ಭಾಗ 6
#ಚರಿತ್ರೆಯ #ಅರೇಬಿಯಾ. #ಭಾಗ - 6 n.u.t*
#ಮೂಸಾ #ನೆಬಿ (ಅ.ಸ)
ಮೂಸಾ ನೆಬಿಯು 3500 ವರ್ಷಗಳ ಮುಂಚೆ ಈಜಿಪ್ಟ್ ನಲ್ಲಿ ಜನಿಸಿದರು. ಫಿರ್-ಹೌನ್ ಎಂಬ ಧಿಕ್ಕಾರಿಯುತ ರಾಜನು ಇಸ್ರಾಈಲ್ ಸಮುದಾಯದಲ್ಲಿರುವ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲಬೇಕೆಂದು ಆಜ್ಞೆಮಾಡಿದಾಗಾಗಿತ್ತು ಮೂಸಾ ನೆಬಿಯ ಜನನ. ಆಗ ಗಂಡು ಮಕ್ಕಳನ್ನು ಮರದ ಪೆಟ್ಟಿಗೆಯಲ್ಲಿ ಹಾಕಿ ನೈಲ್ ನದಿಯಲ್ಲಿ ಬಿಡಲು ಅಲ್ಲಾಹನು ಆಜ್ಞೆ ಮಾಡಿದನು. ಅಲ್ಲಾಹನ ಆಜ್ಞೆಯಂತೆ ಮೂಸಾ ನೆಬಿಯನ್ನೂ ಅವರ ತಾಯಿ ಒಂದು ಮರದ ಪೆಟ್ಟಿಗೆಯಲ್ಲಿ ಹಾಕಿ ನೈಲ್ ನದಿಯಲ್ಲಿ ಹರಿಯಲು ಬಿಟ್ಟರು. ನದಿ ತಟದಲ್ಲಿದ್ದ ಫಿರ್-ಹೌನಿನ ಮಡದಿಯಾದ ಹಾಸಿಯಾ ಎಂಬ ಮಹದಿಯು ಪೆಟ್ಟಿಗೆಯನ್ನು ಕಂಡರು. ಆ ಪೆಟ್ಟಿಗೆಯನ್ನು ಫಿರ್ - ಹೌನ್'ನ ಅರಮನೆಗೆ ತಂದರು. ಇಸ್ರಾಯಿಲ್ ವಂಶಸ್ಥ ಗಂಡು ಮಗುವಾಗಿದ್ದರಿಂದ ಫಿರ್-ಹೌನ್ ಆ ಮಗುವನ್ನು ಕೊಲ್ಲಲು ಮುಂದಾದರು.
ಆದರೆ ಫಿರ್-ಹೌನಿನ ಮಡದಿಯು ಇದನ್ನು ತಡೆಹಿಡಿದರು. ಫಿರ್-ಹೌನನು ತನ್ನ ಮಡದಿಯ ನಿರ್ಭಂದಕ್ಕೆ ಮಣಿದು ಕೈಗೊಂಡಿದ್ದ ತೀರ್ಮಾನವನ್ನು ಉಪೇಕ್ಷಿಸಿದರು. ಮಗುವಿಗೆ ಹಾಲುಣಿಸಲು ಸಾಕುತಾಯಿಯ ಕೈಗಿತ್ತರು. ಆದರೆ ಸಾಕುತಾಯಿಯು ಮೂಸಾ ನೆಬಿ ನಿಜವಾದ ತಾಯಿಯಾಗಿದ್ದರು. ಈ ವಿಷಯ ಫಿರ್-ಹೌನಿಗೆ ಅರಿತಿರಲಿಲ್ಲ. ಮಗುವಾಗಿದ್ದ ಮೂಸಾ ನೆಬಿ ಕೋಟೆ ಕೊತ್ತಲಗಳಲ್ಲಿ ಓಡಾಡಿ ಬೆಳೆದು ಯುವಕರಾದರು.
ಒಂದು ದಿನ ಒಂದು ಖಿಬ್ತಿಯ ಶೋಷಣೆಯಿಂದ ಓರ್ವ ಇಸ್ರಾಯಿಲನ ರಕ್ಷಿಸುವ ಭರದಲ್ಲಿ ಮೂಸಾ ನೆಬಿಯ ಕೈಯಿಂದ ಖಿಬ್ತಿಯ ಕೊಲೆಯಾಯಿತು. ದುರಾದೃಷ್ಟಾವಶಾತ್ ಈ ಕೊಲೆ ನಡೆದರೂ ಅಮಾಯಕನಾದ ಮೂಸಾ ನೆಬಿಯನ್ನು ಕೊಲೆಗಾರನೆಂಬ ನೆಲೆಯಿಂದ ಫಿರ್-ಹೌನ್ ಸೈನ್ಯ ತನ್ನನ್ನು ಭೇಟೆಯಾಡುತ್ತಿದೆ ಎಂದರಿತ ಮೂಸಾ ನೆಬಿಯು ಊರು ತೊರೆದರು.
ಸುಮಾರು *650* ಕಿ.ಮೀ ದೂರ ಏಕಾಂತದಿಂದ ಸಂಚರಿಸಿ ಮರುಭೂಮಿಗಳ ದಾಟಿ ಜೋರ್ಡಾನಿನ ಮದಿಯನ್ ಪ್ರದೇಶಕ್ಕೆ ತಲುಪಿದರು. ಮುಂದಿನ ಚರಿತ್ರೆಯನ್ನು ಕುರಾನ್ ವಿವರಿಸುತ್ತಿದೆ.
#ಅಧ್ಯಾಯ 28: ಅಲ್ ಕಸಸ್ (ಕಥೆಗಳು),ಸೂಕ್ತ 23 ಮತ್ತು 24
ﻭَﻟَﻤَّﺎ ﻭَﺭَﺩَ ﻣَﺎٓءَ ﻣَﺪْﻳَﻦَ ﻭَﺟَﺪَ ﻋَﻠَﻴْﻪِ ﺃُﻣَّﺔً ﻣِّﻦَ ٱﻟﻨَّﺎﺱِ ﻳَﺴْﻘُﻮﻥَ ﻭَﻭَﺟَﺪَ ﻣِﻦ ﺩُﻭﻧِﻬِﻢُ ٱﻣْﺮَﺃَﺗَﻴْﻦِ ﺗَﺬُﻭﺩَاﻥِ ۖ ﻗَﺎﻝَ ﻣَﺎ ﺧَﻄْﺒُﻜُﻤَﺎ ۖ ﻗَﺎﻟَﺘَﺎ ﻻَ ﻧَﺴْﻘِﻰ ﺣَﺘَّﻰٰ ﻳُﺼْﺪِﺭَ ٱﻟﺮِّﻋَﺎٓءُ ۖ ﻭَﺃَﺑُﻮﻧَﺎ ﺷَﻴْﺦٌ ﻛَﺒِﻴﺮٌ
. ಅವರು ಮದ್‌ಯನ್‌ನಲ್ಲಿ, ನೀರಿರುವ ಸ್ಥಳದಲ್ಲಿ, ಜನರ ಗುಂಪೊಂದು (ಕುರಿಗಳಿಗೆ) ನೀರು ಕುಡಿಸುವುದನ್ನು ಕಂಡರು ಮತ್ತು ಇಬ್ಬರು ಮಹಿಳೆಯರು ದೂರ ನಿಂತಿರುವುದನ್ನು ಕಂಡರು. ಅವರು ಆ ಇಬ್ಬರೊಡನೆ, ನಿಮ್ಮ ಸಮಾಚಾರವೇನು? ಎಂದು ವಿಚಾರಿಸಿದರು. ‘‘ಕುರಿ ಕಾಯುವವರು (ತಮ್ಮ ಕುರಿಗಳಿಗೆ) ನೀರು ಕುಡಿಸಿ ಮುಗಿಸುವ ತನಕ ನಾವು ನೀರು ಕುಡಿಸುವಂತಿಲ್ಲ. ಅತ್ತ, ನಮ್ಮ ತಂದೆ ತುಂಬಾ ವೃದ್ಧರು’’ ಎಂದು ಅವರು ಉತ್ತರಿಸಿದರು.
ﻓَﺴَﻘَﻰٰ ﻟَﻬُﻤَﺎ ﺛُﻢَّ ﺗَﻮَﻟَّﻰٰٓ ﺇِﻟَﻰ ٱﻟﻈِّﻞِّ ﻓَﻘَﺎﻝَ ﺭَﺏِّ ﺇِﻧِّﻰ ﻟِﻤَﺎٓ ﺃَﻧﺰَﻟْﺖَ ﺇِﻟَﻰَّ ﻣِﻦْ ﺧَﻴْﺮٍ ﻓَﻘِﻴﺮٌ
ಅವರು ಆ ಇಬ್ಬರು ಮಹಿಳೆಯರಿಗೆ (ಅವರ ಕುರಿಗಳಿಗೆ) ನೀರು ಕುಡಿಸಿ (ವಿಶ್ರಾಂತಿಗಾಗಿ) ನೆರಳಿನೆಡೆಗೆ ಹೊರಟರು ಮತ್ತು ಹೇಳಿದರು; ನನ್ನೊಡೆಯಾ, ನೀನು ಕರುಣಿಸುವ ಯಾವ ಹಿತಕ್ಕೂ ನಾನು ಅರ್ಹನಾಗಿದ್ದೇನೆ.
ನಂತರ ಅವರು ಒಂದು ಬೆಟ್ಟದ ಅಡಿಯಲ್ಲಿ ವಿಶ್ರಾಂತಿ ಪಡೆಯುತಿದ್ದರು. ಆಗ ಅಲ್ಲಿಗೆ ಬಂದ ಒಂದು ಯುವತಿ ಹೆಳಿದಳು. ಆಡಿಗೆ ನೀರುಣಿಸಿದ ಕಾರಣಕ್ಕಾಗಿ ನಿಮ್ಮನ್ನು ತಂದೆಯವರು ಕರೆಯುತಿದ್ದಾರೆಂದು. *ಆ ತಂದೆ ಶುಐಬ್ ನೆಬಿಯಾಗಿದ್ದರು*.
(ಮುಂದುವರಿಯುವುದು...)
- #ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

Comments
Post a Comment