ಭಾಗ 9

ಧೀರ ಮಹಿಳೆಯೊಬ್ಬರ ರೋಚಕ ಕಥೆ*
                 ಅವರೇ... #ಸುರಾಖರ_ಮಗಳು #ಭಾಗ - 9

    ಶೈಬಾನ್ ಬೆಟ್ಟದ ಮೇಲೆ ಬಂದ ಹಸನ್ ಮುಸನ್ನಾ ರ.ಅ : ನನ್ನ ಈ ಮುಸ್ಲಿಂ ಸಹೋದರನನ್ನು ಯಾಕಾಗಿ ಕೊಂದೆ..? ಎಂದು ಫರಕ್ ಸಾದ್ ರ ಬಳಿ ಪ್ರಶ್ನಿಸಿದರು.

   ಫರಕ್ ಸಾದ್ : ಅದು ಒಂದು ಅವಘಡ ಸಂಭವಿಸಿತು... ಕ್ಷಮಿಸಿ ಎಂದು ಬೇಡಿಕೊಂಡರು...

   ಹಸನ್ ಮುಸನ್ನಾ ರ.ಅ : ಹಾಗಾದರೆ ನನಗೂ ಒಂದು ಅವಘಡ ಸಂಭವಿಸಲಿದೆ. ಎಂದರು.  ಭಯಭೀತರಾದ ಫರಕ್ ಸಾದ್ ನೇರವಾಗಿ ಮತ್ತೆ ಯಶ್ಚುದುರ್ಗ್ ಕೋಟಯತ್ತ ಓಡಿದರು.

      ತನ್ನ ಬಳಿ ಓಡೋಡಿ ಬರುತ್ತಿದ್ದ ಫರಕ್ ಸಾದನ್ನು ಕಂಡು ನಗುತ್ತಲೇ ಯಶ್ಚುದುರ್ಗ್ ಕೇಳಿದರು : ಯಾಕಾಗಿ ಇತ್ತ ಓಡೋಡಿ ಬಂದೆ ನೀನು..

 ಫರಕ್ ಸಾದ್ : ನಾನು ಒಂದು ಮುಸ್ಲಿಮನು ನಮಾಝ್ ಮಾಡುತ್ತಿರುವಾಗ, ಬಾಣ ಬಿಟ್ಟು ಕೊಂದು ಹಾಕಿದ್ದೇನೆ. ಅದಕ್ಕಾಗಿ ಹಸನ್ ಮುಸನ್ನಾರವರು ನನ್ನನ್ನು ಬೆನ್ನಟ್ಟಿ ಬರುತ್ತಿದ್ದಾರೆ.  ದಯವಿಟ್ಟು ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡರು, ಇದನ್ನು ಕೇಳಿ ಖುಷಿಗೊಂಡ ಯಶ್ಚುದುರ್ಗ್, ಅವರನ್ನು ಕೋಟೆಯ ಒಳ ಭಾಗದ  ಒಂದು ಬದಿಯಲ್ಲಿ ನಿಲ್ಲಿಸಿದರು.

    ಹಸನ್ ಮುಸನ್ನಾ ರ.ಅ : ಫರಕ್ ಸಾದ್ ನನ್ನು ಬೆನ್ನಟ್ಟುತ್ತಾ ನೇರವಾಗಿ ಯಶ್ಚುದುರ್ಗ್  ರ ಬಳಿ ಬಂದು ನಿಂತು ಕೇಳಿದರು : ನನ್ನ ಮುಸ್ಲಿಂ ಸಹೋದರನನ್ನು ಕೊಂದು ಇತ್ತ ಓಡಿ ಬಂದ ಅವರೆಲ್ಲಿ, ಅವರನ್ನು ಬಿಟ್ಟುಕೊಡಿ...!

 ಆಗ ಯಶ್ಚುದುರ್ಗ್ : ಕೊಂದವ ನನ್ನ ಅನುಯಾಯಿ, ಕೊಲ್ಲಲ್ಪಟ್ಟವ ನಿನನ್ನ ಅನುಯಾಯಿ. ಫರಕ್ ಸಾದ್ ಬಿಟ್ಟು ಕೊಡಲು ಸಾಧ್ಯವಿಲ್ಲ. *(ಅಲ್ಲಿ ಒಂದು ಬದಿಯಲ್ಲಿ ನಿಂತಿದ್ದ ರುಸ್ತುಮ್ ಎಂಬ ಎರಡನೇಯ ಸೈನ್ಯಾಧಿಪತಿಯ ಕಡೆ ಬೆರಳು ತೋರಿಸುತ್ತಾ..)* ಈ ರುಸ್ತುಮನ ಕೈಕೆಳಗೆ ಇರುವ ಒಂದು ಲಕ್ಷದ ಮೂವತ್ತು ಸಾವಿರ ಸೈನಿಕರ ವಿರುದ್ಧ ಹೋರಾಡಿ ಜಯಗಳಿಸಿದ್ದಲ್ಲಿ ಫರಕ್ ಸಾದನ್ನು ಕೊಂಡುಹೋಗಬಹುದು ಎಂದು ಎಚ್ಚರಿಕೆ ನೀಡಿದರು.

 ಹಸನ್ ಮುಸನ್ನಾ ರ.ಅ : ಇವಾಗ ನನ್ನ ಬಳಿ ಇದು ಸಾಧ್ಯವಿಲ್ಲ. ಆದರೆ ಒಂದು ದಿವಸ ನಿನ್ನ ಬಳಿ ಬಂದು ಹೋರಾಡಿ ಜಯಗಳಿಸುವೆನು ಎಂದು ಹೇಳಿ ಹಿಂತಿರುಗಿದರು.

 ಹೀಗಾಗಿತ್ತು ಕಾಶಿಂ ಸುರಾಕರನ್ನು ಕೊಂದದ್ದು ಎಂದು ಸಹದ್ ರ.ಅ ರವರಂದಿಗೆ, ಹಸನ್ ಮುಸನ್ನಾ ರ.ಅ ವಿವರಿಸಿದರು.

       *******

   ಹಸನ್ ಮುಸನ್ನಾ ರ.ಅ ರವರ ಮಾಹಿತಿಯಂತೆ  ಸಹದ್ ರ.ಅ ನೇರವಾಗಿ ಶೈಬಾನ್ ಬೆಟ್ಟದ ಮೇಲ್ಭಾಗದಲ್ಲಿರುವ ಕಾಶಿಂ ಸುರಾಕ ರ.ಅ ರವರ ಮಖ್ಬರದ ಬಳಿ ತೆರಳಿ ಝಿಯಾರತ್ ನಡೆಸಿ, ಹಿಂತಿರುಗಿ ಬರುತ್ತಿದ್ದರು.

 ( *ಬೆಟ್ಟದ ಮೇಲೆ ಹೋಗುವಾಗ ಯಾವುದೇ ಆಯುಧವನ್ನೂ ಕೊಂಡು ಹೋಗಿರಲಿಲ್ಲ)* .

       ಒಂದು ದೈತ್ಯ ಗಾತ್ರದ ಸಿಂಹವೊಂದು, ಬೆಟ್ಟದ ಮೇಲ್ಭಾಗದಿಂದ ಹಿಂತುರುಗುತ್ತಿದ್ದ ಸ್ವಹಾಬಿವರ್ಯರ ಕಡೆ ದಾಳಿ ಮಾಡಿತು.
     ಕೂಡಲೇ ಅತ್ತ ಕಡೆಯಿಂದ ಒಂದು ಬಾಣ ನೇರವಾಗಿ ಆ ಸಿಂದ ಮೇಲೆ ಚುಚ್ಚಿತು.... ಗಾಯಗೊಂಡ ಸಿಂಹ ಹೊರಲಾಡಿ ಸತ್ತು ಬಿತ್ತು....
 ಇದನ್ನು ಕಣ್ಣಾರೆ ಕಂಡ ಸ್ವಹಾಬಿಗಳೆಲ್ಲ ಅತ್ತ ನೋಡಿದರು. ಅದು ಆಶಿಮಾ ಸುರಾಖ (ಹುಡುಗನ ವೇಶದಲ್ಲಿರುವ ಹುಡುಗಿ) ಆಗಿದ್ದರು. ಎಲ್ಲರೂ  ಆಶಿಮಾರನ್ನು ಅಭಿನಂದಿಸಿದರು.

     ಸಹದ್ ರ.ಅ ನೇರವಾಗಿ ಆಶಿಮಾರ ಬಳಿ ತೆರಳಿ ಅಭಿನಂದಿಸಿ ಅರಬಿಗಳ ಆಚಾರದಂತೆ ಹಣೆಗೆ ಚುಂಬನ ನೀಡಲು ಮುಂದಾದರು.
    ಆದರೆ ನಾಚುತ್ತಲೇ ಆ ಚುಂಬನವನ್ನು ತಡೆದ ಆಶಿಮಾ...  ಅದು ಬೇಡ ಎಂದು ಹೇಳಿದರು. ಶಬ್ದ ಕೇಳಿ ಆಶ್ಚರ್ಯಗೊಂಡ ಸಹದ್ ರ.ಅ ಮನದಲ್ಲೇ "ಉಮರ್ ರ.ಅ ಹೇಳಿದ ಮಾತು (ಸಂಶಯ ಬಂದರೆ ಯಾರ ಬಳಿ ಏನೂ ಹೇಳಬಾರದೆಂಬ) ಮಾತು ನೆನಪಿಸಿ ಕೊಂಡರು."

    ********

ಹಸನ್ ಮುಸನ್ನಾ ರ.ಅ ರವರೊಂದಿಗೆ ಸಹದ್ ರ.ಅ ರವರ ನೇತೃತ್ವದ ಸೈನ್ಯ ಮತ್ತೆ ಯಾತ್ರೆ ಆರಂಭಿಸಿತು.  

     ಸ್ವಲ್ಪ ಸಂಚರಿಸಿದ ಬಳಿಕ ಹಸನ್ ಮುಸನ್ನಾ ರೊಂದಿಗೆ ಸಹದ್ ರ.ಅ ಕೇಳಿದರು...
    *ಈ ಶರಾಫಾ ಎಂಬ ಸ್ಥಳ ಯಾವುದು..??*

ಹಸನ್ ಮುಸನ್ನಾ ರ.ಅ: ಇದುವೇ ಶರಾಫಾ..

*(ಅಚ್ಚರಿಯೆಂದರೆ ಈ ಯುದ್ಧದ ಮೊದಲು ಎಂದೂ ಉಮರ್ ರ.ಅ ಇರಾನಿಗೆ ಭೇಟಿ ನೀಡಿರಲಿಲ್ಲ. ಆದರೂ ಅಲ್ಲಿನ ಸ್ಥಳಗಳನ್ನು ಬಲ್ಲವರಾಗಿದ್ದರು.)*

ಸಹದ್ ರ.ಅ ಉಮರ್ ರ.ಅ ತನಗೆ ನೀಡಿದ್ದ ಪತ್ರವನ್ನು ಕೈಗೆತ್ತಿಕೊಂಡರು..

ಆ ಪತ್ರದಲ್ಲೇನಿತ್ತು.....???

 ( *ಮುಂದುವರಿಯುವುದು...*)

- *ನಿಝಾಮುದ್ದೀನ್ ಉಪ್ಪಿನಂಗಡಿ    ತಬೂಕ್*

https://www.facebook.com/Nizamuddin-Uppinangady-Tabuk-Page-1058686387577670/

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ