ಭಾಗ 3
#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ
ಅವರೇ... #ಸುರಾಖರ_ಮಗಳು #ಭಾಗ - 3*
ಯುದ್ಧಕ್ಕೆ ಹೊರಟು ನಿಂತ ತಂಡದೊಳಗೆ ನಾಯಕನಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು.
ಅಲೀ ರ.ಅ ಅವರನ್ನು ಉಮರ್ ರ.ಅ ಯಾಕೆ ತಿರಸ್ಕರಿಸಿದರು ಎಂಬ ಸ್ವಹಾಬಿಗಳ ಪ್ರಶ್ನೆಗೆ ಉತ್ತರಿಸಿದ ಉಮರ್ ರ.ಅ., ನನ್ನ ಆಡಳಿತದಲ್ಲಿ ಸಂಶಯ ನಿವಾರಕರು ಅಲೀ ರ.ಅ ರವರು ಆಗಿದ್ದಾರೆ. ಅವರನ್ನು ಯುದ್ಧಕ್ಕೆ ಕಳುಹಿಸಿಕೊಟ್ಟರೆ, ನನಗೆ ನನ್ನ ಆಡಳತದಲ್ಲಿ ಒಂದು ಸಂಶಯ ಬಂದರೆ, ಆ ಸಂಶಯ ನಿವಾರಿಸಲು ನಾನು ಯಾರ ಬಳಿಗೆ ತೆರಳಲಿ ಎಂದು ಪ್ರಶ್ನಿಸಿದರು...
( ಅಲೀ ರ.ಅ ಆ ಕಾಲಘಟ್ಟದಲ್ಲಿನ ಅಪಾರ ಜ್ಞಾನವಂತರಾಗಿದ್ದರು. ಅಲೀ ರ.ಅ ರವರ ಕುರಿತು ನೆಬಿ ಮಹಮ್ಮದ್ ಮುಸ್ತಫಾ ಸ.ಅ ರವರು ಈ ರೀತಿ ಹೇಳಿಕೊಂಡಿದ್ದರು. " *ನಾನು ಅರಿವಿನ ಪಟ್ಟಣವಾದರೂ, ಅದರ ಬಾಗಿಲು ಅಲೀಯವರಾಗಿದ್ದಾರೆ*".)
ಇಂತಹಾ ಜ್ಞಾನ ಪಂಡಿತನನ್ನು ನಾನು ಹೇಗೆ ಯುದ್ಧಕ್ಕೆ ಕಳುಹಿಸಿ ಕೊಡಲಿ ಎಂದು ಉಮರ್ ರ.ಅ ಸಭೀಕರೊಂದಿಗೆ ಪ್ರಶ್ನಿಸಿದರು .
ನಾಯಕನಿಗಾಗಿ ಚರ್ಚೆಯು ಮುಂದುವರಿಯಿತು. ನೆರೆದಿದ್ದ ಸ್ವಹಾಬಿಗಳಲ್ಲಿ ಮತ್ತೊಬ್ಬ ಸ್ವಹಾಬಿ ಓರ್ವ ನಾಯಕನ ಹೆಸರು ಸೂಚಿಸಿದರು. ಅವರೇ *ಸಹದ್ ಇಬ್ನು ಅಬೀ ವಕ್ಕಾಸ್ ರ.ಅ*.
ಸಹದ್ ಇಬ್ನು ಅಬೀ ವಕ್ಕಾಸ್ ರ.ಅ ಹೆಸರು ಕೇಳಿದ ತಕ್ಷಣ ಉಮರ್ ರ.ಅ ರವರು ಮುಗುಳ್ನಕ್ಕು ಕೇಳಿದರು...
ಸಹದ್ : ರವರು ಬೇಕಾ...!!!
ಉಮರ್ ರ.ಅ ರವರೊಂದಿಗೆ ಸಹದ್ ರ.ಅ ರವರು ಬೇಡ ಎನ್ನಲು ಕಾರಣವೇನೆಂದು ಆಶ್ಚರ್ಯಗೊಂಡ ಸ್ವಹಾಬಿಗಳು ಕೇಳಿದರು.
ಉಮರ್ ರ.ಅ ಉತ್ತರಿಸುತ್ತಾ.. *ಸಹದ್ ರ.ಅ ಓರ್ವ ಮುಂಗೋಪಿ, ಅಥವಾ ಕೋಪಿಷ್ಠ*. ಓರ್ವ ಕೋಪಿಷ್ಠನನ್ನು ಅಮೀರ್ ಅಥವಾ ನಾಯಕನಾಗಿ ಮಾಡಲು ಖಂಡಿತವಾಗಿಯೂ ಸಾಧ್ಯವಿಲ್ಲ ಎಂದರು.
( ಯಾಕೆ ಸಹದ್ ರ.ಅ ಕೋಪಿಷ್ಟರೆಂದರೆ, ಮಕ್ಕಾ ಮುಶ್ರಿಕರ ಉಪಟಳ ಹಾಗೂ ಅನ್ಯಾಯ ಹೆಚ್ಚಾಗಿದ್ದ ಸಂದರ್ಭದಲ್ಲಿ ಮಕ್ಕಾದಿಂದ ಮದೀನಾಗೆ ಯಾತ್ರೆ ಕೈಗೊಂಡ ನೆಬಿ ಸ.ಅ ರವರಿಗೆ, ಹಲವು ವರ್ಷಗಳ ಬಳಿಗೆ ಅಧಿಕಾರ ತನ್ನ ಕೈಕೆಳಗೆ ಬಂತು. ಜನ್ಮ ಭೂಮಿ ಮಕ್ಕಾದತ್ತ ನೆಬಿ ಸ.ಅ ಯಾತ್ರೆ ಹೊರಟ್ಟಿದ್ದರು. ಆ ಯಾತ್ರೆಯಲ್ಲಿನ ಸಂಧರ್ಭ ಹಳೇಯ ದಿನಗಳಲ್ಲಿ ನೆಬಿ ಸ.ಅ ರವರಿಗೆ ಉಪಟಳ ಹಾಗೂ ಅನ್ಯಾಯ ಎಸಗಿದ್ದ ಮಕ್ಕಾ ಮುಶ್ರಿಕರಿಗೆ ನೆಬಿ ಸ.ಅ ರವರು ಸಂಪೂರ್ಣ ಕ್ಷಮಾದಾನ ನೀಡಿದ್ದರು. ಪ್ರತಿಯೊಬ್ಬರಿಗೂ ಪ್ರವಾದಿ ಯವರು ಕ್ಷಮೆ ನೀಡಿದ್ದರು.
ಆದರೆ.. ಸಹದ್ ರ.ಅ ರವರಿಗೆ ಕ್ಷಮಾದಾನ ನೀಡಿದ ಬಗ್ಗೆ ತೃಪ್ತಿ ಇರಲಿಲ್ಲ. ಯಾಕೆಂದರೆ, ಸಹದ್ ರ.ಅ ರವರ ಮನೆಯ ಮುಂದೆ ದಿನಾಲು ಅಬೂಜಾಹಿಲ್ ಅವರು ಬಂದು *ನಿನ್ನನ್ನು ಓಡಿಸಿ ಈ ಮನೆ ನಾನು ಸ್ವಂತ ಮಾಡುವೆನೆಂದು ಕೆಣಕುತ್ತಿದ್ದರು*. ಕಾಲ ಕ್ರಮೇಣ ಅದು ಕೈಗೂಡಿ ಬಂತು. ಇದರಿಂದ ಸಹದ್ ರ.ಅ ರವರು ಕುಪಿತಗೊಂಡಿದ್ದರು.
ನೆಬಿ ಸ.ಅ ರವರು ಕ್ಷಮಾದಾನ ನೀಡಿದ ನಂತರ ಸಹದ್ ರ.ಅ ದಾರಿಯಲ್ಲಿ ತೆರಳುವಾಗ ಓರ್ವ ಮಕ್ಕಾ ಮುಶ್ರಿಕನು ನಗುತ್ತಲೇ ಇದ್ದ. ಇದನ್ನು ಪ್ರಶ್ನಿಸಿದ ಸಹದ್ ರ.ಅ ರವರೊಂದಿಗೆ ಆ ಮಕ್ಕಾ ಮುಶ್ರಿಕನು ಹೇಳಿದ. ನಿಮ್ಮ ಪ್ರವಾದಿ ಒಳ್ಳೆಯವರು ನಮಗೆಲ್ಲಾ ಕ್ಷಮಾದಾನ ನೀಡಿದ್ದಾರೆ ಎಂದನು. ಇದನ್ನು ಕೇಳಿ ಅಷ್ಟು ಸಮಾಧಾನಗೊಳ್ಳದ ಸಹದ್ ರ.ಅ ರವರು ತನ್ನ ಕೈಯಲ್ಲಿದ್ದ ಒಂಟೆಯ ಎಲುಬಿನಿಂದ ಆ ಮುಶ್ರಿಕನಿಗೆ ಒಂದು ಏಟು ಕೊಟ್ಟರು. ಇದು ಮಕ್ಕಾ ನಗರದಾದ್ಯಂತ ಚರ್ಚೆಯಾಗಿ ಮಾರ್ಪಟ್ಟಿತ್ತು.)
ಈ ರೀತಿ ನೆಬಿ ಸ.ಅ ರವರು ಕ್ಷಮಾದಾನ ನೀಡಿದ ಮಕ್ಕಾ ಮುಶ್ರಿಕರ ಮೇಲೆ ಹಲ್ಲೆ ಗೈಯಲು ಸಹದ್ ರ.ಅ ಅಧಿಕಾರ ನೀಡಿದವರಾರು ಎಂದು ಉಮರ್ ರ.ಅ ಪ್ರಶ್ನಿಸಿದರು. ಈರೀತಿಯ ಮುಂಗೋಪಿಗೆ ಸೈನ್ಯದ ನಾಯಕತ್ವ ನೀಡಲು ಸಾಧ್ಯವಿಲ್ಲ ಎಂದರು.
ಆದರೆ ನೆರೆದಿದ್ದ ಸ್ವಹಾಬಿವರ್ಯರು ಸಹದ್ ರ.ಅ ರವರನ್ನು ವಿಮರ್ಶಿಸುತ್ತಾ... ಸಹದ್ ರ.ಅ ರವರು ಬದಲಾಗಿದ್ದಾರೆ.. ಹಳೇಯದಂತಲ್ಲ.. ಈಗ ಸಹದ್ ರ.ಅ ರವರು ತುಂಬಾ ಅರ್ಥಮಾಡಿಕೊಳ್ಳುವವರಾಗಿದ್ದಾರೆ ಎಂದರು.
ಅಲ್ಲಿ ಚರ್ಚಾ ಕೂಟ ನಡೆಯುತ್ತಿತ್ತು.. ಮಸ್ಜಿದುಲ್ ನಬವಿಯ ಒಂದು ಬದಿಯಿಂದ ಒಬ್ಬರು ಹಿಜಾಬ್ ಅಥವಾ ಬುರ್ಖಾಧಾರಿ ಮಹಿಳೆ ಬಂದು ಆ ಸಂಘಕ್ಕೆ ಸಲಾಂ ಹೇಳಿದರು...
ಹಾಗಾದರೆ ಆ ಮಹಿಳೆ ಯಾರು....
( *ಮುಂದುವರಿಯುವುದು...*)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
https://www.facebook.com/Nizamuddin-Uppinangady-Tabuk-Page-1058686387577670/

Comments
Post a Comment