ಉಮರ್ ರ.ಅ 2
*ಉಮರ್ ರ.ಅ ರವರ* *ನ್ಯಾಯಸಮ್ಮತ ಆಡಳಿತ* ಉಮರ್ ರ.ಅ ರವರು ಇಸ್ಲಾಂ ಧರ್ಮ ಸ್ವೀಕಾರದ ನಂತರ, ನೆಬಿ ಸ.ಅ ವಫಾತಿನ ನಂತರ ಅಬೂಬಕ್ಕರ್ ಸಿದ್ದೀಕ್ ರ.ಅ ರವರ ಕಾಲಾನಂತರ ಎರಡನೇ ಖಲೀಫರಾಗಿ ಅಧಿಕಾರಕ್ಕೇರಿದರು. ತನ್ನ ಧರ್ಮನಿಷ್ಠೆ, ಕಾಳಜಿ, ನ್ಯಾಯ, ಕರುಣೆ, ವಿನಯ ಹಾಗೂ ಆಡಳಿತದಲ್ಲಿ ಜಗತ್ತನ್ನೇ ಅಚ್ಚರಿಗೊಳಿಸಿದ್ದರು. ಅವರ ಜೀವಾನಾದರ್ಶವೇ ಇಂದಿನ ಆಧುನಿಕ ನಾಯಕರ ಕನಸು. ಆದರೆ ಹಣ ಹಾಗೂ ಅಧಿಕಾರದ ವ್ಯಾಮೋಹ ಹಾಗೂ ಪೈಪೋಟಿಯ ಆಡಳಿತದ ನಡುವೆ ಉತ್ತಮ ಆಡಳಿತದ ಕನಸು ಕಮರಿಹೋಗುತ್ತಿದೆ. ******* ಉಮರ್ ರ.ಅ ಆಡಳಿತದ ಅಂದಿನ ಕಾಲಘಟ್ಟದ ಜನ ನಿವಾಸಿಗಳು ನ್ಯಾಯಯುತವಾಗಿ ಜೀವಿಸುತಿದ್ದರು. ಉಮರ್ ರ.ಅ ಎಷ್ಟು ವಿನಯವಂತರೆಂದರೆ, ತಮ್ಮ ಆಡಳಿತಾ ದಿನಗಳಲ್ಲಿ ಯಾರಿಗೂ ಅರಿಯದಂತೆ ಪ್ರತೀದಿನ ರಾತ್ರಿ ಒಂದು ಮನೆಗೆ ಭೇಟಿ ಕೊಡುತಿದ್ದರು. ಇದನ್ನು ಮನಗಂಡ ಓರ್ವ ಸ್ವಹಾಬಿ ಇವರ ಈ ಅಚ್ಚರಿಯ ಭೇಟಿಯ ರಹಸ್ಯ ಭೇಧಿಸಲು ಒಂದು ದಿನ ರಾತ್ರಿ ಅಡಗಿ ಕುಳಿತು ವೀಕ್ಷಿಸಿದರು. ಅಂದು ರಾತ್ರಿಯೂ ಉಮರ್ ರ.ಅ ರವರು ಆ ಮನೆಗೆ ಭೇಟಿ ನೀಡಿದರು. ಅಲ್ಪ ಸಮಯದ ನಂತರ ಅವರು ಆ ಮನೆಯಿಂದ ತೆರಳಿದರು. ಆ ಸ್ವಹಾಬಿ ಆ ಮನೆಯ ಒಳಗೆ ಭೇಟಿ ನೀಡಿದರು. ಆದರೆ ಅಲ್ಲಿ ಒಂದು ಕಣ್ಣು ಸರಿಯ...