ಭಾಗ 5

#ಚರಿತ್ರೆಯ.. #ಅರೇಬಿಯಾ....  #ಭಾಗ - 5   n.u.t*

#ನಹ್ರ್ #ಯೂಸುಫ್

ಯಹ್-ಕೂಬ್ ನೆಬಿಯವರ ಮಗನಾಗಿದ್ದರು ಯೂಸುಫ್ ನೆಬಿ.  ಯೂಸುಫ್ ನೆಬಿ ಈಜಿಪ್ಟ್ ದೇಶವನ್ನು ಆಳುತ್ತಿದ್ದರು. ಆ ಕಾಲದಲ್ಲಿ ಸಾವಿರ ದಿನಗಳಿಂದ ನಿರ್ಮಿತವಾದ ನೈಲ್ ನದಿಯ ಉಪನದಿಯಾಗಿದೆ  *ನಹ್ರ್ ಯೂಸುಫ್*.

             ಸಾವಿರ ದಿನಗಳನ್ನು  ಅರಬೀ ಬಾಷೆಯಲ್ಲಿ *ಅಲ್ಫ್ ಯೌಮ್* ಎಂದು ಕರೆಯುತ್ತಾರೆ. ಸಾವಿರ ದಿನಗಳಿಂದ ಈ ನದಿ ನಿರ್ಮಾನವಾದ್ದರಿಂದ ಆ ಪ್ರದೇಶಕ್ಕೆ ಅಲ್ಫ್ ಯೌಮ್ ಎಂದು ಹೆಸರಿದ್ದು ಆ ಪ್ರದೇಶದಲ್ಲಿ ಈ ನದಿ ಈಗಲೂ ಹರಿಯುತ್ತಿದೆ.  ಈ ನದಿಯ ಕಾರಣದಿಂದಲೇ ಆ ಪ್ರದೇಶವು ಈಗಲೂ ಹಸಿರು ಭರಿತವಾದ ಸುಂದರ ಪ್ರದೇಶವಾಗಿ  ಕಂಗೊಳಿಸುತ್ತಿದೆ.  ಈಜಿಪ್ಟ್ ದೇಶದ ಕೈರೂ ಪಟ್ಟಣದಿಂದ ಎಂಭತ್ತು ಕಿ.ಮೀ ದೂರದಲ್ಲಿದೆ ಈ ಪ್ರದೇಶ.

*ಶುಐಬ್ (ಅ.ಸ)   ಮದಿಯನ್ ಜನರು*

      ಜೋರ್ಡನ್ ದೇಶದ ರಾಜಧಾನಿಯಾದ ಅಮ್ಮಾನ್ ನಿಂದ ನೂರ ಮುವತ್ತೈದು ಕಿ.ಮೀ ದೂರದ ಪ್ರದೇಶವಾಗಿದೆ ಮದಿಯನ್.   ಮದಿಯನ್ ಜನೆತೆಯು ಅನಾಚಾರ ಹಾಗು ತೂಕದಲ್ಲಿ ಏರುಪೇರು ಮಾಡಿ ಜನರನ್ನು ವಂಚಿಸುತ್ತಿದ್ದರು.  ಆ ಕಾಲದಿ ಅಲ್ಲಾಹನು ನೇಮಿಸಿ ಕಳುಹಿಸಿಕೊಟ್ಟ ಪ್ರವಾಜಗರಾಗಿದ್ದಾರೆ ಶುಐಬ್ ನೆಬಿ.  

            ಆ ಪ್ರದೇಶದಲ್ಲಿ ವಾಸಿಸುತಿದ್ದ ಮದಿಯನ್ ಜನತಿಯೊಂದಿಗೆ ಶುಐಬ್ ನೆಬಿಯು ಹೇಳಿದರು. ಖಂಡಿತವಾಗಿಯೂ ನೀವು ಅಲ್ಲಾಹನನ್ನು ಭಯಗೊಂಡು ಜೀವಿಸಿ.  ಅವನ ಸತ್ಯದಾರಿಯತ್ತ ನಡೆಯಿರಿ.   ಆದರೆ ಮದಿಯನ್ ಜನತೆ ಶುಐಬ್ ನೆಬಿಯ ಮಾತಿಗೆ ಕಿವಿಗೊಡದೆ ವಂಚನೆ ಅನ್ಯಾಯದಲ್ಲಿ ತೊಡಗಿಸಿಕೊಂಡಿದ್ದರು.   ಆದರೆ ಅಲ್ಲಾಹನ ಶಾಪದಿಂದ ಇವರು ಪಾರಾಗಲಿಲ್ಲ.   ಈ ಚರಿತ್ರೆಯು ಪರಿಶುದ್ದ ಕುರಾನ್ ವಿವರಿಸುತ್ತಿದೆ.

*ಅಧ್ಯಾಯ 11:* ಹೂದ್, ಸೂಕ್ತ  94 ಮತ್ತು 95

*ﻭَﻟَﻤَّﺎ ﺟَﺎٓءَ ﺃَﻣْﺮُﻧَﺎ ﻧَﺠَّﻴْﻨَﺎ ﺷُﻌَﻴْﺒًﺎ ﻭَٱﻟَّﺬِﻳﻦَ ءَاﻣَﻨُﻮا۟ ﻣَﻌَﻪُۥ ﺑِﺮَﺣْﻤَﺔٍ ﻣِّﻨَّﺎ ﻭَﺃَﺧَﺬَﺕِ ٱﻟَّﺬِﻳﻦَ ﻇَﻠَﻤُﻮا۟ ٱﻟﺼَّﻴْﺤَﺔُ ﻓَﺄَﺻْﺒَﺤُﻮا۟ ﻓِﻰ ﺩِﻳَٰﺮِﻫِﻢْ ﺟَٰﺜِﻤِﻴﻦَ*
ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಾಗ, ನಾವು ಶುಐಬರನ್ನು  ಹಾಗೂ ಅವರ ಜೊತೆ ಸತ್ಯದಲ್ಲಿ ನಂಬಿಕೆ ಇಟ್ಟಿದ್ದ ಜನರನ್ನು ನಮ್ಮ ವಿಶೇಷ ಅನುಗ್ರಹದಿಂದ ರಕ್ಷಿಸಿದೆವು. ಅಕ್ರಮಿಗಳನ್ನು ಒಂದು ಭೀಕರ ಶಬ್ದವು ಆವರಿಸಿಕೊಂಡಿತು ಮತ್ತು ಅವರ ಪಾಲಿಗೆ ಬೆಳಗಾದಾಗ ಅವರು ತಮ್ಮ ಮನೆಗಳಲ್ಲೇ ಅಧೋಮುಖರಾಗಿ ಬಿದ್ದುಕೊಂಡಿದ್ದರು.

*ﻛَﺄَﻥ ﻟَّﻢْ ﻳَﻐْﻨَﻮْا۟ ﻓِﻴﻬَﺎٓ ۗ ﺃَﻻَ ﺑُﻌْﺪًا ﻟِّﻤَﺪْﻳَﻦَ ﻛَﻤَﺎ ﺑَﻌِﺪَﺕْ ﺛَﻤُﻮﺩُ*

ಅವರು ಅಲ್ಲಿ ಎಂದೂ ವಾಸಿಸಿಯೇ ಇರಲಿಲ್ಲ ಎಂಬಂತಿತ್ತು ಅವರ ಸ್ಥಿತಿ. ನಿಮಗೆ ತಿಳಿದಿರಲಿ! ಸಮೂದರು ಶಾಪಗ್ರಸ್ತರಾದಂತೆ ಮದ್‌ಯನರು ಶಾಪಗ್ರಸ್ತರಾದರು.

   ತೂಕದಲ್ಲಿ ವಂಚನೆ ಹಾಗೂ ಅನ್ಯಾಯ ಎಸಗುವ ವ್ಯಾಪಾರಿಗೆ ಪರಿಶುದ್ದ ಇಸ್ಲಾಂ ಧರ್ಮ ಹಾಗೂ ಕುರಾನ್ ಕಲಿಸುವ ಪಾಠವಾಗಿದೆ ಈ ಚರಿತ್ರೆ.

*(ಮುಂದುವರಿಯುವುದು...)*

- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ