ಹಂಝ ರ.ಅ
*"ಸಾಹಸ ಸಿಂಹ" ಶಹೀದ್ ಹಂಝ (ರ.ಅ)*
ಲೋಕ ಪ್ರವಾದಿ ಮಹಮ್ಮದ್ ಮಸ್ತಫಾ ಸ.ಅ ರವರ ಚಿಕ್ಕಪ್ಪರಾದ ಹಂಝ ರ.ಅ ರವರ ಜೀವನ ಹಾಗೂ ಅವರ ವ್ಯಕ್ತಿತ್ವ ಮತ್ತು ಪ್ರವಾದಿ ಪ್ರೇಮವನ್ನು ಇತಿಹಾಸ ಪುಟಗಳಿದ ನಾವು ತಿಳಿಯಬೇಕು. ಹಂಝ ರ.ಅ ರವರ ಚರಿತ್ರೆ ಬರೆಯಲು ಅದೆಷ್ಟು ಪುಟಗಳಿದ್ದರೂ ಸಾಲದು.
ಪ್ರವಾದಿ ಪ್ರೇಮ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಕೇವಲ ಮಾತುಗಳು ಬರಹಗಳು ಮುಖಾಂತರ ಕಚ್ಚಾಡುವ ಆಧುನಿಕ ಮುಸ್ಲಿಮರಿಗೆ ನಿಜವಾಗಿ ಹಂಝ ರ.ಅ ರವರ ರೋಮದಷ್ಟು ಧರ್ಮನಿಷ್ಟೆ, ಪ್ರವಾದಿ ಪ್ರೇಮ, ಹಾಗೂ ಧೀರತೆ ಇರಲು ಸಾಧ್ಯವೇ...?
ನೆಬಿ ಸ.ಅ ರವರಿಗೆ ಕಿರುಕುಳ ಕೊಟ್ಟಾಗ ಅಬೂಜಾಹಿಲನ ಕೋಟೆಗೆ ನುಗ್ಗಿ ಘರ್ಜಿಸಿದ ಸಿಂಹ ಹಂಝ ರ.ಅ, ಉಹುದ್ ರಣಾಂಗಣದಲ್ಲಿ ವಿರೋಧಿಗಳೆದುರು ಘರ್ಜಿಸಿದ ಸಿಂಹವಾಗಿದ್ದರು ಈ ಹಂಝ ರ.ಅ.
ನೀರಿಲ್ಲದ ಬರುಡು ಭೂಮಿಯಾಗಿದ್ದ ಬದ್ರ್ ರಣಾಂಗಣ. ಸಹಾಬತ್ ಎಲ್ಲರೂ ನೀರಿಗಾಗಿ ಪರದಾಡುವ ಸಂಧರ್ಬ, ರಸೂಲರಾದ ಮುಹಮ್ಮದ್ ನೆಬಿ ಸ.ಅ ರವರಲ್ಲಿ ನೀರಿನ ಗಂಭೀರ ಪರಿಸ್ಥಿತಿಯನ್ನು ಹೇಳಿದಾಗ, ಅಲ್ಲಾಹನಲ್ಲಿ ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ಆಗಲೇ ಸುರಿದ ಕಾರುಣ್ಯದ ಮಳೆಯ ನೀರು, ನೀರು ಎಲ್ಲೊಂದರಲ್ಲಿ ಹರಿಯುತಿತ್ತು. ನೀರನ್ನು ಶೇಖರಿಸಿಡಲು ಸ್ವಹಾಬಿಗಳ ಮಾರ್ಗದರ್ಶನದಂತೆ ಅಣೆಕಟ್ಟನ್ನು ನಿರ್ಮಿಸಲಾಯಿತು.
ಅಲ್ಲಿಯ ಆ ನೀರಿನ ಶೇಖರಣೆಯಿಂದ ನೀರನ್ನು ಕೊಂಡೊಯ್ಯಲು ಬಂದ ಶತ್ರು ಸೈನ್ಯದ ಹಕೀಂ ಎನ್ನುವಾತನನ್ನು ಸ್ವಹಾಬಿಗಳು ತಡೆದರು. ಇದನ್ನು ಮನಗಂಡ ರಸೂಲ್ ಸ.ಅ ಹಕೀಂ ನೀರನ್ನು ಪಡೆದೊಕೊಳ್ಳಲಿ, ನನಗೆ ಊಟ ಕೊಟ್ಟವರು ಹಕೀಂ ಎಂದು ಕಾರುಣ್ಯದ ಕಣ್ಮನಿ ರಸೂಲ್ ಸ.ಅ ಹೇಳಿದಾಗ, ಅಹಂಕಾರದಿಂದ ಹಕೀಂ ಬೇಡ ಮಹಮ್ಮದರೇ.... ನಿಮ್ಮ ಕಾರುಣ್ಯದ ನೀರು ಬೇಡ, ನೀರಿಗಾಗಿ ಕಾಳಗ ನಡೆಸುವ. ಅದರಲ್ಲಿ ಜಯಿಸಿದ ನಂತರವೇ ಎನಗೆ ನೀರು ಸಾಕೆಂದ ಹಕೀಂ ಎನ್ನುವವನ ಅಹಂಕಾರದ ಮಾತಿಗೆ ಕುಪಿತರಾದ ಹಂಝ ರ.ಅ ಕಾಳಗಕ್ಕಾಗಿ ಆಹ್ವಾನ ನೀಡಿದರು. ಅದಾಗಲೇ ಶತ್ರು ಪಾಳಯದಲ್ಲಿದ್ದ ಅಶ್ವದ್ ಎನ್ನುವ ವ್ಯಕ್ತಿ ಹಕೀಮನ್ನು ಹಿಂದಕ್ಕೆ ತಳ್ಳಿ ಹಂಝ ರ.ಅ ರೊಂದಿಗೆ ಕಾಳಗಕ್ಕೆ ಇಳಿದರು. ಇವರ ನಡುವೆ ನಡೆದ ಹೋರಾಟದಲ್ಲಿ ಹಂಝ ರ.ಅ ಅಶ್ವದನನ್ನು ಕೊಂದು ಬಿಟ್ಟರು. ಜೊತೆಗೆ ಶತ್ರು ಪಾಳಯಕ್ಕೆ ತಾಕೀದು ನೀಡಿದರು. ಈ ನೀರಿನ ಕಟ್ಟೆಗೆ ನಾನೇ ಕಾವಲುಗಾರ. ನೀರು ಪಡೆಯಲು ಧೈರ್ಯವಿದ್ದವರು ಮುಂದೆ ಬನ್ನಿ ಎಂದರು.
ಗೆಳೆಯರೇ ಇದಾಗಿದ ಧರ್ಮಪ್ರೇಮ, ಪ್ರವಾದಿಪ್ರೇಮ.
ನಂತರದ ದಿನಗಳಲ್ಲಿ ಶತ್ರು ಪಾಳಯದ ಗೂಡಾಲೋಚನೆಯ ಫಲವಾಗಿ ಹಿಂದ್ ಎನ್ನುವ ಮಹಿಳೆ ತನ್ನ ಅಡಿಮ (ಕೆಳಸದಾಳು) ವಹ್ಷಿ ಎನ್ನುವಾತನ ಮನಸ್ಸಿನಲ್ಲಿ ದುಷ್ಟ ಚಿಂತನೆಗಳನ್ನು ತುಂಬಿ, ನಿನಗೆ ಈ ಕೆಲಸದಿಂದ ಮೋಕ್ಷ ನೀಡುದಾಗಿ ಭರವಸೆ ನೀಡಿದಳು. ಇದರನುಗುಣವಾಗಿ ವಹ್ಷಿ ಎನ್ನುವಾತ ಗುಪ್ತವಾಗಿ ಪರ್ವತ ತಪ್ಪಲಿನಲ್ಲಿ ಅಡಗಿ ಕುಳಿತು ಕ್ರೂರವಾಗಿ ಹಿಂಬಾಗದಿಂದ ಹಂಝ ರ.ಅ ರವರಿಗೆ ಕೊಡಾಲಿಯಿಂದ ಕಡಿದರು. ಇನ್ನಾ ಲಿಲ್ಲಾಹ್...
ನಂತರ ದೇಹದ ಇತರ ಭಾಗಗಳನ್ನೂ ಕಡಿದು ಹಾಕಿದ. ತದನಂತರ 'ಹಿಂದ್' ಮಹಿಳೆ ನೀಡುವೆ ಎಂದಿದ್ದು ಉಡುಗೊರೆಗೆ ಬೇಕಾಗಿ ಹೊಟ್ಟೆಯ ಕರುಳನ್ನು ಕಿತ್ತು ಹಿಂದ್ ಎನ್ನುವ ಮಹಿಳೆಯ ಬಳಿಗೆ ತೆರಳಿದ.
ಈ ವಿಷಯವರಿತ ರಸೂಲ್ ಮಹಮ್ಮದ್ ಸ.ಅ ಜೀವನದಲ್ಲೇ ಅತೀವ ದುಃಖಿದರಾದ ದಿನವದು. ಬಹಳಾ ಅತ್ತು ಕಣ್ಣೀರ ದಾರೆ ಸುರಿಸಿದ ದಿನವಾಗಿತ್ತು ಅದು.
ಹಂಝ ರ.ಅ ರವರನ್ನು ಅಲ್ಲಾಹನು *ಅಲ್ಲಾಹನ ಸಿಂಹ* ಎಂದು ಬಣ್ಣಿಸಿದ್ದಾರೆ.
ಅವರೊಂದಿಗೆ ಅಲ್ಲಾಹನು ನಮ್ಮನ್ನೂ ಪರಲೋಕದಲ್ಲಿ ಒಗ್ಗೂಡಿಸಲಿ ... ಆಮೀನ್...
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1

Comments
Post a Comment