ಉಮರ್ ರ.ಅ

#ಪ್ರಪಂಚವೇ_ನಿಬ್ಬೆರಗಾದ_ದಿನವದು
#ಉಮರ್_ರಅ #ರವರ_ಇಸ್ಲಾಂ_ಸ್ವೀಕಾರ

        ಕತ್ತಾಬ್ ಎನ್ನವ ಆಡುಗಳ ಸಾಕುವ ಒಬ್ಬ ವ್ಯಕ್ತಿ ಮಕ್ಕಾದಲ್ಲಿದ್ದು, ಹಲವಾರು ಮಡದಿಯರಿದ್ದರೂ ಮಕ್ಕಳಾಗಿರಲಿಲ್ಲ. ಕೆಲ ದಿನಗಳ ನಂತರ ಮಡದಿಯರಲ್ಲಿ ಒಬ್ಬಳಾದ ಹಂತಮಾ ಬಿನ್ತ್ ಹಾಶಿಮ್ ಎನ್ನುವ ಮಡದಿ ಕಿ.ಶ 583 ರಲ್ಲಿ ಮಕ್ಕಾ ಎಂಬ ಪ್ರದೇಶದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ನೋಡಲು ಸುಂದರನೂ, ದಷ್ಟ ಪುಷ್ಟವಾಗಿದ್ದ ಮಗುವನ್ನು ಕಂಡು ಅಲ್ಪ ಖುಷಿಪಟ್ಟ ಕತ್ತಾಬ್ ಮಗುವಿಗೆ ಉಮರ್ ಎಂದು ನಾಮಕರಣ ಮಾಡಿದ. ನಂತರ ಮಡದಿಯ ಪ್ರಸವದ ಬಗ್ಗೆ ಸಂತೋಷಗೊಂಡು ಊರಲ್ಲೆಲ್ಲ ಸಿಹಿ ತಿಂಡಿ ಹಂಚಿದ.

       ದಿನ ಕಳೆದಂತೆ ಮಗು ಉಮರ್ ಬೆಳೆಯತೊಡಗಿದರು.  ತಂದೆ ಕತ್ತಾಬರಲ್ಲಿ ಮಗ ಬೆಳೆದು ದೊಡ್ಡವನಾದಲ್ಲಿ ಆಡು ಮೇಯಿಸಲು ಸಹಕಾರಿಯಾಗಬಹುದು, ನನಗೂ ಸ್ವಲ್ಪ ಆರಾಮ ಸಿಗಬಹುದೆಂದು ಮನಸ್ಸಿನಲ್ಲೆ ತೃಪ್ತಿ ಪಟ್ಟುಕೊಂಡಿದ್ದರು. ಮಗ ಉಮರಿನ ಬೆಳವನಣಿಗೆಯೂ... ದಷ್ಟ ಪುಷ್ಟನಾಗಿ ಉದ್ದದ ಕಾಲುಗಳು ಹೊಂದಿದ್ದರು.
           ಒಂದು ದಿನ ಬೆಟ್ಟದ ಕಡೆ ಆಡು ಮೇಯಿಸಲು ಉಮರ್ ರ.ಅ   ತಂದೆ ಕತ್ತಾಬರು ಹಳುಹಿಸಿಕೊಟ್ಟರು. ಅದರೆ ಅಲ್ಲಿ ಒಂದು ಆಡು ಸತ್ತು ಹೋಯಿತು. ಆದರೆ ಸಂಜೆ ಮರಳುವ ವೇಳೆಗೆ ತನ್ನ ಅಜಾಗರೂಕತೆಯಿಂದ ಕೂಟದ ಆಡುಗಳಲ್ಲಿ ಒಂದು ಆಡು ಸತ್ತು ಹೋದ ವಿಷಯ ಅರಿತ ತಂದೆ ಕತ್ತಾಬರು, ಮಗ ಉಮರರನ್ನು ಛಾಟಿಯಿಂದ ಬಲವಾಗಿ ಹೊಡೆದು ರಕ್ತ ಬರಿಸಿದ್ದರು. ಈ ವಿಷಯವನ್ನು ಮುಂದಿನ ದಿನಗಳಲ್ಲಿ ಅದೇ ಪ್ರದೇಶಕ್ಕೆ ತೆರಳಿದಾಗ ಕತ್ತಾಬರು ಸ್ವಹಾಬಿಗಳೊಂದಿಗೆ ಹೇಳಿ ದುಃಖಿತರಾಗುತಿದ್ದರು.

     ಉಮರ್ ರ.ಅ ರವರು ಮಕ್ಕಾ ಪ್ರದೇಶದಲ್ಲಿ ಧೀರತೆಯ ವ್ಯಕ್ತಿಯಾಗಿ ಮಾರ್ಪಟ್ಟರು. ಯಾವುದೇ ವಿಷಯ ಅಥವ ಹೋರಾಟದಲ್ಲಿ ಮುಂದಾಳುವಾಗಿ ಹಾಗೂ ಧೀರ ಹೋರಾಟಗಾರರಾಗಿದ್ದರು. ಆಗಳೇ ಇವರ ಬಗ್ಗೆ ಅಲ್ಪ ಸ್ವಲ್ಪ ಅರಿತಿದ್ದ ರಸೂಲ್ ಮಹಮ್ಮದ್ ಸ.ಅ ರವರು ಇವರನ್ನು ಇಸ್ಲಾಂ ಧರ್ಮಕ್ಕೆ ನೀಡಿ ನಮ್ಮ ಸಂಘವನ್ನು ಬಲಪಡಿಸು ಅಲ್ಲಾ..  ಎಂದು ಪ್ರಾರ್ಥಿಸುತಿದ್ದರು.

         ಇಸ್ಲಾಂ ಧರ್ಮದ ಶತ್ರು ತಂಡದಲ್ಲಿದ್ದ ಉಮರ್ ರ.ಅ ರವರಿಗೆ ಇಸ್ಲಾಂ ಧರ್ಮ ಶಕ್ತಿಗೊಳ್ಳುತ್ತಿದ್ದು, ಹಲವರು ಈ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿರುವ ವಿಷಯ ತಿಳಿದರು. ಇದರಿಂದ ಕೆರಳಿದ ಉಮರ್ ರ.ಅ ತನ್ನ ಖಡ್ಗ ಕೈಗೆತ್ತಿಕೊಂಡು ಮಹಮ್ಮದ್ ಮುಸ್ತಪಾ ಸ.ಅ ರವರ ವಧಿಸುವೆನೆಂದು ಶಪತಮಾಡಿ ಹೊರಟರು. ಇವರ ಯಾತ್ರೆಯ ಸಂಧರ್ಭ ದಾರಿ ಮದ್ಯೆ ನುಹೈಬ್ ಎಂಬ ವ್ಯಕ್ತಿ ಉಮರ್ ರ.ಅ ರನ್ನು ತಡೆದು ನಿಲ್ಲಿಸಿ, ಉಮರ್ ನೀವು ಮಹಮ್ಮದರ ವಧಿಸಲು ತೆರಳುದಾದರೆ ನಿಮ್ಮ ತಂಗಿ ಫಾತಿಮಾ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಇದರ ಪಾಡೇನು. ಎಂದಾಗ ಮತ್ತೂ ಕೋಪಗೊಂಡ ಉಮರ್ ರ.ಅ ಹಾಗಾದಲ್ಲಿ ಮೊದಲು ಫಾತಿಮಾ ನಂತರ ಮಹಮ್ಮದ್ ಎಂದು ಫಾತೀಮಾರ ಮನೆಕಡೆ ತೆರಳಿದರು.

        ಅದಾಗಲೇ ಮನೆಯಲ್ಲಿ ಕುರಾನ್ ತರಗತಿ ನಡೆಯುತಿತ್ತು. ಅಲ್ಲಿ ಫಾತಿಮಾ ಅವರ ಗಂಡ ಹಾಗೂ ತರಗತಿ ನಡೆಸುತಿದ್ದ ಖಬ್ಬಾಬ್ ಇಬ್ನ್ ಅರ್ಥ್ ಈ ಮೂವರು ಇದ್ದರು. ಅಲ್ಲಿಗೆ ಬಂದ ಉಮರ್ ರ.ಅ ಫಾತಿಮಾರ ಮನೆಯ ಬಾಗಿಲ ಬಳಿ ಬಂದು ಫಾತಿಮಾ ಎಂದು ಕರೆದಾಗ ಈ ಮೂವರು ತಬ್ಬಿಬ್ಬಾದರು. ಎರಡನೇ ಬಾರಿ ಫಾತಿಮಾ... ಎಂದು ಕರೆದಾಗ ಕುರಾನ್ ಗುರುಗಳಾದ ಖಬ್ಬಾಬ್ ಇಬ್ನ್ ಅರ್ಥ್ ಇವರೊಂದಿಗೆ ಫಾತಿಮಾ ಬೀವಿಯವರ ಗಂಡ ಹೇಳಿದರು ದಯವಿಟ್ಟು ನೀವು ಎಲ್ಲಿಯಾದರೂ ಅಡಗಿ ಕುಳಿತುಕೊಳ್ಳಿ. ಎಲ್ಲಿಯಾದರು ಉಮರ್ ನಮ್ಮನ್ನು ಕೊಲ್ಲುದಾದಲ್ಲಿ ಕುರಾನ್ ಪಾರಾಯಣದ ಗುರುಗಳಾದ ನೀವು ಬದುಕುಳಿಯಲೇ ಬೇಕು ಎಂದರು. ನಂತರದ ಕರೆಗೆ ಬಾಗಿಲು ತೆರೆದ ಫಾತೀಮಾರೊಂದಿಗೆ ಉಮರ್. ರ.ಅ..  ನೀನು ಪಾರಾಯಣ ನಡೆಸುತಿದ್ದದ್ದು ಏನು...? ಎಂದಾಗ, ಭಯಬೀತಿಯಿಂದಲೇ ಅದು ಅಲ್ಲಾಹನ ಪುಣ್ಯ ವಾಣಿ ಕುರಾನ್ ಎಂದರು.  ಹಾಗಿದ್ದಲ್ಲಿ ಅದು ನನಗೆ ಕೊಡು ಎಂದುರು. ಮತ್ತೆ ಭಯಬೀತರಾದ ಫಾತಿಮಾ... ಧೈರ್ಯದಿಂದ ಹಾಗಿದ್ದಲ್ಲಿ ನೀವು ಕೈ ಕಾಲು ಶುಚಿಗೊಳಿಸಿ ಬನ್ನಿ ಎಂದರು. (ಆಗ ಉಮರ್ ರ.ಅ ಇಸ್ಲಾಂ ಧರ್ಮ ಸ್ವೀಕರಿಸಿರಲಿಲ್ಲ)

       ಮಕ್ಕಾ ನಗರವೇ ಭಯಗೊಳ್ಳುತಿದ್ದ ಉಮರರು ಯಾರ ಮಾತೂ ಕೇಳುತ್ತಿರಳಿಲ್ಲ. ಆದರೆ ತಂಗಿ ಫಾತಿಮಾರ ಮಾತಿಗೆ ತಲೆಬಾಗಿ ಕೈ ಕಾಲು ಶುಚಿಗೊಳಿಸಿ ಬಂದು ಕುರಾನ್ ಪಾರಾಯನ ನಡೆಸಿದರು. ತಕ್ಷಣವೇ ಫಾತಿಮಾರಲ್ಲಿ ಎಲ್ಲಿ ಮುಹಮ್ಮದ್ ಎಂದಾಂಗ ಮಹಮ್ಮದ್ ನೆಬಿ ಇರುವ ಸ್ಥಳ ತೋರಿಸಿಕೊಟ್ಟ ಕಡೆಗೆ ತನ್ನ ಕುದುರೆಯನ್ನು ತಿರುಗಿಸಿದರು.

        ಮಹಮ್ಮದ್ ನೆಬಿ ಸ.ಅ ರವರು ವಾಸಿಸುತ್ತ ಕಡೆಗೆ ಉಮರ್ ಬರುದನ್ನು ಕಂಡ ಸ್ವಹಾಬಿಗಳೆಲ್ಲ ಭಯಗೊಂಡರು. ಕೈಯಲ್ಲಿ ಖಡ್ಗದೊಂದಿಗೆ ಬರುವ ಉಮರನ್ನುಡ ಕಂಡ ನೆಬಿ ಸ.ಅ ರವರ ಪಕ್ಕದಲ್ಲಿದ್ದ ಹಂಝ ರ.ಅ ಹೇಳಿದರು. ನೆಬಿಯೇ ಉಮರ್ ಒಳ್ಳೆಯದಕ್ಕಾಗಿ ಬರುವುದಾದರೆ ಉತ್ತಮ ಅಥವಾ ಕೆಟ್ಟ ದುರ್ಘಟನಣೆ ನಡೆಸಲು ಬರುದಾದರೆ ಅವರ ತಲೆ ಮೊದಲು ಕಡಿಯುವವ ನಾನು ಎಂದುರು.
        ಆದರೆ ... ಅಲ್ಲಿ ನಡೆದದ್ದೆ ಚಮತ್ಕಾರವೆಂಬಂತೆ...!!!
   ಖಡ್ಗ ಕೆಳಗಿಳಿಸಿದ ಉಮರ್ ಹೇಳಿದರು.. ನೆಬಿಯೇ ನಾನಿಮ್ಮ ಧರ್ಮ ಹಾಗೂ ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದೇನೆ ಎಂದರು. ಅಲ್ ಹಂಬ್ದುಲಿಲ್ಲಾ.... ಬಹಳಾ ಖುಷಿಯಿಂದ  ನೆಬಿಯ ಬಳಿಗೆ ಬಂದು ನೆಬಿಯನ್ನು ಬಲವಾಗಿ ತಬ್ಬಿಕೊಂಡರು...  *ಆ ಸಮಯವಾಗಿತ್ತು ಪ್ರಪಂಚವೇ ನಿಬ್ಬೆರಗಾದ ಸಮಯ*

*ಮುಂದುವರಿಯುವುದು...*

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ