಾಗಿ ಬಟ್ಟೆ ಬದಲಾಯಿಸಿ ಬಂದರು..
ಅರೇ.... ತಂದೆ ಸುರಾಖ ರ.ಅ ರವರ ನೀಲ ಅಂಗಿ (ಅರಬಿ ಉಡುಪು) ಧರಿಸಿ ತಲೆಯನ್ನೆಲ್ಲ ಭದ್ರವಾಗಿ ಶಾಲಿನಿಂದ ಕಟ್ಟಿಕೊಂಡು ಯಾರಿಗೂ ಗುರುತು ಹಿಡಿಯಲಾಗದ ರೀತಿಯಲ್ಲಿ ಯುದ್ಧಕ್ಕೆ ಹೊರಟೇ ನಿಂತರು.
ತಂದೆ ಸುರಾಖತಿಬ್ನು ಮಾಲಿಕರ ಅನುವಾದವು ಸಿಕ್ಕಿತು. ಇಬ್ಬರೂ ಮದೀನ ಮಸೀದಿಯತ್ತ ಬಂದರು. ಮದೀನಾ ಮಸೀದಿಯ ಹೊರಾಂಗಣದಲ್ಲಿ ಜನರೆಲ್ಲ ತುಂಬಿ ತುಳುಕುತಿದ್ದರು. (ಸಮಾರು ಮೂವತ್ತು ಸಾವಿರದಷ್ಟು ಜನರನ್ನು ಹೊಂದಿತ್ತು). ಎಲ್ಲರೂ ಯುದ್ದಕ್ಕೆ ಹೊರಡಲು ಅಂತಿಮ ಸಿದ್ದತೆಯಲ್ಲಿ ತೋಡಗಿದ್ದರು.
**********
ಯುದ್ಧ ಸೈನ್ಯದ ನಾಯಕ ಸಹದ್ ರ.ಅ ರವರೊಂದಿಗೆ ಉಮರ್ ರ.ಅ ನೇರವಾಗಿ ಸುರಾಖತಿಬ್ನು ಮಾಲಿಕರ ಮನೆಗೆ ತೆರಳಿದರು. ( *ತೀರಾ ವೃದ್ಧರಾಗಿದ್ದ ಸುರಾಕ ರ.ಅ ಎದ್ದು ಕೂರುವಷ್ಟು ಅಥವಾ ಹೊರಳಾಡಲೂ ಆಗದಷ್ಟು ಶಕ್ತಿ ಹೀನರಾಗಿದ್ದರು*)
ಸುರಾಖ ರ.ಅ ರನ್ನು ಕಂಡೊಡನೆ ಖಲೀಫ *ಉಮರ್ ರ.ಅ ಸಲಾಂ ಹೇಳಿದರು. ಶಬ್ದವನ್ನು ಆಲಿಸಿದ ಸುರಾಖ ರ.ಅ, ವ ಅಲೈಕುಂ ಸಲಾಂ ಯಾ ಅಮೀರುಲ್ ಮುಹ್ಮಿನೀನ್ ಎಂದರು*.
ಎದ್ದು ಕೂರುವಷ್ಟು ಶಕ್ತಿ ಇಲ್ಲದ ಸರಾಖ ರ.ಅ ಸ್ವತಃ ಖಲೀಫರೇ ಪಕ್ಕಕ್ಕೆ ವಾಲಿಸಿ ತನ್ನನ್ನು ಕಾಣುವಂತೆ ಕೂರಿಸಿದರು. ನಂತರ ಕೆಲ ದಿನಗಳ ಹಿಂದೆ ಸುರಾಖರ ಮಗಳು ಆಶಿಮಾ ಮದಿನಾಗೆ ಬಂದು ಹೇಳಿದ ವಿಜಯದ ಬಗೆಗಿನ ವಿವರವನ್ನು ಸುರಾಖರಲ್ಲಿ ಕೇಳಿದರು. ಸರಾಖ ರ.ಅ ರವರೇ, ನಮ್ಮ ಪಾಲಿಗೆ ವಿಜಯವು ನಿಶ್ಚಿತವೆಂದು ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದರು...?
ಉತ್ತರಿಸುತ್ತಾ ಸರಾಖ ರ.ಅ ಹೇಳಿದರು ಈ ವಿಷಯ ನಿಮ್ಮೆ ಎದುರುಗಡೆ ಬಂದು ಹೇಳುವ ಇರಾದೆ ನನ್ನದು. ಆದರೆ ತೀರಾ ಅಸ್ವಸ್ತನಾದ ನನ್ನ ಕೈಯಲ್ಲಿ ಅದು ಸಾಧ್ಯವಿರಲಿಲ್ಲ ಎಂದರು.
ಓ.. ಹಾಗಾದರೆ ನಿಮಗೇ ಏನೋ ಹೇಳಲು ಇದೆ. ಅದನ್ನು ನಮ್ಮ ಮುಂದೆ ಹೇಳಬೇಡಿ. ನೇರವಾಗಿ ಮದೀನಾ ಮಸೀದಿಯ ಮುಂದೆ ನೆರೆದಿರುವ ಜನರ ಮುಂದೆ ಹೇಳಿರಿ ಎಂದು, *ವೃದ್ಧರಾದ ಸುರಾಕತಿಬ್ನು ಮಾಲಿಕ್ ರ.ಅ ರವರನ್ನು ಖಲೀಫ ಉಮರ್ ರ.ಅ ಹಾಗೂ ಸಹದ್ ರ.ಅ ಸೇರಿ ಎತ್ತಿಕೊಂಡೇ ಹೋದರು*.
ನೆರೆದಿದ್ದ ಸಭೆಯ ಎದರುಗಡೆ ನಿಂತ ಉಮರ್ ರ.ಅ ಹೇಳಿದರು, ಯುದ್ಧಕ್ಕೆ ಹೊರಟು ನಿಂತ ಓ ಜನರೇ.. ಸುರಾಖ ರ.ಅ ರವರಿಗೆ ನಿಮ್ಮ ಎದರುಗಡೆ ಏನೋ ಹೇಳಲಿಕ್ಕಿದೆ. ದಯವಿಟ್ಟು ಇತ್ತ ಕೇಳಿರೆ ಎಂದರು.
ಸರಿಯಾಗಿ ನಿಂತುಕೊಳ್ಳಲೂ ಆಗದ ಸುರಾಖ ರ.ಅ ರವರನ್ನು ಉಮರ್ ರ.ಅ ಗಟ್ಟಿಯಾಗಿ ಹಿಡಿದುಕೊಂಡರು. ಸರಾಖ ರ.ಅ ಮಾತು ಆರಂಭಿಸಿದರು.
*ನಾನು ಮರಣ ಹೊಂದುವುದಿಲ್ಲ ಎಂದರು*. ನೆರೆದಿದ್ದ ಜನರಿಗೆಲ್ಲ ನಗು ಬಂತು. ಆದರೆ ಸುರಾಖ ರ.ಅ ಮಾತು ಮುಂದುವರಿಸಿದರು.
ನೆಬಿ ಸ.ಅ ರವರನ್ನು ಕೊಲ್ಲಲು ಖಡ್ಗದೊಂದಿಗೆ ಬಂದ ನನ್ನ ವಾಹನದ ಕಾಲುಗಳು ಭೂಮಿಯಲ್ಲಿ ಹೂತುಹೊದ ಸಂಧರ್ಭ, ಕ್ಷಮಾದಾನ ನೀಡಿದ ನಂತರ ನೆಬಿ ಸ.ಅ ರವರು ಈ ರೀತಿಯಾಗಿ ಹೇಳಿದರು *ಯಶ್ಚುದುರ್ಗ್ ರ ಅಧಿಕಾರದ ಸಂಕೋಲೆ ನನ್ನ ಕೈಗಳಿಗೆ ಬರಲಿದೆ, ಅವರ ರತ್ನ ಖಚಿತ ಕಿರೀಟ ನನ್ನ ತಲೆಗೆ ಬರಲಿವೆ, ಜೊತೆಗೆ ಅವರು ಧರಿಸಿರುವ ಆ ಅಂಗಿ ಅದು ನನ್ನ ದೇಹದ ಮೇಲೆ ಧರಿಸಲಿದೆ* ಎಂದಿದ್ದರು.
ನನ್ನನ್ನು ಅಲ್ಲಾಹು ಇಲ್ಲಿಯವರೆಗೆ ಜೀವಿಸಿರಿಸಲು ಕಾರಣ ಅದುವೇ.. ನೆಬಿಯವರ ಮಾತು ಸತ್ಯಗೊಳಿಸಿ ಈ ಲೋಕಕ್ಕೆ ಒಂದು ಸಂದೇಶ ನೀಡಲು ಆಗಿದೆ. ಹಾಗಾಗಿ ಈ ವಿಜಯ ಪೂರ್ತಿಯಾಗದೆ ನಾನು ಮರಣ ಹೊಂದುವುದಿಲ್ಲ ಎಂದರು.
ಈ ಮಾತುಗಳಿಗೆ ಸಾಕ್ಷಿ ಅಬೂಬಕ್ಕರ್ ಸಿದ್ದೀಕ್ ರ.ಅ ರವರು ಮಾತ್ರ. ಆದರೆ ಅವರು ಇಲ್ಲಿ ಜೀವಿಸಿ ಇಲ್ಲ. ಮರಣಹೊಂದಿರುತ್ತಾರೆ.
*ಅಲ್ಲಾಹನ ಮೇಲೆ ವಿಶ್ವಾಸ ಇಡುವವರು ಈ ಮಾತನ್ನು ನಂಬಿರಿ ಎಂದರು*.
ನೆರೆದಿದ್ದ ಸ್ವಹಾಬಿವರ್ಯರಿಗೆ ಮನವರಿಕೆ ಆಯಿತು. ಕೆಲವರು ಸುರಾಖ ರ.ಅ ರವರಲ್ಲಿ ಕ್ಷಮೆಯನ್ನು ಕೇಳಿದರು.
ಮುಂದೆ... ಯುದ್ಧಕ್ಕೆ ಹೊರಟು ನಿಂತ ಸ್ವಹಾಬಿವರ್ಯರಿಗೆ ಅತೀವ ಧೈರ್ಯ ಬಂತು. ಒಂದು ಲಕ್ಷದಷ್ಟು ಬರುವ ಸೈನಿಕರೊಂದಿಗೆ ಹೋರಾಡಲು ತೆರಳುವ ಈ ಮೂವತ್ತು ಸಾವಿರದಷ್ಟಿರುವ ಸೈನಿಕರಿಗೆ ಧೈರ್ಯ ಹೆಚ್ಚಾಯಿತು...
( *ಮುಂದುವರಿಯುವುದು...*)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
https://www.facebook.com/Nizamuddin-Uppinangady-Tabuk-Page-1058686387577670/

Comments
Post a Comment