ಭಾಗ 12

*ಧೀರ ಮಹಿಳೆಯೊಬ್ಬರ ರೋಚಕ ಕಥೆ*
                 ಅವರೇ...
*ಸುರಾಖರ ಮಗಳು* : *ಭಾಗ - 12*

   ಯಶ್ಚುದುರ್ಗ್ ಮೊಘೇರಾ ರ.ಅ ರವರ ಖಡ್ಗದ ಕಡೆ ಗಮನಿಸಿದರು. ಅತ್ತ ಗಮನಿಸಿದಾಗ ಖಡ್ಗದ ವರೆ (ಖಡ್ಗ ಇರಿಸುವ ಚೀಲ) ಹರಿದಿತ್ತು. ಇದನ್ನೂ ಯಶ್ಚುದುರ್ಗ್ ಅಪಹಾಸ್ಯ ಮಾಡಿದರು ..
      ಮತ್ತೆ ಕೆರಳಿದ ಮೊಘೇರಾ ರ.ಅ ಖಡ್ಗವನ್ನು ವರೆಯಿಂದ ಹೊರ ತೆಗೆದು ಇದೋ ನೋಡಿ ಎಂದು, ಯಶ್ಚುದುರ್ಗ್ ಕೂತಿದ್ದ ಸಿಂಹಾಸನದ ಎದುರಲ್ಲೇ ಗರಗರನೆ ತಿರುಗಿಸಿ ಕವಾಯತು ಪ್ರದರ್ಶಿಸಿದರು. ಇದನ್ನು ಕಂಡು ಯಶ್ಚುದುರ್ಗ್ ಐಶ್ವರ್ಯಗೊಂಡರು .

      ಅತ್ತ ದೂರದಿಂದಲೇ ಇದನ್ನೆಲ್ಲ ವೀಕ್ಷಿಸುತಿದ್ದ ಯಶ್ಚುದುರ್ಗ್ ರ ಮಗಳಾದ ತಹ್ಮಿನಾ ಅಲ್ಲಿಗೆ ಬಂದಳು. ಮೊಘೇರಾ ರ.ಅ ರವರ ಕವಾಯತು ಕಂಡು ತಹ್ಮಿನಾಗೆ ಸಹಿಸಿರಲಿಲ್ಲ.

  ಖಡ್ಗ ಹೋರಾಟದಲ್ಲಿ ಖ್ಯಾತಿ ಹೊಂದಿರುವ ನನ್ನೆದುರು ನಿನ್ನದೇನು ಆಟ ಎಂದು, ಯಶ್ಚುದುರ್ಗ್ ಕುಳಿತ ಪಕ್ಕದಲ್ಲಿದ್ದ ಟೇಬಲಿನ ಮೇಲಿನ ಬಟ್ಟೆಯನ್ನು ಗಾಳಿಗೆ ತೂರಿ, ಎತ್ತರದಿಂದ ಹಾರಿ ಎರಡು ತುಂಡು ಮಾಡಿದಳು. (ಇದೊಂದು ಸವಾಲಾಗಿತ್ತು) ಅದರಲ್ಲಿ ಒಂದು ತುಂಡು ದೊಡ್ಡದಾಗಿ ಇನ್ನೊಂದು ತುಂಡು ಚಿಕ್ಕದಾಗಿ ಕತ್ತರಿಸಲ್ಪಟ್ಟಿತು. ದೊಡ್ಡ ತುಂಡು ಕೈಗೆತ್ತಿಕೊಂಡ ತಹ್ಮಿನಾ ಮೊಘೇರಾರವರೊಂದಿಗೆ ಹೇಳಿದಳು. ತಾಕತ್ತಿದ್ದರೆ ಈ ಕವಾಯತನ್ನು ಮಾಡಿರಿ....

      ಖಡ್ಗದ ಕವಾಯತಲ್ಲಿ ಅಷ್ಟೇನು ಪರಿಣತಿ ಹೊಂದಿರದ ಮೊಘೇರಾ ರ.ಅ ಧೈರ್ಯ ಮಾಡಿ ಒಪ್ಪಿಕೊಂಡರು.

    ಅರೇ.... ಆ ಸವಾಲು ಸ್ವೀಕರಿಸಿದ್ದ ಮೊಘೇರಾ ರ.ಅ ಸರಿಸಿ ಹಿಂದಿನಿಂದ ನಾನು ಈ ಸವಾಲನ್ನು ಸ್ವೀಕರಿಸಿರುವೆನೆಂದು ರಂಗಕ್ಕೆ ಬಂದರು ಈ ಆಶಿಮಾ ಸುರಾಖ. *ಆಶಿಮಾ ಸವಾಲು ಕೈಗೆತ್ತಿಕೊಂಡಾಗ ಇಡೀ ಅರಮನೆಯೇ ಆಶ್ಚರ್ಯಗೊಂಡಿತ್ತು*.

 (ಗಾಳಿಯಲ್ಲಿ ಹಾರಾಡುವ ಬಟ್ಟೆಯನ್ನು ಖಡ್ಗದಿಂದ ಕತ್ತರಿಸಿ ಹಾಕಲು ಅಷ್ಟೇನು ಸುಲಭವಲ್ಲ. ಮಿಂಚಿನ ವೇಗದಲ್ಲಿ ಖಡ್ಗ ಬೀಸಿದರೆ ಮಾತ್ರ ಅದು ಸಾಧ್ಯ)

     ಎರಡು ತುಂಡಾದ ಬಟ್ಟೆಯಲ್ಲಿನ ದೊಡ್ಡ ತುಂಡು ಗಾಳಿಯಲ್ಲಿ ಮತ್ತೆ ಹಾರಲು ಬಿಟ್ಟು ಸುರಾಖರ ಮಗಳು ಆಶಿಮಾ ಮೇಲಿನಿಂದ ಜಿಗಿದು ಬಟ್ಟೆಯನ್ನು ಸಮಾನವಾಗಿ ಮತ್ತೆ ಎರಡು ತುಂಡು ಮಾಡಿಯೇ ಬಿಟ್ಟರು.
     ಅದ್ಭುತ ಕವಾಯತು ಪ್ರದರ್ಶಿಸಿದ ಆಶಿಮಾರನ್ನು ಮೊಘೇರಾ ರ.ಅ, ಅಲ್ಲಿ ನೆರೆದಿದ್ದವರೂ, ಯಶ್ಚುದುರ್ಗ್ ಅಭಿನಂದಿಸಿದರು.

      ತಹ್ಮಿನಾ ಹಿಂದೊಮ್ಮೆ ಪ್ರಕಟಿಸಿದ್ದಂತೆ
    *ಖಡ್ಗ ಹೋರಾಟದಲ್ಲಿ ನನ್ನನ್ನು ಸೋಲಿಸಿದವನನ್ನು ಮಾತ್ರ ನಾನು ವಿವಾಹ ವಾಗುತ್ತೇನೆ*. ಇದೀಗ ತನ್ನನ್ನು ಸೋಲಿಸಿದ ಆಶಿಮಾರನ್ನು ವಿವಾಹವಾಗುದರ ಕುರಿತು ಚರ್ಚೆಯಾಯಿತು. ಎಲ್ಲೆಲ್ಲೂ ಇದರ ಬಗ್ಗೆಯೇ ಮಾತನಾಡುವಾಗ, ತಹ್ಮಿನಾಳ ಮನದಲ್ಲೂ ಪ್ರೀತಿಯೂ ಮೊಳಗಿತು.
  (ಆದರೆ ಆಶಿಮಾ ಹೆಣ್ಣು ಹೆಂದೂ ಯಾರಿಗೂ ತಿಳಿಯಲಿಲ್ಲ)

     ****************

     ಚರ್ಚೆ ನಡೆಯುತ್ತಿದ್ದಂತೆಯೇ.. ಯಶ್ಚುದುರ್ಗ್ ನೇರವಾಗಿ ಮೊಘೇರಾ ರ.ಅ ರವರಲ್ಲಿ ತಮ್ಮ ಆಗಮನದ ಉದ್ದೇಶವನ್ನು ಕೇಳಿದರು.

       ಮೊಘೇರಾ ರ.ಅ : ನಾವು ಇಸ್ಲಾಂ ಧರ್ಮ ಪ್ರಚಾರಕರಾಗಿದ್ದೇವೆ. ಧರ್ಮ ಪ್ರಚಾರದಲ್ಲೇ ತೊಡಗಿಕೊಂಡಿದ್ದೇವೆ. ಕಳೆದ ಕೆಲ ದಿನಗಳ ಹಿಂದೆ ಖಲೀಫ ಉಮರ್ ರ.ಅ ಕಳುಹಿಸಿಕೊಟ್ಪ ನಮ್ಮ ಧರ್ಮ ಪ್ರಚಾರಕರಾದ ಖಾಸಿಂ ಸುರಾಖರನ್ನು ನಿಮ್ಮ ಅನುಯಾಯಿ ಫರಕ್ ಸಾದ್ ಶೈಬಾನ್ ಬೆಟ್ಟದ ಮೇಲೆ ಕೊಂದು ಹಾಕಿದ್ದಾನೆ. ಅವನು ಈಗ ನಿಮ್ಮ ಸಂರಕ್ಷಣೆಯಲ್ಲಿದ್ದಾನೆ. ಆದ್ದರಿಂದ ನ್ಯಾಯ ಸಮ್ಮತವಾಗಿ ಕೊಲೆಗಾರ ಫರಕ್ ಸಾದ್ ರನ್ನು ನಮಗೆ ಬಿಟ್ಟು ಕೊಡಬೇಕು.

    ಆಗ ಯಶ್ಚುದುರ್ಗ್ ನಗುತ್ತಲೇ ಹೇಳಿದರು : ಓ ಮೊಘೇರಾ ... ನೀವು ಮೂವತ್ತು ಸಾವಿರ ಸೈನ್ಯದೊಂದಿಗೆ ಈ ಇರಾನಿಗೆ ಬಂದಿರುವ ಮಾಹಿತಿ ನಮಗೆ ರಹಸ್ಯ ಕೇಂದ್ರದಿಂದ ಈಗಾಗಲೇ ತಿಳಿದು ಬಂದಿದೆ. ನಿಮ್ಮವರೇ ಆದ ಹಸನ್ ಮುಸನ್ನಾರವರಲ್ಲಿ ಹೇಳಿದಂತೆ ನನ್ನ ಸೈನ್ಯಾಧಿಪತಿ ಎರಡನೇಯ ರುಸ್ತುಮನ ಕೈ ಕೆಳಗಿರುವ ಒಂದು ಲಕ್ಷದ ಮೂವತ್ತು ಸಾವಿರ ಸೈನಿಕರೊಂದಿಗೆ ಹೋರಾಡಿರಿ. ಅದರಲ್ಲಿ ಜಯಗಳಿಸಿದಲ್ಲಿ ನಿಮಗೆ ಫರಕ್ ಸಾದ್ ನನ್ನು ಬಿಟ್ಟು ಕೊಡಲಿದ್ದೇವೆ...

    *ಸವಾಲಿಗೆ ಸಿದ್ದರಿದ್ದಲ್ಲಿ ನಾಳೆ ಇರಾನಿನ "ಖಾದ್ಸೀಯ್ಯ" ರಣಾಂಗಣಕ್ಕೆ ಬನ್ನಿರಿ ಎಂಬ ಆಹ್ವಾನ ನೀಡಿದರು..*

    ಸವಾಲನ್ನು ನಗುಮುಖದಿಂದಲೇ ಸ್ವೀಕರಿಸಿದ ಮೊಘೇರಾ ರ.ಅ ಇನ್ಶಾ ಅಲ್ಲಾ ಎಂದು ಹೇಳಿ, ತಮ್ಮ ಸೈನ್ಯ ತಂಡ ತಂಗಿರುವ ಸ್ಥಳಕ್ಕೆ ಮರಳಿದರು.

     
ಮುಂದೇನಾಯಿತು....
 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

 ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ