ಭಾಗ 11
*ಚರಿತ್ರೆಯ ಅರೇಬಿಯಾ ಭಾಗ - 11 n.u.t*
*ಬಲ್ಕೀಸ್ ರಾಣಿ*
ಪೆಲೆಸ್ತೀನ್ ದೇಶದಲ್ಲಿ ಜೀವಿಸುತಿದ್ದ ದಾವೂದ್ ನೆಬಿಯವ ಪುತ್ರ ಸುಲೈಮಾನ್ ನೆಬಿಯವರು ತಂದೆ ಕಲಾನಂತರ ಅಧಿಕಾರಕ್ಕೇರಿದರು. ಅವರಿಗೆ ಅಲ್ಲಾಹು ನೀಡಿದ ಹಲವು ಮೂಹ್ಜಿಝತ್ತುಗಳಲ್ಲಿ ಒಂದಾಗಿತ್ತು ಪಕ್ಷಿಗಳೊಂದಿಗೆ ಮಾತಾಡುವುದು.
ಯಮನ್ ದೇಶದ ಮಗ್ರಿಬ್ ಪ್ರದೇಶದ ಹತ್ತಿರದ ಸಬಗ್ ಗೋತ್ರದವರು ಜೀವಿಸುತಿದ್ದರು. ಅವರ ರಾಣಿಯಾದ ಬಲ್ಕೀಸಿನ ನೇತೃತ್ವದಲ್ಲಿ ಸೂರ್ಯನನ್ನು ಆರಾದಿಸುತ್ತಿರುವ ವಿವವರವನ್ನು ಮರ ಕುಟುಕ ಪಕ್ಷಿಯು ಸುಲೈಮಾನ್ ನೆಬಿಯಲ್ಲಿ ತಿಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಸುಲೈಮಾನ್ ನೆಬಿಯು ಬಲ್ಕೀಸ್ ರಾಣಿಗೆ ಪತ್ರ ಬರೆದರು. ದೇವರ ನಾಮದಲ್ಲಿ ಆರಂಭವ ಪತ್ರದಲ್ಲಿ ಸೂರ್ಯದೇವರ ಆರಧನೆಯಲ್ಲಿ ನಿಲ್ಲಿಸುವಂತೆಯೂ, ಈ ಜಗತ್ತಿನ ಸೃಷ್ಟಿಕರ್ತನಾದ ಅಲ್ಲಾಹನನ್ನು ಮಾತ್ರ ವಿಸ್ವಾಸವಿಟ್ಟು ಸತ್ಯದ ಪಥದಲ್ಲಿ ಸಂಚರಿಸುವಂತೆಯೂ ಆ ಪತ್ರದಲ್ಲಿ ಬರೆಯಲಾಯಿತು. ಈ ಪತ್ರವನ್ನು ಪೆಲೆಸ್ತೀನ್ ನಿಂದ ಯಮನಿಗೆ ಈ ಮರಕುಟುಕ ಪಕ್ಷಿಯೇ ತಲುಪಿಸಿತು.
ಪತ್ರವನ್ನು ಓದಿದ ನಂತರ ಬಲ್ಕೀಸ್ ರಾಣಿ ಹೇಳಿದರು; ಸರದಾರರೇ, ಈ ವಿಷಯದಲ್ಲಿ ನೀವು ನನಗೆ ಸಲಹೆ ನೀಡಿರಿ. ನಿಮ್ಮ ಉಪಸ್ಥಿತಿ ಇಲ್ಲದೆ ನಾನು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ.
ಆಗ ಆ ಜನಾಂಗದವರು ಪ್ರತ್ಯುತ್ತರ ನೀಡುತ್ತಾ.. ನಾವು ತುಂಬಾ ಶಕ್ತಿವಂತರು ಮತ್ತು ಉಗ್ರ ಹೋರಾಟಗಾರರು. ತೀರ್ಮಾನ ನಿಮ್ಮ ಕೈಯಲ್ಲಿದೆ. ನಮಗೆ ಏನನ್ನು ಆದೇಶಿಸಬೇಕೆಂದು ನೀವೇ ನಿರ್ಧರಿಸಿರಿ.
ಆಗ ಬಲ್ಕೀಸ್ ರಾಣಿ ಹೇಳಿದರು.. ನಾನು ಅವರೆಡೆಗೆ ಒಂದು ಉಡುಗೊರೆಯನ್ನು ಕಳಿಸಿಕೊಡುತ್ತೇನೆ ಮತ್ತು ದೂತನು ಮರಳಿ ಏನನ್ನು ತರುತ್ತಾನೆಂದು ಕಾದು ನೋಡುತ್ತೇನೆ.
ದೂತನು ಸುಲೈಮಾನರ ಬಳಿ ತಳುಪಿದ.
ಆಗ ಸುಲೈಮಾನ್ ನೆಬಿ ಹೇಳಿದರು; ನೀವೇನು ಸಂಪತ್ತಿನಿಂದ ನನಗೆ ನೆರವಾಗ ಬಯಸುತ್ತೀರಾ?
ನನಗಂತು ಅಲ್ಲಾಹನು ನಿಮಗೆ ನೀಡಿದ್ದಕ್ಕಿಂತ ಉತ್ತಮವಾದುದನ್ನು ನೀಡಿದ್ದಾನೆ. ನೀವು ಮಾತ್ರ ನಿಮ್ಮ ಉಡುಗೊರೆಯಲ್ಲೇ ಸಂತುಷ್ಟರಾಗಿರುವಿರಿ. ನೀನು ಮರಳಿ ಹೋಗು. ಅವರಿಗೆಂದೂ ಎದುರಿಸಲು ಸಾಧ್ಯವಾಗದ ಪಡೆಯೊಂದಿಗೆ ನಾವು ಅಲ್ಲಿಗೆ ಬರಲಿದ್ದೇವೆ. ಮತ್ತು ನಾವು ಅವರನ್ನು ಅಪಮಾನಿತರಾಗಿಸಿ ಅಲ್ಲಿಂದ ಹೊರಹಾಕಲಿದ್ದೇವೆ. ಆಗ ಅವರು ಸೋತಿರುವರು.
ಸುಲೈಮಾನ್ ನೆಬಿಯವರು ಹೇಳಿದರು.. ಸರದಾರರೇ, ಆಕೆ ಶರಣಾಗಿ ನನ್ನ ಬಳಿಗೆ ಬರುವ ಮುನ್ನ ನಿಮ್ಮ ಪೈಕಿ ಯಾರು ಆಕೆಯ ಸಿಂಹಾಸನವನ್ನು ನನ್ನ ಬಳಿಗೆ ತರಬಲ್ಲರು? ಇಫ್ರಿತ್ ಎಂಬ ಜನ್ನ್ ನಾನು ತರುವೆನೆಂದು ಹೇಳಿದಾಗ, ಗ್ರಂಥದ ಬಗ್ಗೆ ಜ್ಞಾನವುಳ್ಳವರೊಬ್ಬರು ಅದಕ್ಕಿಂತ ಮೊದಲು ನಾನು ತರುವುದಾಗಿ ಹೇಳಿದರು. ಸುಲೈಮಾನ್ ನೆಬಿ ಬಲ್ಕೀಸ್ ರಾಣಿಯ ಸಿಂಹಾಸನವನ್ನು ತರಿಸಿದರು.
ಸುಲೈಮಾನ್ ನೆಬಿಯ ಬಳಿಗೆ ತಲುಪಿದ ರಾಣಿಯನ್ನು ಪರೀಕ್ಷಿಸಲೆಂದೇ ಸಿಂಹಾಸನದ ರೂಪವನ್ನೇ ಬದಲಿಸಲಾಗಿತ್ತು. ಸಿಂಹಾಸನ ತನ್ನದೆಂದೇ ಒಪ್ಪಿಕೊಂಡ ಕ್ಯೂನ್ ಶೇಬಾ ಎಂದು ಕರೆಯಲ್ಪಟ್ಟ ಬಲ್ಕೀಸ್ ರಾಣಿಯು ತನ್ನ ಸತ್ಯದ ದಾರಿಯನ್ನು ಆಯ್ಕೆಮಾಡಿಕೊಂಡರು.
ಅರಮನೆಯನ್ನು ಪ್ರವೇಶಿಸು ಎಂದು ಆಕೆಯೊಡನೆ ಹೇಳಲಾಯಿತು. ಆಕೆ ಅಲ್ಲಿಯ ನೆಲವನ್ನು ಕಂಡಾಗ, ಅದು ಆಳವಾದ ನೀರೆಂದು ಭಾವಿಸಿ ತನ್ನ ವಸ್ತ್ರವನ್ನು ತನ್ನ ಪಾದಮಟ್ಟದಿಂದ ಮೇಲಕ್ಕೆ ಎಳೆದುಕೊಂಡಳು. ಸುಲೈಮಾನ್ ನೆಬಿ ಹೇಳಿದರು : ಇದು ಗಾಜುಗಳನ್ನು ಜೋಡಿಸಿ ಕಟ್ಟಿದ ಅರಮನೆಯೆಂದು.
ಕೊನೇಗೆ ಬಲ್ಕೀಸ್ ರಾಣಿ ಹೇಳಿದಳು; ನನ್ನೊಡೆಯಾ, ನಾನು ನನ್ನ ಮೇಲೆಯೇ ಅಕ್ರಮವೆಸಗಿದ್ದೇನೆ ಮತ್ತು ಸುಲೈಮಾನರ ಜೊತೆ ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಶರಣಾಗುತ್ತೇನೆ.
ಈ ಚರಿತ್ರೆಯನ್ನು ಕುರಾನಿನ ಅಧ್ಯಾಯ 27: ಅನ್ನಮ್ಲ್ (ಇರುವೆ) ಇದರಲ್ಲಿ ವಿವರಿಸಲಾಗಿದೆ.
*ಮುಂದುವರಿಯುವುದು...*
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
ಕಳೆದ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ
http://nizamuddintabukuppinangady.blogspot.com/?m=1

Comments
Post a Comment