ಭಾಗ 3
*ಚರಿತ್ರೆಯ ಅರೇಬಿಯಾ... ಭಾಗ - 3 n.u.t*
*ಇಬ್ರಾಹಿಂ (ಅ.ಸ)*
ದಕ್ಷಿಣ ಇರಾಕಿನ ಬಗ್ದಾದಿನಿಂದ *400 ಕಿ.ಮೀ* ಕ್ರಮಿಸಿದಾಗ ಸಿಗುವ ಪಟ್ಟಣ "ಅನ್ ನಾಸಿರಿಯಾ". ಈ ಪಟ್ಟಣವು ಯುಪ್ರಟೀಸ್ ನದಿ ತೀರದಲ್ಲಿದೆ.ಅಲ್ಲಿಂದ ಹದಿನೈದು ಕಿ.ಮೀ ದೂರ ಕ್ರಮಿಸಿದಾಗ ಸಿಗುವ ಪ್ರದೇಶವಾಗಿದೆ ಬಾಬಿಲೋನಿಯಾದ "ಊರ್" ಎಂಬ ಸ್ಥಳ. ಇಲ್ಲಿ ಸುಮಾರು *4000* ವರ್ಷಗಳ ಹಿಂದೆ ಖಲೀಲುಲ್ಲಾಹಿ ಇಬ್ರಾಹಿಂ ನೆಬಿಯ ಜನನವಾಯಿತು.
*ಅಲ್ಲಾಹುವಿನ ಗೆಳೆಯ* ಎಂದು ವಿಶೇಷಿತನರಾದ ಪ್ರವಾದಿ "ಇಬ್ರಾಹಿಂ ನೆಬಿ ಅ.ಸ".ಇಬ್ರಾಹಿಂ ನೆಬಿಯ ಕುರಿತು ಕರಾನಿನ ಹಲವು ಕಡೆಗಳಲ್ಲಿ ವಿವರಿಸಲ್ಪಟ್ಟಿದೆ. ಕುರಾನಿನ *69* ಸ್ಥಳಗಳಲ್ಲಿ ಇಬ್ರಾಹಿಂ ನೆಬಿಯ ಹೆಸರು ಪ್ರಕಟಿತವಾಗಿದೆ.
ಊರ್ ಪ್ರದೇಶದ ಕಾವಲುಗಾರನೆಂದು ಜನರು ವಿಶ್ವಾಸವಿಟ್ಟ ನಂಬ್ರೂದ್ ಸೂರ್ಯದೇವನನ್ನು ಆರಾದಿಸಲು ನಿರ್ಮಿಸಿದ ದೇವಸ್ಥಾನವು ಈಗಲೂ ಊರ್ ಪ್ರದೇಶದಲ್ಲಿ ನೆಲೆನಿಂತಿದೆ. ಸುಮಾರು ಐದು ಸಾವಿರದಷ್ಟು ಮೂರ್ತಿಗಳು ಹಾಗೂ ನಮ್ರುದ್ ರಾಜನಲ್ಲಿರುವ ವಿಶ್ವಾಸಗಳನ್ನು ಕಡಿಮೆಗೊಳಿಸಲು ಇಬ್ರಾಹಿಂ ನೆಬಿಯವರು ಜನತೆಯನ್ನು ಮನವರಿಕೆ ಮಾಡುತ್ತಿದ್ದರು. ಮಾನವ ನಿರ್ಮಿತ ಮೂರ್ತಿಗಳನ್ನು ಪೂಜಿಸುವುದು ದೇವಧಿಕ್ಕಾರವಾಗಿದೆಯೆಂದು ಅವರು ಎಚ್ಚರಿಸುತಿದ್ದರು.
*ನಂಬ್ರೂದಿನ ಅರಮನೆ* : ಅಡಿಪಾಯ ಸರಿಸುಮಾರು 38 ಮೀ ಉದ್ದ ಹಾಗೂ 38 ಮೀಟರ್ ಅಗಲವಿರುವ ಈ ಅರಮನೆಯಲ್ಲಿ 30 ರಷ್ಟು ಕೋಣೆಗಳು ಇತ್ತು.
ಮೂರ್ತಿಗಳು ನಿರ್ಜೀವ ವಸ್ತಗಳೆಂದು ಜನರನ್ನು ಮನವರಿಕೆ ಮಾಡಲು ಇಬ್ರಾಹಿಂ ನೆಬಿಯವರು ಒಂದು ಉಪಾಯವನ್ನು ಮಾಡಿದರು. ಅದರಂತೆ ಕೆಲ ಮೂರ್ತಿಗಳನ್ನು ನೆಲಕ್ಕುರುಳಿಸಿ ಮತ್ತೆ ಕೆಲವು ಮೂರ್ತಿಗಳ ಕತ್ತುಗಳಲ್ಲಿ ಕೊಡಲಿಯನ್ನು ತೂಗಿಹಾಕಿದರು. ಇದರಿಂದ ಕುಪಿತರಾದ ನಮ್ರೂದ್ ಜನಾಂಗದವರು ಇಬ್ರಾಹಿಂ ನೆಬಿಯನ್ನು ಅಗ್ನಿಯಲ್ಲಿ ಹಾಕಿ ಕೊಲ್ಲಲು ತೀರ್ಮಾನಿಸಿದರು. ಮೂರ್ತಿದೈವವನ್ನು ವಿರೋದಿಸಿದ ಇಬ್ರಾಹಿಂ ನೆಬಿಯನ್ನು ಅಗ್ನಿ ಕುಂಡಕ್ಕೆ ಎಸಯಲ್ಪಟ್ಟರು. ಆಲೆತ್ತರದಲ್ಲಿ ಉರಿಯುತಿದ್ದ ಶಾಖಭರಿತ ಬೆಂಕಿಯನ್ನು ಅಲ್ಲಾಹನು ನಿಶಕ್ತಿಗೊಲಿಸಿದನು.
ಈ ಚರಿತ್ರೆಯನ್ನು ಕುರಾನ್ ತಿಳಿಸುತ್ತದೆ
*(ಅಧ್ಯಾಯ 21:*
ಅಲ್ ಅಂಬಿಯಾ (ಪ್ರವಾದಿಗಳು),ಸೂಕ್ತ 69
*ﻗُﻠْﻨَﺎ ﻳَٰﻨَﺎﺭُ ﻛُﻮﻧِﻰ ﺑَﺮْﺩًا ﻭَﺳَﻠَٰﻤًﺎ ﻋَﻠَﻰٰٓ ﺇِﺑْﺮَٰﻫِﻴﻢَ*
‘‘ಓ ಅಗ್ನಿ, ನೀನು ಇಬ್ರಾಹೀಮರ ಪಾಲಿಗೆ ತಣ್ಣಗಾಗು ಹಾಗೂ ಕ್ಷೇಮವಾಗಿಬಿಡು’’ ಎಂದು ನಾವು ಆದೇಶಿಸಿದೆವು.)
ಊರ್ ಪಟ್ಟಣವನ್ನು ತೊರೆದ ಇಬ್ರಾಹಿಂ ನೆಬಿ ಕಠಿಣ ದಾರಿಗಳನ್ನು ದಾಟಿ *1200 ಕಿ.ಮೀ* ದೂರದ ಪೆಲೆಸ್ತೀನಿಗೆ ತೆರಳಿದರು. ಅಲ್ಲಿ ಅಲ್ ಕಲೀಲ್ ಪಟ್ಟಣವಿದೆ. ಅಲ್ಲಿನ ಮಸೀದಿ ಪಕ್ಕದಲ್ಲಿ ಇಬ್ರಾಹಿಂ ನೆಬಿಯ ಮಕಾಂ ಕಾಣಬಹುದು.
ದೇವಾಜ್ಞೆಯ ಪ್ರಕಾರ ಮಗನನ್ನು ಹಾಗು ಮಡದಿಯನ್ನು ಸುಮಾರು *1500 ಕಿ.ಮೀ* ದೂರದ ಅರಬ್ ದೇಶದ ಮಕ್ಕಾ ಸ್ಥಳದಲ್ಲಿ ಬಿಟ್ಟು ಬಂದರು. ಗುಡ್ಡ ಬೆಟ್ಟಗಳ ಊರಾದ ಮಕ್ಕಾ ಪ್ರದೇಶದಲ್ಲಿ ಬಾಯಾರಿಕೆಯದ ಮಗನ ದಾಹ ತೀರಿಸಲು ಸಫಾ ಮರ್ವಾ ಗುಡ್ಡಗಳ ನಡುವೆ ಹಾಜರಾ ಬೀಬಿ ಓಡಿದರು. ಈ ಘಟನೆಯನ್ನು ಸ್ಮರಿಸಲು ಇಂದು ಕೂಡಾ ಹಜ್ ಉಮ್ರಾ ದಿನಗಳಲ್ಲಿ ಈ ಪ್ರದೇಶದಲ್ಲಿ ವೇಗದ ನಡಿಗೆಯನ್ನು ರೂಡಿಗೊಳಿಸಿದೆ.
ನೀರಿನ ಒರತೆ ಕೂಡಾ ಹುಟ್ಟಿಕೊಳ್ಳದ ಪ್ರದೇಶದಲ್ಲಿ ದಾಹದಿಂದ ಚಡಪಡಿಸುತಿದ್ದ ಒಂಟಿ ಮಗು ತನ್ನ ಕಾಲುಗಳನ್ನು ನೆಲಕ್ಕೆ ಬಡಿದಾಗ ಕಾಲಿನಡಿಯಿಂದ ಬಂಡೆ ಒಡೆದು ಸೃಷ್ಟಿಯಾದ ನೀರಿನ ಒರತೆಯೇ *"ಝಂ ಝಂ"*
ಈ ಸುಡು ಬಿಸಿಲಿನ ಮರುಭೂಮಿಯಲ್ಲಿ *4000* ವರ್ಷಗಳು ಕಳೆದು ದಿನ ಒಂದಕ್ಕೆ ಲಕ್ಷ ಲಕ್ಷ ನೀರು ತೆಗೆಯುತ್ತಿದ್ದರೂ ಈ *ಝಂ* *ಝಂ*ನೀರಿನ ಒರತೆ ನೆಲೆ ನಿಂತಿರುವುದು ದೇವನ ವಿಶೇಷ ಶಕ್ತಿಯಲ್ಲವೇ...
*(ಮುಂದುವರಿಯುವುದು. ...... )*
- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್

Comments
Post a Comment