ಭಾಗ 12

*ಚರಿತ್ರೆಯ ಅರೇಬಿಯಾ.. ಭಾಗ 12   n.u.t*

*ಮಸ್ಜಿದುಲ್ ಅಕ್ಸಾ...*

  ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾವನ್ಪು ಖಿಬ್ಲಾ (ಕೇಂದ್ರ) ಮಾಡುವ ಮೊದಲು, ಈ ಮಸ್ಜಿದುಲ್ ಅಕ್ಸಾದ ಕಡೆಗೆ ತಿರುಗಿ ಆಗಿತ್ತು ಮುಸ್ಲಿಮರು ಪ್ರಾರ್ಥನೆ (ನಮಾಝ್) ಮಾಡುತ್ತಿದ್ದರು. ವಿಶ್ವದ ಮೂರು ಶ್ರೇಷ್ಠ ಮಸೀದಿಗಳಾಗಿದೆ ಮಕ್ಕಾದ ಮಸ್ಜಿದುಲ್ ಹರಂ, ಮದೀನಾದ ಮಸ್ಜಿದುಲ್ ನಬವಿ, ಹಾಗೂ ಪೆಲೆಸ್ತೀನಿನ ಈ ಮಸ್ಜಿದುಲ್ ಅಕ್ಸಾ ಅಥವಾ ಬೈತುಲ್ ಮಕದ್ದಸ್.

      ಈ ಮಸೀದಿಯು ಪೆಲೆಸ್ತೀನಿನ ಜೆರುಸಲೇಂನಲ್ಲಿ ಇದೆ. ಈ ಮಸೀದಿಯನ್ನು ಸುಲೈಮಾನ್ ನೆಬಿಯು ನಿರ್ಮಿಸಿದ್ದಾರೆ. ಹಲೇಯ ಮಸೀದಿ ಇದ್ದ ಸ್ಥಳದಲ್ಲೇ ಉಮರ್ ಇಬ್ನು ಖತ್ತಾಬ್ ರ.ಅ ಹಾಗೂ ತದನಂತರ ಹುಮವೀ ಖಲೀಫ ಅಬ್ದುಲ್ ಮಲಿಕ್ ನಿರ್ಮಿಸಿದ ಸೌಧವಾಗಿದೆ, ಕುಬ್ಬತು ಸುಖ್ರಾ ಅಥವಾ ಡೋಮ್ ಆಫ್ ದಿ ರಾಕ್.


*ಯೂನುಸ್ ನೆಬಿ (ಅ.ಸ)*

      ಇರಾಕ್ ದೇಶದ ರಾಜಧಾನಿ ಬಗ್ದಾದಿನಿಂದ ನಾಲ್ಕುನೂರು ಕಿ.ಮೀ ಸಂಚರಿಸಿದಾಗ ಸಿಗುವ ಪ್ರದೇಶವೇ ನೀರವ ಅಥವಾ ಮೂಸುಲ್. ಟೈಗ್ರೀಸ್ ನದಿಯ ತೀರ ಪ್ರದೇಶವಾದ ನೀರಾವಾ ಪ್ರದೇಶದ ಪ್ರವಾಜಗರಾಗಿದ್ದರು ಯೂನುಸ್ ನೆಬಿ.

      ಯೂನುಸ್ ನೆಬಿಯ ಪ್ರವಚನ ಹಾಗೂ ಉಪದೇಶವನ್ನು ಆ ನಾಡಿನ ಜನರು ವಿರೋಧಿಸಲ್ಪಟ್ಟಾಗ, ಅಲ್ಲಿಯ ಜನರೊಂದಿಗೆ ಕೋಪಗೊಂಡು ಆ ಪ್ರದೇಶದಿಂದ ಹಡಗನ್ನೇರಿ ಊರು ತೊರೆದರು. ಹಡಗಿನಲ್ಲಿ ಅವಘಡ ಸಂಭವಿಸುವ ಪರಿಸ್ಥಿತಿ ತಲುಪಿದಾಗ, ಹಡಗಿನ ಭಾರವನ್ನು ಕಡಿಮೆಗೊಳಿಸಲು ಕೆಲವರನ್ನು ಕಡಲಿಗೆ ಎಸೆಯಲು ತೀರ್ಮಾನಿಸಲಾಯಿತು. ಅಲ್ಲಿ ಹೆಸರು ಸೂಚಿಸಲ್ಪಟ್ಟಾಗ ಯೂನುಸ್ ನೆಬಿಯವರ ಹೆಸರು ಬಂತು. ಹಾಗೆ ಅವರು ಸಮುದ್ರಕ್ಕೆ ಧುಮುಕಿದಾಗ ಒಂದು ಭೀಮಾಗಾತ್ರದ ಮೀನು ಅವರನ್ನು ನುಂಗಿತು.

       ಅಲ್ಲಾಹುವಿನ ಸಮ್ಮತಿ ಸಿಗುವ ಮೊದಲೇ ಊರು ಬಿಟ್ಟ ಅವರ ತಪ್ಪನ್ನು ಮನವರಿಕೆ ಮಾಡಿಕೊಂಡರು.  ಮೀನಿನ ಹೊಟ್ಟೆಯಲ್ಲಿಯೇ ಯೂನುಸ್  ನೆಬಿ ರಕ್ಷಣೆಗಾಗಿ ಅಲ್ಲಾಹನೊಂದಿಗೆ ಪ್ರಾರ್ಥಿಸಿದರು. ಹಾಗೆ ಅವರನ್ನು ಮೀನು ಸಮುದ್ರದ ದಡಕ್ಕೆ ತಂದು ಬಾಯಿಯಿಂದ ಹೊರದಬ್ಬಿತು. ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯಿಂದ ಕೂಡಿದ್ದ ತನ್ನ ಜನ ಸಮುದಾಯದೆಡೆಗೆ ಬಂದು ಮುಟ್ಟಿದರು. ದೈವ ಸಂದೇಶವನ್ನು ಅಂಗೀಕರಿಸಿದ ಜನರು ಅವರೊಂದಿಗೆ ವಿಶ್ವಾಸವಿಟ್ಟರು. ಅವರನ್ನು ಹಾಗೂ ಜನರನ್ನು ಅಲ್ಲಾಹು ಶಿಕ್ಷೆಯಿಂದ ರಕ್ಷಿಸಿದರು. ಈ ಸಂಭವವನ್ನು ಕುರಾನಿನಲ್ಲಿ ವಿವರಿಸಲಾಗಿದೆ.

*ಅಧ್ಯಾಯ 10: ಯೂನುಸ್, ಸೂಕ್ತ  98*

*ﻓَﻠَﻮْﻻَ ﻛَﺎﻧَﺖْ ﻗَﺮْﻳَﺔٌ ءَاﻣَﻨَﺖْ ﻓَﻨَﻔَﻌَﻬَﺎٓ ﺇِﻳﻤَٰﻨُﻬَﺎٓ ﺇِﻻَّ ﻗَﻮْﻡَ ﻳُﻮﻧُﺲَ ﻟَﻤَّﺎٓ ءَاﻣَﻨُﻮا۟ ﻛَﺸَﻔْﻨَﺎ ﻋَﻨْﻬُﻢْ ﻋَﺬَاﺏَ ٱﻟْﺨِﺰْﻯِ ﻓِﻰ ٱﻟْﺤَﻴَﻮٰﺓِ ٱﻟﺪُّﻧْﻴَﺎ ﻭَﻣَﺘَّﻌْﻨَٰﻬُﻢْ ﺇِﻟَﻰٰ ﺣِﻴﻦٍ*

ಯೂನುಸ್‌ರ ಜನಾಂಗವೊಂದರ ಹೊರತು ಯಾವುದೇ ನಾಡಿನವರು, ತಮ್ಮ ನಂಬಿಕೆಯಿಂದ ತಮಗೆ ಪ್ರಯೋಜನವಾಗುವಂತೆ ಕಾಲ ಮೀರುವ ಮುನ್ನ ನಂಬಲಿಲ್ಲ . ಯೂನುಸ್‌ರ ಜನಾಂಗದವರು ನಂಬಿದಾಗ, ನಾವು ಈ ಲೋಕದ ಬದುಕಿನಲ್ಲಿ ಅವರಿಗೆ ವಿಧಿಸಲಾಗಿದ್ದ ಅಪಮಾನದ ಶಿಕ್ಷೆಯನ್ನು ಅವರಿಂದ ನಿವಾರಿಸಿದೆವು ಮತ್ತು ಒಂದು ಅವಧಿಯ ತನಕ ಅವರಿಗೆ ಸುಖ ನೀಡಿದೆವು.                                             -ಮುಂದುವರಿಯುವುದು..

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

*ಕಳೆದ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ..*
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ