ಭಾಗ 8

#ಚರಿತ್ರೆಯ #ಅರೇಬಿಯಾ.. #ಭಾಗ - 8  n.u.t*

#ಈಜಿಫ್ಟಿನ #ಅದ್ಭುತ #ಪಿರಮಿಡ್'ಗಳು*

      ಇಸ್ರಾಯಿಲರನ್ನು ಅಡಿಯಾಳುಗಲಾಗಿ ಅವರ ಕಾರ್ಮಿಕತೆಯಿಂದ ಈಜಿಫ್ಟ್ ದೇಶದ ಗೀಸಾ ಪ್ರದೇಶದಲ್ಲಿ ಫರೋವಾ ರಾಜರುಗಳು ಈ ಪಿರಮಿಡ್ ಗಳನ್ನು ನಿರ್ಮಿಸಿದರು. *4500* ವರ್ಷಗಳ ಮುಂಚೆ ಈ ಪಿರಮಿಡ್ ಗಳ ನಿರ್ಮಾಣವಾಯಿತು.
     *ಇದು ವಿಶ್ವ ಕಂಡ ಏಳು ಅದ್ಭುತಗಳಲ್ಲಿ ಒಂದಾಗಿದೆ*.
     
*Bc 5000 ರಿಂದ Bc 332 ರ ವರೆಗೆ* ಈಜಿಫ್ಟ್ ದೇಶವನ್ನು ಆಳಿದವರು ಈ ಫರೋವಾಗಳು. ತಮ್ಮ ಮರಣಾನಂತರ ಅವರ ಶರೀರಗಳು ಕೊಳೆಯಬಾರದೆಂದು ಮಮ್ಮಿಗಳಾಗಿ (ಪೆಟ್ಟಿಗೆಯಲ್ಲಿ ಹಾಕಿ) ಇರಿಸಲು ಈ ಪಿರಮಿಡ್ ಗಳನ್ನು ನಿರ್ಮಿಸಲಾಗಿದೆ. ಈ ಪಿರಮಿಡ್ ಗಳ ಪೈಕಿ ದೊಡ್ಡದಾದ ಪಿರಮಿಡ್ *ಕುಫು* ರಾಜನದ್ದಾಗಿತ್ತು. ಸರಾಸರಿ *2500 ಕಿಲೋ ಭಾರವಿರುವ 23 ಲಕ್ಷ ಕಲ್ಲುಗಳಿಂದ ಈ ಪಿರಮಿಡಿನ ಕಟ್ಟಲಾಗಿದೆ. ಇದರ ಎತ್ತರ 147 ಮೀಟರ್. ಸುಮಾರು ಮೂರು ಲಕ್ಷ ಜನರು ವರ್ಷಗಳಿಂದ ಕೆಲಸ ನಿರ್ವಹಿಸಿ ಇದನ್ನು ನಿರ್ಮಿಸಲಾಗಿದೆ*.                           ಕ್ರೇನ್'ಗಳು ಅಥವಾ ಯಂತ್ರೋಪಕರಣ ಇಲ್ಲದೆ 4500 ವರ್ಷಗಳ ಮುಂಚೆ ಈ ಕಲ್ಲುಗಳನ್ನು ಮೇಲೆತ್ತಿ ನಿರ್ಮಿಸಲು ಕಾರ್ಮಿಕರು ಅದೆಷ್ಟು ಪಾಡು ಪಟ್ಟಿರಬಹುದೆಂದು ಊಹಿಸಲಸಾಧ್ಯ.

        ಗೀಸಾ ಪ್ರದೇಶದಲ್ಲಿರುವ ಎರಡನೇ ಪಿರಮಿಡ್ *ಶಫೋನ್* ರಾಜನದ್ದೂ ಮೂರನೆಯದ್ದು ಮೈ *ಸೇರಿನಸ್* ರಾಜನದ್ದಾಗಿದೆ. ಉಳಿದ ಮೂರು ಸಣ್ಣ ಪಿರಮಿಡ್ ಗಳು ರಾಣಿಯರದ್ದಾಗಿದೆ.
     
     *ಸ್ವಿಂಗ್ಸ್* :    ಈ ಪಿರಮಿಡ್ ಗಳ ಸಮೀಪ ಒಂದು ಬೃಹದಾಕಾರದ ಶಿಲೆಯಲ್ಲಿ ಸಿಂಹದ ದೇಹವು ಹಾಗು ಮನುಷ್ಯನ ತಲೆಯ ರೂಪದಲ್ಲಿ ಕೆತ್ತಲಾದ ಪ್ರತಿಮೆಯೇ ಸ್ವಿಂಗ್ಸ್.  ಸಾವಿರಾರು ವರ್ಷಗಳಾಗಿ ಮರಳಿನಿಂದ ಹೂತುಹೋಗಿದ್ದ ಈ ಸ್ವಿಂಗ್ಸ್ ಪ್ರತಿಮೆಯನ್ನು *1816* ರಲ್ಲಿ  ಕಂಡುಹಿಡಿದರು. ಅರಬೀ ಬಾಷೆಯಲ್ಲಿ ಇದನ್ನು ಅಬುಲ್ ಹೌಲ್ ಎಂದು ಕರೆಯುತ್ತಾರೆ. ಈ ಪ್ರತಿಮೆಯು ನೈಲ್ ನದಿಯ ರಕ್ಷಕನೆಂದು ಅಂಧ ವಿಶ್ವಾಸಿಗಳು ನಂಬಿಕೊಂಡಿದ್ದರು.

ಈ ಮೇಲೆ ಹೇಳಿದ ಫರೋವಾ ರಾಜರುಗಳು ಇಸ್ರಾಯಿಲರನ್ನು ಅಡಿಯಾಳುಗಲಾಗಿ ಮಾಡಿ ಅವರಿಗೆ ಚಿತ್ರಹಿಂಸೆಯನ್ನು ನೀಡುತ್ತಿದ್ದರೆಂದು ಪರಿಶುದ್ದ ಕುರಾನ್ ವಿವರಿಸುತ್ತದೆ.
*ಅಧ್ಯಾಯ 7:* ಅಹ್ ರಾಫ್ (ಔನ್ನತ್ಯಗಳು), ಸೂಕ್ತ  129

*ﻗَﺎﻟُﻮٓا۟ ﺃُﻭﺫِﻳﻨَﺎ ﻣِﻦ ﻗَﺒْﻞِ ﺃَﻥ ﺗَﺄْﺗِﻴَﻨَﺎ ﻭَﻣِﻦۢ ﺑَﻌْﺪِ ﻣَﺎ ﺟِﺌْﺘَﻨَﺎ ۚ ﻗَﺎﻝَ ﻋَﺴَﻰٰ ﺭَﺑُّﻜُﻢْ ﺃَﻥ ﻳُﻬْﻠِﻚَ ﻋَﺪُﻭَّﻛُﻢْ ﻭَﻳَﺴْﺘَﺨْﻠِﻔَﻜُﻢْ ﻓِﻰ ٱﻷَْﺭْﺽِ ﻓَﻴَﻨﻈُﺮَ ﻛَﻴْﻒَ ﺗَﻌْﻤَﻠُﻮﻥَ*
ಮೂಸಾರ ಜನಾಂಗದವರು ಹೇಳಿದರು. ನೀವು ನಮ್ಮ ಬಳಿಗೆ ಬರುವ ಮುನ್ನವೂ ನೀವು ನಮ್ಮ ಬಳಿಗೆ ಬಂದ ಬಳಿಕವೂ ನಮ್ಮನ್ನು ಸತಾಯಿಸಲಾಯಿತು. ಅವರು ಮೂಸಾ  ಹೇಳಿದರು ಬಹುಬೇಗನೇ, ನಿಮ್ಮೊಡೆಯನು ನಿಮ್ಮ ಶತ್ರುವನ್ನು ನಾಶಪಡಿಸಿ ಭೂಮಿಯಲ್ಲಿ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡುವನು ಮತ್ತು ನೀವು ಏನೆಲ್ಲ ಮಾಡುವಿರಿ ಎಂಬುದನ್ನು ನೋಡುವನು.

(ಮುಂದುವರಿಯುವದು....)

- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ