ಭಾಗ 8

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ
                 ಅವರೇ..  #ಸುರಾಖರ_ಮಗಳು    #ಭಾಗ - 8

    ಯಶ್ಚುದುರ್ಗ್ ರ ಮಗಳು(ತಹ್ಮಿನಾ) ಒಂದು ಪ್ರಕಟಣೆ ನಡೆಸಿದ್ದಳು
   " ಖಡ್ಗದೊಂದಿಗಿನ ಹೋರಾಟದಲ್ಲಿ ನನ್ನನ್ನು ಸೋಲಿಸುವ ಹುಡುಗನನ್ನು ಮಾತ್ರ ನಾನು ವಿವಾಹ ಆಗುವುಂದೆಂದು"

           ತಹ್ಮಿನಾಳ ಪ್ರಕಟಣೆಯನ್ನು ಕೇಳುತ್ತಲೇ ಊರಿಡೀ ಭಾರೀ ಚರ್ಚೆಯಾಗುತ್ತಿತ್ತು. ಕೆಲವರು ತಹ್ಮಿನಾಳ ಹಾವ, ಭಾವ  ನೋಡಿಯೇ ಹೋರಾಟ ನಡೆಸಲು ಹಿಂದೇಟು ಹಾಕುತ್ತಿದ್ದರು.
   
**************

      *ಒಂದು ದಿನ, ಗವರ್ನರ್ ಖುರಾಸಾನ್  ರ ಮಗ ಫರಕ್ ಸಾದ್ ಎನ್ನುವವರು, ತಹ್ಮನಾಳೊಂದಿಗೆ ಖಡ್ಗ ಹೋರಾಟ ನಡೆಸಲು ಸಿದ್ಧರಾಗಿ ಅರಮನೆಯತ್ತ ದೌಡಾಯಿಸಿ ಬಂದರು*.

        ( *ಯಶ್ಚುದುರ್ಗ್ ಗೆ ಪರಕ್ ಸಾದ್ ರ ಈ ಮೋದಲೇ ಬಹಳಾ ಪರಿಚಯವಿತ್ತು.*)

 ಅರಮನೆಗೆ ಬಂದ ಫರಕ್ ಸಾದ್ ರ ಕಂಡೊಡನೆ ಯಶ್ಚುದುರ್ಗ್ ಕೇಳಿದರು ಎಲ್ಲಿಗೆ ಹೊರಟಿರುವಿರಿ...?
ಫರಕ್ ಸಾದ್ : ತಮ್ಮ ಮಗಳೊಂದಿಗೆ ಖಡ್ಗ ಹೋರಾಟ ನಡೆಸಿ ಮದುವೆಯಾಗಲು ಎಂದು ಉತ್ತರಿಸಿದರು.
    ಆದರೆ, ಯಶ್ಚುದುರ್ಗ್ ಈ ವಿಷಯದಿಂದ ಪರಕ್ ಸಾದ್ ರಲ್ಲಿ ಹಿಂದೇಟು ಹಾಕುವಂತೆ ಮನವಿ ಮಾಡಿದರೂ, ಪರಕ್ ಸಾದ್ ಕೇಳಿರಲಿಲ್ಲ.

     ನೇರವಾಗಿ ಅರಮನೆಯ ಕೋಠಡಿಗೆ ತರಳಿದ ಫರಕ್ ಸಾದ್ , ತಹ್ಮಿನಾಳ ಕಂಡೊಡನೆ ಭಯದಿಂದ  ಹಿಂದೇಟು ಹಾಕಿದರು.

*ತಹ್ಮಿನಾ ಗಟ್ಟಿ ಧ್ವನಿಯಿಂದ: ನಿಂತುಕೊಳ್ಳಿರಿ ಎಂದು ಹೇಳಿದಳು*. ನೀವು ನನ್ನ ತಂದೆ (ಯಶ್ಚುದುರ್ಗ್) ಬಳಿ ಮಾತನಾಡಿದ್ದನ್ನು ನಾನು ಕೇಳಿಸಿದ್ದೇನೆ. ನನ್ನೊಂದಿಗೆ ಹೋರಾಡಿರಿ ..... ಎಂದು ಆಹ್ವಾನ  ನೀಡಿದಳು.
       ಆದರೆ ಭಯದಿಂದ ಖಡ್ಗ ಯುದ್ಧ ನಡೆಸಲು ಹಿಂದೇಟು ಹಾಕುತ್ತಲೇ ಇದ್ದ ಫರಕ್ ಸಾದ್ ರನ್ನು ಬಲವಂತವಾಗಿ ಯುದ್ಧಕ್ಕೆ ಆಹ್ವಾನಿಸಲಾಯಿತು.

     ಅರಮನೆಯ ಪಕ್ಕದಲ್ಲಿದ ಒಳಾಂಗಣದಲ್ಲಿ ಫರಕ್ ಸಾದ್ ಹಾಗೂ ತಹ್ಮಿನಾಳ ನಡುವೆ ಖಡ್ಗ ಯುದ್ಧ ಆರಂಭವಾಯಿತು.

     ಮೊದಲೇ ಭಯಭೀತರಾಗಿದ ಫರಕ್ ಸಾದ್ ಕೇವಳ ತಹ್ಮಿನಾಳ ಕವಾಯತ್ತುಗಳನ್ನು ಮಾತ್ರ ಕಂಡೊಡನೆ ಭಯದಿಂದ ಹಿಂಭಾಗದ ದ್ವಾರದ ಮೂಲಕ ಓಡಿ ಹೋದರು.

      *************

    ಅಲ್ಲಿಂದ ಕಾಲ್ಕಿತ್ತ ಫರಕ್ ಸಾದ್ ನೇರವಾಗಿ ಶೈಭಾನ್ ಬೆಟ್ಟದ ಮೇಲೆ ಬಂದಿದ್ದರು. ಅದಾಗಲೇ ಮದೀನಾದಿಂದ ಖಲೀಫ ಉಮರ್ ರ.ಅ ರವರು ಕಳುಹಿಸಿದ್ದ ಅನುಯಾಯಿ ಕಾಶಿಂ ಸರಾಕರೂ ಆ ಬೆಟ್ಟದ ಮೇಲೆ ತಂಗಿದ್ದರು.

       ಪ್ರಕೃತಿ ಮನೋಹರವಾದ ಸ್ಥಳವಾಗಿತ್ತು ಅದು. ಕಾಶಿಂ ಸುರಾಕ ರ.ಅ ನೇರವಾಗಿ ಕಅಬಾದ ಕಡೆ ಮುಖಮಾಡಿ ನಮಾಝ್ ಮಾಡಲು ತೀರ್ಮಾನಿಸಿದರು.
   ನಮಾಝಿಗೆ ಕೈ ಕಟ್ಟಿದರು....
    ದೂರದಿಂದಲೇ ನೋಡುತ್ತಿದ್ದ ಫರಕ್ ಸಾದ್ ಮನಸ್ಸಿನಲ್ಲಿ ಕೆಟ್ಟ ಚಿಂತೆಗಳು ಹೊಳೆಯಲಾರಂಭಿಸಿದವು.
 
      ನಮಾಝ್ ಮಾಡುತ್ತಿರುವುದು ಓರ್ವ ಮುಸ್ಲಿಂ ವ್ಯಕ್ತಿ. ಈಗಾಗಲೇ ಹಲವು ಹೋರಾಟಗಳ ಸೋಲಿನಿಂದ ಕಂಗೆಟ್ಟಿರುವ ನನ್ನ ಬಗ್ಖೆ, ಇರಾನ್ ತುಂಬಾ ಚರ್ಚೆಯಾಗಬೆಕಾದರೆ, ಈ ಮುಸ್ಲಿಂ ವ್ಯಕ್ತಿಯನ್ನು ಕೊಂದರೆ ಮಾತ್ರ ಸಾಧ್ಯ ಎಂದು, ಒಂದು ಚೂಪಾದ ಬಾಣವನ್ನು ಕಾಶಿಂ ಸುರಾಕ ರ.ಅ ರವರ ಎಡಬಾಗದ ಎದೆಯ ಮೇಲೆ ಬಿಟ್ಟರು.
      ನಮಾಝಿನಲ್ಲಿ ತಲ್ಲೀನರಾಗಿದ್ದ ಕಾಶಿಂ ಸುರಾಖ ರ.ಅ ನೋವು ಸಹಿಸಲಾಗದೆ  ಕುಸಿದು ಬಿದ್ದು ಶಹೀದ್ ಆದರು.

    ಇದನ್ನೆಲ್ಲ ದೂರದಿಂದಲೇ ವೀಕ್ಷಿಸುತಿದ್ದ, ಒಂದು ಜೂದ (ಅಂದರೆ ಮಸ್ಲಿಮ್ ಅಲ್ಲದ ಸ್ತ್ರೀ) ನೇರವಾಗಿ ಶೈಭಾನ್ ಬೆಟ್ಟದ ತಪ್ಪಲಲ್ಲಿ ವಾಸಿಸುತ್ತಿರುವ ಹಸನ್ ಮುಸನ್ನಾ ರ.ಅ ರವರ ಬಳಿ ಹೋದಳು.

     ನಮಾಝ್ ಮಾಡುವವರು ನಿಮ್ಮ ಧರ್ಮೀಯರಲ್ಲವೇ..
 ಹೌದು ಎಂದರು ಹಸನ್ ಮುಸನ್ನಾ ರ.ಅ
 ಹಾಗಾದರೆ:  ನಮಾಝ್ ಮಾಡುವ ಓರ್ವ ವ್ಯಕ್ತಿಯನ್ನು ಫರಕ್ ಸಾದ್ ಕೊಂದು ಹಾಕಿದರು. ಎಂದಳು.

  ವಿಷಯವರಿತ ತಕ್ಷಣ ಕಡ್ಗ ಕೈಗೆತ್ತಿಕೊಂಡ ಹಸನ್ ಮುಸನ್ನಾ ರ.ಅ ನೇರವಾಗಿ ಬೇಟ್ಟದ ಮೇಲೆ ಓಡಿಹೋದರು. ಆಗ ಅಲ್ಲಿ ಫರಕ್ ಸಾದ್ ಕಾಶಿಂ ಸುರಾಕ ರ.ಅ ರವರನ್ನು ಕೊಂದು ಒಂದು ಬದಿಯಲ್ಲಿ ಕುಳಿತುಕೊಂಡು ನಗುತ್ತಲೇ ಇದ್ದರು.

     ಇದನ್ನು ಕಂಡ ಹಸನ್ ಮುಸನ್ನಾ ರ.ಅ : ನನ್ನ ಸಹೋದರನನ್ನು ಯಾಕಾಗಿ ಕೊಂದೆ ಎಂದು ಫರಕ್ ಸಾದ್ ರ ಬಳಿ ಪ್ರಶ್ನಿಸಿದರು.

   ಫರಕ್ ಸಾದ್ : ಅದು ಒಂದು ಅವಘಡ ಸಂಭವಿಸಿತು ಕ್ಷಮಿಸಿ ಎಂದು ಬೇಡಿಕೊಂಡರು...

ಮುಂದೇನಾಯಿತು.....

 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ    ತಬೂಕ್*

https://www.facebook.com/Nizamuddin-Uppinangady-Tabuk-Page-1058686387577670/

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ