ಭಾಗ - 10
*ಧೀರ ಮಹಿಳೆಯೊಬ್ಬರ ರೋಚಕ ಕಥೆ*
ಅವರೇ...
*ಸುರಾಖರ ಮಗಳು*
*ಭಾಗ - 10*
ಯಶ್ಚುದುರ್ಗ್ ರ ಕೋಟೆಯನ್ನು ಗುರಿಯಾಗಿಸಿದ ಸಹದ್ ರ.ಅ ರವರ ನೇತೃತ್ವದ ಸೈನ್ಯ ಸ್ವಲ್ಪ ಸಂಚರಿಸಿದ ಬಳಿಕ ಹಸನ್ ಮುಸನ್ನಾ ರೊಂದಿಗೆ ನಾಯಕ ಸಹದ್ ರ.ಅ ಕೇಳಿದರು...
*ಈ ಶರಾಫಾ ಎಂಬ ಸ್ಥಳ ಯಾವುದು..??*
ಹಸನ್ ಮುಸನ್ನಾ ರ.ಅ: ಇದುವೇ ಶರಾಫಾ..
ಕೂಡಲೇ ನೆನಪಿಸಿಕೊಂಡ ಸಹದ್ ರ.ಅ ಉಮರ್ ರ.ಅ ತನಗೆ ನೀಡಿದ್ದ ಪತ್ರವನ್ನು ಕೈಗೆತ್ತಿಕೊಂಡರು,
ಪತ್ರವು ಈ ಕೆಳಗಿನಂತಿತ್ತು...
***************
*ಅಸ್ಸಲಾಂ ಅಲೈಕುಂ..*
"ಪ್ರೀತಿಯ ಸಹದ್ ರವರೇ..
ನೀವು ಈಗ ನಿಂತಿರುವ ಸ್ಥಳ "ಶರಾಫಾ". ನೀವು ಬಲಗಡಗೆ ತಿರುಗಿದಾಗ ಎರಡು ಬೆಟ್ಟಗಳು ಕಾಣಲು ಸಿಗುತ್ತವೆ. ಆ ಬೆಟ್ಟದ ತಪ್ಪಲಲ್ಲಿ *ಗಿಝ್ಬಾ* ಎಂಬ ಮರದ ಕೋಟೆಯಿದೆ. ಅದು ಯಶ್ಚುದುರ್ಗ್ ರ ಸೈನ್ಯಾಧಿಪತಿಗಳು ಆಯುಧಗಳನ್ನು ಶೇಖರಿಸುವ ಸ್ಥಳವಾಗಿದೆ. ಮೊದಲನೆಯದಾಗಿ ನೀವು ಅದನ್ನು ನಾಶಪಡಿಸಬೇಕು. ಹೆಚ್ಚಿನ ಮಾಹಿತಿಯನ್ನು ಹಸನ್ ಮುಸನ್ನಾರೊಂದಿಗೆ ಕೇಳಿ ಅರಿಯಿರಿ..."
***************
ಹಸನ್ ಮುಸನ್ನಾ ರ.ಅ ರವರು ನಗುತ್ತಲೇ.. ಯಾರಾಗಿದ್ದಾರೆ ನಿಮಗೆ ಈ *ಗಿಝ್ಬಾ*ದ ಕುರಿತು ಹೇಳಿಕೊಟ್ಟದ್ದು..?
ಸಹದ್ ರ.ಅ : ಅದು ಉಮರ್ ರ.ಅ
ಹಸನ್ ಮುಸನ್ನಾ ರ.ಅ : "ಅಚ್ಚರಿಯಿಂದ" ಆ ಗಿಝ್ಬಾದ ಕುರಿತು, ಸ್ವತಹಾ ಇರಾನಿಗರಿಗೂ ಮಾಹಿತಿ ಇಲ್ಲ. ಬಹಳಾ ಸೂಕ್ಷ್ಮವಾದ ಸ್ಥಳವದು. ಅದರ ಬಳಿ ಯಾರಿಗೂ ತೆರಳಲು ಸಾದ್ಯವಿಲ್ಲ, ಧುರ್ಗಮವಾದ ಹಾದಿಯದು.
ಯಶ್ಚುದುರ್ಗ್ ರ ಸೈನಿಕರು ಆಯುಧಗಳನ್ನು ಶೇಖರಿಸಿಡುವ ಸ್ಥಳವಾಗಿದೆ ಅದು. ಅವರ ಸೈನಿಕರಿಗೆಲ್ಲ ಆವಶ್ಯಕ ಆಯುಧಗಳು ಅಲ್ಲಿಂದವೇ ರಫ್ತಾಗುತ್ತವೆ.
ಸಹದ್ ರ.ಅ : ಅದನ್ನು ನಾಶಪಡಿಸಲು ಖಲೀಫರು ಹೇಳಿದ್ದಾರೆ,
ಏನಾಗಿದೆ ಅದಕ್ಕೆ ಮಾರ್ಗ...!!
ಹಸನ್ ಮುಸನ್ನಾ ರ.ಅ : ನಾಳಿನ (ಫಜರ್) ಬೆಳಗಿನ ಜಾವಾದ ಮೊದಲು ನಾಶಪಡಿಸಬಹುದು. ಅದಕ್ಕಾಗಿ ನನಗೆ ಕೆಲ ಸೈನಿಕರನ್ನು ಕಳುಹಿಸಿ ಕೊಡಬೇಕು ಎಂದರು.
ಹಸನ್ ಮುಸನ್ನಾ ರ.ಅ ಮಾತಿನ ಅನುಸಾರವಾಗಿ ಸುಮಾರು ಸಾವಿರದಷ್ಟು ಸೈನಿಕರನ್ನು ಹಸನ್ ಮುಸನ್ನಾ ರ.ಅ ರವರೊಂದಿಗೆ ಕಳುಹಿಸಿಕೊಡಲಾಯಿತು.
**********
ಅದು ಮಧ್ಯ ರಾತ್ರಿಯ ಸಮಯ. ಸುತ್ತಮುತ್ತ ಕತ್ತಲಲ್ಲಿ ಆವರಿಸಿತ್ತು. ಗುಡ್ಡ, ಬೆಟ್ಟ, ಕಲ್ಲು, ಮುಳ್ಳುಗಳು, ಪ್ರಾಣಿಗಳು, ವಿಷ ಜಂತುಗಳು ಕೂಡಿರುವ ಕತ್ತಲು ಆವರಿಸಿರುವ ಕಾಡಿನ ಮಧ್ಯೆಯಾಗಿತ್ತು ಇವರ ಸಂಚಾರ. ಬೆಳಕಿನ ವ್ಯವಸ್ಥೆ ಇವರ ಬಳಿ ಇತ್ತಾದರೂ... ಬೆಳಕಿಗೆ ನಿರ್ಬಂಧ ಹೇರಲಾಗಿತ್ತು. (ಬೆಳಕು ಹೊತ್ತಿಸಿದಲ್ಲಿ ಶತ್ರುಗಳಿಗೆ ಸುಳಿವು ಸಿಗಬಹುದೆಂಬ ಭಯ.)
ಗಿಝ್ಬಾ ಕೋಟೆ ಸಮೀಪಿಸುತ್ತಿದ್ದಂತೆ ತನ್ನ ಬಳಿ ಇದ್ದ ಸೈನಿಕರನ್ನು ಕರೆದು ಹಸನ್ ಮುಸನ್ನಾ ರ.ಅ ಹೇಳಿದರು...
*ನೀಮ್ಮನ್ನು ಮೂರು ಗುಂಪುಗಳಾಗಿ ವಿಂಗಡಿಸುವೆನು, ಮೂರು ಗುಂಪುಗಳು ಮೂರು ಭಾಗದಿಂದ ಸಂಚರಿಸಿ ಕೋಟೆಯನ್ನು ಸುತ್ತುವರಿಯಬೇಕು. ನಾನು ಕೋಟೆಯ ಸಮೀಪ ತೆರಳಿ ತಕ್ಬೀರ್ ಮೊಳಗಿಸುತ್ತೇನೆ. ಆಗ ನೀವು ಬೆಂಕಿಯನ್ನು ಉಪಯೋಗಿಸಿ ಕೋಟೆಗೆ ಬೆಂಕಿ ಹಚ್ಚಿರಿ. ಅದು ಮರದ ಕೋಟೆಯಾಗಿರುವುದರಿಂದ, ಸಂಪೂರ್ಣ ಸುಟ್ಟು ಬಸ್ಮವಾಗಲಿದೆ ಎಂದರು.*
ಹಸನ್ ಮುಸನ್ನಾ ರ.ಅ ರವರ ಮಾತಿಗೆ ಅನುಸಾರವಾಗಿ ಮೂರೂ ಗುಂಪು ಕೋಟೆಯನ್ನು ಸುತ್ತುವರಿಯಿತು.
ಹಸನ್ ಮುಸನ್ನಾ ರ.ಅ ಕೋಟೆಯ ಬಳಿ ತೆರಳಿದರು. ಎರಡು ದೈತ್ಯ ಗಾತ್ರದ ಸೈನಿಕರು ದ್ವಾರದ ಬಳಿ ಇದ್ದರು..
ಅವರಲ್ಲಿ ಒಬ್ಬ ಮಲಗಿದ್ದು, ಇನ್ನೊಬ್ಬ ದ್ವಾರವನ್ನು ಕಾಯುತ್ತಿದ್ದ..
ದ್ವಾರಪಾಲಕ : ಹಸನ್ ಮುಸನ್ನಾ ರ.ಅ ಕಂಡಾಕ್ಷಣ
*ಯಾರಲ್ಲಿ... ನಿಂತುಕೊಳ್ಳಿ...*
ಮುಂದೇನಾಯಿತು....
( *ಮುಂದುವರಿಯುವುದು...*)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...
http://nizamuddintabukuppinangady.blogspot.com/?m=1

Comments
Post a Comment